ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:89/2021 ಕಲಂ: INDIAN MOTOR VEHICLES ACT, 1988 (U/s-192(A)); PREVENTION OF CRUELTY TO ANIMALS ACT, 1960 (U/s-11(1 ) (D)).                                                    

                        ದಿನಾಂಕ 12-08-2021 ರಂದು ರಾತ್ರಿ 11-30 ಗಂಟೆಗೆ ಪಿ ಎಸ್‌ ಐ ಗುತ್ತಲ ಹಾಗೂ ಠಾಣೆಯ ಸಿಬ್ಬಂದಿ ಜನರು ರಾಣಿಬೆನ್ನೂರು- ಗುತ್ತಲ ರಸ್ತೆಯ ಎಂ.ಜಿ ತಿಮ್ಮಾಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪೆಟ್ರೋಲಿಂಗ ಮಾಡುತ್ತಿದ್ದಾಗ ರಾಣಿಬೆನ್ನೂರು ಕಡೆಯಿಂದ ಅಶೋಕ ಲೈಲೆಂಡ್ ಕಂಪನಿಯ ಕಂಟೇನರ್ ವಾಹನ ಅದರ ನೊಂದಣಿ ಸಂಖ್ಯೆ ಕೆ.ಎ-51, ಬಿ-9230 ನೇ ವಾಹನ ಬಂದಿದ್ದು ಅದರಲ್ಲಿ ಸಂದೀಪ ನಾಗರಾಜ ಗೌಡಾ ಹಾಗೂ ಅವನ ನಾಲ್ಕು ಜನ ಸಹಚರರು ಸೇರಿ ರಾಣಿಬೇನ್ನೂರು ಸಂತೆಯಲ್ಲಿ ಸದರಿ ವಾಹನಕ್ಕೆ 01) 07 ಎತ್ತುಗಳು, 02) 09 ಕೋಣಗಳು 03) 16 ಎಮ್ಮೆಗಳು ಒಟ್ಟು 32 ಜಾನುವಾರುಗಳು  ಇವುಗಳ ಅಂದಾಜು ಬೆಲೆ  ರೂ.4,35,000/-  ಸದರಿ ಜಾನುವಾರುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ವಾಹನದಲ್ಲಿ ತುಂಬಿದ್ದು ಕಂಡು ಬಂದಿದ್ದು, ಸದರಿ ವಾಹನದಲ್ಲಿ ಸರಿಯಾದ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರಲಿಲ್ಲ ಮತ್ತು ತಿನ್ನಲು ಆಹಾರ ಮತ್ತು ಕುಡಿಯಲು ನೀರಿನ ವ್ಯವಸ್ಥೆ ಇರಲಿಲ್ಲ. ಸದರಿ ಜಾನುವಾರುಗಳನ್ನು ಸಾಗಾಟ ಮಾಡಲು ಪಾಸ್ ವ ಪರ್ಮೀಟ ವಿಚಾರಿಸಿದ್ದು ಸದರಿ ಜಾನುವಾರುಗಳನ್ನು ನಾವು 4 ಜನ ಮತ್ತು ನಮ್ಮ ಮಾಲೀಕನಾದ ಪ್ರವೀಣ ವನಹಳ್ಳಿ ಸೇರಿಕೊಂಡು ರಾಣೇಬೆನ್ನೂರಿನ ದನದ ಸಂತೆಯಿಂದ ಈ ವಾಹನದಲ್ಲಿ ತುಂಬಿಕೊಂಡು ಬಂದಿದ್ದು ಇವುಗಳನ್ನು ಆಂದ್ರಪದೇಶದ ಅಂನತಪುರಕ್ಕೆ ಹೋಗುತ್ತಿರುವ ಬಗ್ಗೆ ತಿಳಿಸಿದರು.ಆದ್ದರಿಂದ ಸದರಿ ಜಾನುವಾರುಗಳನ್ನು ಸಾಗಾಟಕ್ಕೆ ಬಳಸಿದ ಅಶೋಕ ಲೈಲೆಂಡ್ ಕಂಪನಿಯ ಕಂಟೇನರ್ ವಾಹನ ನೊಂದಣಿ ಸಂಖ್ಯೆ ಕೆ.ಎ-51, ಬಿ-9230 ಮತ್ತು 05 ಜನ ಆರೋಪಿತರ ಮೇಲೆ ಕಾನೂನು ರಿತ್ಯ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:147/2021 ಕಲಂ: 279,304(A) IPC

              ಹಾನಗಲ್ ಪಿ.ಎಸ್.ಹದ್ದಿ ಪೈಕಿ ದಿನಾಂಕಃ13/08/2021 ರಂದು ಸಾಯಂಕಾಲಃ06-00 ಗಂಟೆಯ ರಾಮಣ್ಣ ಯಮುನಪ್ಪ ನಂದವಡಗಿ  ಇತನು ತಾನು ನಡೆಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂಬರಃಕೆಎ-27/ಎಫ್.-693 ನೇದ್ದನ್ನು ಬಂಕಾಪೂರ ಕಡೆಯಿಂದ ಹಾನಗಲ್ಲ ಕಡೆಗೆ ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎದುರಿಗೆ ಹಾನಗಲ್ಲ ಕಡೆಯಿಂದ ಬೆಳಗಾಲಪೇಟೆ ಕಡೆಗೆ ಹೋಗುತ್ತಿದ್ದ ಚೇತನ್ ತಂದೆ ರಮೇಶ ಈಳಗೇರ @ ಗೌಡಗೇರಿ ಈತನು ಚಲಾಯಿಸುತ್ತಿದ್ದ ಮೋಟರ್ ಸೈಕಲ್ ನಂಬರಃಕೆಎ-27/ಡಬ್ಲ್ಯೂ-6792 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಪಡಿಸಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಚೇತನ್ ತಂದೆ ರಮೇಶ ಈಳಗೇರ @ ಗೌಡಗೇರಿ ಈತನಿಗೆ ಹಾಗೂ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಸುರೇಶ ತಂದೆ ಈರಪ್ಪ ಚಕ್ರಸಾಲಿ ಈತನಿಗೆ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:30/2021 ವ್ಯಕ್ತಿ ಆತ್ಮಹತ್ಯೆ.

              ಸಣ್ಣದುರಗಪ್ಪ ಗೊರವರ ವಯಾ: 58 ಸಾ|| ತೆರೆದಳ್ಳಿ  ಇವರು ತಮ್ಮ ಹೆಸರಿನಲ್ಲರುವ ಸರ್ವೇ ನಂಬರ 29/01 ಅ ಜಮೀನಿನ ಮೇಲೆ ಕೆ.ವಿ.ಜಿ ಬ್ಯಾಂಕ್ ಬೆಳವಿಗಿಯಲ್ಲಿ ಸುಮಾರು 1 ಲಕ್ಷ ರುಪಾಯಿ ಬೆಳೆಸಾಲ ತೆಗೆದುಕೊಂಡಿದ್ದರು ಮತ್ತು ತನ್ನ ಹೆಂಡತಿ ಹೆಸರಿನಲ್ಲಿ ಇರುವ ಸರ್ವೆ ನಂಬರ 49/01 ಸಿ ಜಮೀನಿನ ಮೇಲೆ ಕೆ,ವಿ,ಜಿ ಬ್ಯಾಂಕ್ ಬೆಳವಿಗಿಯಲ್ಲಿ ಸುಮಾರು 90 ಸಾವಿರ ರೂಪಾಯಿ ಬೆಳೆಸಾಲ ಪಡೆದುಕೊಂಡಿದ್ದರು. ಮತ್ತು ಊರಿನಲ್ಲಿ ಜನರ ಹತ್ತಿರ ಕೈಗಡ ಸಾಲ ಪಡೆದುಕೊಂಡಿದ್ದರು, ಸದರಿ ಸಾಲಗಳನ್ನು ತೀರಿಸಲು ಈ ವರ್ಷ ಯಾವುದೇ ಬೆಳೆ ಚೆನ್ನಾಗಿ ಬಂದಿಲ್ಲ ಮಳೆ ಜಾಸ್ತಿ ಆಗಿ ಬೆಳೆ ಹಾಳಾಗಿವೆ, ಅಂತಾ ಮನನೊಂದು ದಿನಾಂಕ: 10/08/2021 ರಂದು ಮಧ್ಯಾಹ್ನ 02-45 ಗಂಟೆಯಿಂದ ದಿನಾಂಕ: 12/08/2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ  ತೆರೆದಹಳ್ಳಿ ಹತ್ತಿರ ಇರುವ ತುಂಗಭದ್ರಾ ಹೊಳೆಯಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದ್ದು ಇರುತ್ತದೆ. ಹೊನ್ನನಗೌಡ್ರ ಇವರ ಜಮೀನಿನ ಹತ್ತಿರ ಹೊಳೆ ದಂಡೆಯಲ್ಲಿ ಅವರ ಶವ ಸಿಕ್ಕಿದ್ದು ಇರುತ್ತದೆ. ನನ್ನ ತಂದೆಯವರ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಅಂತಾ ಮೃತನ ಮಗ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:37/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                  ದಿಳ್ಳೆಪ್ಪ ತಂದೆ ಮಲ್ಲಪ್ಪ ಗುಡಗೂರ ವಯಾ-60 ವರ್ಷ.ಜಾತಿ-ಹಿಂದೂ-ಕುರುಬ,ಉದ್ಯೋಗ-ವ್ಯವಸಾಯ  ಸಾ-ಬುಡಪನಹಳ್ಳಿ  ತಾ-ಬ್ಯಾಡಗಿ ಇವರು ಜಮೀನು ಬಿತ್ತನೆ ಸಲುವಾಗಿ ಕಾಕೋಳ ಕೆ.ವಿ.ಜಿ ಬ್ಯಾಂಕಿನಲ್ಲಿ 2,00,000/- ರೂ.ಗಳ ಸಾಲ ಮಾಡಿದ್ದು ಅಲ್ಲದೆ ತನ್ನ ಹೆಂಡತಿಯ ಆಸ್ಪತ್ರೆಗೆ ಅಲ್ಲಲ್ಲಿ ಕೈಗಡ 2,00,000/- ರೂ.ಗಳ ಸಾಲ ಮಾಡಿದ್ದು ಈಗ ಎರಡು ವರ್ಷಗಳಿಂದ ಅತಿಯಾದ ಮಳೆಯಾಗಿದ್ದರಿಂದ ಬೀತ್ತಿದ ಪೀಕು ಬಾರದೆ ಲುಕ್ಷಾನಾಗಿದ್ದರಿಂದ ಕೃಷಿಗಾಗಿ ಮಾಡಿದ ಸಾಲವನ್ನು ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡು ದಿನಾಂಕ:11-08-2021 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ:12-08-2021 ರಂದು ಮುಂಜಾನೆ 05-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ತಮ್ಮ ಮನೆಯ ಮುಂದೆ ತಗಡಿಗೆ ಹಾಕಿದ ಕಬ್ಬಿಣದ ಪೈಪಿಗೆ ಟಾಯರದ ವಾಯರದಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-08-2021 06:21 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ