ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:27/2021 ಕಲಂ: 302 IPC.

                ನಿಂಗಪ್ಪ ತಂದೆ ಬೆಣ್ಣೆಪ್ಪ ಶಿರಗುಪ್ಪಿ ವಯಸ್ಸು 28 ವರ್ಷ ಹಾಗೂ ಇನ್ನೊಬ್ಬ 14 ವರ್ಷದ ಗಣೇಶ ತಂದೆ ದಿನೇಶ ಕುಂದಾಪುರ ಇವರಿಬ್ಬರೂ ಯತ್ತಿನಹಳ್ಳಿ ಗ್ರಾಮದಲ್ಲಿ ಹಾವೇರಿ ಗುತ್ತಲ ರಸ್ತೆಗೆ ಹೊಂದಿದ್ದ ಮಳೀಮಠ ಇವರಿಗೆ ಸಂಬಂಧಿಸಿದ ಶಟ್ರಸ್ ಇದ್ದ ರೂಂನ ಒಳಗಡೆ ಮಲಗಿಕೊಂಡಿದ್ದಾಗ ದಿನಾಂಕ: 16-03-2021 ರಂದು ರಾತ್ರಿ 9-00 ಘಂಟೆಯಿಂದ ದಿ: 17-03-2021 ರ ಬೆಳಗಿನ 6-00 ಘಂಟೆಯ ನಡುವಿನ ಅವಧಿಯಲ್ಲಿ ನಿಂಗಪ್ಪನಿಗೆ ಆಗದ ಯಾವುದೋ ದುಷ್ಕರ್ಮಿಗಳು ಕೊಲೆ ಮಾಡಬೇಕೆನ್ನುವ ಉದ್ದೇಶದಿಂದ ರೂಂನ ಶೆಟ್ರಸ್ ಎತ್ತಿ ಒಳಗೆ ಹೊಕ್ಕು ಯಾವುದೋ ಬಲವಾದ ಆಯುಧದಿಂದ ಇಬ್ಬರಿಗೂ ತಲೆ ಒಡೆಯುವಂತೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:35/2021 ಕಲಂ: The Scheduled Castes and the Scheduled Tribes (Prevention of Atrocities) Amendment Bill, 2015 (U/s-3(1)(W)(i)(ii),3(2)(va)) ;323, 354(A), 376, 504 IPC.

                ಶಾಂತಮ್ಮ ಗಂಡ ಶಂಕ್ರಪ್ಪ ಆರುಂಡಿ ವಯಾ:61 ವರ್ಷ ಜಾತಿ:ಹಿಂದೂ ಮಾದರ, ಉದ್ಯೋಗ:ಮನೆ ಕೆಲಸ ಸಾ:ಹಿರೇಕೆರೂರು ಕೆ.ಹೆಚ್.ಬಿ ಕಾಲೋನಿ ಚೆನ್ನಳ್ಳಿ ರಸ್ತೆ  ತಾ:ಹಿರೇಕೆರೂರು  ಇವಳಿಗೆ ದಿನಾಂಕ: 16-03-2021 ರಂದು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ಶಾಹಿದಬಾಬಾ ಹತ್ತಿಮತ್ತುರ ಸಾ:ಹಿರೇಕೆರೂರ ಇವನು   ಹಿರೇಕೆರೂರ ಶಹರದ ಚನ್ನಳ್ಳಿ ರಸ್ತೆಯ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ಶಾಂತಮ್ಮ ಇವರು ತನ್ನ ವಾಸದ ಮನೆಯಲ್ಲಿ ಒಬ್ಬಳೇ  ಇರುವದನ್ನ ಕಂಡು ಶಾಂತಮ್ಮನನ್ನು ಎಳೆದಾಡಿ ಮೈಮೇಲಿನ ಬಟ್ಟೆಯನ್ನು ಹರಿದು ಶಾಂರಮ್ಮ ವಯೋವೃದ್ದಳು ಹಾಗೂ ಪರಿಶಿಷ್ಟ ಜಾತಿಗೆ ಸೇರಿದವಳು ಅಂತಾ ಗೊತ್ತಿದ್ದರು ಸಹ ಅವಳ ಇಚ್ಚೆಗೆ ವಿರುದ್ದವಾಗಿ ಬಲವಂತದಿಂದ ಅತ್ಯಾಚಾರ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:39/2021 ಕಲಂ: 379 IPC.

             ಹುಲಗೂರ ಗ್ರಾಮದಲ್ಲಿ ದರ್ಗಾದ ಸಮೀಪ ರಸ್ತೆ ಬದಿಗೆ ಇದ್ದ ವಾಹನ ನಿಲ್ಲಿಸುವ ಖಾಲಿ ಜಾಗದಲ್ಲಿ ಇಟ್ಟಿದ   ಗುಲಜಾರಅಹಮದ್ ಗಂಜುರ ಸಾ ಹಾವೇರಿ ಇವರ ಬಾಬತ ಮೋಟರ ಸೈಕಲ್ ನಂಬರ ಕೆಎ-27/ಇ.ಡಿ.-4836 ಮತ್ತು ಮೆಹಬೂಬವಸಾಬ ತಂದೆ ಅಲ್ಲಾವುದ್ದಿನ ತಹಶಿಲ್ದಾರ  ಮೋಟರ ಸೈಕಲ್ ನಂಬರ ಕೆಎ-27/ಇ.ಜೆ.-9152 ನೇದ್ದವು ಗಳನ್ನು ದಿನಾಂಕಃ 14-03-2021 ರಂದು ರಾತ್ರಿ  11-00 ಗಂಟೆಯಿಂದ ದಿನಾಂಕಃ-15-03-2021 ರಂದು ಬೆಳಗಿ ಜಾವ 07-00  ಗಂಟೆಯ ನಡುವಿನ ಅವಧಿಯಲ್ಲಿ ಇಟ್ಟು ಹುಲಗೂರ ದರ್ಗಾದಲ್ಲಿ ಗಲೀಫ  ಕಾರ್ಯಕ್ರಮ ನೋಡಲು ಹೋದಾಗ  ಯಾರೋ ಕಳ್ಳರು ಮೋಟಾರ ಸೈಕಲನ್ನುಗಳನ್ನು  ಕಳುವು ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ಚಾಭಾವಿಕ ಮರಣ ಸಂಖ್ಯೆ:07/2021 ಹಾವು ಕಚ್ಚಿ ವ್ಯಕ್ತಿ ಸಾವು.

             ಹಾಲಪ್ಪ ಕಲ್ಯಾಣಪ್ಪ ಬಂಕಾಪುರ ಸಾ|| ಹನಮನಹಳ್ಳಿ ಇತನು ತನ್ನ ಜಮೀನದಲ್ಲಿ ಬೆಳೆದ ಗೋವಿನ ಜೋಳದ ತೆನೆಗಳನ್ನು ಸಪ್ಪ ಹಾಕಿ ರಾಶಿ ಹಾಕಿದ್ದು ಗೋವಿನ ಜೋಳದ ತೆನೆಗಳನ್ನು ಮೀಶನಿಗೆ ಹಾಕಿಸಿದ್ದು , ದಿನಾಂಕ 17-03-2021 ರಂದು ಮದ್ಯಾಹ್ನ 02-00 ಗಂಟೆ ಸುಮಾರಿಗೆ ತನ್ನ ಜಮೀನದಲ್ಲಿ ಹಾಕಿದ್ದ ಗೋವಿನ ಜೋಳದ ರಾಶಿಯಲ್ಲಿ ಸಪ್ಪೆ, ಹಾಗೂ ಉಳಿದ ತೆನೆಗಳನ್ನು ತೆಗೆಯುತ್ತಿದಾಗ ಯಾವುದೋ ವಿಷಕಾರಕ ಹಾವು ಬಲಗೈ ಮುಂಗೈಗೆ ಕಡಿದಿದ್ದು ಅವನಿಗೆ ಉಪಚಾರಕ್ಕೆಂದು  ಹಾವೇರಿ ಜಿಲ್ಲಾ ಆಸ್ಪತ್ರೆಗೆ ಉಪಚಾರಕ್ಕೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಉಪಚಾರ ಫಲಿಸದೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ಚಾಭಾವಿಕ ಮರಣ ಸಂಖ್ಯೆ:10/2021 ವ್ಯಕ್ತಿ ಸಾವು.

             ಶಾಂತಪ್ಪ ಮಡಿವಾಳರ ವಯಾ; 48 ವರ್ಷ ಜಾತಿ ಹಿಂದೂ ಮಡಿವಾಳರ ಉದ್ಯೋಗ ಅಂಚೆ ನೌಕರ ಸಾ:ರಾಣೇಬೆನ್ನೂರು ವಾಗೀಶ ನಗರ ಇವರು ಎಂದಿನಂತೆ ಅಂಚೆ ಕಚೇರಿ ಕೆಲಸಕ್ಕೆ ಹೋಗುವ ಕಾಲಕ್ಕೆ ದಿನಾಂಕ: 17-03-2021 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ರಾಣೇಬೆನ್ನೂರು ಬಸ್ಟ್ಯಾಂಡದಲ್ಲಿ ಹಿರೇಕೆರೂರ ಕಡೆಗೆ ಹೋಗುವ ಬಸ್ಸ ಹತ್ತಿದಾಗ ಏಕಾಏಕಿ ಕುಸಿದು ಬಿದ್ದಿದ್ದು ಉಪಚಾರಕ್ಕೆ ರಾಣೇಬೆನ್ನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಶಾಂತಪ್ಪನನ್ನು ಪರೀಕ್ಷಿಸಿದ ವೈದ್ಯರು ಮುಂಜಾನೆ 10-00 ಸುಮಾರಿಗೆ ಶಾಂತಪ್ಪ ಜೀವಂತವಾಗಿಲ್ಲ. ಹೃದಯಾಘಾತವಾಗಿರಬಹುದು ಅಂತಾ ತಿಳಿಸಿದ್ದು ಅವನ ಸಾವಿನಲ್ಲಿ ಬೇರೆ ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಶ್ರೀಕಾಂತ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 20-03-2021 06:37 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ