ಅಭಿಪ್ರಾಯ / ಸಲಹೆಗಳು

     ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ಮಹಿಳೆ ಕಾಣೆ.

               ಕು|| ಸುಸ್ಮಾ ತಂದೆ ಪಕ್ಕೀರಪ್ಪ ಸಂಸಿ ವಯಾ.18 ವರ್ಷ 2 ತಿಂಗಳು ಉದ್ಯೋಗ.ಮನೆ ಕೆಲಸ ಸಾ||ಮಾರನಬೀಡ ತಾ||ಹಾನಗಲ್ಲ ಇವಳು ದಿನಾಂಕ : 10-04-2021 ರಂದು ಮನೆಯಲ್ಲಿ ಹಾನಗಲ್ಲಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಈ ವರಗೆ ಮನೆಗೆ ಬಾರದೆ ತನ್ನ ಸಂಬಂದಿಕರ ಮನೆಗು ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು  ಕಾಣೆಯಾದವಳನ್ನು ಈವರೆಗೂ ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಪಕ್ಕಿರಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

     ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:57/2021 ಕಲಂ: 304A, 279, 337 IPC.

                 ದಿನಾಂಕ:06-04-2021 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆಟೋ ರಿಕ್ಷಾ ನಂಬರ ಕೆಎ-68/1032 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಆಟೋವನ್ನು ಲಕಮಾಜಿಕೊಪ್ಪ ಕಡೆಯಿಂದ ರಾಮಗೊಂಡನಹಳ್ಳಿ ಕ್ರಾಸ್ ಕಡೆಗೆ ಅತೀ ಜೋರಾಗಿ ಮತ್ತು ನಿರ್ಲಕ್ಷ ತಾತ್ಸಾರನದಿಂದ ನಡೆಸಿಕೊಂಡು ಬಂದವನೇ ರಾಮಗೊಂಡನಹಳ್ಳಿ ಕ್ರಾಸ್ ಕಡೆಯಿಂದ ರಸ್ತೆಯ ಎಡ ಸೈಡಿನಲ್ಲಿ ನಡೆದುಕೊಂಡು ಬರುತ್ತಿದ್ದ ವೀರಯ್ಯ ತಂದೆ ಮಲ್ಲಿಕಾರ್ಜನಯ್ಯ ಚರಂತಿಮಠ ವಯಾ-55 ವರ್ಷ ಸಾ||ಅಂದಾನಿಕೊಪ್ಪ ತಾ|| ಬ್ಯಾಡಗಿ ಇವರಿಗೆ ಎದುರಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ರಸ್ತೆಯ ಮೇಲೆ ಬಿಳುವಂತೆ ಮಾಡಿ ಬಾಯಿಂದ ಮತ್ತು ಮೂಗಿನಿಂದ ರಕ್ತ ಬರುತ್ತಿದ್ದವನಿಗೆ ಉಪಚಾರಕ್ಕೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆ ಕರೆದುಕೊಂಡು ಹೋಗಿ ಉಪಚಾರ ಕೊಡಿಸಿ ಅಲ್ಲಿಂದ ಪುನಃ ದಾವಣಗೇರಿ ಎಸ್ ಎಸ್ ಐ ಹಾಗೂ ಚಿಗಟೇರಿ ಆಸ್ಪತ್ರೆಗಳಲ್ಲಿ ಉಪಚಾರ ಕೊಡಿಸಿ ಅಲ್ಲಿಂದ ದಿನಾಂಕಃ 08-04-2021 ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಸದರಿಯವನಿಗೆ ಉಪಚಾರ ಫಲಿಸದೆ ದಿನಾಂಕಃ 11-04-2021 ರಂದು ಬೆಳಗಿನ ಜಾವ 03-40 ಘಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

    ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:58/2021 ಕಲಂ: 304A, 279, 337,338 IPC.

                 ದಿನಾಂಕ:11-04-2021 ರಂದು ಸಂಜೆ 04-00 ಘಂಟೆ ಸುಮಾರಿಗೆ ಕಾರ್ ನಂಬರ ಕೆಎ-25/ಝಡ್-5823 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ಮೋಟೆಬೆನ್ನೂರ ಕಡೆಯಿಂದ ಹಾವೇರಿ ಕಡೆಗೆ ಕದಮನಹಳ್ಳಿ ಕ್ರಾಸ್ ಹತ್ತಿರ ಅತೀ ಜೋರಾಗಿ, ತಾತ್ಸಾರತನದಿಂದ ಹಾಗೂ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದವನೇ  ಕದಮನಹಳ್ಳಿ ಕ್ರಾಸ್ ಎದುರಿಗೆ   ಗಾಡಿಗಾಗಿ ಕಾಯುತ್ತಾ ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದ  1)ಯಲ್ಲಪ್ಪ ತಂದೆ ಮಹಾದೇವಪ್ಪ ಲಮಾಣಿ ವಯಾ-25 ವರ್ಷ. 2) ರೂಪಾ ಕೋಂ ಯಲ್ಲಪ್ಪ ಲಮಾಣಿ ವಯಾ-20 ವರ್ಷ  3) ಶರತ್ ತಂದೆ ಯಲ್ಲಪ್ಪ  ಲಮಾಣಿ ವಯಾ- 09 ತಿಂಗಳು, ಸಾ-ಎಲ್ಲರೂ ಚಿಕ್ಕಮಳ್ಳಳ್ಳಿ, ತಾ-ಸವಣೂರ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ರಸ್ತೆಯ ಮೇಲೆ ಬಿಳುವಂತೆ ಮಾಡಿದ್ದು  ಯಲ್ಲಪ್ಪ ಇವರು ರಸ್ತೆಯ ಅಂಚಿನಲ್ಲಿ ಬಿಳುವಂತೆ ಮಾಡಿ ಯಲ್ಲಪ್ಪ ಲಮಾಣಿಗೆ  ಎಡಗಣ್ಣು ಹತ್ತಿರ, ತಲೆಗೆ, ಕಿವಿ , ಬಲಗೈಯಿಗೆ ಮತ್ತು ಎಡಗಾಲ ಮೊಣಕಾಲ ಹತ್ತಿರ, ಸೊಂಟಕ್ಕೆ ರಕ್ತಗಾಯ ಒಳನೋವು ಮಾಡಿದ್ದು  ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ರೂಪಾ ಇವರಿಗೆ ಕಾಲುವೆಯಲ್ಲಿ  ಬಿಳುವಂತೆ ಮಾಡಿ ಅವಳಿಗೆ ತಲೆಗೆ ರಕ್ತಗಾಯವಾಗಿದ್ದು ಅಲ್ಲದೇ ನಾಲಿಗೆ ಕಟ್ಟಾಗಿದ್ದು ಮೈ,ಕೈಯಿಗೆ ಗಾಯಪೆಟ್ಟುಗಳು ಆಗಿದ್ದು  ಹಾಗೂ ಶರತ್ ಇವನಿಗೆ ಮೂಗಿಗೆ ತೆರಚಿದ ಗಾಯಗಳಾಗುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

     ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:69/2021 ಕಲಂ: 279, 304(A) IPC.

                 ದಿನಾಂಕಃ10/04/2021 ರಂದು ರಾತ್ರಿಃ10-30 ಗಂಟೆಯ ಸುಮಾರಿಗೆ ಶ್ರೀಮತಿ ಸುಶೀಲವ್ವ ಕೋಂ ಶಂಬಣ್ಣ ಸುಬ್ಬಣ್ಣನವರ ಸಾ|| ರಾಮತಿರ್ಥ ಹೊಸಕೊಪ್ಪ  ಇವಳು ಮನೆಯ ಟೆರಸ್ ಮೇಲೆ ಹಾಕಿದ ಬಟ್ಟೆಯನ್ನು ತರಲು ಅಂತಾ ಹೋಗಿ ವಾಪಾಸ್ ಮೆಟ್ಟಿಲುಗಳ ಮುಖಾಂತರ ಇಳಿದು ಬರುತ್ತಿದ್ದಾಗ ಅಕಸ್ಮಾತ್ ಆಗಿ ಕಾಲು ಜಾರಿ ಬಿದ್ದಿದ್ದು ನಂತರ ಉಪಚಾರಕ್ಕೆ ಹಾನಗಲ್ಲನ ಡಿಪ್ಲೋಮಾ ಕಾಲೇಜ್ ಎದುರಿಗೆ ಇರುವ ನಧಾಫ ಡಾಕ್ಟರ್ ಹತ್ತಿರ ಕರೆದುಕೊಂಡು ಬಂದು ಉಪಚಾರ ಕೊಡಿಸಿ ವಾಪಾಸ್ ಪ್ಲಾಟೀನಾ ಮೋಟಾರ್ ಸೈಕಲ್ ಚೆಸ್ಸಿ ನಂಬರ MD2DDDZZZNWL50735  ನೇದ್ದರ ಮೋಟಾರ್ ಸೈಕಲ್ ಮೇಲೆ ಕರೆದುಕೊಂಡು ದಿನಾಂಕಃ11/04/2021 ರಂದು ಬೆಳಗಿನ ಜಾವಃ01-20 ಗಂಟೆಯ ಸುಮಾರಿಗೆ ದಾನಪ್ಪ ಚೆನ್ನಯ್ಯನವರ ಇವರ ಜಮೀನು ಹತ್ತಿರ ಹಾನಗಲ್ಲ ರಾಮತೀರ್ಥ ಹೊಸಕೊಪ್ಪ ರಸ್ತೆಯ ಮುಖಾಂತರ ಹೋಗುತ್ತಿದ್ದಾಗ ಇದರಲ್ಲಿಯ ಜಗದೀಶ ಶಂಬಣ್ಣ ಸುಬ್ಬಣ್ಣನವರ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ನಿರ್ಲಕ್ಷ್ಯತನದಿಂದ ಮೋಟಾರ್ ಸೈಕಲ್ ನ್ನು  ಚಲಾಯಿಸಿ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಸುಶೀಲವ್ವ ಕೋಂ ಶಂಬಣ್ಣ ಸುಬ್ಬಣ್ಣನವರ ಇವಳಿಗೆ ಮೋಟಾರ್ ಸೈಕಲ್ ಮೇಲಿಂದ ಪುಟಿದು ಕೆಳಗೆ ಬೀಳುವಂತೆ ಮಾಡಿ ಹಿಂದೆಲೆಗೆ ಭಾರಿ ಸ್ವರೂಪದ ಹೊಡೆತ ಬಿದ್ದು ಬಾವು ಬಂದು ರಕ್ತ ಬರುವಂತೆ ಮಾಡಿದ್ದು ನಂತರ ಉಪಚಾರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿ ಉಪಚಾರವನ್ನು ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿದಾಗ  ದಿನಾಂಕಃ11/04/2021 ರಂದು ಬೆಳಗಿನ ಜಾವಃ03-45 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಗುಡ್ಡಪ್ಪ ತಂದೆ ಬಸಪ್ಪ ಕಾಸಂಬಿ, ವಯಾ-21 ವರ್ಷ, ಜಾತಿ-ಹಿಂದೂ ಕುರುಬರ. ಉದ್ಯೋಗ-ಕೂಲಿ ಕೆಲಸ, ಸಾ; ಅರಳಿಕಟ್ಟಿ, ತಾ; ಹಿರೇಕೆರೂರ. ಈತನು ಈಗ ಸುಮಾರು 3 ವರ್ಷದಿಂದ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ದಿನಾಂಕ:11-04-2021 ರಂಧು ಮುಂಜಾನೆ 8-00 ಗಂಟೆ ಸುಮಾರಿಗೆ ತನ್ನ ತಾಯಿಯ ಹತ್ತಿರ ಕುಡಿಯಲು ಹಣ ಕೇಳಿದ್ದು ತಾಯಿಯು ನೀನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೆಡಾ ಅಂತಾ ಬುದ್ದಿವಾದ ಹೇಳಿ ನನ್ನ ಹತ್ತಿರ ನಿನಗೆ ಕೊಡಲು ಹಣ ಇರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಗುಡ್ಡಪ್ಪ ಈತನು ತನ್ನ ವಾಸದ ಮನೆಯ ದೆವರ ಮನೆಯಲ್ಲಿ ಮನೆಯ ಮೇಲ್ಚಾವಣಿಯ ಬಿದರಿನ ಗಳಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರವದಿಲ್ಲ ಅಂತಾ ಮೃತನ ಅಣ್ಣನು ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 14-04-2021 10:15 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ