ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:60/2021 ಮಹಿಳೆ ಕಾಣೆ.

                  ಕುಮಾರಿ: ವಿದ್ಯಾ ತಂದೆ ಹೊನ್ನಪ್ಪ ಹಾವನೂರ ವಯಾ 26 ವರ್ಷ ಜಾತಿ: ಹಿಂದೂ ಲಿಂಗವತ ಉದ್ಯೋಗ: ಮನೆಕೆಲಸ ವಾಸ:ಕರೂರು ತಾ: ರಾಣೆಬೆನ್ನೂರು ಇವಳು ದಿನಾಂಕ15/08/2021 ರಂದು ರಾತ್ರಿ 10-00 ಗಂಟೆಯಿಂದ 16/08/2021 ರಂದು ಬೆಳ್ಳಿಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಕರೂರು ಗ್ರಾಮದ ವಾಸದ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ವಿದ್ಯಾ ಇವಳಿಗೆ ಹುಡುಕಿಸಿಕೊಡಬೇಕೆಂದು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:111/2021 ವ್ಯಕ್ತಿ ಕಾಣೆ.

                  ಗೀರಿಶ ತಂದೆ ರಾಜು ಹುಬ್ಬಳ್ಳಿ ವಯಾ-17 ವರ್ಷ. ಜಾತಿ-ಹಿಂದೂ ಸಮಗಾರ . ಉದ್ಯೋಗ-ವಿದ್ಯಾಬ್ಯಾಸ. ಸಾ-ಬ್ಯಾಡಗಿ ಆಶ್ರಯ ಬಡಾವಣೆ ಬೆಟ್ಟದಮಲ್ಲೇಶ್ವರ  ಇವನು ದಿನಾಂಕ;09-08-2021 ರಂದು ಸಂಜೆ 5-30 ಗಂಟೆ ಸುಮಾರಿಗೆ ಮನೆಯಲ್ಲಿ ತನ್ನ ಅಜ್ಜನ ಸಂಗಡ ತಂಟೆ ಮಾಡಿ ಮನೆಯಿಂದ ಹೊರಗೆ ಹೊದವನು ಪರ್ತ ಮನೆಗೆ ಬಾರದೆ ಎಲ್ಲಿಯೋ ಹೊಗಿ ಕಾಣೆಯಾಗಿರಬಹುದು ಅಥವಾ ಯಾರೋ ಯಾವುದೋ ಉದ್ದೇಶಕ್ಕೆ ಅಪರಹರಣ ಮಾಡಿಕೊಂಡು ಹೋಗಿರಬಹುದ ಕಾಣಿಯಾದ/ಅಪಹರಣವಾದ ನನ್ನ ಮಗನನ್ನು  ಪತ್ತೇ ಮಾಡಿಕಡಬೇಕು ಅಂತಾ ರಾಜು ಹುಬ್ಬಳ್ಳಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪಿರ್ಯಾದಿ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:132/2021 ಮಹಿಳೆ ಕಾಣೆ.

                  ಸುಜಾತ ತಂದೆ ಉಜ್ಜಪ್ಪ ಹರಿಜನ ವಯಾ: 24 ವರ್ಷ ಜಾತಿ: ಹಿಂದೂ ಹರಿಜನ, ಉದ್ಯೋಗ: ಮನೆಗೆಲಸ, ಸಾ: ಜೋಗಿಹಳ್ಳಿ, ತಾ:ಹಿರೇಕೆರೂರ. ಇವಳು ದಿನಾಂಕ: 11-08-2021 ರಂದು 09-30 ಗಂಟೆಗೆ ಜೋಗಿಹಳ್ಳಿ ಗ್ರಾಮದ ವಾಸದ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ.  ನನ್ನ ಮಗಳು ಸುಜಾತ ಇವಳು ಕೋಲುಮುಖ, ನೀಟಾದ ಮೂಗು, ಗೋದಿ ಮೈಬಣ್ಣ ಎತ್ತರ 4 ಅಡಿ 6 ಇಂಚು ಹೊಂದಿದ್ದು ಮನೆಯಿಂದ ಹೋಗುವಾಗ ಹಸಿರು ಬೂದು ಬಣ್ಣದ ಚೂಡಿ ಡ್ರೆಸ್ ಧರಿಸಿದ್ದು ಕಾಣೆಯಾಗಿ ಹೋದ ನನ್ನ ಮಗಳನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಸುಜಾತಾ ಇವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ಅನಾಮಧೇಯ ಮಹಿಳೆ ಸಾವು.

                  ದಿನಾಂಕ 16-08-2021 ರಂದು ಮದ್ಯಾಹ್ನ 1-00 ಗಂಟೆಗೆ ಮಕರಿ - ದೊಡ್ಡಗುಬ್ಬಿ ನಡುವೆ ನಾರಾಯಣಪ್ಪ ಶಿವಪ್ಪ ನಾಡರ ಸಾಃ ಮಕರಿ ಇವರ ಹೊಲದ ಹತ್ತಿರದ ಅಪ್ಪರತುಂಗಾ ಚಾನಲ ನೀರಿನಲ್ಲಿ ಯಾವುದೋ ಅನಾಮದೇಯ ಹೆಂಗಸ್ಸಿನ ಶವವು ತೇಲಿಕೊಂಡು ಬಂದಿದ್ದು ಇರುತ್ತದೆ. ಶವವು ಸುಮಾರು 50 ರಿಂದ 60 ವರ್ಷ ವಯಸ್ಸಿನ ಹೆಂಗಸ್ಸಿನದು ಇದ್ದು ನೀರಿನಲ್ಲಿ ಸಂಪೂರ್ಣ ಕೊಳೆತು ಅಲಲ್ಲಿ ಹುಳುಗಳು ಬಿದಿದ್ದು. ಜಲಚರ ಜೀವಿಗಳು ಅಲ್ಲಲ್ಲಿ ಕಚ್ಚಿ ಚರ್ಮ ತಿಂದಿರುತ್ತವೆ. ಶವ ಗುರುತು ಸಿಗುವದಿಲ್ಲ. ಮೈ ಮೇಲೆ ಕಪ್ಪ ಬಣ್ಣದ ಬ್ಲೌಸ್. ಕಂದು ಮತ್ತು ಕಪ್ಪು ಬಣ್ಣದ ಸ್ವೇಟರ್ ಇರುತ್ತದೆ. ಬಹುಶಃ ಸದರಿ ಮೃತ ಅನಾಮದೇಯ ಹೆಂಗಸ್ಸು ಈಗ ಸುಮಾರು 6 ರಿಂದ 7 ದಿವಸಗಳ ಹಿಂದೆ ಎಲ್ಲೊ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಯಾವುದೊ ರೀತಿಯಿಂದ ನೀರಿನಲ್ಲಿ ಬಿದ್ದು ಈಜಲು ಬಾರದೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

 

 

ಇತ್ತೀಚಿನ ನವೀಕರಣ​ : 17-08-2021 06:28 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ