ಅಭಿಪ್ರಾಯ / ಸಲಹೆಗಳು

 ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:25/2021 ಕಲಂ: 354C, 506, 34, 504, 307, 323, 324, 326,     354 IPC.

             ದಿನಾಂಕ ; 13-04-2021 ರಂದು ಮದ್ಯಾಹ್ನ 01-30 ಗಂಟೆ ಸುಮಾರಿಗೆ ನಾಗಪ್ಪ ಶಿವಪುತ್ರಪ್ಪ ಕಾಳಿ ಇವರು  ಮೂತ್ರ ಮಾಡಲು ಅಂತಾ ತಮ್ಮ ಮನೆಯ ಹಿಂದೆ ಹೋದಾಗ ನಾಗಪ್ಪ ಇವರ ಚಿಕ್ಕಮ್ಮ ಕಸ್ತೂರೆವ್ವ ರಮೇಶಪ್ಪ ಕಾಳಿ ಇವಳು ತಮ್ಮ ಮನೆಯ ಹಿಂದುಗಡೆ ಇರುವ ಬಚ್ಚಲದಲ್ಲಿ ಸ್ನಾನ ಮಾಡುತ್ತಿದ್ದು ಆಗ ಮುತ್ತಪ್ಪ ಬೀಮಪ್ಪ ಬಜಂತ್ರಿ ಇವನು ಸ್ನಾನ ಮಾಡುವುದನ್ನು ನೋಡುತ್ತಿದ್ದಾಗ ನಾಗಪ್ಪ ಅವನಿಗೆ ಹಂಗ್ಯಾಕ ಹೆಣ್ಣು ಮಕ್ಕಳು ಸ್ನಾನ ಮಾಡುವುದನ್ನು ನೋಡಾಕತ್ತಿ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇರುವುದಿಲ್ಲವೇನು ಅಂತಾ ಕೇಳಿದಾಗ ನಾನು ನೋಡವನ ನೀನೇನು ಸೆಂಟ ಹರಕೊಂತಿ ಅಂತಾ ಬೈಯ್ದಿದ್ದಲ್ಲದೆ, ಕೋಲಿನಿಂದ ನಾಗಪ್ಪ ಇವರ ಬಲಗೈಗೆ ಹೊಡೆದು ಭಾರಿ ಒಳಪೆಟ್ಟುಗೋಳಿಸಿದ್ದು ಇನ್ನುಳಿದ ಸಹಚರರು ಅವನ ಬೆನ್ನು ಕಟ್ಟಿಕೊಂಡು ಬಂದು ಈ ಸಳೆ ಮಗನದು, ಬಾಡ್ಯಾನದು ಬಾಳ ಆಗೇತಿ ಇವನ ಜೀವ ತೆಗೆಯಿರಲೆ ಅಂತಾ ಅನ್ನುತ್ತಾ ಹೊಡಿಬಡಿ ಮಾಡಿ ಹಾಗೂ ನಾಗಪ್ಪ ಇವರ  ಚಿಕ್ಕಮ್ಮ ಕಸ್ತೂರೆವ್ವಳಿಗೆ ಹೊಡೆದಿದ್ದಲ್ಲದೆ ಕಸ್ತೂರೆವ್ವಳ ಸೀರೆ ಹಿಡಿದು ಎಳೆದಾಡಿದ್ದಲ್ಲದೆ ಇವತ್ತು ಜನರ ಬಂದು ಬಿಡಿಸಿದರು ಅಂತಾ ಊಳಕೊಂಡಿರಿ ಇನ್ನೊಮ್ಮೆ ಸಿಗ್ರಿ ನಿಮ್ಮನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:38/2021 ಕಲಂ: 379 IPC.

                 ಹಾವೇರಿ ಶಹರ ಪೊಲೀಸ್ ಠಾಣಾ ಹದ್ದಿ ಪೈಕಿ, ಕುರಿ ಮಾರುಕಟ್ಟೆಯ ಆವರಣದಲ್ಲಿ ದಿನಾಂಕ: 17-03-2021 ರಂದು ಬೆಳ್ಳಿಗೆ 5-00 ಗಂಟೆಯಿಂದ 6-00 ನಡುವಿನ ಅವಧಿಯಲ್ಲಿ ಮಂಜುನಾಥ ದೇವಗಿರಿ ಸಾ ಹುರಳಿಕುಪ್ಪಿ ಇವರ  HF DELUXE SELF DRUM CAST ಕಂಪನಿಯ ಮೋಟರ್ ಸೈಕಲ್ಲ ನಂಬರ KA-27/EQ2414 ಚೆಸ್ಸಿ ನಂ- MBLHAW140L5K85066   ಮತ್ತು ಇಂಜೆನ್ ನಂಬರ HA11ESL5K05168 ಗಾಡಿಯ ಬಣ್ಣ PANTHER BLACK ಇದ್ದು ಗಾಡಿಯ ಅಂದಾಜು ಮೌಲ್ಯ ಅಃಕಿಃ 40000/- ರೂ ಗಾಡಿಯ ಮಾಡಲ್ 10/2020 ರೂ ಗಾಡಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:56/2021 ಕಲಂ: 279, 338, 304(A) IPC.

                 ಮಾಳಮ್ಮ ಕೋಂ ಬಸವಂತಪ್ಪ ಮಲಗುಂದ. ವಯಾ.60 ವರ್ಷ ಜಾತಿ. ಹಿಂದೂ ಗಂಗಾಮಾತ. ಉದ್ಯೋಗ.ಕೂಲಿ ಕೆಲಸ ಸಾ.ಬಾಳಂಬೀಡ. ತಾ.ಹಾನಗಲ್ಲ. ಇವರು ತಮ್ಮ ಮನೆಯ ಮುಂದೆ ಬಟ್ಟೆ ಹಾಗೂ ಪಾತ್ರೆಗಳನ್ನು ತೊಳೆಯುತ್ತಿರುವಾಗ ದಿನಾಂಕ: 14-04-2021 ರಂದು ಮುಂಜಾನೆ 11-30 ಘಂಟೆ ಸುಮಾರಿಗೆ ಹಾವೇರಿ ಕಡೆಯಿಂದ ಹಾನಗಲ್ಲ ಕಡೆಗೆ ಬಂದಂತಹ ಕಾರ ನಂಬರ ಕೆಎ-51 ಎಮ್ಇ-1249 ನೇದ್ದರ ಚಾಲಕನು ಅತೀ ವೇಗವಾಗಿ ನಿರ್ಲಕ್ಷತನದಿಂದ ರಸ್ತೆಯ ಎಡ ಬದಿಯಿಂದ ಒಮ್ಮೇಲೆ ಬಲಬದಿಗೆ ಬಂದು ಮನೆಯ ಎದರುಗಡೆ ಪಾತ್ರೆ ತೊಳೆಯುತ್ತಿದ್ದ ಮಾಳಮ್ಮ ಇವರಿಗೆ ಡಿಕ್ಕಿ ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನ ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 15-04-2021 04:10 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ