ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:71/2021 ಕಲಂ: 379 IPC.

              ಹಾವೇರಿ ಮನೋಹರ ಟಾಕೀಜ ರಸ್ತೆಯಲ್ಲಿರುವ ಶ್ರೀ ಮಲ್ಲೇಶ್ವರ ಅಗ್ರೋ ಎಜೆನ್ಸಿ ಎದುರಿನ ರಸ್ತೆಯ ಪಕ್ಕದಲ್ಲಿ ದಿನಾಂಕ 15-06-2021 ರಂದು ಬೆಳ್ಳಿಗೆ 10-00 ಗಂಟೆಯಿಂದ 11-15  ಗಂಟೆಯ ನಡುವಿನ ಅವಧಿಯಲ್ಲಿ ಇಟ್ಟಿದ್ದ ಶಿವಪ್ಪ ಮಲ್ಲೂರ ಸಾ|| ಹತ್ತಿಮತ್ತುರ ಇವರ ಪ್ಲಾಟಿನಂ ಕಂಪನಿಯ ಮೋಟರ್ ಸೈಕಲ್ಲ ನಂಬರ ಕೆಎ 27 ವೈ 0483  ಚೆಸ್ಸಿ ನಂ- MD2A18AZ2CWG10641  ಮತ್ತು ಇಂಜೆನ್ ನಂಬರ DZZWCG37796 ಗಾಡಿಯ ಬಣ್ಣ BLACK ಇದ್ದು ಗಾಡಿಯ ಅಂದಾಜು ಮೌಲ್ಯ ಅಃಕಿಃ 20,000/ ರೂ ಗಾಡಿಯ ಮಾಡಲ್ 10/2012 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:92/2021 ವ್ಯಕ್ತಿ ಕಾಣೆ.

              ಶಿವಯೋಗಿ ತಂದೆ ಮಹಾರುದ್ರಪ್ಪ ನಾಳಕರ  ವಯಸ್ಸು: 53  ವರ್ಷ, ಉದ್ಯೋಗ: ಪ್ರಾಥಮಿಕ ಶಾಲಾ ಶಿಕ್ಷಕರು ಸಾ: ಅಗಡಿ, ಹಾಲಿವಸ್ತಿ: ಕೋಳೂರ ತಾ: ಹಾವೇರಿ ಇವರು ದಿನಾಂಕ 05-09-2017 ರಂದು ದಿನನಿತ್ಯದಂತೆ ಶಾಲಾ ಕರ್ತವ್ಯಕ್ಕೆ ಅಂತಾ ಹೊಂಬರಡಿ ಗ್ರಾಮಕ್ಕೆ ಹೋಗಿ ಕರ್ತವ್ಯ ನಿರ್ವಹಿಸಿ ಸಾಯಂಕಾಲ ಶಾಲೆಯಿಂದ ಮರಳಿ ತನ್ನ ಸಹೋದ್ಯೋಗಿಗಳಿಗೆ ಮರಳಿ ಮನೆಗೆ ಹೋಗುವದಾಗಿ ತಿಳಿಸಿ ಮರಳಿ ಕೋಳೂರ ಗ್ರಾಮಕ್ಕೆ ಬರದೇ  ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇಲ್ಲಿಯವರೆಗೆ ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ಯೋಗಿಶ ಇವರನ್ನು ಹುಡುಕಿಕೊಡಬೇಕೆಂದು ಶಿವಯೋಗಿ ಇವರ ಹೆಂಡತಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ಮಹಿಳೆ ಸಾವು.

              ಶ್ರೀಮತಿ ನಂದಾ ಕೊಂ ರಾಮಚಂದ್ರ ಬಡಿಗೇರ  ವಯಾ- 35 ವರ್ಷ, ಜಾತಿ-ಹಿಂದೂ ಪಾಂಚಾಳ, ಉದ್ಯೋಗ- ಮನೆಗೆಲಸ, ಸಾ|| ಸುಳ್ಳೇಶ್ವರ, ತಾ|| ಹಾನಗಲ್ಲ, ಜಿಲ್ಲಾ: ಹಾವೇರಿ ಇವಳಿಗೆ ಮದುವೆಯಾಗಿ 14 ವರ್ಷವಾದರೂ ಮಕ್ಕಳಾಗಿರಲಿಲ್ಲಾ, ಹಾಗೂ  ಕಳೆದ ಐದು ಆರು ವರ್ಷಗಳಿಂದ ಭಾರಿ ತಲೆನೋವು ಬರುತ್ತಿದ್ದು, ಈ ಬಗ್ಗೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದು, ತಲೆ ನೋವು ಬಂದಾಗ ಯಾರ ಸಂಗಡ ಮಾತನಾಡದೆ ಸುಮ್ಮನೆ ಕೂಡುತ್ತಿದ್ದಳು, ಮೈ ಮೇಲೆ ಜ್ಞಾನ ಇರುತ್ತಿರಲಿಲ್ಲಾ, ಈಗ ಕಳೆದ ಒಂದು  ವರ್ಷದಿಂದ  ಮೃತಳು  ಅವಳ ಚಿಕ್ಕಮ್ಮಳಾದ ಮಲ್ಲಮ್ಮ ಬಡಿಗೇರ ಸಾ|| ತಡಸ ಇವರ ಮನೆಯಲ್ಲಿ ಇರುತ್ತಿದ್ದಳು. ಅವರು ಸಹ ಉಪಚಾರ ಕೊಡಿಸುತ್ತಿದ್ದರುದಿನಾಂಕ:-12/07/2021 ರಂದು  ಬೆಳಗಿನ  ಜಾವ 06-00 ಗಂಟೆಗೆ ನೀರು ಕಾಯಿಸಲು ನೀರೊಲೆಗೆ ಸೀಮೆ ಎಣ್ಣೆ  ಹಾಕಿ  ಬೆಂಕಿ ಹಚ್ಚಲು ಹೋದಾಗ ಆಕಸ್ಮಾತಾಗಿ ಬೆಂಕಿ ಅವಳು ಮೈಮೇಲಿನ ನೈಟಿಗೆ ಹತ್ತಿ ಸುಟ್ಟಗಾಯಗಳಿಂದ ಮರಣ ಹೊಂದಿರುತ್ತಾಳೆ. ಈ ಬಗ್ಗೆ ತನ್ನ ಹೆಂಡತಿಯ ಮರಣದಲ್ಲಿ ಬೇರೇನು, ಯಾರ ಮೇಲು ಸಂಶಯ  ಇರುವುದಿಲ್ಲಾ ಅಂತಾ ಮೃತಳ ಗಂಡ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕಾಗಿನೇಲೆ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ಮಹಿಳೆ ಸಾವು.

             ಶ್ರೀಮತಿ ಕಾವ್ಯಾ @ ಕಾವೇರಿ ಗಂಡ ನಾಗರಾಜ ಸೊಟ್ಟಮ್ಮನವರ ವಯಾ 20 ವರ್ಷ ಸಾಃ ಚಿಕ್ಕಳ್ಳಿ ಇವಳು ಕಾರ ಹುಣ್ಣಿಮೆ ಹಬ್ಬದ ನಿಮಿತ್ಯ ಅಡುಗೆ ಮನೆಯಲ್ಲಿ ಕತ್ತಲು ಇದ್ದುದ್ದರಿಂದ ಚಿಮಣಿ ದೀಪ ಹಚ್ಚಿಕೊಂಡು ಓಲೆಯ ಮೇಲೆ ಕರಿಗಡಬು ಕರಿಯುತ್ತಿದ್ದಾಗ, ಮುಂಜಾನೆ 11-30 ಗಂಟೆಯ ಸುಮಾರಕ್ಕೆ ಪಕ್ಕದಲ್ಲಿದ್ದ ಚಿಮಣಿ ಉರುಳಿ ಅದರಲ್ಲಿದ್ದ ಚಿಮಣಿಯಣ್ಣಿ ಚೆಲ್ಲಿ ಬುಗ್ಗ ಅಂತಾ ಬೆಂಕಿ ಹತ್ತಿ, ಕಾವ್ಯಾ @ ಕಾವೇರಿ ಉಟ್ಟಿದ್ದ ಚುಡಿದಾರಕ್ಕೆ ಬೆಂಕಿ ಹತ್ತಿಕೊಂಡು ಅವಳ ಮುಖ, ಎದೆಯ ಬಾಗ, ಹೊಟ್ಟೆಗೆ ಸುಟ್ಟಗಾಯಗಳಾಗಿದ್ದರಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಿದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕಃ 11-07-2021 ರಂದು ಸಾಯಂಕಾಲ 4-45 ಗಂಟೆಗೆ ಮೃತಪಟ್ಟಿರುತ್ತಾಳೆ, ಮೃತಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಶೋಬಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ಮಹಿಳೆ ಸಾವು.

              ಬುಜೇಂದ್ರ ತಂದೆ ನಾಗಪ್ಪ ಅಂಬಿಗೇರ ವಯಾ - 36 ವರ್ಷ ಜಾತಿ- ಹಿಂದೂ ಗಂಗಾಮತ, ಉದ್ಯೋಗ- ಕೂಲಿ ಕೆಲಸ ಸಾ; ಶೇಷಗಿರಿ ತಾ; ಹಾನಗಲ್ಲ   ಇವನು ಯಾವುದೋ ವಿಚಾರ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 08-07-2021 ರಂದು ಸಂಜೆ 06-30 ಘಂಟೆ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದು ಇವನಿಗೆ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಿಸದೆ ದಿನಾಂಕ: 12-07-2021 ರಂದು ಮುಂಜಾನೆ 10-10 ಘಂಟೆ ಸುಮಾರಿಗೆ ಮರಣ ಹೊಂದಿದ್ದು ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಶ್ರೀಮತಿ ರೇಣುಕಾ ವರದಿ ನಿಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 16-07-2021 07:04 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ