ಅಭಿಪ್ರಾಯ / ಸಲಹೆಗಳು

     ಕುಮಾರಪಟ್ಟಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:25/2021 ಕಲಂ: 279, 337, 304(A) IPC.

             ದಿನಾಂಕ: 16/04/2021 ರಂದು 16-30 ಗಂಟೆಯ ಸುಮಾರಿಗೆ ಕುಮಾರಪಟ್ಟಣಂ ಪೊಲೀಸ್ ಠಾಣಾ ಹದ್ದಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ತುಂಗಭದ್ರಾ ನದಿಗೆ ಹೋಗುವ ರಸ್ತೆಯ ಮೇಲೆ ಟ್ರ್ಯಾಕ್ಟರ್ ನಂ ಕೆಎ-13/ಟಿ-5229, ಹಾಗೂ ನಂಬರ ಇಲ್ಲದ ಟ್ರೈಲರ್ ನೇದ್ದರ ಚಾಲಕನು ಬಟ್ಟೆ ತೊಳೆಯಲು ಹಾಗೂ ಸ್ನಾನ ಮಾಡಲು ಅಂತಾ ತುಂಗಬದ್ರಾ ನದಿಗೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ಜೋರಿನಿಂದ ಹಾಗೂ ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಹೋಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಟ್ರ್ಯಾಕ್ಟರದಲ್ಲಿದ್ದ ಈರಗಪ್ಪ ಹನುಮಂತ ವಾಲೀಕಾರ ಹಾಗೂ ಲಕ್ಷ್ಮೀ ವಯಾ 12 ವರ್ಷ ಇವರು ಕೆಳಗೆ ಬೀಳುವಂತೆ ಮಾಡಿ, ಈರಗಪ್ಪ ಈತನಿಗೆ ಗಂಭೀರ ಗಾಯಪಡಿಸಿ, ಲಕ್ಷ್ಮೀ ಇವಳಿಗೆ ಸಾದಾ ಗಾಯಪಡಿಸಿದ್ದು, ಇವರನ್ನು ಹರಿಹರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ ಮಾಡಿದಾಗ ಈರಗಪ್ಪ ಇವನು ಚಿಕಿತ್ಸೆಯಿಂದ ಪಲಕಾರಿಯಾಗದೇ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:39/2021 ಮಹಿಳೆ ಕಾಣೆ.

                 ಕು: ಗೌರಮ್ಮ ತಂದೆ ಶಂಬಣ್ಣ ಚಿಲ್ಲೂರ ವಯಾ: 19 ವರ್ಷ ಇವಳು ದಿನಾಂಕ: 14/04/2021 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಮನೆಯಿಂದ ಹೋದವಳು ವಾಪಾಸ್ಸ ಮನೆಗೆ ಬಾರದೇ  ಕಾಣೆಯಾಗಿದ್ದು ಕಾಣೆಯಾದವಳನ್ನು ಈವರೆಗೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ಗೌರಮ್ಮ ಇವರನ್ನು ಹುಡುಕಿಕೊಡಬೇಕೆಂದು ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:68/2021 ಮಹಿಳೆ ಕಾಣೆ.

                 ಕಾವ್ಯಾ ಪರಶುರಾಮ ಕೊಕ್ಕನವರ ವಯಾ 21 ಸಾ ಬುಡಪ್ಪನಹಳ್ಳಿ ಇವರು ದಿನಾಂಕ; 06-04-2021 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ರಾಣೇಬೆನ್ನೂರು ಬಸ್ಟ್ಯಾಂಡದಿಂದ ತಾನು ಕೆಲಸ ಮಾಡುತ್ತಿದ್ದ ಎಸ್ ಪಿ ಗ್ರೂಪ್  ಗೆ ಹೋಗಿ ಕೆಲಸ ಮಾಡಿದ ಹಣ ಪಡೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಪರಶುರಾಮ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ಮಹಿಳೆ ಸಾವು.

                 ಶ್ರೀಮತಿ.ರೇಣುಕಾ ಕೋಂ ಮೋಹನ ಮದರಕರ್ ವಯಾ.40 ವರ್ಷ ಜಾತಿ.ಹಿಂದೂ ಜೋಗೆರ ಉದ್ಯೋಗ:ಕೂಲಿ ಕೆಲಸ ಸಾ||ಶಿವಯೋಗಿ ನಗರ ಹಾವೇರಿ ಇವಳು ತನ್ನ ಗಂಡ ಸತ್ತ ನಂತರ ತಿಳುವಳ್ಳಿಯಲ್ಲಿ ನಿಂಗಪ್ಪ ಇವರ ಸಂಗಡ ಬೇರೆ ಮನೆ ಮಾಡಿಕೊಂಡು ತನ್ನ ಸಾಕು ಮಗನಾದ ಪ್ರವೀಣ ಇವನೊಂದಿಗೆ ವಾಸವಿದ್ದು ಇವಳು ಮೊದಲಿನಿಂದಲು ಅತಿಯಾದ ಸರಾಯಿ ಕುಡಿಯುವ ಅಬ್ಯಾಸವನ್ನು ಹೊಂದಿದ್ದು ಇವಳಿಗೆ ಪೀಡ್ಸ ಕಾಯಿಲೆಯು ಸಹ ಇದ್ದು ಆಗಾಗ ಪೀಡ್ಸ್ ಕಾಯಿಲೆ ಬರುತ್ತಿದ್ದು ಈ ಬಗ್ಗೆ ಆಗಾಗ ಆಸ್ಪತ್ರೆಗೆ ತೋರಿಸುತ್ತಾ ಚಿಕೀತ್ಸೆಯನ್ನು ಪಡೆದುಕೊಳ್ಳುತ್ತಿದ್ದು ದಿನಾಂಕ : 16-04-2021 ರಂದು ಮುಂಜಾನೆ 10-30 ಘಂಟೆ ಸುಮಾರಿಗೆ ಕಟ್ಟಿಗೆಯನ್ನು ತರಲು ಅಂತಾ ಮನೆಯಿಂದ ಹೋದವಳು ರಾತ್ರಿ ಆದರು ಮನೆಗೆ ಬಾರದೆ ಇರುವುದರಿಂದ ತಿಳುವಳ್ಳಿ ಸುತ್ತ ಮುತ್ತ ಎಲ್ಲಾ ಕಡೆ ಹುಡುಕಾಡಿ ನಂತರ ತಿಳುವಳ್ಳಿ ಹದ್ದಿಯ ನಾಗರಹಳ್ಳದ ಕಡೆ ರಾತ್ರಿ 12-30 ಘಂಟೆ ಸುಮಾರಿಗೆ ಹೋಗಿ ನೋಡಲಾಗಿ ಮೃತಳ ಶವವು ಕಂಡು ಬಂದಿದ್ದು ಬಾಯಿಲ್ಲಿ ನೊರೆ ಬಂದಿದ್ದು ಮೃತಳು ಅತಿಯಾದ ಸರಾಯಿ ಸೇವನೆ ಮಾಡುವ ಚಟವನ್ನು ಹೊಂದ್ದಿದ್ದು ಅಲ್ಲದೆ ಪೀಡ್ಸ ಕಾಯಿಲೆಯಿಂದ ಸಹ ಬಳಲಿ ಮರಣ ಹೊಂದಿರಬಹುದು ಹಾಗು ನನ್ನ ತಂಗಿಯ ಮರಣದಲ್ಲಿ ಯಾವುದೆ ಸಂಶಯ ವಗೈರೆ ಇರುವುದಿಲ್ಲ ಅಂತಾ ನಿಂಗಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ವ್ಯಕ್ತಿ ಸಾವು.

                 ವಿಜಯ ತಂದೆ ಸಿದ್ದಪ್ಪ ತಳವಾರ. ವಯಾ-40 ವರ್ಷ. ಜಾತಿ-ವಾಲ್ಮೀಕಿ. ಉದ್ಯೋಗ-ಕೂಲಿ ಕೆಲಸ, ಸಾ;ಡಮ್ಮಳ್ಳಿ ತಾ;ಹಿರೇಕೆರೂರ. ಈತನು ಸುಮಾರು 4 ವರ್ಷದಿಂದ  ಸಾರಾಯಿ ಕುಡಿತಕ್ಕೆ ಅಂಟಿಕೊಂಡಿದ್ದು ಸಾರಾಯಿ ಕುಡಿದು ಸರಿಯಾಗಿ ಊಟ ಮಾಡದೇ 3-4 ದಿನಗಳ ಕಾಲ ಮನೆಗೆ ಬಾರದೇ ಇದ್ದು ಇದೇ ಕಾರಣಕ್ಕೆ ದಿನಾಂಕ: 14-04-2021 ರಂದು ಮುಂಜಾನೆ 8-00 ಗಂಟೆಯಿಂದ 17-04-2021 ರ ಮಧ್ಯಾಹ್ನ 12-00 ಗಂಟೆಯ ನಡುವಿನ ಅವಧಿಯಲ್ಲಿ ಸೀತೆಕೊಂಡ ಗ್ರಾಮ ವ್ಯಾಪ್ತಿಯ ಡಮ್ಮಳ್ಳಿ ಗ್ರಾಮದ ಚನ್ನಬಸಪ್ಪ ಕೊಡೆರ ಇವರ ಬೋರಿನ ಮನೆಯ ಮುಂದೆ ವಿಪರೀತ ಸಾರಾಯಿ ಕುಡಿದು 2-3 ದಿನಗಳಿಂದ ಊಟ ವಿಲ್ಲದೆ ಪೀಡ್ಸ್ ಬಂದು ಮೃತ ಪಟ್ಟಿದ್ದು ಇರುತ್ತದೆ. ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಮೃತನ ಹೆಂಡತಿ ತನ್ನ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ರಾಮಪ್ಪ  ತಂದೆ ಸೋಮಪ್ಪ ಶಕುನಳ್ಳಿ, ವಯಾ -55 ವರ್ಷ, ಜ್ಯಾತಿ- ಹಿಂದೂ ವಾಲ್ಮೀಕಿ, ಉದ್ಯೋಗ-ಕೂಲಿ ಕೆಲಸ ವಿಳಾಸಃ ಸಾವಿಕೇರಿ, ತಾಃ ಹಾನಗಲ್ಲ ಈತನು ವಿಪರೀತ ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದು ದಿನಾಂಕಃ14/04/2021 ರಂದು ಮುಂಜಾನೆಃ11-30 ಗಂಟೆಯಿಂದ ಮದ್ಯಾಹ್ನ 02-00 ಗಂಟೆಯ ನಡುವಿನ ಅವದಿಯಲ್ಲಿ ಸಾವಿಕೇರಿ ಹದ್ದಿನ ಪೈಕಿ ರಿ..ನಂ 24 ರ ಜಮೀನಿನಲ್ಲಿ ಮನೆಯಲ್ಲಿ ಆಕಳಿಗೆ ಹುಲ್ಲು ತರುತ್ತೇನೆ ಅಂತಾ ಹೇಳಿ ಹೋಗಿ ಸರಾಯಿ ಕುಡಿದ ನಶೆಯಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಕುಡಿದಿದ್ದು ಉಪಚಾರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿದ್ದು ಉಪಚಾರದ  ಕಾಲಕ್ಕೆ ದಿನಾಂಕ 17-04-2021 ರಂದು ಮುಂಜಾನೆ 02-05 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ನನ್ನ ಗಂಡನ ಸಾವಿನಲ್ಲಿ ನಮಗೆ ಬೇರೆ ಏನೂ ಸಂಶಯವಿರುವುದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

     

 

ಇತ್ತೀಚಿನ ನವೀಕರಣ​ : 22-04-2021 12:57 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080