ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:59/2021 ಕಲಂ: 279,304(A) IPC.

                        ಪವನಕುಮಾರ ತಂದೆ ಬಸವರಾಜ ಬೋವೇರ ವಯಾ 17 ವರ್ಷ ಜಾತಿ ಹಿಂದೂ ಗಂಗಾಮತ ಉದ್ಯೋಗ ವಿದ್ಯಾರ್ಥಿ ಸಾ|| ಬಾಳೆಹಳ್ಳಿ ಕಲ್ಯಾಣ ಮಂಟಪ ಹತ್ತಿರ ವಾಗೀಶ ನಗರ ಕೋಡಿಯಾಲ ಹೊಸಪೇಟೆ ತಾ|| ರಾಣೆಬೆನ್ನೂರ ಇವನು ದಿನಾಂಕ 13/08/2021 ರಂದು ಮುಂಜಾನೆ 08-45 ಗಂಟೆಗೆ ಮನೆಯಲ್ಲಿ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವನನ್ನು ಯಾರೋ ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು ನನ್ನ ಮಗನನ್ನು ಪತ್ತೆ ಮಾಡಬೇಕೆಂದು ಕಾಣೆಯಾದವನ ತಂದೆ ಬಸವರಾಜ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:79/2021 ಕಲಂ: 379 IPC

              ಹಾವೇರಿ ಶಹರ ಪೊಲೀಸ್ ಠಾಣಾ ಹದ್ದಿ ಪೈಕಿ,  ಹಾವೇರಿಯ ಶಹರದ ಪುರದ ಓಣೀಯಯಲ್ಲಿ ಬರುವ ವಾಸಿಮಅಕ್ರಮ್‌ ಖಾನ್‌ ಮಲ್ಲಾಡದ ಸಾ|| ಪುರದ ಓಣಿ ಹಾವೇರಿ ಇವರ  ವಾಸದ ಮನೆ ಪಕ್ಕದ ಖಾಲಿ ಜಾಗೇಯಲ್ಲಿ ಯಾರೋ ಮೂರು ಜನ ಸುಮಾರು 25 ರಿಂದ 30 ವರ್ಷದೊಳಗಿನ ಕಳ್ಳರು ದಿನಾಂಕ 20-07-2021 ರಾತ್ರಿ 22-00 ಗಂಟೆಯಿಂದ  ದಿನಾಂಕ 21-07-2021 ರ ಬೆಳಿಗ್ಗೆನ 00-50 ಗಂಟೆಯ ನಡುವಿನ ಅವಧಿಯಲ್ಲಿ ಮನೆ ಪಕ್ಕದ ಖಾಲಿ ಜಾಗೆಯಲ್ಲಿ ನಿಲ್ಲಿಸಿದ ಬಜಾಜ್ ಪಲ್ಸರ್ 220 ಕಂಪನಿಯ ಕಪ್ಪು ಬಣ್ಣದ ಮೋಟರ್ ಸೈಕಲ್ಲ ನಂ ಕೆಎ 63/ಜೆ 3353  ಚೆಸ್ಸಿ ನಂ- MD2A13EY5JCA31274 ಮತ್ತು ಇಂಜೆನ್ ನಂಬರ DKYCJA30913 ನೇದ್ದರ ಅಂದಾಜು ಮೌಲ್ಯ 70,000/- ರೂ ಕಿಮ್ಮತ್ತಿನ ಮೋಟರ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:91/2021 ವ್ಯಕ್ತಿ ಕಾಣೆ.

              ಪ್ರಕಾಶ ಪರಸಪ್ಪ ಮಡಿವಾಳರ ವಯಾ: 25 ವರ್ಷ, ಉದ್ಯೋಗ: ವ್ಯವಸಾಯ, ಸಾ: ಮರೊಳ ತಾ:ಹಾವೇರಿ,ಇವನು ಈಗ ಸುಮಾರು 04 ವರ್ಷಗಳ ಹಿಂದಿನಿಂದ ಬೆಂಗಳೂರಿಗೆ ಹೋಗಿ ಬಂದು ಮಾಡುತ್ತಿದ್ದು ಈಗ 06 ತಿಂಗಳ ಹಿಂದೆ ತಮ್ಮೂರಾದ ಮರೋಳ ಗ್ರಾಮಕ್ಕೆ ಬಂದಿದ್ದು ಇವನು ಮೈಸೂರು ಹತ್ತಿರ ಇರುವ ಒಂದು ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದು ಇವನು ದಿನಾಂಕ: 06/08/2021 ರಂದು ಸಂಜೆ 06-00 ಗಂಟೆ ಮರೋಳ ಗ್ರಾಮದ ತಮ್ಮ ಮನೆಯಿಂದ ಮನೆಯಲ್ಲಿ ಹೇಳದೇ ಕೇಳದೆ ಹೋದವನು ಮರಳಿ ಮನೆ ಬಂದಿರುವುದಿಲ್ಲ ಈ ಬಗ್ಗೆ ಕಾಣೆಯಾದವನಿಗೆ ತಮ್ಮ ಸಂಬಂದಿಕರ ಊರುಗಳಲ್ಲಿ ಹಾಗೂ ಇತರೆ ಊರುಗಳಲ್ಲಿ ಹುಡುಕಾಡಿದರು ಸಿಗದೇ ಇರುವುದರಿಂದ ಕಾಣೆಯಾದವರನ್ನು ಹುಡುಕಿ ಕೊಡಲು ನಾಗಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:106/2021 ಕಲಂ: 279,304(A) IPC.

                  ದಿನಾಂಕ: 14-08-2021 ರಂದು 10-00 ಗಂಟೆ ಸುಮಾರಿಗೆ Hero Splendor Motor Cycle No: KA: 14/EV-1625 ನೇದ್ದನ್ನು ಸಂದೇಶ ಹಳ್ಳೇರ ತಂದೆ ನಾಗರಾಜ ಸಾ: 19ನೇ ಕ್ರಾಸ್, RML ನಗರ, ಶಿವಮೊಗ್ಗ ಹಾಲಿವಸ್ತಿ: ನಿಟ್ಟೂರ ಇವನು ನಿಟ್ಟೂರ ಒಳಗಿನಿಂದ ಕುಪ್ಪೆಲೂರ ಕಡೆಗೆ ಹೋಗುವ ಕುರಿತು ಅತೀ ಸ್ಪೀಡಾಗಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಸಿದ್ದಪ್ಪ ತಂದೆ ಭರಮಪ್ಪ ದುರ್ಗದ ಇವರ ಮನೆಯ ಮುಂದೆ ತನ್ನ ಎದುರಿಗೆ ಕುಪ್ಪೆಲೂರ ಕಡೆಯಿಂದ ನಿಟ್ಟೂರ ಗ್ರಾಮದೊಳಗೆ ಹೋಗುವ ಕುರಿತು ನಿಧಾನವಾಗಿ ಹೊರಟಿದ್ದ KSRTC ಬಸ್ಸ ನಂ: KA: 42/F-1538 ನೇದ್ದರ ಬದಿಗೆ ಮೋಟಾರ ಸೈಕಲ್ಲನ್ನು ಸ್ಪೀಡಾಗಿ ನಡೆಯಿಸಿಕೊಂಡು ಹೋಗಿ ಸ್ಪೀಡ ಕಂಟ್ರೋಲ ಮಾಡಲು ಆಗದೇ ಒಮ್ಮೆಲೇ ಬ್ರೆಕ್ ಹಾಕಿ ಮೋಟಾರ ಸೈಕಲ್ಲ ಸಮೇತ ಕೆಳಗೆ ಬಿದ್ದು, ತನ್ನ ಹಿಂದೆ ಕುಳಿತ ಕಮಲಮ್ಮ ಕೊಂ ಸೋಮಶೇಖರ ನಾರಜ್ಜಿ @ ಕಾಸಂಬಿ ವಯಾ: 55 ವರ್ಷ ಸಾ: ನಿಟ್ಟೂರ ಇವಳನ್ನು ಬಸ್ಸಿನ ಬಲಗಡೆಯ ಹಿಂದಿನ ಗಾಲಿಯಲ್ಲಿ ಕೆಡವಿದ್ದರಿಂದ ಅವಳ ತಲೆಯು ಬಸ್ಸಿನ ಗಾಲಿಗೆ ಸಿಲುಕಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮರಣಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                  ಮಹಾದೇವಕ್ಕ ಕೋಂ ಧರ್ಮಪ್ಪ ಗುಳೇದ ವಯಾ 42 ವರ್ಷ ಸಾ|| ಕರೂರ ತಾ|| ರಾಣೆಬೆನ್ನೂರ ಇವಳಿಗೆ ಮದುವೆಯಾಗಿ 22 ವರ್ಷಗಳಾದರೂ ಮಕ್ಕಳಾಗಲಿಲ್ಲಾ ಅಂತಾ ಮಾನಸಿಕ ಮಾಡಿಕೊಂಡು ನನಗೆ ಮಕ್ಕಳಿಲ್ಲಾ ಇದ್ದರೆನು ಸತ್ತರೇನು ಅನ್ನುತ್ತಿದ್ದಳು. ಅದಕ್ಕೆ ಮಕ್ಕಳಿಲ್ಲದೇ ಇದ್ದರೇ ಏನಾಗುತ್ತದೆ ಅಂತಾ ಬುದ್ದಿ ಹೇಳಿದರೂ ಕೇಳದೇ ದಿನಾಂಕ 13/08/2021 ರಂದು 18-30 ಗಂಟೆಯಿಂದ 19-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನು ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮನೆಯಲ್ಲಿದ್ದ ಪಿರಿಡಾನ್ ಗುಳಿಗೆಗಳನ್ನು ತೆಗೆದುಕೊಂಡು ಒದ್ದಾಡುತ್ತಿದ್ದವಳಿಗೆ ಉಪಚಾರಕ್ಕೆ ಹರಿಹರ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ ಮಾಡಿ ಹೆಚ್ಚಿನ ಉಪಚಾರಕ್ಕೆ ದಾವಣಗೇರಿ ಚಿಗಟೇರಿ ಆಸ್ಪತ್ರೆಗೆ ಹೋಗಿ ಉಪಚಾರಕ್ಕೆ ದಾಖಲ ಮಾಡಿದಾಗ ಚಿಕಿತ್ಸೆಯಿಂದ ಚೇತರಿಸಿಕೊಳ್ಳದೇ 21-30 ಗಂಟೆಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-08-2021 06:25 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ