ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:73/2021 ಮಹಿಳೆ ಕಾಣೆ.

                ಕು:ಲಕ್ಷ್ಮಿ ತಂದೆ ಭರಮಪ್ಪ ಪೂಜಾರ  ವಯಾ:19 ಸಾ|| ಹಿರೇಮಣಕಟ್ಟಿ ಇವಳು ದಿನಾಂಕ:10/05/2021 ರಂದು ಮದ್ಯಾಹ್ನ 02-00 ಗಂಟೆಗೆ ತಮ್ಮೂರಿನಲ್ಲಿರುವ ದೊಡ್ಡಪ್ಪನ ಮನೆಗೆ ಹೋಗಿ ಬರುತ್ತೇನೆ ಅಂತಾ ಮನೆಯಿಂದಾ ಹೋದವಳು ವಾಪಸ್ಸ ಮನೆಗೆ  ಬಾರದೆ ಎಲ್ಲಿಯೋ ಕಾಣೆಯಾಗಿರುತ್ತಾಳೆ ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಭರಮಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:73/2021 ಕಲಂ: 279, 337, 338, 304(A) IPC.

                ದಿನಾಂಕ : 14-05-2021 ರಂದು ಮದ್ಯಾಹ್ನ 1-30 ಘಂಟೆ ಸುಮಾರಿಗೆ ರುದ್ರೇಶ ವಿರಪ್ಪ ಮಾಸಣಗಿ ಹಾಗೂ ಸಹಚರರು ಸೇರಿ ಆಡೂರ ಗ್ರಾಮಕ್ಕೆ ಅಂತಾ ಆಟೋ ನಂಬರ್ ಕೆ.-27 ಸಿ-2927 ನೇದರ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಹಾನಗಲ್ಲ-ಹಾವೇರಿ ರಸ್ತೆ ಆಡೂರ ಗ್ರಾಮದ ಗುರುರಾಜ ಮದುಸುದನ ಕುಲಕರ್ಣೀ ಇವರ ಜಮೀನ ಹತ್ತೀರ ರಸ್ತೆಯ ಮೇಲೆ ಆಡೂರ ಗ್ರಾಮದ ಕಡೆ ಬರುತ್ತೀರುವಾಗ ಸದರ ಆಟೋ ಚಾಲಕನಾದ ರುದ್ರೇಶ ತಂದೆ ವೀರಬಸಪ್ಪ ಮಾಸಣಗಿ ಸಾ.ಮುಳಥಳ್ಳಿ ತಾ.ಹಾನಗಲ್ಲ ಇವನು ತಾನು ಚಲಾಯಿಸುತ್ತಿದ್ದ ಆಟೋವನ್ನು ಅತಿ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ಆಟೋವನ್ನು ಪಲ್ಟಿಯಾಗುವಂತೆ ಮಾಡಿಕೊಂಡು ತನಗೆ ತಲೆಗೆ ಬಲವಾದ ಘಾಯ ನೋವು ಆಗುವಂತೆ ಮಾಡಿಕೊಂಡು ಸ್ಥಳದಲ್ಲಿಯೆ ಮರಣ ಹೊಂದಿದ್ದು ಅಲ್ಲದೆ ಆಟೋದಲ್ಲಿ ಕುಳಿತಂತಹ ಸಹಚರರಿಗೆ ಮೈ ಕೈ ಮೇಲೆ ಒಳ ಪೆಟ್ಟುಗಳು ಆಗುವಂತೆ ಮಾಡಿದ್ದು ಅಲ್ಲದೆ ಘಾಯಾಳು  ಚಂದ್ರಶೇಖರಪ್ಪ ತಂದೆ ವೀರಬದ್ರಪ್ಪ ಮಾಸಣಗಿ ಇವರಿಗೆ ಎಡಗಾಲ ಹತ್ತೀರ ಬಲವಾದ ಪೆಟ್ಟು ಬಿದ್ದು ಮುರಿದು ಮೈ ಕೈ ಮೇಲೆ ಸಣ್ಣ ಪುಟ್ಟ ಘಾಯ ನೋವುಗಳು ಆಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:109/2021 ಕಲಂ: 279, 304(A) IPC.

                ದಿನಾಂಕ: 12-05-2021 ರಂದು  ಸಂಜೆ 4-00 ಗಂಟೆ ಸುಮಾರಿಗೆ ಇಬ್ರಾಹಿಂಸಾಬ ತಂದೆ ಇಮಾಮಸಾಬ ಕರ್ಜಗಿ ಸಾ; ಹೊಸಳ್ಳಿ ಈತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂಬರ: ಕೆಎ27 ಇಪಿ 6313 ನೇದ್ದರಲ್ಲಿ ಮುನಿರಾಬಿ ಕೊಂ  ಇಸ್ಮಾಯಿಲಸಾಬ ತತ್ರಾಣಿ ವಯಸ್ಸು: 35 ವರ್ಷ, ಸಾ: ಹೊಸಳ್ಳಿ ತಾ: ಸವಣೂರ ಇವರಿಗೆ ಹಿಂದುಗಡೆ ಕೂಡ್ರಿಸಿಕೊಂಡು ದೇವಗಿರಿಯಿಂದ ಹೊಸಳ್ಳಿಗೆ ಹೋಗುವ ಕಾಲಕ್ಕೆ  ಮೆಳ್ಳಾಗಟ್ಟಿ-ತೊಂಡೂರ ರಸ್ತೆ ಮೆಳ್ಳಾಗಟ್ಟಿ ಪ್ಲಾಟದ ಶಿಬಾರದ ಹತ್ತಿರ ರಸ್ತೆಯ ಮೆಲೆ ಮೋಟಾರ ಸೈಕಲ್ಲನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷದಿಂದ ನಡೆಯಿಸಿಕೊಂಡು ಹೋಗುವಾಗ ಒಂದು ನಾಯಿ ಅಡ್ಡ ಬಂದಿದ್ದು ಆಗ ತನ್ನ ಗಾಡಿಯನ್ನು ಕಂಟ್ರೋಲ್ ಮಾಡದೆ ಬ್ಯಾಲನ್ಸ್ ತಪ್ಪಿ ತನ್ನ ಹಿಂದೆ ಕುಳಿತ ಮುನಿರಾಬಿ ಕೊಂ  ಇಸ್ಮಾಯಿಲ್ಸಾಬ ತತ್ರಾಣಿ  ಇವರಿಗೆ ರಸ್ತೆಯ ಮೆಲೆ ಕೆಡವಿ ಅಪಘಾತ ಪಡಿಸಿ, ಇವರ ಹಿಂದೆಲೆಗೆ ಮಾರಣಾಂತಿಕ ಗಾಯ ಪೆಟ್ಟುಗಳು ಆಗುವಂತೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 13-04-2021 ರಂದು ರಾತ್ರಿ 9-10 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:110/2021 ಕಲಂ: 279, 304(A) IPC.

                ದಿನಾಂಕ: 11-05-2021 ರಂದು  ಮದ್ಯಾಹ್ನ 3-00 ಗಂಟೆ ಸುಮಾರಿಗೆ ಮಹೇಶ ಸಹದೇವಪ್ಪ ಜೋಗಿ ಸಾ; ಹುರಳಿಕುಪ್ಪಿ ಈತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂಬರ: ಕೆಎ27 ಇಕ್ಯೂ 1862 ನೇದ್ದರಲ್ಲಿ ಈರಮ್ಮ ಕೊಂ ಹನಮಂತಪ್ಪ ಗುಡಗುಂಟಿ  ವಯಸ್ಸು: 46 ವರ್ಷ ಸಾ: ಹುರಳಿಕುಪ್ಪಿ  ತಾ: ಸವಣೂರ ಇವರಿಗೆ ಹಿಂದುಗಡೆ ಕೂಡ್ರಿಸಿಕೊಂಡು ತಮ್ಮೂರಿಂದ ಕಳಸೂರ ಕಡೆಗೆ ಹೋಗುವ ಕಾಲಕ್ಕೆ  ತೊಂಡೂರ ಗ್ರಾಮದ ಮಸಿದಿಯ ಹತ್ತಿರ ತೊಂಡೂರ-ಹೊಸಳ್ಳಿ ರಸ್ತೆಯ ಮೆಲೆ ಮೋಟಾರ ಸೈಕಲ್ಲನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷದಿಂದ ನಡೆಯಿಸಿಕೊಂಡು ಹೋಗುವಾಗ ರೋಡ್ ಹಂಸನ್ನು ಗಮನಿಸಿದೇ  ಒಮ್ಮಲೇ ಬ್ರೆಕ್ ಹಾಕಿ ತನ್ನ ಹಿಂದೆ ಕುಳಿತ ಈರಮ್ಮ ಕೊಂ ಹನಮಂತಪ್ಪ ಗುಡಗುಂಟಿ  ಇವರಿಗೆ ರಸ್ತೆಯ ಮೆಲೆ ಕೆಡವಿ ಅಪಘಾತ ಪಡಿಸಿ, ಇವರ ಹಿಂದೆಲೆಗೆ ಮಾರಣಾಂತಿಕ ಗಾಯ ಪೆಟ್ಟುಗಳು ಆಗುವಂತೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 14-04-2021 ರಂದು ಬೆಳಗ್ಗೆ 6-30 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 10/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮ ಹತ್ಯೆ.

               ಯಲ್ಲಪ್ಪ ತಂದೆ ಭೀಮಪ್ಪ ಲಮಾಣಿ ವಯಾ: 70 ವರ್ಷ ಸಾ: ಗಂಗಾಜಲತಾಂಡಾ ತಾ: ರಾಣೇಬೆನ್ನೂರ ಈತನಿಗೆ ದಿ: 05-05-2021 ರಂದು ಕೊರೋನಾ ಪಾಸಿಟಿವ್ ಬಂದಿದ್ದರಿಂದ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಹೊಂದುತ್ತಿದ್ದು ತನಗೆ ಕೊರೋನಾ ಪಾಸಿಟಿವ್ ಬಂದಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಜಿಗುಪ್ಸೆಹೊಂದಿ ದಿ: 14-05-2021 ರಂದು ಬೆಳಗಿನ ಜಾವ 03-30 ಘಂಟೆಯ ಸುಮಾರಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿರುವ 210 ನಂಬರಿನ ಕೋವಿಡ್ ವಾರ್ಡ್ದಲ್ಲಿ ತಾನು ಮಲಗಿಕೊಂಡಿದ್ದ ಬೆಡ್ನ ಮೇಲೆ ಅಳವಡಿಸಿದ್ದ ಕರ್ಟನ್ ಹಾಕುವ ಕಬ್ಬಿಣದ ಪಟ್ಟಿಗೆ ತನ್ನ ಲುಂಗಿಯನ್ನು ಕಟ್ಟಿ ತನ್ನಷ್ಟಕ್ಕೆ ತಾನೇ ನೇಣು ಹಾಕಿಕೊಂಡು ಮೃತಪಟ್ಟಿದ್ದು ಈತನ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತನ ಮಗ ವರದಿ ನೀಡಿದ್ದು  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 17-05-2021 05:54 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ