ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:33/2021 ಮಹಿಳೆ ಕಾಣೆ.

                ಕು|| ಕವಿತಾ ತಂದೆ ರಮೇಶ ಜಮಾಲಿ ವಯಾ.21 ವರ್ಷ ಜಾತಿ. ಹಿಂದೂ ಕುರಬರ ಉದ್ಯೋಗ.ಮನೆ ಕೆಲಸ ಸಾ||ಮಾಸನಕಟ್ಟಿ ತಾ||ಹಾನಗಲ್ಲ ಇವಳು ದಿನಾಂಕ: 14/03/2021 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಮನೆಯಲ್ಲಿ ಬಂಕಾಪುರ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದಾ ಹೋದವಳು ವಾಪಸ್ಸ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳ ಲ್ಲಿ ಈವರೆಗೆ ತಮ್ಮ ಮಗಳಿಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಪತ್ತೆ ಮಾಡಿಕೊಡುವಂತೆ ಕಾಣೆಯಾದವಳ ತಾಯಿ ಮಂಜುಳಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಮಹಿಳೆ ಕಾಣೆ.

                ಗಾಯಿತ್ರಿ ಕೋಂ ಗಿರೀಶ ಕಂಬಳಿ ವಯಸ್ಸು:-22 ವರ್ಷ ಜಾತಿ: ಹಿಂದೂ ಕುರುಬರ ಉದ್ಯೋಗಮನೆ ಕೆಲಸ  ಸಾ: ತುಮ್ಮಿನಕಟ್ಟಿ, ತಾ: ರಾಣೇಬೆನ್ನೂರ  ಇವಳು  ದಿನಾಂಕ:07-03-2021 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ತನ್ನ ಮನೆಯಿಂದ ಪಾತೀಮಾಬಾನು ಮಲೆಬೆನ್ನೂರ ಇವರ ಮನೆಗೆ ಹೋಗಿ ಬಟ್ಟೆ ಹೊಲಸಿಕೊಂಡು ಬರುತ್ತೆನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇವಳು ಮುತ್ಯಾ ತಂದೆ ಕರಿಯಪ್ಪ ಹಕಾರಿ ಸಾ:ದೇವರಗುಡ್ಡ ಇವನೊಂದಿಗೆ  ಹೋದ ಬಗ್ಗೆ ಅನುಮಾನವಿದ್ದು ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಗಿರೀಶ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:56/2021 ಕಲಂ: 279, 337, 338, 304(A) IPC.

                ದಿನಾಂಕಃ15/03/2021 ರಂದು ಮದ್ಯಾಹ್ನಃ02-30 ಗಂಟೆಯ ಸುಮಾರಿಗೆ ಹಿರೂರ ಗ್ರಾಮದ ಸಮೀಪ ತಿರುಮಲ ದೇವರ ದೇವಸ್ಥಾನದ ಎದುರಿಗೆ ಇರುವ ಹಿರೂರ ಹಾನಗಲ್ಲ ಟಾರ್ ರಸ್ತೆಯ ಮೇಲೆ ಸಂತೋಷ ಶೇಖಪ್ಪ ಬಸಾಪುರ ಸಾ ಹಿರೂರ ಇತನು ತಾನೂ ನಡೆಸುತ್ತಿದ್ದ ಪ್ಯಾಸೆಂಜರ್ ಅಟೋ ನಂಬರಃಕೆಎ-27/ಬಿ-3215 ನೇದ್ದರಲ್ಲಿ ಮಂಜಪ್ಪ ಮೆಳ್ಳಿಹಳ್ಳಿ ಹಾಗೂ ಇನ್ನು 03 ಜನರನ್ನು ಹತ್ತಿಸಿಕೊಂಡು ಹಿರೂರ ಕಡೆಯಿಂದ ಹಾನಗಲ್ಲ ಕಡೆಗೆ ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಎದುರಿಗೆ ಹಾನಗಲ್ಲ ಕಡೆಯಿಂದ ಹಿರೂರ ಕಡೆಗೆ ಮೋಟಾರ್ ಸೈಕಲ್ ನಂಬರಃಕೆಎ-27/ಇಪಿ-0084 ನೇದ್ದರ ಸವಾರನು ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನಿಂದ ಚಲಾಯಿಸಿಕೊಂಡು ಬಂದು ಎದುರು ಬದುರಾಗಿ ಡಿಕ್ಕಿಪಡಿಸಿ ಅಪಘಾತಪಡಿಸಿ ಪ್ಯಾಸೆಂಜರ್ ಅಟೋವನ್ನು ಪಲ್ಟಿ ಮಾಡಿ ಪ್ಯಾಸೆಂಜರ್ ಅಟೋದಲ್ಲಿದ್ದ 03 ಜನಕ್ಕೆ ಸಾದಾ ಸ್ವರೂಪದ ರಕ್ತಗಾಯ ಒಳನೋವುಪಡಿಸಿದ್ದು ಅಲ್ಲದೇ ಮಂಜಪ್ಪ ಮೆಳ್ಳಿಹಳ್ಳಿ ಈತನ ಎಡಕಿವಿಯ ಹತ್ತಿರ ಭಾರಿ ಸ್ವರೂಪದ ರಕ್ತಗಾಯಪಡಿಸಿದ್ದು ಮೋಟಾರ್ ಸೈಕಲ್ ನಂಬರಃಕೆಎ-27/ಇಪಿ-0084 ನೇದ್ದರ ಸವಾರನು ಎಡಗಣ್ಣಿನ ಹತ್ತಿರ, ಹಿಂದೆಲೆಗೆ ಭಾರಿ ಸ್ವರೂಪದ ರಕ್ತಗಾಪಡಿಸಿಕೊಂಡಿದ್ದು ನಂತರ ಗಾಯಾಳು ಮಂಜಪ್ಪ ಮೆಳ್ಳಿಹಳ್ಳಿ ಈತನಿಗೆ ಹಾನಗಲ್ಲ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕೊಡಿಸಿ ನಂತರ ಹೆಚ್ಚಿನ ಉಪಚಾರಕ್ಕೆ ಹಾನಗಲ್ಲ ಸಕರ್ಾರಿ ಆಸ್ಪತ್ರೆಯ ಅಂಬ್ಯೂಲೆನ್ಸ್ದಲ್ಲಿ ಹುಬ್ಬಳ್ಳಿ ಕಿಮ್ಸ್ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 18-03-2021 06:38 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ