ಅಭಿಪ್ರಾಯ / ಸಲಹೆಗಳು

     ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:49/2021 ಕಲಂ: 279, 337, 304(A) IPC.

               ದಿನಾಂಕ 29-03-2021 ರಂದು 13-40 ಗಂಟೆ ಸುಮಾರಿಗೆ ಬ್ಯಾಡಗಿ-ರಟ್ಟಿಹಳ್ಳಿ ರಸ್ತೆ ಮೇಲೆ ಉಮೇಶ ಶಿವನಂದಪ್ಪ ಲಕ್ಕಪ್ಪನವರ ಸಾ|| ಸಣ್ಣಗುಬ್ಬಿ ಇವರು ತಾನು ನಡೆಸುತ್ತಿದ್ದ ಮೊಟಾರ ಸೈಕಲ ಮೊಟಾರ ಸೈಕಲ ನಂಬರ ಕೆಎ-27/ಎಸ್-9760 ನೇದ್ದರ ಹಿಂದೆ ಕುಮಾರ ರಾಮಪ್ಪ ಉಪ್ಪಾರ ಸಾಃ ರಟ್ಟಿಹಳ್ಳಿ ಹಾಗೂ ಕಾಶಿನಾಥ ಮಹಾಧೇವಪ್ಪ ಮುಲಿಮನಿ ಸಾಃ ತೊಟಗಂಟಿ ಇವರನ್ನು ಕೂಡಿಸಿಕೊಂಡು ಮೊಟಾರ ಸೈಕಲನ್ನು ಬ್ಯಾಡಗಿ ಕಡೆಯಿಂದ ರಟ್ಟಿಹಳ್ಳಿ ಕಡೆಗೆ ನಿರ್ಲಕ್ಷ್ಯತನದಿಂದ ಅತೀವೇಗವಾಗಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ನಡೆಯಿಸಿಕೊಂಡು ಬಂದು ಮಕರಿ ಚಾನಲ್ ಹತ್ತಿರ ನಾಯಿ ಅಡ್ಡ ಬಂದ್ದರಿಂದ ಮೊಟಾರ ಸೈಕಲನ್ನು ನಿಯಂತ್ರಿಸಲು ಆಗದೆ ಅಪಘಾತ ಪಡಿಸಿಕೊಂಡು ತನ್ನ ಮೊಟಾರ ಸೈಕಲ ಹಿಂದೆ ಕುಳಿತ ಕುಮಾರ ಇವನಿಗೆ ಮೈಕೈಗೆ ಕಾಲಿಗೆ ದುಃಖಾಪತ ಪಡಿಸಿದ್ದಲ್ಲದೆ ತನಗೂ ಸಹ ತಲೆಗೆ, ಎದೆಗೆ ಬಲಗೈಗೆ ತುಟಿಗೆ ಗಾಯಪೆಟ್ಟು ಪಡಿಸಿಕೊಂಡಿದ್ದು ಸದರಿಯವರಗೆ ರಟ್ಟಿಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಆ ಪೈಕಿ ಉಮೇಶ ಇವನಿಗೆ ಅಂದೆ ಹೇಚ್ಚಿನ ಉಪಚಾರಕ್ಕೆ ಅಂಬುಲೆನ್ಸ ಮೂಲಕ ದಾವಣಗೇರಿ ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಪುನಃ ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ ಮಾಡಿ ಉಪಚಾರ ಕೊಡಿಸುವ ಕಾಲಕ್ಕೆ ಉಪಚಾರ ಫಲಿಸದೆ ದಿನಾಂಕ 12-04-2021 ರಂದು 23-00 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

     ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021 ಕಲಂ: 380, 457 IPC.

                 ಸೈಯದಗುಲಾಮರಬ್ಬಾನಿ ಸೈಯದ್ದಗೌಸ್ಮುದ್ದಿನ್ ಹಪಿಜ್ ಇವರು ಶಿಗ್ಗಾಂವ ಶಹರದ ಸವಣೂರ ಸರ್ಕಲದಲ್ಲಿದ್ದ ಪುರಸಭೆಯ ಕಾಂಪ್ಲೇಕ್ಸದಲ್ಲಿ ಸಿಮ್ನಾ ಎಂಟರಪ್ರಸೈಸ ಅನ್ನುವ ಮೋಬೈಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಬಂದಿದ್ದು ದಿನಾಂಕ : 12-04-2021 ರಂದು ಯಥಾ ಪ್ರಕಾರ ವ್ಯಾಪಾರ ಮಾಡಿ ರಾತ್ರಿ 09.00 ಗಂಟೆಗೆ ಅಂಗಡಿ ಬಂದ ಮಾಡಿ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ : 13-04-2021 ರಂದು ಮುಂಜಾನೆ 09.00 ಗಂಟೆಗೆ ಅಂಗಡಿಗೆ ಬಂದು ಕೀಲಿ ತೆಗೆಯಲು ಹೋದಾಗ ಅಂಗಡಿಯ ಬಾಗಿಲದ ಶೇಟರಸ್ ಹಾಕಿದಂತೆ ಇತ್ತು ಶೇಟರಸ್ ಹಾಕಿದ ಕೀಲಿ ಮುರಿದು ಬಿದ್ದಿತ್ತು, ಶೆಟರಸ್ ಎತ್ತಿ ಒಳಗೆ ಹೋಗಿ ನೋಡಿ ಪರಿಶೀಲಿಸಲಾಗಿ ಅಂಗಡಿಯಲ್ಲಿದ್ದ ಹೊಸ ಮತ್ತು ಹಳೇಯ ಮೋಬೈಲ ಸೆಟ್ ಹಾಗೂ ಅವುಗಳಿಗೆ ಸಂಬಂದ ಪಟ್ಟ ಸಾಮಗ್ರಿಗಳು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಅಂಗಡಿಯ ಕೀಲಿ ಮುರಿದು ಅಂಗಡಿಯಲ್ಲಿದ್ದ ಒಟ್ಟು 15 ಹೊಸ ಮೊಬೈಲ ಸೆಟ್ಗಳು ಮತ್ತು 04 ಹಳೇಯ ಮೊಬೈಲ ಸೆಟ್ಗಳು(ರಿಪೇರಿಗೆ ಬಂದವುಗಳು) ಹಾಗೂ ಮೊಬೈಲಗೆ ಸಂಬಂದ ಪಟ್ಟ ಹ್ಯಾಂಡಪೋನ ಹಾಗೂ ಇತರೇ ಸಾಮಾಗ್ರಿಗಳು ಮತ್ತು ಡ್ರಾದಲ್ಲಿದ್ದ ಸ್ವಲ್ಪ ಹಣ ಇವುಗಳೆಲ್ಲ ಅ:ಕಿ 2,16,730-00 ರೂ ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021 ವ್ಯಕ್ತಿ ಕಾಣೆ.

                 ಕು||ಸಚೀನ್ ತಂದೆ ವಿರುಪಾಕ್ಷಪ್ಪ ರಾಮಾಪೂರ ವಯಾ.20 ವರ್ಷ ಜಾತಿ.ಹಿಂದೂ ಲಿಂಗಾಯತ ಉದ್ಯೋಗ:ವಿದ್ಯಾರ್ಥಿ ಸಾ||ಹೇರೂರ ತಾ||ಹಾನಗಲ್ಲ ಇವನು ದಿನಾಂಕ: 10-04-2021 ರಂದು ಸಂಜೆ-06 ಘಂಟೆ ಸುಮಾರಿಗೆ ಮನೆಯಲ್ಲಿ ಹಾವೇರಿಗೆ ಹಾಸ್ಟೆಲ್ಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಈ ವರಗೆ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲಿ ತಮ್ಮ ಮಗನಿಗೆ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಪತ್ತೆ ಮಾಡಿಕೊಡುವಂತೆ ಕಾಣೆಯಾದವನ ತಾಯಿ ಶೈಲಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021ಮಹಿಳೆ ಸಾವು.

                 ಶೋಭಾ ಈರಣ್ಣ ಗಂಜಿಗಟ್ಟಿ ವಯಾ 36 ಸಾ ಚಿಕ್ಕನೇಲ್ಲೂರ  ಇವರಿಗೆ ಮೈಯಲ್ಲಿ ಹುಷಾರಿಲ್ಲದೇ ತಿಂಗಳ ಮುಟ್ಟು ಆದಾಗ ಅತಿಯಾದ ರಕ್ತ ಸ್ರಾವವಾಗಿ ಹೊಟ್ಟೆನೋವು ಬರುತ್ತಿತ್ತು. ಅವಳಿಗೆ ಆಸ್ಪತ್ರೆಗೆ ತೋರಿಸಿದರೂ ಗುಣಮುಖವಾಗಿರಲಿಲ್ಲಾ. ನಂತರ ದಿನಾಂಕ : 11-04-2021 ರಮದು ರಾತ್ರಿ 11.00 ಗಂಟೆಯಿಂದ ದಿನಾಂಕ : 12-04-2021 ರ ಮುಂಜಾನೆ 06.00 ಗಂಟೆಯ ನಡುವಿನ ಅವದಿಯಲ್ಲಿ  ಸಂಬಂದಿಕರು ಪೋನ ಮಾಡಿ ನಿನ್ನ ಮಗಳಿಗೆ ಹುಷಾರಿಲ್ಲ ಅದಕ್ಕಾಗಿ ಶಿಗ್ಗಾಂವ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಅವಳು ಮರಣ ಹೊಂದಿದ್ದು ಅಂತಾ ತಿಳಿಸಿದ್ದು ನನ್ನ ಮಗಳು ಏನಾಗಿ ಮೃತಪಟ್ಟಿದ್ದಾಳೆ ಅಂತಾ ನನಗೆ ತಿಳಿಯುತ್ತಿಲ್ಲಾ ಅವಳ ಮರಣದಲ್ಲಿ ನನಗೆ ಸಂಶಯ ಬರುತ್ತದೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಈರಮ್ಮ ಪಿರ್ಯಾದ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

                 ರಾಧಿಕಾ ತಂದೆ ಯಲ್ಲಪ್ಪ ಹರಿಜನ ವಯಾ- 16 ವರ್ಷ ಜಾತಿ- ಹಿಂದು ಮಾದರ. ಉದ್ಯೋಗ- ಮನೆಗೆಲಸ ಸಾ- ಮಾಹೂರ ತಾ- ಸವಣೂರ ಇವಳಿಗೆ ಅರ್ಧ ತೆಲೆನೋವು ಬರುತ್ತದ್ದು ಅವಳಿಗೆ ಸವಣೂರ ಸರ್ಕಾರಿ ಆಸ್ಪತ್ರೆ ಮತ್ತು ಘಾವಟಿ ಔಷದ ಕೊಡಿಸಿದ್ದರೂ ಅವಳಿಗೆ ಬರುತ್ತಿದ್ದ ತೆಲೆನೋವು ಹೋಗಿರಲಿಲ್ಲ. ಇದರಿಂದ ರಾಧಿಕಾ ಇವಳು ತನಗೆ ಬರುತ್ತಿದ್ದ ತೆಲೆ ನೋವಿನಿಂದ ಬೇಸತ್ತು ದಿನಾಂಕ- 10-04-2021 ರಂದು 07-00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಚೂಡಿದಾರದ ವೇಲ್ ದಿಂದ ಉರುಲು ಹಾಕಿಕೊಂಡು ಜೋತಾಡುತ್ತಿದ್ದಾಗ ಅವಳಿಗೆ ಉಪಚಾರಕ್ಕೆ ಸವಣೂರ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಖಲಿಸಿದಾಗ ಉಪಚಾರ ಫಲಿಸದೇ ಮೃತಪಟ್ಟಿದ್ದು ಬಿಟ್ಟು ಅವಳ ಸಾವಿನಲ್ಲಿ ಬೇರೆನೂ ಸಂಶಯ ಇರುವುದಿಲ್ಲಾ ಅಂತಾ ರೇಖಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 15-04-2021 04:04 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ