ಅಭಿಪ್ರಾಯ / ಸಲಹೆಗಳು

ಹಿರೆಕೇರೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ:151/2021 ಕಲಂ: 279, 304(A) IPC.

                     ಹನುಮಂತಗೌಡ ಯಡಗೌಡರ ಇವರು ಕೆ.ಎಸ್.ಆರ್.ಟಿ.ಸಿ ಘಟಕದಲ್ಲಿ ನೌಕರನಿದ್ದು ಎಂದಿನಂತೆ ದಿನಾಂಕ:07-09-2021 ರಂದು 14-00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ತನ್ನ ಮೋಟಾರ ಸೈಕಲ್ಲನ್ನು ಕೆ.ಎಸ್.ಆರ್.ಟಿ.ಸಿ ಕಾಂಪೌಂಡ ಗೋಡೆ ಹತ್ತೀರ ನಿಲ್ಲಿಸಿ ಕರ್ತವ್ಯ ಮುಗಿಸಿಕೊಂಡು ಅಂದೇ 16-00 ಗಂಟೆಗೆ ಹೊರಗೆ ಬಂದು ನೋಡಿದಾಗ ಕೆ.ಎಸ್.ಆರ್.ಟಿ.ಸಿ ಘಟಕದ ಕಾಂಪೌಂಡ ಬಳಿ ನಿಲ್ಲಿಸಿದ್ದ ಒಂದು ಸ್ಪೇಂಡ್ಲರ್ ಎನ್ಎಕ್ಸ್ಜಿ ಕಪ್ಪು ಮತ್ತು ಆರ್ ಎಸ್ ಬಣ್ಣದ ಮೋಟಾರ ಸೈಕಲ್ ಕೆ,ಎ, 27/ಎಸ್-7976 ಅ:ಕಿ 20,000/-ರೂ. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:150/2021 ಕಲಂ: 427, 447 IPC.

                     ಕಲಿಲಅಹಮದ್ದ ಕರಿಮಸಾಬ ವಾಲಿಕಾರ ಇವರ ಅಣ್ಣನ ಹೆಸರಿನಲ್ಲಿರುವ ಬಾಳಂಬೀಡ ಹದ್ದಿಯ ರಿ. ಸ ನಂ; 190/ಎ ನೇದ್ದರಲ್ಲಿ ಯಾರೋ ಜಮೀನಿಗೆ ಅತೀಕ್ರಮ ಪ್ರವೇಶ ಮಾಡಿ ಯಾವುದೋ ಹಳೆ ದ್ವೇಷವನ್ನು ಇಟ್ಟುಕೊಂಡು  ದಿನಾಂಕ : 11/09/2021 ರಂದು ರಾತ್ರಿ 07-30 ಘಂಟೆಯಿಂದ ದಿನಾಂಕ: 12/09/2021 ರಂದು ಮುಂಜಾನೆ 08-00 ಘಂಟೆಯ ನಡುವಿನ ಅವಧಿಯಲ್ಲಿ  ಸುಮಾರು 16 ಲಕ್ಷ ರೂ.ಗಳ ಕಿಮ್ಮತ್ತಿನ ಫಸಲು ಬಿಡುವಂತ 700 ಅಡಿಕೆ ಗಿಡಗಳನ್ನು ಕಡಿದು ಲುಕ್ಷಾನ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ

ಬಂಕಾಪೂರ ಪೊಲೀಸ್ ಠಾಣೆ ಅಸ್ವಾಬಾವಿಕ ಮರಣ ಸಂಖ್ಯೆ:10/2021 ವ್ಯಕ್ತಿ ಆತ್ಮಹತ್ಯೆ.

                     ಬಾಬಣ್ಣ ರಾಯಪ್ಪ ಕಟ್ಟಿಮನಿ ವಯಾ: 46 ಸಾ|| ಇಬ್ರಾಹಿಂಪೂರ ಶಿಗ್ಗಾವಿ ಇವರ ಹೆಂಡತಿ ಸುಮಾರು 8 ವರ್ಷಗಳ ಹಿಂದೆ ಜಗಳಾ ಮಾಡಿ ತನ್ನ ತವರು ಮನೆಗೆ ಹೋಗಿದ್ದು ಅವಾಗಿನಿಂದ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದು  ಹೀಗಿರುವಾಗ ದಿನಾಂಕ: 07-09-2021 ರಂದು ಮುಂಜಾನೆ 05-00 ಗಂಟೆ ಸುಮಾರಿಗೆ ತನ್ನ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ತಿಳಿಸಿ ಹೋಗಿ ಮನಸ್ಸಿಗೆ ಬೇಜಾರು ಮಾಡಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ: 07-09-2021 ರಂದು ಮುಂಜಾನೆ 05-00 ಗಂಟೆಯಿಂದ ಮುಂಜಾನೆ 7-20 ಗಂಟೆಯ ನಡುವಿನ ಅವಧಿಯಲ್ಲಿ ಬಾಡ ಗ್ರಾಮ ಹದ್ದಿ ಅಲ್ಲಿ ಪಿಲ್ಲಿ ಕೆರೆಯ ಆಳ ಇದ್ದ ನೀರಿನಲ್ಲಿ ಬಿದ್ದು ನೀರು ಕುಡಿದು ಮೃತ ಪಟ್ಟಿದ್ದು ಇದೆ ಅವನ ಸಾವಿನಲ್ಲಿ ಯಾರಮೇಲೆ ಸಂಶಯ ವಗೈರೆ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಭೀಷೇಕ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-09-2021 06:31 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ