ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:17/2021 ಮಹಿಳೆ ಕಾಣೆ.

                ಪುಷ್ಪಲತಾ ತಂದೆ ಅಶೋಕ ಸೂರಗೊಂಡ, ವಯಾ: 21 ವರ್ಷ ಇವಳು ತನ್ನ ವಾಸದ ಮನೆಯಿಂದ  ದಿ: 12-03-2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಮನೆಯ ಮೇಲೆ ಬಿಲ್ಡಿಂಗ್ಗೆ ನೀರು ಹೊಡೆಯುವಾಗ ಮನೆಯ ಕೆಳಗೆ ಇದ್ದ ಮಗಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇಲ್ಲಿಯವರೆಗೂ ಮರಳಿ ಮನೆಗೆ ಬಾರದೆ ಇದ್ದಿದ್ದಕ್ಕೆ ಕಾಣೆಯಾದವಳ ತಂದೆ ಅಶೋಕ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:39/2021 ಕಲಂ: 143, 147, 323, 504, 355, 506, 149 IPC.

                ಬ್ಯಾಡಗಿ ಶಹರದ ಎಪಿಎಂಸಿ ಯಾರ್ಡದಲ್ಲಿರುವ ಲಾವಣ್ಯ ಟ್ರೇಡಿಂಗ್ ಕಂಪನಿಯ ಅಂಗಡಿಯಲ್ಲಿ ಅನೀಲಕುಮಾರ ದೊಡ್ಡಪಾಟಿ ಹಾಗೂ ಹರಿಬಾಬು ಸುಬ್ರಮಣ್ಯ ಬೊಡಾವುಲ್ಲಾ ಇವರು ಸುಮಾರು ವರ್ಷಗಳಿಂದ ಪಾಲುದಾರರಾಗಿ ವ್ಯಾಪಾರ ಮಾಡಿಕೊಂಡು ಬಂದಿದ್ದು ಹಣದ ವ್ಯವಹಾರದ ಸಲುವಾಗಿ ಇವರ ಮದ್ಯ ವೈಮನ್ಸು ಉಂಟಾಗಿದ್ದರಿಂದ ದಿನಾಂಕ:09-03-2021 ರಂದು ಮುಂಜಾನೆ 11-45 ಗಂಟೆಗೆ ಹರಿಬಾಬು ಹಾಗೂ ಅವರ ಸಹಚರರು ಸೇರಿ ಏಕಾಎಕಿ ಅವರ ಕಾರಿನಲ್ಲಿ ಬಂದವರೆ ಅನೀಲಕುಮಾರನಿಗೆ ನನಗೆ ಕೊಡಬೇಕಾದ ಹಣಕ್ಕೆ ಬಡ್ಡಿ ಹಾಗೂ ಚಕ್ರ ಬಡ್ಡಿ ಸಮೇತ ಕೊಡಬೇಕು ಅಂತಾ ಅವಾಚ್ಯೆ ಶಬ್ದಗಳಿಂದ ಬೈದಾಡಿ ತನ್ನ ಕಾಲಲ್ಲಿ ಇದ್ದ ಚಪ್ಪಲಿಯಿಂದ ತಲೆಗೆ ಹೊಡಿಬಡಿ ಮಾಡಿದ್ದು ಅಲ್ಲದೆ ಎಲ್ಲ ಕೈಯಿಂದ ಮೈಗೆ ಹೊಡಿಬಡಿ ಮಾಡಿದ್ದು ಅಲ್ಲದೆ ಇನ್ನೊಂದು ಸಾರಿ ಸಿಕ್ಕರೆ ನಿನ್ನನ್ನು ಜೀವ ಸಹಿತಿ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 18-03-2021 06:33 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ