ಅಭಿಪ್ರಾಯ / ಸಲಹೆಗಳು

     ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:73/2021 ಕಲಂ: 379  IPC.

               ದಿನಾಂಕ: 27-03-2021 ರಂದು ರಾತ್ರಿ 11-45 ಗಂಟೆ ಸುಮಾರಿಗೆ ಹುರಳಿಕುಪ್ಪಿ ಗ್ರಾಮದ ರಿ..ನಂ;385 ಕ್ಷೇತ್ರ 9 ಎಕರೆ 38 ಗುಂಟೆ ಜಮಿನದಲ್ಲಿಂದ ಮಂಜುನಾಥ ರಾಮಪ್ಪ ತಿರುಮಲೆ ಸಾ ಸವಣೂರ  ಇವರು ಹೊಲದ ಮಾಲಿಕರ ಅನುಮತಿ ಇಲ್ಲದೇ ಹೊಲದ ಮಾಲಿಕರು ಇಲ್ಲದಾಗ ಜೆ.ಸಿ.ಬಿ. ಸಹಾಯದಿಂದ ಮಣ್ಣನ್ನು ಅಗೆದು ಒಂದು ಟ್ರ್ಯಾಕ್ಟರದಲ್ಲಿ ಸುಮಾರು 500/- ರೂ.ಗಳ ಕಿಮ್ಮತ್ತಿನ ಮಣ್ಣನ್ನು ತುಂಬಿಕೊಂಡು ಹೊರಟಾಗ ಮಂಜುಳಾ ರಾಗಿ ಸಾ|| ಹಾವಣಗಿ ಇವರು ಲಾರಿ ಚಾಲಕರ ಸಹಾಯದಿಂದ ಸವಣೂರಿನ ತಹಿಶಿಲ್ದಾರ ರವರ ಕಛೇರಿ ಅವರಣದಲ್ಲಿ ತಂದು ನಿಲ್ಲಿಸಿದಾಗ ರಾಮಪ್ಪ ತಿರುಮಲೆ ಹಾಗೂ ಅವರ ಸಹಚರರು ಸೇರಿ  ಟ್ರ್ಯಾಕ್ಟರದಲ್ಲಿದ್ದ ಮಣ್ಣನ್ನು ತಹಿಶಿಲ್ದಾರ ರವರ ಕಛೇರಿ ಅವರಣದಲ್ಲಿ ಸುರವಿ ಜೆ.ಸಿ.ಬಿ. ಹಾಗೂ ಟ್ರ್ಯಾಕ್ಟರಗಳ ಸಮೇತ ಪರಾರಿಯಾಗಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

     ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಕಲಂ: 379 IPC.

                 ಕೃಷ್ಣಾಜಿ ಕೆಂಚಪ್ಪ ರಾಜನಹಳ್ಳಿ ಇವರು ರಾಣೆಬೆನ್ನೂರಿನ ನಿವಾಸಿಗಳಿದ್ದು  ದಿನಾಂಕ; 06-11-2020 ರಂದು ತಮ್ಮ ಮಗನ ಚಿಕಿತ್ಸೆಗೆ ಹಾಗೂ ಕಾಲೇಜಿನ ಫೀಜ್ ತುಂಬುವ ಸಲುವಾಗಿ ತಮ್ಮ ಕೆಲಸದ ಮಾಲಕರಿಂದ 50.000/-ರೂ ಹಣವನ್ನು ಪಡೆದುಕೊಂಡು ಹಾವೇರಿಯಿಂದ ರಾಣೇಬೆನ್ನೂರಿಗೆ ಹೋಗಲು ಅಂತ ಹಾವೇರಿ ಬಸ್ ನಿಲ್ದಾಣಕ್ಕೆ ಬಂದು ರಾಣೇಬೆನ್ನೂರ ಕಡೆಗೆ ಹೋಗುವ ಬಸ್ ಹತ್ತುತ್ತಿದ್ದಾಗ ಮದ್ಯಾಹ್ನ 15-35 ಘಂಟೆ ಸುಮಾರಿಗೆ ಯಾರೋ ಕಳ್ಳರು  ಪ್ಯಾಂಟಿನ ಮುಂದಿನ ಬಲಗಡೆ ಕಿಸೆಯನ್ನು ಯಾವುದೋ ಸಾಧನದಿಂದ ಕತ್ತರಿಸಿ ಕಿಸೆಯಲ್ಲಿದ್ದ 50.000/-ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು  ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

    ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021ಮಹಿಳೆ ಸಾವು.

                 ಶೋಭಾ ಈರಣ್ಣ ಗಂಜಿಗಟ್ಟಿ ವಯಾ 36 ಸಾ ಚಿಕ್ಕನೇಲ್ಲೂರ  ಇವರಿಗೆ ಮೈಯಲ್ಲಿ ಹುಷಾರಿಲ್ಲದೇ ತಿಂಗಳ ಮುಟ್ಟು ಆದಾಗ ಅತಿಯಾದ ರಕ್ತ ಸ್ರಾವವಾಗಿ ಹೊಟ್ಟೆನೋವು ಬರುತ್ತಿತ್ತು. ಅವಳಿಗೆ ಆಸ್ಪತ್ರೆಗೆ ತೋರಿಸಿದರೂ ಗುಣಮುಖವಾಗಿರಲಿಲ್ಲಾ. ನಂತರ ದಿನಾಂಕ : 11-04-2021 ರಮದು ರಾತ್ರಿ 11.00 ಗಂಟೆಯಿಂದ ದಿನಾಂಕ : 12-04-2021 ರ ಮುಂಜಾನೆ 06.00 ಗಂಟೆಯ ನಡುವಿನ ಅವದಿಯಲ್ಲಿ  ಸಂಬಂದಿಕರು ಪೋನ ಮಾಡಿ ನಿನ್ನ ಮಗಳಿಗೆ ಹುಷಾರಿಲ್ಲ ಅದಕ್ಕಾಗಿ ಶಿಗ್ಗಾಂವ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಅವಳು ಮರಣ ಹೊಂದಿದ್ದು ಅಂತಾ ತಿಳಿಸಿದ್ದು ನನ್ನ ಮಗಳು ಏನಾಗಿ ಮೃತಪಟ್ಟಿದ್ದಾಳೆ ಅಂತಾ ನನಗೆ ತಿಳಿಯುತ್ತಿಲ್ಲಾ ಅವಳ ಮರಣದಲ್ಲಿ ನನಗೆ ಸಂಶಯ ಬರುತ್ತದೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಈರಮ್ಮ ಪಿರ್ಯಾದ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

                 ರಾಧಿಕಾ ತಂದೆ ಯಲ್ಲಪ್ಪ ಹರಿಜನ ವಯಾ- 16 ವರ್ಷ ಜಾತಿ- ಹಿಂದು ಮಾದರ. ಉದ್ಯೋಗ- ಮನೆಗೆಲಸ ಸಾ- ಮಾಹೂರ ತಾ- ಸವಣೂರ ಇವಳಿಗೆ ಅರ್ಧ ತೆಲೆನೋವು ಬರುತ್ತದ್ದು ಅವಳಿಗೆ ಸವಣೂರ ಸರ್ಕಾರಿ ಆಸ್ಪತ್ರೆ ಮತ್ತು ಘಾವಟಿ ಔಷದ ಕೊಡಿಸಿದ್ದರೂ ಅವಳಿಗೆ ಬರುತ್ತಿದ್ದ ತೆಲೆನೋವು ಹೋಗಿರಲಿಲ್ಲ. ಇದರಿಂದ ರಾಧಿಕಾ ಇವಳು ತನಗೆ ಬರುತ್ತಿದ್ದ ತೆಲೆ ನೋವಿನಿಂದ ಬೇಸತ್ತು ದಿನಾಂಕ- 10-04-2021 ರಂದು 07-00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಚೂಡಿದಾರದ ವೇಲ್ ದಿಂದ ಉರುಲು ಹಾಕಿಕೊಂಡು ಜೋತಾಡುತ್ತಿದ್ದಾಗ ಅವಳಿಗೆ ಉಪಚಾರಕ್ಕೆ ಸವಣೂರ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಖಲಿಸಿದಾಗ ಉಪಚಾರ ಫಲಿಸದೇ ಮೃತಪಟ್ಟಿದ್ದು ಬಿಟ್ಟು ಅವಳ ಸಾವಿನಲ್ಲಿ ಬೇರೆನೂ ಸಂಶಯ ಇರುವುದಿಲ್ಲಾ ಅಂತಾ ರೇಖಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 15-04-2021 04:02 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080