ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:105/2021 ಕಲಂ: 279,337,338 IPC

                       ದಿನಾಂಕ: 11-08-2021 ರಂದು 11-30 ಗಂಟೆಗೆ ಹರಿಹರ-ರಾಣೇಬೆನ್ನೂರ ಏಕಮುಖೀಯ N.H-4 ರಸ್ತೆಯ ಮೇಲೆ ಕಾರ ನಂ: GJ: 01/KU-1275 ನೇದ್ದನ್ನು ಪವನಕುಮಾರ ಗರಘೇಶ್ವರಿ ರಾಘವೇಂದ್ರರಾವ್‌ ಸಾ|| ಬೆಂಗಳೂರ ಇತನು ತಾನು ನಡೆಸುತ್ತಿದ್ದ ಕಾರನ್ನು ಹರಿಹರ ಕಡೆಯಿಂದ ರಾಣೇಬೆನ್ನೂರ ಕಡೆಗೆ ಅತೀ ಜೋರು ವ ತಾತ್ಸಾರತನದಿಂದ ರಸ್ತೆಯ ತುಂಬಾ ಹೊರಳಾಡಿಸಿಕೊಂಡು ಬಂದವನೇ ಕಮದೋಡ ಬ್ರಿಡ್ಜ್ ಮೇಲೆ ತನ್ನ ಮುಂದೆ ಹರಿಹರ ಕಡೆಯಿಂದ ರಾಣೇಬೆನ್ನೂರ ಕಡೆಗೆ ತನ್ನ ಎಡಬದಿಗೆ ಸಾವಕಾಶವಾಗಿ ಪ್ರದೀಪಕುಮಾರ ಪಿ ಸಾ|| ಹರಿಹರ ರವರು ನಡೆಯಿಸಿಕೊಂಡು ಹೊರಟ Honda Unicorn Motor Cycle No: KA: 17/EZ-3018 ನೇದ್ದರ ಹಿಂದೆ ಢಿಕ್ಕಿ ಮಾಡಿ ಅಪಘಾತಪಡಿಸಿ ಪ್ರದೀಪಕುಮಾರ ಮತ್ತು ಅವರ ಪತ್ನಿ ಗ್ರೇಸಿ ಹಾಗೂ ಮಕ್ಕಳಾದ ಎನೋಷಪಾಲ್ & ಹನೋಕ ಸಾಮ್ಯುವೆಲ್ ಇವರಿಗೆ ಸಾದಾ ವ ಭಾರಿ ರಕ್ತಗಾಯಪೆಟ್ಟುಗೊಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:19/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

              ಮಲ್ಲನಗೌಡ ಶಿವನಗೌಡ ಮಲ್ಲನಗೌಡ್ರ ವಯಾ-60 ವರ್ಷ, ಜಾತಿ ಹಿಂದೂಲಿಂಗವಂತ,ಉದ್ಯೋಗ-ವ್ಯವಸಾಯ ಸಾ/ ಕಾಲ್ವೇಯಲ್ಲಾಪೂರ ತಾ/ಹಾನಗಲ್ಲ ಇವರು ಕಳೆದ ಮೂರು ವರ್ಷಗಳ ಹಿಂದೆ ತಮ್ಮ ಮನೆಯ ಮೇಲಿನಿಂದ ಬೀದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು   ಅವಾಗಿನಿಂದ ಮಾನಸಿಕತೆಯಿಂದ ಬಳುತ್ತಿದ್ದು ಈ ಬಗ್ಗೆ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ದಿನಾಂಕ: 11-08-2021 ರಂದು ಮುಂಜಾನೆ 09-00 ಘಂಟೆ ಸುಮಾರಿಗೆ ತನ್ನ ಮನೆಯ ದನದ ಕೊಟ್ಟಿಗೆಯ ಮೇಲೆ ಇರುವ ಮನೆಯಲ್ಲಿ ಜಂತಿಗೆ ವೈರ್ ಹಗ್ಗದಿಂದ ಉರುಲು ಹಾಕಿಕೊಂಡು ಉಸಿರುಗಟ್ಟಿ ಮೃತ ಪಟ್ಟಿರುತ್ತಾರೆ ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತನ ಮಗ ಶಂಕರಗೌಡ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:20/2021 ಮಹಿಳೆ ಆತ್ಮಹತ್ಯೆ.

              ರೆಣುಕಾ ಕೋಂ ಶೇಖಪ್ಪ ಪವಾರ ಇವಳಿಗೆ ಈಗ ಸುಮಾರು 1 ವರ್ಷದಿಂದ ಎದೆ ನೋವು ಮತ್ತು ಹೊಟ್ಟೆನೊವು ಇದ್ದಿದರಿಂದ, ಎದೆ ಮತ್ತು ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೆ ದಿನಾಂಕ:11-08-2021 ರಂದು ಮುಂಜಾನೆ 2-30 ಗಂಟೆಯಿಂದ ದಿನಾಂಕ:11-08-2021 ರಂದು ಮುಂಜಾನೆ 6-00 ಗಂಟೆ ಮದ್ಯದಲ್ಲಿ ತನ್ನಸ್ಟಕ್ಕೆ ತಾನೇ ಬೆಟಕೆರೂರು ಗ್ರಾಮದ ತುಂಬುವ ಹೊಂಡದಲ್ಲಿ ಬಿದ್ದು ನೀರು ಕುಡಿದು ಮೃತ ಪಟ್ಟಿದ್ದು ಇರುತ್ತದೆ, ಮೃತಳ ಸಾವಿನಲ್ಲಿ  ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಶೇಖಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:28/2021 ವಿದ್ಯುತ್‌ ತಗುಲಿ ವ್ಯಕ್ತಿ ಸಾವು.

              ಆಂಜನಯ ತಂದೆ ಕೃಷ್ಣಪ್ಪ ಹೊನ್ನತ್ತಿ ವಯಾ-26 ವರ್ಷ ಸಾ||ಹಲಗೇರಿ ಚೌಡೇಶ್ವರಿ ನಗರ ಹಾಲಿ ವಸ್ತಿಃ ಕಳಿಹಾಳ ತಾ||ಹಾವೇರಿ ಇವನು ಕಳೆದ 3 ತಿಂಗಳಿನಿಂದ ಕಳಿಹಾಳ ಗ್ರಾಮದಲ್ಲಿ ಗೌಂಡಿ ಕೆಲಸ ಮಾಡಿಕೊಂಡು ವಾಸವಾಗಿದ್ದು ದಿನಾಂಕಃ 10-09-2021 ರಂದು ರಾತ್ರಿ 8-00 ಘಂಟೆ ಸುಮಾರಿಗೆ ತನ್ನ ಮನೆಯಲ್ಲಿ ವಿದ್ಯುತ್ ಪ್ಲಗ್(ಗ್ಯಾಂಗ್ ಬಾಕ್ಸ್) ದುರಸ್ತಿ ಆಗಿದ್ದರಿಂದ ಅದನ್ನು ಸರಿ ಮಾಡುತ್ತಿದ್ದಾಗ ಆಕಸ್ಮೀಕವಾಗಿ ಎಡ ಕೈ ಅಂಗೈಗೆ ವಿದ್ಯುತ್ ತಗುಲಿ ವದ್ದಾಡುತ್ತಿದ್ದವನಿಗೆ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಉಪಚರಿಸುತ್ತಿದ್ದ ವೈದ್ಯಾಧಿಕಾರಿಗಳು ರಾತ್ರಿ 9-30 ಗೆ ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದ್ದು ಮೃತನ ಸಾವಿನಲ್ಲಿ ಯಾರ ಮೇಲೂ ಸಂಶಯವಿರುವದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 17-08-2021 06:19 PM ಅನುಮೋದಕರು: System Admin Haveri

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080