ಅಭಿಪ್ರಾಯ / ಸಲಹೆಗಳು

     ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:25/2021 ಮಹಿಳೆ ಕಾಣೆ.

             ವಿದ್ಯಾ ತಂದೆ ಮಂಜಪ್ಪ ಬೆನಕನಹಳ್ಳಿ, ವಯಾ: 20 ವರ್ಷ 8 ತಿಂಗಳು ಇವಳು ದಿನಾಂಕ: 10-04-2021 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಎಲ್ಲಿಯೊ ಕಾಣೆಯಾಗಿ ಹೋಗಿದ್ದು ಈ ಕುರಿತು ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲಾ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕು ಅಂತಾ ಮಂಜಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:64/2021 ಮಹಿಳೆ ಕಾಣೆ.

                 ಪೂಜಾ ಬಿ ಎಲ್ ಇವರು ರಾಣೇಬೆನ್ನೂರು ಶಹರದ ಮೃತ್ಯುಂಜಯ ನಗರದಲ್ಲಿರುವ ಸ್ವಾಧಾರ ಗೃಹ ನಿಶಾರ್ಡ ಸಂಸ್ಥೆಯಲ್ಲಿ  ಮೇಲ್ವಿಚಾರಕರು ಅಂತಾ ಕೆಲಸ ಮಾಡಿಕೊಂಡಿದ್ದು ಸದರಿಯವರ ಸಂಸ್ಥೆಯ ಆಶ್ರಯದಲ್ಲಿದ್ದ ಶ್ರೀಮತಿ ಬೀಬಿ ಫಾತೀಮಾ @ ನಗ್ಮಾ ಗಂಡ ಅಮ್ಜದಖಾನ ಗುರನ್ನಿ ವಯಸ್ಸು: 21 ವರ್ಷ ಹಾಗೂ ಅವಳ ಮಗಳು ಕುಮಾರಿ ಅರ್ಬಿನ್ ತಾಜ್ ವಯಸ್ಸು: 1 ವರ್ಷ, 6 ತಿಂಗಳು ಸಾ; ರಾಣೇಬೆನ್ನೂರು ವಿಧ್ಯಾನಗರ ಇವರು ದಿನಾಂಕ; 13/04/2021 ರಂದು ಸಂಜೆ 07-45 ಗಂಟೆಯಿಂದ 08-00 ಗಂಟೆಯ ನಡುವಿನ ಅವಧಿಯಲ್ಲಿ ಸ್ವಾಧಾರ ಗೃಹದಲ್ಲಿರುವ ಶೌಚಾಲಯಕ್ಕೆ ಹೋಗಿ ಬರುವದಾಗಿ ತಿಳಿಸಿ ಹೋದವರು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಪೂಜಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:71/2021 ವ್ಯಕ್ತಿ ಕಾಣೆ.

                 ಪುಟ್ಟಪ್ಪ ತಂದೆ ಮಲ್ಲಪ್ಪ ಗೌರಮ್ಮನವರ, ವಯಾಃ 27 ವರ್ಷ, ಉದ್ಯೋಗ- ಕೂಲಿ, ಜ್ಯಾತಿ- ಹಿಂದೂ ಕುರುಬರಸಾಃ ಹನುಮಸಾಗರ, ತಾಃ ಹಾನಗಲ್ಲ ಈತನು  ದಿನಾಂಕಃ05/04/2021 ರಂದು ಬೆಳಿಗ್ಗೆ 09-00 ಗಂಟೆಯಿಂದ ಸಂಜೆ 05-30 ಗಂಟೆಯ ನಡುವಿನ ಅವದಿಯಲ್ಲಿ  ತನ್ನ ವಾಸದ ಮನೆಯಿಂದ  ಯಾರಿಗೂ ಹೇಳದೇ ಕೇಳದೇ ಹೊರಗೆ ಹೋದವನು ವಾಪಾಸ್ಸ್ ಇಲ್ಲಿಯವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ, ಈತನನ್ನು ತಮ್ಮ ಗ್ರಾಮದಲ್ಲಿ ಮತ್ತು ಸಂಬಂಧಿಕರ ಉರುಗಳಲ್ಲಿ ಹುಡಿಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ತಮ್ಮ ಮಗನನ್ನು  ಹುಡುಕಿ ಕೊಡಲು ಮಲ್ಲಪ್ಪ ಪಿರ್ಯಾಧಿ ಕೊಟ್ಟಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 22-04-2021 12:43 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ