ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:67/2021 ಕಲಂ: 379 IPC.

                 ಗಣೇಶ ತಂದೆ ರುದ್ರಪ್ಪ ಉಜ್ಜನಗೌಡ್ರ ಸಾ: ಕೋಟಿಹಾಳ ಇವನು ಯಾವುದೇ ಪರವಾನಿಗೆ ಪಡೆಯದೇ ಸರಕಾರಕ್ಕೆ ರಾಜಧನ ಪಾವತಿಸದೇ ತಾನು ನಡೆಸುತ್ತಿದ್ದ Swaraj ಕಂಪೆನಿಯ 735 FE  ಮಾಡಲ್ ದ ನೀಲಿ ಬಣ್ಣದ ಟ್ರ್ಯಾಕ್ಟರ್ KA: 27/TB-7094 ನೇದ್ದಕ್ಕೆ ಜೋಡಿಸಿದ ನೀಲಿ ಮತ್ತು ಹಳದಿ ಬಣ್ಣದ ನೊಂದಣಿ ಸಂಖ್ಯೆ ವ ಚಾಸ್ಸಿ/ಇಂಜಿನ್ ನಂಬರ ಇಲ್ಲದ ಟ್ರೇಲರ್ ದಲ್ಲಿ ಅಕ್ರಮವಾಗಿ ನೈಸರ್ಗಿಕ ಸ್ವತ್ತಾದ ಸುಮಾರು 1800/-ರೂ. ಮೊತ್ತದ ಅಂದಾಜು 02 ಕ್ಯೂಬಿಕ್ ಮೀಟರ್ ಮರಳನ್ನು ಎಲ್ಲಿಯೋ ನದಿ ಪಾತ್ರದಲ್ಲಿ ಕಳ್ಳತನ ಮಾಡಿ ತುಂಬಿಕೊಂಡು ತುಮ್ಮಿನಕಟ್ಟಿ-ಹಲಗೇರಿ ರಸ್ತೆಯ ಮೇಲೆ ತುಮ್ಮಿನಕಟ್ಟಿ ಕಡೆಯಿಂದ ಹಲಗೇರಿ ಕಡೆಗೆ ಸಾಗಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಚಾಲಕನು ಪರಾರಿಯಾಗಿ ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:69/2021 ಕಲಂ: 380, 454, 457 IPC.

                ಮಾಸಣಗಿ ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ಬೆಟ್ಟದಲ್ಲಿರುವ ಶ್ರೀ ಆಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದಿನಾಂಕ:01-05-2021 ರಂದು ಮುಂಜಾನೆ 09-00 ಗಂಟೆಯಿಂದ ದಿನಾಂಕ:11-05-2021 ಮುಂಜಾನೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ದೇವಸ್ಥಾನದ ಒಳಗೆ ಹೋಗಿ ದೇವಸ್ಥಾನದಲ್ಲಿದ್ದ ಸುಮಾರು 75 ಕೆ.ಜಿ ತೂಕವಿರುವ ಶ್ರೀ ಅಯ್ಯಪ್ಪಸ್ವಾಮಿ ಪಂಚಲೋಹದ ಮೂರ್ತಿ ಅ||ಕಿ|| 40,000/- ರೂ.ಗಳ ಕಿಮ್ಮತ್ತಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 12-05-2021 06:18 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ