ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:71/2021 ಕಲಂ: 323, 324, 448, 302, 34 IPC.

                ಆನಂದ ಗುಡ್ಡಪ್ಪ ಬಾರ್ಕಿ ಹಾಗೂ ಮಾಹಂತೇಶಪ್ಪ ಶೇಖಪ್ಪ ಬಾರ್ಕಿ ಹಾಗೂ ಸಹಚರರು  ಸಹೋದರ ಸಂಬಂದಿಕರು ಇದ್ದು  ಜಗಧೀಶ ಬಾರ್ಕಿ ಇವರು ಪಿತ್ರಾರ್ಜಿತ ಆಸ್ತಿಯ ಹಿಸ್ಸಾ ಸಂಬಂದ ತಕರಾರು ಇದ್ದುದ್ದರಿಂದ ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ  ಪ್ರಕರಣವನ್ನು ದಾಖಲಿಸಿದ್ದರ ಸಿಟ್ಟಿನಿಂದ ಮಾಹಂತೇಶಪ್ಪ ಶೇಖಪ್ಪ ಬಾರ್ಕಿ ಹಾಗೂ ಸಹಚರರು ದಿನಾಂಕ:12-05-2021 ರಂದು ರಾತ್ರಿ 9-30 ಗಂಟೆಯಿಂದ ರಾತ್ರಿ 10-00 ಗಂಟೆಯ ನಡುವಿನ ಅವಧಿಯಲ್ಲಿ ಕೈಯಲ್ಲಿ ಬಡಿಗೆ, ಕಲ್ಲನ್ನು ಹಿಡಿದುಕೊಂಡು ಸಿವಿಲ್ ದಾವೆ ಯಾಕೇ ಮಾಡಿದಿ ಇವತ್ತ ನಿನ್ನನ್ನು ಮುಗಿಸಿ ಬಿಡುತ್ತೇವೆ ಅಂತಾ ಅವಾಚ್ಯೆ ಶಬ್ದಗಳಿಂದ ಬೈದಾಡಿ ಜಗಧೀಶ ಇವರ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ದೂಡಾಡಿ ಕೆಡವಿ ಕೈಯಿಂದ ಮೈಮೇಲೆ ಹೊಡೆದು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಹೊಡಿಬಡಿ ಮಾಡುತ್ತಿದ್ದಾಗ ಅವರಿಂದ ತಪ್ಪಿಸಿಕೊಂಡು ಪೋಲಿಸ್ ಠಾಣೆಗೆ ಫಿರ್ಯಾದಿ ಕೊಡಲು ಹೊರಟಾಗ ಮಾಹಂತೇಶಪ್ಪ ಬಡಿಗೆಯಿಂದ ತಲೆಗೆ ಮತ್ತು ಎದೆಗೆ ಹೊಡೆದಿದ್ದು ಅಲ್ಲದೆ ಉಳಿದವರು ಹೊಡೆಯಲು ಬೆನ್ನು ಹತ್ತಿದಾಗ ಅವರಿಂದ ತಪ್ಪಿಸಿಕೊಂಡು ಬ್ಯಾಡಗಿ ಪೊಲೀಸ್ ಠಾಣೆಗೆ ಫಿರ್ಯಾದಿ ಕೊಡಲು ಹೋದಾಗ ಕುಸಿದು ಬಿದ್ದಿದ್ದು ಉಪಚಾರಕ್ಕೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2021 ವ್ಯಕ್ತಿ ಸಾವು.

                ಕರಿಯಪ್ಪ ತಂದೆ ಶೇಕಪ್ಪ ಗೊರವರ ವಯಾ-19 ವರ್ಷ. ಜಾತಿ:ಹಿಂದೂ-ಕುರುಬ. ಉದ್ಯೋಗ-ವಿದ್ಯಾಬ್ಯಾಸ. ಸಾ-ಬುಡಪನಹಳ್ಳಿ. ತಾ-ಬ್ಯಾಡಗಿ ಈತನು ಈಗ ಸುಮಾರು ದಿವಸಗಳಿಂದ ಕೊರೊನಾ ರೋಗದ ಪ್ರಯುಕ್ತ  ಕಾಲೇಜಿಗೆ ರಜೆ ಇರುವದರಿಂದ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು 13-05-2021 ರಂದು ತಮ್ಮ ಹೊಲಕ್ಕೆ ಕುಂಟೆ ಹೊಡೆಯಲು ಎತ್ತುಗಳನ್ನು ತೆಗೆದುಕೊಂಡು ಹೋಗಿದ್ದು ಮದ್ಯಾಹ್ನ 01-30 ಘಂಟೆಯಿಂದ 02-30 ಘಂಟೆಯ ನಡುವಿನ ಅವಧಿಯಲ್ಲಿ ಬುಡಪನಹಳ್ಳಿ ಗ್ರಾಮದ ಹೊಸಕೇರಿಯಲ್ಲಿ ಎತ್ತುಗಳನ್ನು  ಮೈ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮುಳುಗಿ  ಮೃತಪಟ್ಟಿರುತ್ತಾನೆ ವಿನಃ ಅವನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 14-05-2021 01:15 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ