ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿ ಮರಣ ಸಂಖ್ಯೆ:17/2021 ವ್ಯಕ್ತಿ ಸಾವು.

              ಬಸಪ್ಪ ಮುದುಕಪ್ಪ ಗೊರಪಡೆ ಸಾ|| ಶಿಗ್ಗಾವಿ ಇವರು ಹುಟ್ಟಿದಾಗಿನಿಂದ ಮಾನಸಿಕ ಅಶ್ವಸ್ಥನಿದ್ದು ಈ ಬಗ್ಗೆ ಆಸ್ಪತ್ರೆ ತೋರಿಸಿದರು ಗುಣ ಮುಖವಾಗಿರುವುದಿಲ್ಲ, ಇತನು ತನ್ನ ಒಂದು ಆಕಳು ಜೋತೆ ಬೇರೆಯವರ ದನಗಳನ್ನು ಕಾಯುತ್ತಿದ್ದ ಅವನು ಮದುವೆ ಆಗಿರುವದಿಲ್ಲ ತನ್ನ ತಂದೆ ತಾಯಿ ತೀರಿಕೊಂಡ ಬಳಿಕ ತನ್ನ ಅಣ್ಣನ ಜೋತೆ ಇರುತ್ತಿದ್ದ ಒಮ್ಮೊಮ್ಮೆ ಅಲ್ಲಿ ಇಲ್ಲಿ ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದ ಅಲ್ಲಿಯೇ ಊಟ ಮಾಡಿ ಮಲಗುತ್ತಿದ್ದ ತನಗೆ ತೀಳಿದರೆ ಕೆಲಸಕ್ಕೆ ಹೋಗುವದು ಇಲ್ಲವಾದರೆ ಹಾಗೆ ತಿರುಗಾಡುತ್ತಿದ್ದ ಸದರಿಯವನು ತನಗಿದ್ದ ಮಾನಸಿಕ ಅಶ್ವಸ್ಥತತೆಯಲ್ಲಿ ತನ್ನಷ್ಟಕ್ಕೆ ತಾನೆ ದಿನಾಂಕ;08-07-2021 ಸಂಜೆ;07-00 ಗಂಟೆಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಗಾಯ ಹೊಂದಿದ್ದು ಆಗ ಅವನ್ನನು ಉಪಚಾರಕ್ಕೆ ಶಿಗ್ಗಾವಿ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿ ನಂತರ ಹೆಚ್ಚಿನ ಉಪಚಾರಕ್ಕೆ ಕೀಮ್ಸ ಆಸ್ಪತ್ರೆ ಹುಬ್ಬಳ್ಳಿ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಅಲ್ಲಿ ಉಪಚಾರ ಹೊಂದುವಾಗ ಉಪಚಾರ ಫಲಿಸದೆ ದಿನಾಂಕ;15/07/2021 ರಂದು ಮುಂಜಾನೆ 07-00 ಗಂಟೆಯ ಸುಮಾರು ಕೀಮ್ಸ ಹುಬ್ಬಳ್ಳಿಯಲ್ಲಿ ಮರಣ ಹೊಂದಿದ್ದು  ಅವನ ಮರಣದಲ್ಲಿ ಯಾವುದೇ  ಸಂಶಯವಿರುದಿಲ್ಲಅಂತಾ  ಪ್ರಕಾಶ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:18/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

              ಶ್ರೀಮತಿ ರೇಖಾ ಕೊಂ ಕುಮಾರ ಉಗ್ಗಮ್ಮವರ ವಯಾ- 33 ವರ್ಷ ಜಾತಿ- ಹಿಂದೂ ವಾಲ್ಮೀಕಿ ಉದ್ಯೋಗ- ಒಕ್ಕುಲುತನ ಸಾ- ಕಳಲಕೊಂಡ ತಾ- ಸವಣೂರ ಇವಳಿಗೆ ಮೂರನೇ ಹೆರಿಗೆ ಆದಾಗಿನಿಂದ ಥೈರಾಡ ಸಮಸ್ಯೆಯಾಗಿದ್ದು ಇದರಿಂದ ಅವಳಿಗೆ ಗಂಟಲು ಬಾವು ಬರುವುದು, ಕೈ-ಕಾಲುಗಳು ಬಾವು ಬರುವುದು ಮತ್ತು ಮೈಯ್ಯಲ್ಲಿ ರಕ್ತ ಕಡಿಮೆಯಾಗುವುದು ಆಗುತ್ತಿದ್ದು, ಅವಳಿಗೆ ಉಪಚಾರಕ್ಕೆ ಸವಣುರ ಸರ್ಕಾರಿ ಆಸ್ಪತ್ರೆ, ಸವಣೂರದ ಫರಾಶ ಆಸ್ಪತ್ರೆ, ಹಾವೇರಿಯ ಹೆಗ್ಗೇರಿ ಆಸ್ಪತ್ರೆಗಳಲ್ಲಿ ಉಪಚಾರಕ್ಕೆ ತೋರಿಸಿದ್ದರೂ ಅವಳಿಗೆ ಗುಣಮುಖವಾಗಿರಲಿಲ್ಲ. ಇದರಿಂದಾಗಿ ಅವಳು ಮಾನಸಿಕವಾಗಿ ಜೀವನದಲ್ಲಿ ಜೀಗುಪ್ಸೆ ಹೊಂದಿ ದಿನಾಂಕ- 14-07-2021 ರ ರಾತ್ರಿ 9-00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿದ್ದ ಹತ್ತಿಗೆ ಹೊಡೆಯುವ ವಿಷಕಾರಕ ಎಣ್ಣೆಯನ್ನು ಸೇವಿಸಿದ್ದು ಅವಳಿಗೆ ಉಪಚಾರಕ್ಕೆ ಸವಣೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಅಂಬುಲೆನ್ಸ ದಲ್ಲಿ ಕರೆದುಕೊಂಡು ಹೊರಟಾಗ ಹೊಸನೀರಲಗಿ ಗ್ರಾಮದ ಹತ್ತಿರ ಅವಳಿಗೆ ತ್ರಾಸ ಆಗಿದ್ದರಿಂದ ಅವಳಿಗೆ ವಾಪಾಸ ಸವಣೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯಾಧಿಕಾರಿಗಳಿಂದ ಪರೀಕ್ಷಿಸಿದಾಗ ಅವಳು ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

.

ಇತ್ತೀಚಿನ ನವೀಕರಣ​ : 28-07-2021 12:13 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ