ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:18/2021 ಮಹಿಳೆ ಕಾಣೆ.

                ಸಂಗಮ್ಮ @ ಶಶಿಕಲಾ ಗಂಡ ಈರಪ್ಪ ಗಾಣಿಗೇರ, ವಯಾ: 37 ವರ್ಷ ಇವರು ದಿನಾಂಕ: 10-03-2021 ರಂದು ತನ್ನ ತಾಯಿಯ ಮುಂದೆ ತನ್ನ ಗಂಡನ ಆಸ್ತಿಯ ವಿಚಾರವಾಗಿ ಬ್ಯಾಡಗಿ ಕೋರ್ಟಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಮಗಳು ದಾನೇಶ್ವರಿ, ವಯಾ: 3 1/2 ವರ್ಷ  ಇವಳಿಗೆ ತನ್ನ ಜೊತೆಗೆ ಕರೆದುಕೊಂಡು ಮುಂಜಾನೆ 11-00 ಗಂಟೆಗೆ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಸಂತೋಷ ಪಿರ್ಯಾದಿ ನಿಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:25/2021 ಕಲಂ: 279, 337, 338, 304(A) IPC.

                ದಿನಾಂಕ: 26/02/2021 ರಂದು ಮುಂಜಾನೆ 08-00 ಗಂಟೆಯಿಂದ 09-00 ಗಂಟೆ ಅವಧಿಯಲ್ಲಿ ಬಂಕಾಪುರದ ಅಲ್ಲಾವುದ್ದೀನ ಶಾ ಖಾದ್ರಿ ದಗರ್ಾ ಗೇಟ್ ಮುಂದೆ ನಿಲ್ಲಿಸಿದ್ದ ಮಹಮದ್ ಶರಿದ್ ಬಾಗಲಕೊಟ ಸಾ|| ಬಂಕಾಪೂರ ಇವರ  ಬಜಾಜ್ ಕಂಪನಿ ಪ್ಲಾಟೀನಾ ಮೋಟಾರು ಸೈಕಲ್ ನಂ  KA27 EN2784 CHESSI NO: MD2A76AY6JWJ06825 ENGINE NO: PFYWJJ66465  ನೇದ್ದು ಅ.ಕಿ 40000/- ರೂ ಕಿಮ್ಮತ್ತಿನದನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:58/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-12);363IPC.

             ದಿನಾಂಕಃ15/03/2021 ರಂದು ಸಾಯಂಕಾಲಃ04-45 ಗಂಟೆಯ ಸುಮಾರಿಗೆ ನನ್ನ ಮಗಳಾದ ಕುಮಾರಿ ಭುವನೇಶ್ವರಿ ತಂದೆ ಮಹಾದೇವಪ್ಪ ಹವಾಲ್ದಾರ ವಯಾಃ16 ವರ್ಷ 10 ದಿವಸ ಇವಳು ಮಹಾರಾಜಪೇಟೆ ಹೈಸ್ಕೂಲ್ ನಿಂದ ನೆಗವಣಗಿ ಗ್ರಾಮದ ನಮ್ಮ ಮನೆಯ ಕಡೆಗೆ ಬರುತ್ತಿದ್ದಾಗ ನೆಗವಣಗಿಯ ಜಂಡೆಕಟ್ಟಿ ಹತ್ತಿರ ಭುವನೇಶ್ವರಿ ಬರುತ್ತಿರುವಾಗ ಅವಳು ಅಲ್ಪ ವಯಸ್ಸಿನವಳು ಅಂತಾ ಗೊತ್ತಿದ್ದರೂ ಸಹ ನಾಗರಾಜ ತಂದೆ ಹನುಮಂತಪ್ಪ ಬೆಳಗಾಂವ ಈತನು ಭುವನೇಶ್ವರಿಗೆ ಯಾವುದೋ ಆಸೆ ಆಮಿಷೆ ತೋರಿಸಿ, ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:58/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-12);363IPC.

             ಶಿವಕುಮಾರ ವಯಾ; 23 ವರ್ಷ ಇವನು ತಾನು ಮಾಡುತ್ತಿದ್ದ ವ್ಯವಹಾರದ ಸಮಸ್ಯೆಯಿಂದಲೋ, ಯಾವುದಾದರೂ ಹುಡುಗಿಯನ್ನು ಪ್ರೀತಿಸಿ ಮನಸ್ಸಿಗೆ ನೋವು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ; 16/03/2021 ರಂದು ಸಂಜೆ 18-30 ಗಂಟೆಯಿಂದ 19-30 ಗಂಟೆಯ ನಡುವಿನ ಅವಧಿಯಲ್ಲಿ ತಾನು ಬಾಡಿಗೆ ವಾಸವಿದ್ದ ರಾಣೇಬೆನ್ನೂರು ಶಹರದ ಅಶೋಕ ಸರ್ಕಲ್ ಗುಪ್ತಾ ಚಾಳದ 1 ನೇ ಮನೆಯ ನಡುಮನೆಯಲ್ಲಿ ಬಾಗಿಲ ಮೇಲಿದ್ದ ಕಟ್ಟಿಗೆಯ ಗೂಟಕ್ಕೆ ಪ್ಲಾಸ್ಟಿಕ ಹಗ್ಗದಿಂದ ಕಟ್ಟಿ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಪುಷ್ಪಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 18-03-2021 06:40 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ