ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:58/2021 ಕಲಂ: 279,304(A) IPC.

                       ದಿನಾಂಕ: 13/08/2021 ರಂದು 14-10 ಗಂಟೆಗೆ ಇದರಲ್ಲಿ ಧನಪಾಲ ದತ್ತು ತೊಡಕರ್‌ ಇತನು ತನ್ನ ಮೋಟಾರ ಸೈಕಲ್ ನಂ ಕೆಎ-17/ಇ.ಝೆಡ್-0342 ನೇದ್ದನ್ನು ಚಳಗೇರಿ ಟೋಲ್ ಗೇಟ್ ಕಡೆಯಿಂದ ಏಕಮುಖ ರಸ್ತೆಯ ಮೇಲೆ ಅತೀ ಜೋರಿನಿಂದ ನಿರ್ಲಕ್ಷ್ಯ ತಾತ್ಸರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದಾಗ ಅದೇ ವೇಗದಲ್ಲಿ ತೊಟಯ್ಯ ಪಕ್ಕಿರಯ್ಯ ಕಮತಾರ ಸಾ|| ಬಸವೇಶ್ವರ ನಗರ ಹಾವೇರಿ ಇತನು ತನ್ನ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-27/ಎಫ್-610 ನೇದ್ದನ್ನು ಡಾವಣಗೇರಿ ಕಡೆಯಿಂದ ಓಡಿಸಿಕೊಂಡು ಬಂದು ಎನ್.ಹೆಚ್-48 ಹೊಸ ಮುಡದ್ಯಾವಣ್ಣನವರ ಪೆಟ್ರೋಲ್ ಬಂಕ ಎದುರಿಗೆ ಪರಸ್ಪರ ಮುಖಾಮುಖಿ ಡಿಕ್ಕಿ ಮಾಡಿಕೊಂಡಾಗ ಮೋಟಾರ ಸೈಕಲ್ ಸವಾರನು ಮೋಟಾರ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಮರಣಾಂತಿಕ ಗಾಯಪಡಿಸಿಕೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021 ಕಲಂ: 279,304(A) IPC

              ನಾಗರಾಜ ತಂದೆ ಸತ್ಯವಿಜಯ ಮೇಸ್ತಾ. 32 ವರ್ಷ, ಸಾ: ತೊಗ್ರೊಳ್ಳಿ, ತಾ: ಮುಂಡಗೋಡ, ಈತನು. ತನಗೆ ಕೆಲಸ ಇಲ್ಲದ್ದರಿಂದ ಹಾಗೂ ತಮ್ಮೂರಿನ ಬ್ಯಾಂಕಿನಲ್ಲಿ ಮಾಡಿದ ಕೃಷಿ ಸಾಲವನ್ನ ತೀರಿಸಲಾಗದೇ ನೊಂದು ಜಿಗುಪ್ಸೆಗೊಂಡು ದಿನಾಂಕ: 12-08-2021 ರಂದು ಸಾಯಂಕಾಲ 6-00  ಗಂಟೆಯಿಂದ ದಿ: 13-08-2021 ರ ಮುಂಜಾನೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಹಾವೇರಿಯ ಹರ್ಷ ಡಿಲಕ್ಸ ಲಾಡ್ಜಿನ ರೂಂ ನಂ: 116 ರಲ್ಲಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿದ್ದು ಈತನ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತನ ಸಹೋದರ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು.

ಆಡೂರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:20/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ಪಕ್ಕೀರಪ್ಪ ಸಿದ್ದಪ್ಪ ಹೊಂಬಳಿ ವಯಾ:55 ಸಾ|| ಹೊಂಬಳಿ ಇವರು ಇವರ ಹಿರಿಯ ಮಗನ ಹೆಸರಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಬುಲೇರೋ ವಾಹನವನ್ನು ಕಂತಿನ ರೂಪದಲ್ಲಿ ಖರೀದಿ ಮಾಡಿದ್ದು ಕರೋನಾ ಲಾಕ್ ಡೌನ್ ಇದ್ದುದ್ದರಿಂದ ಸದರ ವಾಹನಕ್ಕೆ ಸರಿಯಾಗಿ ದುಡಿಮೆ ಇಲ್ಲದೇ ಇರುವುದರಿಂದ ಶಿರಶಿಯ ಪ್ರವೀಣ ಕ್ಯಾಪ್ಟಲ್ ಪೈನಾನ್ಸಗೆ 5-6 ಕಂತುಗಳನ್ನು ತುಂಬಲು ಬಾಕಿ ಇರುವುದರಿಂದ ಇದ್ದನ್ನೆ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ-29-07-2021 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ಯಾವುದೋ ವಿಷದ ಔಷದಿ ಸೇವನೆ ಮಾಡಿ ಚಿತ್ಸೆಗಾಗಿ ಹಾನಗಲ್ಲ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿರುವಾಗ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ-13-08-2021 ರಂದು ಮುಂಜಾನೆ 03.45 ಗಂಟೆ ಸುಮಾರಿಗೆ ಮರಣ ಹೊಂದಿದ್ದು ಸದರಿಯವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಮಗ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:20/2021 ಮಹಿಳೆ ಸಾವು.

                  ಪ್ರೀಯಾಂಕಾ ಸ್ಟಿವನ್ ಮೇಟಿ ವಯಾ: 22 ಸಾ|| ಪಂಪಾ ನಗರ ರಾಣೆಬೇನ್ನೂರ ಇವಳು ಹಾಗೂ ರಾಣೇಬೆನ್ನೂರು ಶಹರದ ಸ್ಟೀವನ ತಂದೆ ಜೋಷೆಫ್ ಮೇಟಿ ಈತನು ಪ್ರೀತಿಸಿ ವಿವಾಹವಾಗಿದ್ದು, ವಿವಾಹವಾದ ನಂತರ ಪ್ರಿಯಾಂಕ ಇವಳು ತನ್ನ ಗಂಡನೊಂದಿಗೆ ರಾಣೇಬೆನ್ನೂರು ಶಹರದ ಪಂಪಾನಗರದಲ್ಲಿ ವಾಸವಾಗಿದ್ದು ಹೀಗಿರುವಾಗ ದಿನಾಂಕ; 12/08/2021 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಪ್ರಿಯಾಂಕಳ ಗಂಡನ ತಮ್ಮ ಸ್ಟ್ಯಾಂಡ್ಲಿರಾಜ ಸುಲೋಚನಾ ಇವರಿಗೆ ಪೋನ ಮಾಡಿ ಪ್ರಿಯಾಂಕ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ ಪೋನ ಮೂಲಕ ವಿಷಯ ತಿಳಿಸಿದ್ದು ವಿಷಯ ತಿಳಿದು ಬಂದು ಶವ ನೋಡಿ ವರದಿ ಕೊಟ್ಟಿದ್ದು ಪ್ರಿಯಾಂಕಳ ಸಾವಿನಲ್ಲಿ ಅವಳ ಗಂಡ, ಅತ್ತೆ, ಮಾವ ಇವರ ಮೇಲೆ ಸಂಶಯವಿರುತ್ತದೆ ಅಂತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                  ಸುಭಾಸಪ್ಪ ತಂದೆ ಮಳಿಯಪ್ಪ ಸರ್ವಂದ, ವಯಾ-51 ವರ್ಷ, ಜಾತಿ-ಹಿಂದೂ ಲಿಂಗವಂತ ಉದ್ಯೋಗ-ಕೃಷಿ ಕೆಲಸ, ಸಾ; ಆಲದಗೇರೆ ತಾ; ಹಿರೇಕೆರೂರ. ಇವನು ಕೋಡ ಗ್ರಾಮದ ಜಮೀನ ರಿ.ಸ.ನಂ; 238/5 ರಲ್ಲಿ 03 ಎಕರೆ ಜಮೀನ ಇದ್ದು ಈ ಜಮೀನ ಉಳುಮೆ ಮಾಡುವ ಸಲುವಾಗಿ ಕೋಡ ಗ್ರಾಮದ ಕೆ,ವಿ.ಜಿ ಬ್ಯಾಂಕನಲ್ಲಿ 3 ಲಕ್ಷ ರೂ. ಹಾಗೂ ತನ್ನ ಹೊಸ ಮನೆ ಕಟ್ಟಲು ರಾಣೆಬೆನ್ನೂರ ಐ.ಡಿ.ಎಫ್.ಸಿ ಬ್ಯಾಂಕನಲ್ಲಿ 4 ಲಕ್ಷ ರೂಪಾಯಿ ಹಾಗೂ ನಮ್ಮ ಮನೆತನದ ವ್ಯವಹಾರದ ಸಲುವಾಗಿ  ಧರ್ಮಸ್ಥಳ ಸಂಘದಲ್ಲಿ, 20,000/-. ಫಿನ್ ಕೇರ್ ರಾಣೆಬೆನ್ನೂರ ಸಂಘದಲ್ಲಿ, 40,000/-. ಆರ್.ಬಿ.ಎಲ್ ಸಂಘ ಹಿರೇಕೆರೂರಲ್ಲಿ 35,000/-. ಬಿ.ಎಸ್.ಎಸ್ ಸಂಘ ಹಿರೇಕೆರೂರಲ್ಲಿ 80,000/-. ನವಚೈತನ್ಯ ಸಂಘ ರಟ್ಟಿಹಳ್ಳಿಯಲ್ಲಿ 50,000/-. ಹಾಗೂ ಕೈಗಡವಾಗಿ 50,000/-. ರೂಪಾಯಿಗಳು ಹೀಗೆ ಒಟ್ಟು 9 ಲಕ್ಷ 75 ಸಾವಿರ ( 975,000/-) ರೂಪಾಯಿ ಸಾಲ ಮಾಡಿಕೊಂಡು ಸಾಲವನ್ನು ತೀರಿಸಲು ಆಗದೆ ತನ್ನ ಮನಸ್ಸಿಗೆ ಬೇಜಾರ ಮಾಡಿಕೊಂಡು ದಿನಾಂಕ; 12-08-2021 ರಂದು ರಾತ್ರಿ 8-30 ಗಂಟೆಯಿಂದ 9-30 ಗಂಟೆ ನಡುವಿನ ಅವದಿಯಲ್ಲಿ. ಆಲದಗೇರೆ ಗ್ರಾಮದ ದನದ ಮನೆಯಲ್ಲಿ ತನ್ನಸ್ಟಕ್ಕೆ ತಾನೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಈ ಬಗ್ಗೆ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತನ ಹೆಂಡತಿ ತನ್ನ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-08-2021 06:23 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ