ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಮಹಿಳೆ ಕಾಣೆ.

                ಆಫ್ರೀನ್  ತಂದೆ ಮದಾರಸಾಬ ಪೀರಖಾನವರ ವಯಾ: 21 ವರ್ಷ ಇವಳು ದಿನಾಂಕ : 05-06-2021 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಮದರಸಾಬ ಕಾಯಿಪಲ್ಯೆ ತರಲು ಹೋಗುವಾಗ ಲೈನಿಂಗ ಬಟ್ಟೆ ತರುತ್ತೇನೆ 20 ರೂ ಗಳನ್ನು ಕೊಡು ಅಂತಾ ಅವರ ಹತ್ತಿರ ಇಸಿದುಕೊಂಡಿದ್ದು, ಕಾಯಿಪಲ್ಯೆ ಮಾರ್ಕೆಟದಿಂದ ಪರ್ತ ಮನೆಗೆ ಬಂದಾಗ ಮಗಳು ಮನೆಯಲ್ಲಿರದೆ ರಾತ್ರಿ 8-00 ಗಂಟೆಯಾದರು ಮನೆಗೆ ಮರಳಿ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿ ಹೋಗಿದ್ದು, ಕಾಣೆಯಾದ ತಮ್ಮ ಮಗಳನ್ನು ಹುಡಿಕಿಕೊಡಬೇಕು ಅಂತಾ ಮದರಸಾಬ್ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:80/2021 ಬೈಕ್ ಕಳ್ಳತನ.

                ದಿನಾಂಕಃ-07-06-2021 ರಂದು ಮದ್ಯಾನ್ಹ 14-00 ಗಂಟೆಯಿಂದ 15-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬ್ಯಾಡಗಿ ಶಹರಲ್ಲಿರು ಗುಮ್ಮನಹಳ್ಳಿ ರಸ್ತೆಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದ ಮುಂದೆ ಇರುವ  ಬಯಲು ಜಾಗೆಯಲ್ಲಿ ನಿಲ್ಲಿಸಿದ ಮೋಟಾರ್ ಸೈಕಲ್ ಹಿರೋ ಕಂಪನಿಯ ಹೀರೊ ಹೆಚ್ ಎಫ್ ಡೀಲೇಕ್ಷ್ ಕಪ್ಪು ಬಣ್ಣದ  ಮೋಟಾರ ಸೈಕಲ್ ನಂಬರ KA-27 ED-6952 ಹಾಗೂ ಅದರ Engine No-HA11EJF9B34081. ಹಾಗೂ Chassis.No-QMBLHA11ALF9B27287 ಅಂತ ಇದ್ದು ಇದರ ಅ.ಕಿ.30,000/-ರೂಗಳು ಕಿಮ್ಮತ್ತಿನದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:84/2021 ಮಹಿಳೆ ಕಾಣೆ.

                ಭೂಮೀಕಾ ತಂದೆ ನಾಗಯ್ಯ ಹಿರೇಮಠ, ವಯಾ-18 ವರ್ಷ 01 ತಿಂಗಳು, ಜಾತಿ-ಹಿಂದೂ ಜಂಗಮ, ಉದ್ಯೋಗ: ವಿಧ್ಯಾರ್ಥಿನಿ, ಸಾ||ವಡೆಯರಹಳ್ಳಿತಾ||ಹಿರೇಕೆರೂರ, ಜಿ||ಹಾವೇರಿ. ಇವಳು ದಿನಾಂಕ: 09-06-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 10-06-2021 ರ ಬೆಳಿಗ್ಗೆ 6-00 ಗಂಟೆಯ ನುಡುವಿನ ಅವಧಿಯಲ್ಲಿ. ವಡೆಯರಹಳ್ಳಿ ಗ್ರಾಮದ ತನ್ನ ವಾಸದ ಮನೆಯಿಂದ ಯಾರಿಗೂ ಏನು ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಕಾಣೆಯಾದ ಭೂಮೀಕಾ ಇವಳನ್ನು ಹುಡುಕಿಕೊಡಬೇಕೆಂದು ನಾಗಯ್ಯ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ .

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:13/2021 ವ್ಯಕ್ತಿ ಸಾವು.

                 ವಿಶ್ವನಾಥ  ತಂದೆ  ಗುರುಸಿದ್ದಪ್ಪ ಯಲಿಗಾರ ವಯಾಃ-35 ಸಾ|| ಶಿಗ್ಗಾಂವ ಮೈಲಾರದೇವಿ ಗುಡಿ ಎದುರಿಗೆ  ಇತನು ಬಹಳ ದಿವಸಗಳಿಂದ ಮಾನಸಿವಾಗ ಅಸ್ವಸ್ತನಿದ್ದು ಸೌಮ್ಯ ಸ್ವಭಾವನಿದ್ದು ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿಲ್ಲಾ ಸದ್ಯ ಲಾಕ್ ಡೌನ ಇದ್ದು ಮನೆಯಲ್ಲಿ ಸುಮ್ನೆ ಇರುತ್ತಿದ್ದು ದಿನಾಂಕಃ-10/06/2021 ರಂದು ಸಾಯಂಕಾಲ 05-00 ಗಂಟೆಗೆ ಮನೆಯಿಂದ ಹೋಗಿ  ದಿನಾಂಕಃ-11/06/2021 ರಂದು ಮದ್ಯಾಹ್ನಃ-13-30 ಗಂಟೆ  ನಡುವಿನ ಅವದಿಯಲ್ಲಿ ತನ್ನಷ್ಟಕ್ಕೆ ತಾನೆ  ಮನಸ್ಸಿಗೆ ಬೇಜಾರ ಮಾಡಿಕೊಂಡು  ಜೀವನದಲ್ಲಿ ಜಿಗುಪ್ಸೆ ಹೊಂದಿ ನಾಗನೂರ ಕೆರೆಯ ನೀರಿನಲ್ಲಿ ಬಿದ್ದು  ಮರಣ ಹೊಂದಿರುತ್ತಾನೆ ವಿನಹ: ನನ್ನ ಗಂಡನ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 16-06-2021 04:15 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ