ಅಭಿಪ್ರಾಯ / ಸಲಹೆಗಳು

ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021  ಕಲಂ: INFORMATION TECHNOLO GY ACT 2008 (U/s-66(C),66(D)); 420 IPC.

              ಶಿವಬಸಪ್ಪ ಚನ್ನಪ್ಪ ಹಿಂಚಿಗೇರೆ ಸಾ|| ಹಾವೇರಿ ಹಾಗೂ ಅವರ ಅಕ್ಕನಿಗೆ ಡಿಜಿಟಲ್ ಸೆವ್ ಸೊಲುಶನ್ ಸಿಬ್ಬಂದಿ ಅಂತಾ ಅಪರಿಚಿತ ವ್ಯಕ್ತಿ ಪೋನ್ ಮಾಡಿ, ಶಿವಬಸಪ್ಪ ಇವರ  ಅಕ್ಕನ ಹೆಸರಿನಲ್ಲಿ ಎಸ್.ಬಿ.. ಗ್ರಾಹಕ ಸೇವಾ ಕೇಂದ್ರವನ್ನು ತೆರೆಯಲು ಅನುಮತಿ ಕೊಡುತ್ತೇವೆ ಅಂತಾ ನಂಬಿಸಿ, ಎಸ್.ಬಿ.. ಗ್ರಾಹಕ ಸೇವಾ ಕೇಂದ್ರವನ್ನು ತೆರೆಯಲು ವಿ.ಎಲ್.ಇ ನೋಂದಣಿ ಶುಲ್ಕ ಅಂತಾ ರೂ. 15,200/-, OD Settlement Account deposit ಶುಲ್ಕ ಅಂತಾ ರೂ. 50,000/- ಮತ್ತು Accommodation and Agreement  ಶುಲ್ಕ ರೂ. 35,500/- ಗಳ ಹಣವನ್ನು ಬ್ಯಾಂಕ್ ಖಾತೆಗಳಿಗೆ ಹಾಕಬೇಕು ಅಂತಾ ಹೇಳಿ, ಒಟ್ಟು ರೂ. 1,00,700/-ಗಳನ್ನು ತಮ್ಮ SBI A/c No. 20413309793, 36087257722 ಹಾಗೂ Punjab National Bank A/c No. 4670000100039233  ಗೆ SBI A/c No. 31147493770 ನಿಂದ ಪೋನ್ ಪೆ ಮೂಲಕ ಹಣ ಹಾಕಿಸಿಕೊಂಡು ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:97/2021  ಕಲಂ: 380,454,457  IPC.

              ದಿನಾಂಕ; 15-07-2021 ರಂದು ರಾತ್ರಿ 9-00 ಗಂಟೆಯಿಂದ ದಿ; 16-07-2021 ರಂದು ಮುಂಜಾನೆ 8-15 ಗಂಟೆಯ ನಡುವಿನ ಅವದಿಯಲ್ಲಿ ಚಿಕ್ಕೇರೂರ ಗ್ರಾಮದ ಶ್ರೀಧರ ಮೆಡಿಕಲ್ ಎದುರಿಗೆ ಇರುವ ಮಂಜುನಾಥ ಜ್ಯುವೆಲೆರಿ ವರ್ಕ ಶಾಪ್ನ ಮುಂದಿನ ಕಟ್ಟಿಗೆ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಹೋಗಿ ಅಂಗಡಿಯಲ್ಲಿನ ಟ್ರಜೂರಿಯ ಕೆಳಗೆ ಇವರು ಡ್ರಾವಗಳನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಅದರಲ್ಲಿದ್ದ 33,500/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು 87,400/- ರೂ ಕಿಮ್ಮತ್ತಿನ ಬೆಳ್ಳಿ ಆಭರಣಗಳು. ಹೀಗೆ ಒಟ್ಟು-120,900/- ರೂ ಕಿಮ್ಮತ್ತಿನ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:98/2021  ಕಲಂ: 380,454,457  IPC.

             ದಿನಾಂಕ: 15-07-2021 ರಂದು ರಾತ್ರಿ 10-00 ಗಂಟೆಯಿಂದ ದಿ; 16-07-2021 ರಂದು ಮುಂಜಾನೆ 6-00 ಗಂಟೆಯ ನಡುವಿನ ಅವದಿಯಲ್ಲಿ ಚಿಕ್ಕೇರೂರ ಗ್ರಾಮದ ಕುಂಬಾರ ಓಣಿ ಕ್ರಾಸ್ ಹತ್ತಿರ ಇರುವ ಚಿಕ್ಕೆರೂರ ಗ್ರಾಮದ ಕೃಷ್ಣಪ್ಪ ಪಾಂಡುರಂಗ ಸರ್ವದೆ ಇವರ ಕಾಂಪ್ಲೇಕ್ಸನಲ್ಲಿ ಇರುವ ಶ್ರೀ ಸಿದ್ದೇಶ್ವರ ಕಮ್ಯೂನಿಕೇಷನ್ ಸೇಲ್ಸ್ & ಸರ್ವಿಸ್ ಅಂತಾ ಮೊಬೈಲ್ ಶಾಪ್ನ ಸೇಟ್ರಸನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಹೋಗಿ ಮೊಬೈಲ್ ಶಾಫ್ ನಲ್ಲಿಇದ್ದ 17200/- ರೂ ಕಿಮ್ಮತ್ತಿನ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು 3000/-ರೂಗಳು ಹೀಗೆ ಒಟ್ಟು 20,200/- ರೂ ಕಿಮ್ಮತ್ತಿನ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:107/2021  ಮಹಿಳೆ ಕಾಣೆ.

              ವಿಜಯಲಕ್ಷ್ಮಿ ಕೆ ಜಿ ವಯಾ: 23 ಸಾ|| ರಾಣೆಬೇನ್ನೂರ  ಇವಳು ದಿನಾಂಕ; 15/07/2021 ರಂದು ಮುಂಜಾನೆ 09-15 ಗಂಟೆಯ ಸುಮಾರಿಗೆ ರಾಣೇಬೆನ್ನೂರಿನ ತಮ್ಮ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆ. ಅಂತಾ ಹೇಳಿ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ವಿಜಯಲಕ್ಷ್ಮಿ ಇವಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು  ಠಾಣಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:108/2021  ಕುರಿ ಕಳ್ಳತನ.

              ದಿನಾಂಕ:15-07-2021 ರಂದು 23-00 ಗಂಟೆಯಿಂದ ದಿನಾಂಕ:16-07-2021 ರಂದು ಬೆಳಿಗ್ಗೆ 07-00  ಗಂಟೆಯ ನಡುವಿನ ಅವಧಿಯಲ್ಲಿ ದಾದಾಪೀರ ತಂದೆ ಮಹಬೂಬ ಸಾಬ ಉಪ್ಪಿನ  ಸಾ: .ಕೆ.ಜಿ ಕಾಲೋನಿ ರಾಣೇಬೆನ್ನೂರ  ಈತನ ಮನೆಯ ಪಕ್ಕದ ಹೊರ ಭಾಗದ ಸಂಧಿಯಲ್ಲಿ ಕಟ್ಟಿದ ಒಂದು ಕುರಿಯನ್ನು ಅಂದಾಜು 90,000/- ಸಾವಿರ ಕಿಮ್ಮತ್ತಿನದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:126/2021  ಮಹಿಳೆ ಕಾಣೆ.

              ದಿನಾಂಕಃ12/07/2021 ರಂದು ರಾತ್ರಿಃ11-00 ಗಂಟೆಯಿಂದ ದಿನಾಂಕಃ13/07/2021 ರ ಬೆಳಗಿನ ಜಾವಃ04-00 ಗಂಟೆಯ ನಡುವಿನ ಅವಧಿಯಲ್ಲಿ ಸಯ್ಯದಿಲಲಿಯಾಸ ಮೋದಿನಸಾಬ ಸಾ|| ಹಾನಗಲ್ಲ ಇವರ ವಾಸದ ಮನೆಯಿಂದ ಮಹ್ಮದಹನೀಫ ತಂದೆ ಬಾಬುಸಾಬ ಬೆನಕನಹಳ್ಳಿ ಈತನು ಕುಮಾರಿ ಉಮ್ಮಿಸಲ್ಮಾ ತಂದೆ ಸಯ್ಯದಇಲಿಯಾಸ್ ಹಳೇಕೋಟಿ ವಯಾಃ17 ವರ್ಷ 10 ತಿಂಗಳು ಇವಳು ಅಲ್ಪವಯಸ್ಸಿನವಳು ಅಂತಾ ಗೊತ್ತಿದ್ದರೂ ಕೂಡ ಯಾವುದೋ ಆಸೆ ಆಮೀಷೆ ತೋರಿಸಿ ಪುಸಲಾಯಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಆಂತಾ ಸಯ್ಯದಿಲಿಯಾಸ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:33/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

              ಬೀರಪ್ಪ ತಂದೆ ಹನಮಂತಪ್ಪ ಹಾದಿಮನಿ ವಯಾ-26 ವರ್ಷ,ಜಾತಿ-ಹಿಂದೂ-ಕುರುಬ,ಉದ್ಯೋಗ-ಅಗ್ನಿಶಾಮಕ ಇಲಾಖೆ, ಸಾ-ಮಾಸಣಗಿ ಹಾಲಿವಸ್ತಿ ನಂಜನಗೂಡ ತಾ-ನಂಜನಗೂಡ, ಜಿಲ್ಲೆ-ಮೈಸೂರ ಇವನಿಗೆ ದಿನಾಂಕ:28-06-2021 ರಂದು ಮದುವೆಯಾಗಿದ್ದು ಮದುವೆಯಾದ 9ನೇ ದಿವಸಕ್ಕೆ ಇವನ ಹೆಂಡತಿಯು ಬಾಳ್ವೆ ಮಾಡಲು ಅಂಗರಗಟ್ಟಿ ಗ್ರಾಮದ ಬೀರಪ್ಪ ಇವರ ವಾಸದ ಮನೆಗೆ ಬಂದಿದ್ದು ಇರುತ್ತದೆ. ಆಶಾಢ ಮಾಸ ಇದ್ದುದರಿಂದ ಮರುದಿವಸ ತವರು ಮನೆಯವರು ಬಂದು ಬೀರಪ್ಪ ಇವರ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದು. ನಂತರ ಮೃತನು ಮದುವೆಯ ರಜೆಯ ಮೇಲೆ ಇದ್ದುದರಿಂದ ಹೆಂಡತಿ ಹೋದ ಮರುದಿವಸ ಗೆಳೆಯರ ಸಂಗಡ ಪ್ರವಾಸಕ್ಕೆ ಹೋಗಿದ್ದು ದಿನಾಂಕ:15-07-2021 ರಂದು ಪ್ರವಾಸದಿಂದ ರಾತ್ರಿ  ಅಂಗರಗಟ್ಟಿ ಗ್ರಾಮಕ್ಕೆ ಬಂದಿದ್ದು ಅಂದಿನಿಂದ ಯಾರ ಜೊತೆಯು ಮಾತನಾಡದೇ ಮಂಕಾಗಿದ್ದನು ಮನೆಯವರು ಪ್ರವಾಸಕ್ಕೆ ಹೋಗಿ ಸುಸ್ತಾಗಿರಬೇಕು ಅಂತಾ ಸುಮ್ಮನಿದ್ದರು. ದಿನಾಂಕ:15-07-2021 ರಂದು ರಾತ್ರಿ ಎಲ್ಲರೂ ಊಟ ಮಾಡಿಕೊಂಡು ರಾತ್ರಿ 10-00 ಘಂಟೆ ಸುಮಾರಿಗೆ ಮಲಗಿಕೊಂಡಿದ್ದೇವು. ನಂತರ ಮುಂಜಾನೆ 07-00 ಘಂಟೆ ಸುಮಾರಿಗೆ ಮನೆಯವರು ಬೀರಪ್ಪ ಇತನು ಮಲಗಿರುವ ಕೋಣೆಯಲ್ಲಿ ಎಬ್ಬಿಸಲು ಹೋದಾಗ ಏಳಲಿಲ್ಲ ನಂತರ ಮನೆಯವರು ಕದವನ್ನು ದೂಡಿ ತೆಗೆದು ನೋಡಿದಾಗ ಮೃತನ ಸಿಮೆಂಟ್ ತಗಡಿನ ಕಬ್ಬಿಣ ಆಂಗ್ಲರಿಗೆ ಪ್ಲಾಸ್ಟಿಕ ಹಗ್ಗದಿಂದ ಊರುಲು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

.

ಇತ್ತೀಚಿನ ನವೀಕರಣ​ : 28-07-2021 12:16 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ