ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:91/2021 ಕಲಂ: 506, 498A, 504, 323, 324  IPC.

              ರವಿ ದಾವಜಪ್ಪ ಲಮಾಣಿ ಹಾಗೂ ಶಿಲ್ಪಾ ರವಿ ಲಮಾಣಿ ಇವರಿಬ್ಬರು ಗಂಡ ಹೆಂಡತಿ ಇದ್ದು, ಮದುವೆಯಾದಾಗಿನಿಂದ ರವಿ ದುಡಿಯಲು ಹೊಗದೆ ವಿನಾಕಾರಣ ಸಂಶಯ ಮಾಡುತ್ತಾ ಸರಾಯಿ ಕುಡಿಯಲು ಹಣವನ್ನು ಕೊಡು ಅಂತಾ ಪಿಡಿಸುತ್ತಾ ಬಂದಿದ್ದು ಹಣವನ್ನು ಕೊಡದೇ ಇದ್ದಾಗ  ಅವಳಿಗೆ ಕೈಯಿಂದ ಮೈಮೇಲೆ ಹೊಡೆದು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೆ   ದಿನಾಂಕ:10-07-2021 ರಂದು ಮುಂಜಾನೆ 09-30 ಘಂಟೆ ಆರೋಪಿತನು ಕುಡಿದು ಮನೆಗೆ ಬಂದು ಹಣವನ್ನು ಕೊಡು ಅಂತಾ ಕೇಳಿದ್ದು ಆಗ ಶಿಲ್ಪಾ ಮನೆಯಲ್ಲಿ ತರಕಾರಿ, ರೇಷನ್ ಇಲ್ಲಾ ನನ್ನ ಹತ್ತಿರ ಹಣವಿಲ್ಲಾ ಎಲ್ಲಿಂದ ತರಲಿ ನೀನು ಕೆಲಸಕ್ಕೆ ಹೋಗಿ ತೆಗದುಕೊಂಡು ಬಾ ಅಂತಾ ಅಂದಿದ್ದಕ್ಕೆ ಲೇ ಮಿಂಡ್ರಿ ,ಹಾದರಗಿತ್ತಿ, ಸೂಳೆ ಅಂತಾ ಅವಾಚ್ಯೆ ಶಬ್ದಗಳಿಂದ ಬೈದಾಡಿ ಕೂದಲು ಹಿಡಿದು ಮುಷ್ಠಿ ಮಾಡಿ ಬಗ್ಗಿಸಿ ಬೆನ್ನಿಗೆ ಗುದ್ದಿದ್ದು ಅಲ್ಲದೇ ಮನೆಯಲ್ಲಿ ಇದ್ದ ಬಡಿಗೆಯಿಂದ ಬಲಗಡೆ ತಲೆಗೆ, ಎಡಗೈಗೆ, ಬಲಗಡೆ ತೊಡೆಗೆ ಬೆನ್ನಿಗೆ ಹೊಡೆದಿದ್ದು ಅಲ್ಲದೆ ವಿಷಯ ತಿಳಿದು ಶಿಲ್ಪಾ ಇವರ ಅಣ್ಣ ಕೃಷ್ಣಾ ಇವರು ಕೇಳಲು ಬಂದಾಗ ಅವನಿಗೂ ಸಹಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೋಲಿನಿಂದ ಎಡಗಡೆ ತಲೆಗೆ ಹೊಡೆದು ಜೀವಧ ಬೇದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:96/2021 ಕಲಂ: 506,498A,504,323 IPS.

              ಶ್ರೀಮತಿ ಶಯಲಜಾ ಟಿ ಪಾಟೀಲ ವಯಾ: 37 ಸಾ|| ಶಿಗ್ಗಾವಿ ಇವರು ಸನ್-2014 ನೇ ಸಾಲಿನಲ್ಲಿ ವಿಜಯಪುರದಲ್ಲಿ ಕೆಲಸ ಮಾಡುವ ಕಾಲಕ್ಕೆ ಸುರೇಶ ಮದನಗೌಡ ಪಾಟೀಲ ಇವನೊಂದಿಗೆ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಾ ಬಂದಿದ್ದು ಆ ಕಾಲಕ್ಕೆ ಸುರೇಶ ಶೈಲಜಾಗೆ ನಾನು ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು 2015 ರಲ್ಲಿ ಇಬ್ಬರು ಮದುವೆ ಆಗಿದ್ದು ಅದೆ ಸನ್-2016 ನೇ ಸಾಲಿನಲ್ಲಿ ಶೈಲಜಾ  ವರ್ಗಾವಣೆಯಾಗಿ ಶಿಗ್ಗಾಂವಕ್ಕೆ ಬಂದು ಸ.ಹಿ.ಪ್ರಾ ಶಾಲೆ ಹಿರೇಮಲ್ಲೂರ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು ಶಿಗ್ಗಾಂವದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದು ಆ ಕಾಲಕ್ಕೆ ಚತುರ್ವಿ ಅನ್ನುವ ಮಗುವಿಗೆ ಜನ್ಮ ನೀಡಿದ್ದು ಅದೆ.ಸುರೇಶ ಕೆಲಸಕ್ಕೆ ಹೋಗದೇ ಇದ್ದಾಗ ಅವನ ಹಾಲಚಾಲದ ಬಗ್ಗೆ ಅನುಮಾನ ಬಂದು ಕೇಳಿದಾಗ ನಾನು ಒಂದು ಕೇಸಿನಲ್ಲಿ ಅಮಾನತಾಗಿದ್ಡೆನೆ ಅಂತಾ ಹೇಳುತ್ತಾ ಬಂದಿದ್ದು ಶೈಲಜಾ ಸನ್-2016 ನೇ ಸಾಲಿನಲ್ಲಿ ವರ್ಗಾವಣೆಯಾಗಿ ಬಂದ ಮೇಲೆ  ಸುರೇಶ ಇವರ  ಹಾಲಚಾಲದ ಬಗ್ಗೆ ಪ್ರಶ್ನೆಯನ್ನು ಮಾಡಲು ಹತ್ತಿದಾಗ  ಸುರೇಶ ನಾನು ಎಲ್ಲಿಗಾದರೂ ಹೋಗುತ್ತೇನೆ ನೀನು ಯಾರೂ ಕೇಳಾಕ ಹಾದರಗಿತ್ತಿ, ಬೊಸಡಿ ಅಂತಾ ಅವಾಚ್ಯ ಶಬ್ಧಗಳಿಂದ ಬೈದಾಡುವುದು ಕೈಯಿಂದ ಹೊಡಿ ಬಡಿ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಜೀವದ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:22/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ಪ್ರವೀಣ ತಂದೆ ಗಣೇಶಪ್ಪ ಲಮಾಣಿ ವಯಾ: 20 ವರ್ಷ ಜ್ಯಾತಿ: ಹಿಂದೂ ಲಮಾಣಿ ಉದ್ಯೋಗ: ಕೂಲಿಕೆಲಸ ಸಾ: ಜಂಗಿನಕೊಪ್ಪ ತಾ: ಹಾನಗಲ್ಲ ಇವನು  ಸರಾಯಿ ಕುಡಿಯುತ್ತಿದ್ದು  ಈಗ ಸುಮಾರು  ದಿವಸಗಳಿಂದಾ ತನಗೆ ಮದುವೆ ಮಾಡಿರಿ ಅಂತಾ ಆಗಾಗ್ಗೆ  ಹೇಳುತ್ತಿದ್ದವನಿಗೆ ನಿನಗೆ ಇನ್ನು ವಯಸ್ಸಾಗಿಲ್ಲ ಇನ್ನು 3-4 ವರ್ಷದ ನಂತರ ಮದುವೆ ಮಾಡುವುದಾಗಿ ಹೇಳಿದರೂ ನಮ್ಮ ಮಾತನ್ನು ಕೇಳದೆ ಕುಂದಾಪೂರಕ್ಕೆ ಕೂಲಿಕೆಲಸಕ್ಕೆ ಹೋದವನು  ದಿ:08/07/2021 ರಂದು ಸಂಜೆ 6-00 ಗಂಟೆ  ಸುಮಾರಿಗೆ ಕುಂದಾಪೂರದಿಂದಾ ಹಾನಗಲ್ಲಿಗೆ ಬಂದವನು   ಊರಿಗೆ ಬಾರದೇ ಹಾನಗಲ್ಲಿನ ಮಲ್ಲಿಗಾರದ ಹತ್ತಿರ ಹುಲ್ಲತ್ತಿಯವರ ಬಿಲ್ಡಿಂಗ  ಎದುರಿನ ರಸ್ತೆಯ ಬಾಜು ಇರುವ  ಚಹಾದ ಅಂಗಡಿಯ ಹತ್ತಿರ ಸಾಯಂಕಾಲಃ07-00 ಗಂಟೆಯ ಸುಮಾರಿಗೆ ಯಾವುದೋ ವಿಷಕಾರಕ ಎಣ್ಣಿ ಕುಡಿದು ಬಿದ್ದಿದ್ದು ಸದರಿಯವನಿಗೆ ಉಪಚಾರಕ್ಕೆ ಹಾನಗಲ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿದ್ದು ಅಲ್ಲಿ ಉಪಚಾರದಲ್ಲಿರುವಾಗ ಗುಣಮುಖವಾಗದೇ ದಿನಾಂಕಃ13/07/2021 ರಂದು ಮುಂಜಾನೆ 6-30 ಗಂಟೆಗೆ ಮರಣ ಹೊಂದಿದ್ದು  ನನ್ನ ಮಗನ ಸಾವಿನಲ್ಲಿ ಬೇರೆ ಏನೂ ಸಂಶಯ ಇರುವುದಿಲ್ಲ ಅಂತಾ ಗಣೇಶಪ್ಪ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:26/2021 ವ್ಯಕ್ತಿ ಆತ್ಮಹತ್ಯೆ.

             ಅಶೋಕ ತಂದೆ ಶೇಖಪ್ಪ ಕಬ್ಬೂರ, ಸಾ: ದೇವಗಿರಿ, ತಾ ಹಾವೇರಿ, ಈತನು ಜಮೀನದ ವ್ಯವಸಾಯದ ಕೆಲಸಗಳಿಗೆ ಅಂತಾ ದೇವಗಿರಿಯ ಕೆವಿಜಿ ಬ್ಯಾಂಕ್ನಲ್ಲಿ 05 ವರ್ಷಗಳ ಹಿಂದೆ 02 ಲಕ್ಷ ರೂಪಾಯಿಗಳ ಹಾಗೂ 02 ವರ್ಷಗಳ ಹಿಂದೆ ಬಂಗಾರದ ಸಾಮಾನುಗಳನ್ನ ಅಡವಿಟ್ಟು 60 ಸಾವಿರ ರೂಗಳ ಸಾಲ ಮಾಡಿಕೊಂಡಿದ್ದು ಹಾಗೂ ಟ್ರಾಕ್ಟರಗಳ ಮೇಲೆ ಮಹಿಂದ್ರಾ ಪೈನಾನ್ಸದಲ್ಲಿ 02 ಲಕ್ಷ 49 ಸಾವಿರ  ಹಾಗೂ ಎಲ್ & ಟಿ ಪೈನಾನ್ಸದಲ್ಲಿ 93 ಸಾವಿರ ರೂಪಾಯಿಗಳ ಸಾಲವನ್ನ ಮಾಡಿದ್ದಲ್ಲದೇ ಮೃತನ ಹೆಂಡತಿ ಲಕ್ಷ್ಮೀ ಇವಳು ತನ್ನ ಹೆಸರಿನಲ್ಲಿ ಬಟ್ಟೆ ಮತ್ತು ಸ್ಟೇಷನರಿ ಅಂಗಡಿ ಇಡಲು ಅಂತಾ ಕೆವಿಜಿ ಬ್ಯಾಂಕಿನಲ್ಲಿ 02 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು ಇವೆಲ್ಲವೂ ಸೇರಿ ಸಾಲ ಹೆಚ್ಚಾಯಿತು ಅಂತಾ ಚಿಂತೆ ಮಾಡಿ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ನೊಂದುಕೊಂಡು ದಿನಾಂಕ; 09-07-2021 ರಂದು ಮದ್ಯಾಹ್ನ 3-00 ಗಂಟೆಯಿಂದ ದಿನಾಂಕ: 12-07-2021 ರ ಸಾಯಂಕಾಲ 6-00 ಗಂಟೆಯ ನಡುವಿನ ಅವಧಿಯಲ್ಲಿ ದೇವಗಿರಿ ಗ್ರಾಮದ ವರದಾ ನದಿಯಲ್ಲಿ ಜಿಗಿದು ಮೃತಪಟ್ಟಿದ್ದು ಈತನ ಸಾವಿನಲ್ಲಿ ಬೇರೆ ಯಾವ ಸಂಶಯ ಇರುವುದಿಲ್ಲಾ ಅಂತಾ ಮೃತನ ಸಹೋದರ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ಮಹಿಳೆ ಸಾವು.

              ಬುಜೇಂದ್ರ ತಂದೆ ನಾಗಪ್ಪ ಅಂಬಿಗೇರ ವಯಾ - 36 ವರ್ಷ ಜಾತಿ- ಹಿಂದೂ ಗಂಗಾಮತ, ಉದ್ಯೋಗ- ಕೂಲಿ ಕೆಲಸ ಸಾ; ಶೇಷಗಿರಿ ತಾ; ಹಾನಗಲ್ಲ   ಇವನು ಯಾವುದೋ ವಿಚಾರ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 08-07-2021 ರಂದು ಸಂಜೆ 06-30 ಘಂಟೆ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದು ಇವನಿಗೆ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಿಸದೆ ದಿನಾಂಕ: 12-07-2021 ರಂದು ಮುಂಜಾನೆ 10-10 ಘಂಟೆ ಸುಮಾರಿಗೆ ಮರಣ ಹೊಂದಿದ್ದು ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಶ್ರೀಮತಿ ರೇಣುಕಾ ವರದಿ ನಿಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 16-07-2021 07:09 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ