ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:97/2021 ಕಲಂ: 304A,279 IPC.

              ದಿನಾಂಕಃ13/07./2021 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ:14/7/2021 ರ ಬೆಳಗಿನ ಅವಧಿಯಲ್ಲಿ  ಶಿಗ್ಗಾಂವ ಪೊಲೀಸ್ ಠಾಣೆ ಹದ್ದಿ  ಶಿಗ್ಗಾಂವ ಹುಲಗೂರ ರಸ್ತೆಯ ಮೇಲೆ ಹುಲಗೂರ ಗ್ರಾಮದ ಸಮೀಪ ಎ.ಪಿ.ಎಮ್.ಸಿ ಸರ್ಕಲ್ ಹತ್ತೀರ  ದ್ಯಾಮಣ್ಣ ಸಿದ್ದಪ್ಪ ಹುಗಾರ ಸಾ|| ಬಸವನಾಳ ಇತನು ತಾನು ಹೋರಡಿಸಿಕೊಂಡು ಹೊರಟಿದ್ದ ಮೊಟಾರ ಸೈಕಲ್ಲ ಕೆ.-31 /ಎಸ್-1422 ನೆದ್ದನ್ನು ಪೆಟ್ರೋಲ್ ಪಂಪ ಕಡೆಯಿಂದ ಹುಲಗೂರ ಕಡೆಗೆ ನಡೆಸಿಕೊಂಡು ಹೋಗುವಾಗ  ಅತೀವೇಗದಿಂದ ವ ನಿರ್ಲಕ್ಷತನದಿಂದ  ಜನರಿಗೆ ಅಪಾಯವಾಗುವಂತೆ ನಡೆಸುತ್ತಾ  ಹೋಗಿ ತನ್ನ ಮೋಟಾರ ಸೈಕಲ್ ನ್ನು ನಿಯಂತ್ರಸದೆ ರಸ್ತೆ ಬದು ತೆಗ್ಗಿನಲ್ಲಿ ಚಲಾಯಿಸಿ ಬಿದ್ದು ಬಲವಾದ ಘಾಯ ಪೆಟ್ಟು ಹೊಂದಿ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:99/2021 ಕಲಂ: 379 IPS.

              ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ, ಶಿಗ್ಗಾಂವ ಶಹರದ ಹೊಸ ಬಸ್ ನಿಲ್ದಾಣದ  ಆವರಣದಲ್ಲಿ      ದಿನಾಂಕಃ-28/06/2021 ರಂದು ಮುಂಜಾನೆ 09-00 ಗಂಟೆಯಿಂದ ಮದ್ಯಾನ 3-00 ಗಂಟೆಯ ನಡುವಿನ ಅವಧಿಯಲ್ಲಿ ನಾಗರಾಜ ವಡ್ಡರ ಸಾ|| ಶಿಗ್ಗಾವಿ ಇತನು ತನ್ನ ಮಾಲ್ಕಿಯ ಹೀರೋ ಹೋಂಡಾ ಸ್ಲ್ಪೇಂಡರ ಕಂಪನಿಯ ಮೋಟಾರ ಸೈಕಲ್ಲ ನಂಬರ- KA-27/K-3697 chessi NO: 04D16C13392 engine no : 04D15M10284  worth ruppes: 20,000 /- rs  ನೇದ್ದನ್ನು  ಇಟ್ಟು ಹುಬ್ಬಳ್ಳಿಗೆ ಆಸ್ಪತ್ರೆ ಗೆ ಹೋಗಿ ತಮ್ಮ ಕೆಲಸಕ್ಕೆ ಮುಗಿಸಿಕೊಂಡು ಮದ್ಯಾನ ಬಂದು ತನ್ನ ಮೋಟಾರ ಸೈಕಲ ನೋಡಲಾಗಿ ಅದು ಇರಲಿಲ್ಲ ಸದರ ಅವದಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:17/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

              ಗಣೇಶ ತಂದೆ ಪರಮೇಶಪ್ಪ ಮಾರೇರ, ವಯಾ-22 ವರ್ಷ, ಜಾತಿ-ಹಿಂದೂ ವಾಲ್ಮಿಕಿ, ಉದ್ಯೋಗ-ಚಾಲಕ ಕೆಲಸ, ಸಾ|| ಸುತ್ತಕೊಟಿ, ತಾ|| ಹಿರೇಕೆರೂರ. ಈತನು ಯಾವಾಗಲು ಪೀಡ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ತೋರಿಸಿದರು ಹುಷಾರಾಗಿರುವುದಿಲ್ಲಾ ಆದ್ದರಿಂದ ಅವನು ಮಾನಸಿಕ ಮಾಡಿಕೊಂಡು ಬೆಜಾರಿನಲ್ಲಿ ದಿನಾಂಕ: 13-07-2021 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ:14-07-2021 ರಂದು ಬೆಳಿಗ್ಗೆ 5-30 ಗಂಟೆಯ ನಡುವಿನ ಅವದಿಯಲ್ಲಿ ನಮ್ಮ ಮನೆಯ ಅಡುಗೆ ಕೊಣೆಯ ಮೆಲಿನ ಬಿದರಿನ ಗಳಕ್ಕೆ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ, ನನ್ನ ಮಗ ಗಣೇಶ ಈತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಗಣೇಶನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:18/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ನಾಗರಾಜ ತಂದೆ ಕೊಡೆಪ್ಪ ಬತ್ತಿಕೊಪ್ಪ ವಯಾ-35 ವರ್ಷ, ಜಾತಿ-ಹಿಂದೂ ವಾಲ್ಮಿಕಿ, ಉದ್ಯೋಗ- ಕೃಷಿ ಕೆಲಸ, ಸಾ; ಮತ್ತಿಹಳ್ಳಿ, ತಾ; ಹಿರೇಕೆರೂರ ಇವನು ಸರಾಯಿ ಕುಡಿದು ಬಂದು ತನ್ನ ಹೆಂಡತಿಗೆ ಹೊಡಿ-ಬಡಿ ಮಾಡಿ ಬೈದಾಡುತ್ತಿದ್ದು, ಈ ಬಗ್ಗೆ ಸುಜಾತಾ ಬುದ್ದಿ ಹೇಳಿದರೂ ಸಹ ಕೇಳದೆ ಸರಾಯಿ ಕುಡಿಯುತ್ತಿದ್ದು, ಇದರಿಂದ ಸುಜಾತಾ ನಾನು ತವರು ಮನೆಗೆ ಹೋದರೆ ನನ್ನ ಗಂಡನು ಸರಾಯಿ ಕುಡಿಯುವದನ್ನು ಬಿಡಬಹುದು ಅಂತಾ ತಿಳಿದು 2-3 ಸಲ ತವರು ಮನೆಗೆ ಹೋದರೂ ಸಹ ಸರಾಯಿ ಕುಡಿಯುವದನ್ನು ಬಿಡಲಿಲ್ಲ. ಅಲ್ಲದೆ ದಿನಾಂಕ; 14-06-2021 ರಂದು ರಾಯಿ ಕುಡಿದು ಬಂದು ಹೊಡಿ-ಬಡಿ ಮಾಡಿ ಬೈದಾಡಿದ್ದರಿಂದ ಸುಜಾತಾ ತನ್ನ ತವರು ಮನೆಗೆ ಹೊಗಿದ್ದು ಈ ಕಾರಣಕ್ಕೆ ತನ್ನ ಮನಸ್ಸಿಗೆ ಬೇಜಾರ ಮಾಡಿಕೊಂಡು ದಿನಾಂಕ; 14-07-2021 ರಂದು ಸಂಜೆ 4-30 ಗಂಟೆ ಸುಮಾರಿಗೆ ಮತ್ತಿಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಯಾವುದೋ ವಿಷದ ಎಣ್ಣಿ ಕುಡಿದು ಉಪಚಾರಕ್ಕೆ ಹಂಸಭಾವಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾದಾಗ ಮೃತಪಟ್ಟಿದ್ದು ಇರುತ್ತದೆ, ಈ ಬಗ್ಗೆ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:26/2021 ವ್ಯಕ್ತಿ ಆತ್ಮಹತ್ಯೆ.

             ಅಶೋಕ ತಂದೆ ಶೇಖಪ್ಪ ಕಬ್ಬೂರ, ಸಾ: ದೇವಗಿರಿ, ತಾ ಹಾವೇರಿ, ಈತನು ಜಮೀನದ ವ್ಯವಸಾಯದ ಕೆಲಸಗಳಿಗೆ ಅಂತಾ ದೇವಗಿರಿಯ ಕೆವಿಜಿ ಬ್ಯಾಂಕ್ನಲ್ಲಿ 05 ವರ್ಷಗಳ ಹಿಂದೆ 02 ಲಕ್ಷ ರೂಪಾಯಿಗಳ ಹಾಗೂ 02 ವರ್ಷಗಳ ಹಿಂದೆ ಬಂಗಾರದ ಸಾಮಾನುಗಳನ್ನ ಅಡವಿಟ್ಟು 60 ಸಾವಿರ ರೂಗಳ ಸಾಲ ಮಾಡಿಕೊಂಡಿದ್ದು ಹಾಗೂ ಟ್ರಾಕ್ಟರಗಳ ಮೇಲೆ ಮಹಿಂದ್ರಾ ಪೈನಾನ್ಸದಲ್ಲಿ 02 ಲಕ್ಷ 49 ಸಾವಿರ  ಹಾಗೂ ಎಲ್ & ಟಿ ಪೈನಾನ್ಸದಲ್ಲಿ 93 ಸಾವಿರ ರೂಪಾಯಿಗಳ ಸಾಲವನ್ನ ಮಾಡಿದ್ದಲ್ಲದೇ ಮೃತನ ಹೆಂಡತಿ ಲಕ್ಷ್ಮೀ ಇವಳು ತನ್ನ ಹೆಸರಿನಲ್ಲಿ ಬಟ್ಟೆ ಮತ್ತು ಸ್ಟೇಷನರಿ ಅಂಗಡಿ ಇಡಲು ಅಂತಾ ಕೆವಿಜಿ ಬ್ಯಾಂಕಿನಲ್ಲಿ 02 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು ಇವೆಲ್ಲವೂ ಸೇರಿ ಸಾಲ ಹೆಚ್ಚಾಯಿತು ಅಂತಾ ಚಿಂತೆ ಮಾಡಿ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ನೊಂದುಕೊಂಡು ದಿನಾಂಕ; 09-07-2021 ರಂದು ಮದ್ಯಾಹ್ನ 3-00 ಗಂಟೆಯಿಂದ ದಿನಾಂಕ: 12-07-2021 ರ ಸಾಯಂಕಾಲ 6-00 ಗಂಟೆಯ ನಡುವಿನ ಅವಧಿಯಲ್ಲಿ ದೇವಗಿರಿ ಗ್ರಾಮದ ವರದಾ ನದಿಯಲ್ಲಿ ಜಿಗಿದು ಮೃತಪಟ್ಟಿದ್ದು ಈತನ ಸಾವಿನಲ್ಲಿ ಬೇರೆ ಯಾವ ಸಂಶಯ ಇರುವುದಿಲ್ಲಾ ಅಂತಾ ಮೃತನ ಸಹೋದರ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ಮಹಿಳೆ ಸಾವು.

              ಬುಜೇಂದ್ರ ತಂದೆ ನಾಗಪ್ಪ ಅಂಬಿಗೇರ ವಯಾ - 36 ವರ್ಷ ಜಾತಿ- ಹಿಂದೂ ಗಂಗಾಮತ, ಉದ್ಯೋಗ- ಕೂಲಿ ಕೆಲಸ ಸಾ; ಶೇಷಗಿರಿ ತಾ; ಹಾನಗಲ್ಲ   ಇವನು ಯಾವುದೋ ವಿಚಾರ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 08-07-2021 ರಂದು ಸಂಜೆ 06-30 ಘಂಟೆ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದು ಇವನಿಗೆ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಿಸದೆ ದಿನಾಂಕ: 12-07-2021 ರಂದು ಮುಂಜಾನೆ 10-10 ಘಂಟೆ ಸುಮಾರಿಗೆ ಮರಣ ಹೊಂದಿದ್ದು ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಶ್ರೀಮತಿ ರೇಣುಕಾ ವರದಿ ನಿಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 16-07-2021 07:13 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080