ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:88/2021 ಕಲಂ:279,338,304(A)) IPC

                       ದಿನಾಂಕ: 10-08-2021 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ವಿರುಪಾಕ್ಷಪ್ಪ ಕರಿಗಾರ ಸಾ||ನೆಗಳೂರ ಇವನು ಟಿ ವಿ ಎಸ್ ಎಕ್ಸಎಲ್ ವಾಹನ ನಂಬರ ಕೆ.ಎ-27/ಇಎಲ್-4830 ನೇದ್ದರಲ್ಲಿ ಹಿಂದೆ ದುದ್ದುಸಾಬ ಕುದರಿ ಸಾ|| ನೆಗಳೂರ ಇವನಿಗೆ ಕೂಡಿಸಿಕೊಂಡು ಬಸಾಪುರ ಕಡೆಯಿಂದ ನೆಗಳೂರ ಕಡೆಗೆ ಬಮ್ಮನಕಟ್ಟಿ ಕ್ರಾಸದಲ್ಲಿ ನಿಧಾನವಾಗಿ ಹೋಗುತ್ತಿರುವಾಗ ಇದರಲ್ಲಿಯ ಆರೋಪಿತನು ಕೆ ಎಸ್ ಆರ್ ಟಿ ಸಿ ಬಸ್ ನಂಬರ ಕೆ,ಎ-27/ಎಪ್-534 ನೇದ್ದನ್ನು ಹೊಸರಿತ್ತಿ ಕಡೆಯಿಂದ ಅತಿ ಜೋರಾಗಿ ವ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ನಡೆಸಿಕೊಂಡು ಬಂದು ರಸ್ತೆ ಆ ಕಡೆ ಈ ಕಡೆ ನೋಡದೆ ಒಮ್ಮಿಂದೊಮ್ಮೆಲೆ ರಸ್ತೆಯನ್ನು ಕ್ರಾಸ್ ಮಾಡಿ ಟಿ ವಿ ಎಸ್ ಎಕ್ಸ.ಎಲ್ ಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ವಿರುಪಾಕ್ಷಪ್ಪ ಹಾಗೂ ದುದ್ದುಸಾಬ ಕುದರಿ ಇವರಿಗೆ ಬಲವಾದ ಗಾಯಪಡಿಸಿದ್ದು, ವಿರುಪಾಕ್ಷಪ್ಪನಿಗೆ ಗುತ್ತಲ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ಹೆಚ್ಚಿನ ಉಪಚಾರಕ್ಕೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ಸಂಜೆ 04-40 ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ವೈದ್ಯರು ಮೃತಪಟ್ಟ ಬಗ್ಗೆ ತಿಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:108/2021 ಕಲಂ: The SC & ST (Pre vention of Atrocities) Amendment Act 2015 (U/s-3 (2)(v),3(2)(va)) ; 302,201 IPC.

              ಯಲ್ಲವ್ವ ನಾಗಪ್ಪ ಹೊಸಳ್ಳಿ ಸಾ|| ಹೆಬ್ಬಳ್ಳಿ ಅಗಸಿ ಕ್ರಾಸ್‌ ಧಾರವಾಡ ಇವಳು ಮೊದಲನೆ ಮದುವೆಯಾಗಿ ಬಿಟ್ಟು ಪುನ: 2 ನೇ ಮದುವೆಯಾಗಿದ್ದು ಅವಳ 2 ನೇ ಗಂಡನು ಮಗಳನ್ನು ರೇಪ ಮಾಡಿದ್ದರಿಂದ ಅವನು ಜೈಲಿನಲ್ಲಿರುವಾಗ ಯಲ್ಲವ್ವ ತಾನು ವಾಸವಿರುವ ಬಾಡಿಗೆ ಮನೆಯ ಹತ್ತಿರ ಸಂಬಂದಿಕರ ಮನೆಗೆ ಬರುತ್ತಿದ್ದ ನಾಗರಾಜ ಮಣ್ಣಿಕೇರಿ ವಯಾ: 32 ವರ್ಷ ಸಾ|| ಧಾರವಾಡ ಇವನ ಸಂಗಡ ಅನೈತಿಕ ಸಂಬಂದವನ್ನು ಬೆಳೆಯಿಸಿದ್ದು ಈ ವಿಷಯ ನಾಗರಾಜ ಇವರ ಮನೆಯವರಿಗೆ ಸಂಬಂದಿಕರಿಗೆ ಗೊತ್ತಾಗಿ ಅವಳ ನಡೆತೆ ಸರಿಯಿಲ್ಲಾ ಅವಳು ನಿನಗಿಂತ ದೊಡ್ಡವಳು ನಿನಗೆ ನಮ್ಮ ಜಾತಿಯ ಹುಡಗಿ ನೋಡಿ ಮದುವೆ ಮಾಡುತ್ತೇವೆ ಅವಳಿಗೆ ಈಗಾಗಲೇ ಎರಡು ಮದುವೆಯಾಗಿವೆ ಅಂತಾ ಮತ್ತು ಅವಳಿಗೂ ಸಹಾ ಕರೆದು ಬುದ್ದಿವಾದ ಹೇಳಿದರೂ ಕೇಳದೆ ನಾಗರಾಜ ಇವನನ್ನು ಕರೆದುಕೊಂಡು ಉಡುಪಿ,ಬೆಂಗಳೂರಿಗೆ ಹೋಗಿದ್ದರಿಂದ ಮನೆಯವರು ಕರೆಯಿಸಿ ನಿನಗೆ ಪಂಚಮಿ ಹಬ್ಬ ಆದ ನಂತರ ನಮ್ಮ ಜಾತಿಯ ಹುಡುಗಿ ನೋಡಿ ಮದುವೆ ಮಾಡುತ್ತೇವೆ ಅಂತಾ ಹೇಳಿದಾಗ ವಿಷಯ ಗೊತ್ತಾಗಿ ಯಲ್ಲವ್ವ ನಾಗರಾಜನಿಗೆ ನೀನು ನನ್ನನ್ನು ಬಿಟ್ಟು ಬೇರೆ  ಮದುವೆ ಹೆಂಗ ಆಗುತ್ತಿಯಾ ನೊಡುತ್ತೇನೆ ಒಂದು ವೇಳೆ ನೀನು ಬೇರೆ ಮದುವೆಯಾದರೆ ನಿನ್ನ ಮೇಲೆ ಪೊಲೀಸ ಠಾಣೆಗೆ ಹೋಗಿ ಕೇಸ ಮಾಡಿ ಜೈಲಿಗೆ ಹಾಕಿಸುತ್ತೇನೆ ಅಲ್ಲದೆ ನಿನಗೆ ಮರ್ಡರ ಮಾಡುತ್ತೇನೆ ಅಂತಾ ಅವನಿಗೆ ಹೆದರಿಸುತ್ತಾ ಬಂದಿದ್ದು ಅಲ್ಲದೆ ಬಸವರಾಜ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಜನಾಂಗದವರು ಅಂತಾ ಗೊತ್ತಿದ್ದು ಅವನು ಬೇರೆ ಮದುವೆಯಾದರೆ ನನ್ನ ಗತಿ ಏನು ಅಂತಾ ದಿನಾಂಕ:02-08-2021 ರಂದು ಸಂಜೆ 4-00 ಗಂಟೆಯಿಂಂದ ದಿನಾಂಕ;09-08-2021 ರಂದು ಮದ್ಯಾಹ್ನನದ ನಡುವಿನ ಅವಧಿಯಲ್ಲಿ ಅವನಿಗೆ ಏನೋ ಹೇಳಿ ನಂಬಿಸಿ ಎಲ್ಲಿಯೋ ಕರೆದುಕೊಂಡು ಹೋಗಿ ಕೊಲೆ ಮಾಡಿ ಮೊಟೇಬೆನ್ನೂರ ಹತ್ತೀರ ಹೈವೆ ರಸ್ತೇಯ ಪಕ್ಕದಲ್ಲಿ ಶವವನ್ನು ಹಾಕಿ ಸಾಕ್ಷಿ ಪುರಾವೆ ನಾಶಪಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-08-2021 06:17 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080