ಅಭಿಪ್ರಾಯ / ಸಲಹೆಗಳು

ಹಾವೇರಿ ಸಂಚಾರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:23/2021 ಕಲಂ: 279,304(A) IPC.

              ದಿನಾಂಕಃ 07-07-2021 ರಂದು 15-30 ಗಂಟೆ ಸುಮಾರಿಗೆ ಸತೀಶ ಅಂದನಿ ಸಾ|| ಬ್ಯಾಡಗಿ ಇತನು ಹೊಂಡ ಡಿವೊ ಸ್ಕೂಟಿ ಬೈಕ್ ನಂಬರ KA.68/H.8667 ನೇದ್ದನ್ನು ಹಾವೇರಿ ಶಹರದ ಕಡೆಯಿಂದ ಬ್ಯಾಡಗಿಗೆ ಹೋಗುವಾಗ ಬಹಳ ಜೋರಿನಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನಷ್ಟಕ್ಕೆ ತಾನೆ ತನ್ನ ಹೊಂಡ ಡಿವೊ ಸ್ಕೂಟಿ ಬೈಕನ್ನು ಎಡಮಗ್ಗಲಾಗಿ ಸರ್ವಿಸ್ ರಸ್ತೆಯ ಮೇಲೆ ಹಾಕಿಕೊಂಡು ಬಿದ್ದು ತನಗೆ ತೆಲೆಗೆ ಹಾಗೂ ದೇಹದ ಇತರೆ ಕಡೆಗೆ ಗಾಯ ಮತ್ತು ದುಃಖಾಪತ್ ಪಡಿಸಿಕೊಂಡಿದ್ದು ಕೂಡಲೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ್ ಮಾಡಿದ್ದು ಇಲ್ಲಿಯ ವೈದ್ಯರು ಸದರಿಯವರಿಗೆ ಉಪಚಾರ ನೀಡಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲು ತಿಳಿಸಿದ ಪ್ರಕಾರ ಅವರ ಸಂಬಂಧಿಕರು ಮೊದಲು ತತ್ವ ದರ್ಶಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ್ ಮಾಡಿದ್ದು ನಂತರ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ್ ಮಾಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಪಲಿಸದೇ ದಿನಾಂಕಃ 09-07-2021 ರಂದು ರಾತ್ರಿ 09-40 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:109/2021 ಕಲಂ: 279,304(A) IPC.

                  ಕೇಶವ ತಂದೆ ಲಾಲಾಪ್ಪ ಲಮಾಣಿ. ವಯಾ-36 ವರ್ಷ. ಜ್ಯಾತಿ-ಹಿಂದೂ ಲಮಾಣಿ. ಉದ್ಯೋಗ-ವ್ಯಾಪಾರ. ಸಾ-ಅಕ್ಕಿಗುಂದ. ತಾ-ಶಿರಹಟ್ಟಿ. ಜಿ-ಗದಗ. ಇತನು ದಿನಾಂಕ: 10-07-2021 ರಂದು ಮುಂಜಾನೆ 10-00 ಘಂಟೆ ಸುಮಾರಿಗೆ ಕೆಲಸಕ್ಕೆ ಅಂತಾ ತನ್ನ ಬಾಬತ್ ಮೋಟಾರ್ ಸೈಕಲ್ ನಂ: ಕೆಎ-27. ಇಎಮ್-9258 ನೇದ್ದರಲ್ಲಿ ಹಾನಗಲ್ಲಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಸಂಜೆ 06-00 ಘಂಟೆ ಸುಮಾರಿಗೆ ಬರುವಾಗ ಹಾನಗಲ್ಲ-ಹಾವೇರಿ ರಸ್ತೆ ಸಿಂಗಾಪೂರ ಗ್ರಾಮದ ಗುಡ್ಡಪ್ಪ ಬಡಿಗೇರ ಇವರ ಜಮೀನಿನ ಹತ್ತಿರ ರಸ್ತೆಯ ಎಡ ಬದಿಯಲ್ಲಿ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ಅನ್ನು ಅತೀ ವೇಗವಾಗಿ ನೀರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿದ್ದ ಮುಳ್ಳಿನ ಕಂಟೆಗೆ ಹೋಗಿ ಬಿದ್ದು ಮೂಗಿನಲ್ಲಿ ರಕ್ತ ಬಂದು ಹೊಟ್ಟೆ ಹಾಗೂ ಎದೆಗೆ ಬಲವಾದ ಒಳ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:114/2021 ಕಲಂ: 506,498A,504,306,323 IPC.

              ರೋಶನ್ಬಾನು ಕೊಂ ಮುಸ್ತಾಕಅಹ್ಮದ ಮನ್ನಂಗಿ ವಯಾ: 30 ಸಾ|| ಹುರಳಿಕುಪ್ಪಿ ಇವಳಿಗೆ ಇವಳ ಗಂಡ ಮುಸ್ತಾಕಅಹಮದ್ ಗುಡುಸಾಬ್ ಮನ್ನಂಗಿ ಇತನು ಮದುವೆ ನಂತರ ಒಂದು ವರ್ಷ ಚನ್ನಾಗಿ ನೋಡಿಕೊಂಡಿದ್ದು, ನಂತರ ಅವಳ ಮೇಲೆ ಸಂಶಯ ಪಡುತ್ತಾ ಸಾರಾಯಿ ಕುಡಿದು ಬಂದು ಹೊಡಿಬಡಿ ಮಾಡುತ್ತಾ ನೀನು ಸರಿಯಿಲ್ಲ, ನೀನು ಯಾರದೋ ಜೊತೆ ಸಂಬಂಧ ಇಟ್ಟುಕೊಂಡಿ ಅಂತಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದು, ಇವನಿಗೆ ಸಾಕಷ್ಟು ಬಾರಿ ಬುದ್ದಿವಾದ ಹೇಳಿದರೂ ಕೇಳದೇ ಪದೇ ಪದೇ ಹೊಡಿಬಡಿ ಮಾಡುತ್ತಾ, ನೀನು ಇದ್ದರೂ ಅಷ್ಟೆ, ಸತ್ತರೂ ಅಷ್ಟೆ, ನೀನು ಸತ್ತರೇ ನಾನು ಬೇರೆ ಮದುವೆ ಆಗಿ ಸುಖವಾಗಿ ಇರುತ್ತೇನೆ ಅನ್ನುತ್ತಾ ಕಿರುಕುಳ ನೀಡುತ್ತಿದ್ದು ದಿ: 09-07-2021 ರಂದು ರೋಶನ್ಬಾನು ಇವಳಿಗೆ ಹೊಡಿಬಡಿ ಮಾಡಿದ್ದರಿಂದ ಅವಳು ಕಿರುಕುಳ ತಾಳಲಾರದೇ ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ: 09-07-2021 ರಂದು 10-00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿ ಉರುಲು ಹಾಕಿಕೊಂಡು ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ರಾಜಶೇಖರ ತಂದೆ ಹೊಳಬಸಪ್ಪ ಹಾರೋಮುಚಡಿ, ವಯಾ-30 ವರ್ಷ, ಜಾತಿ-ಹಿಂದೂ ಲಿಂಗವಂತ, ಉದ್ಯೋಗ-ಕೃಷಿ ಕೆಲಸ, ಸಾ; ಬೆಟಕೇರೂರ, ತಾ; ಹಿರೇಕೆರೂರ ಇವನಿಗೆ 03 ವರ್ಷದಿಂದ ಚರ್ಮದ ಖಾಯಿಲೆ ಇದ್ದು ಇದರಿಂದ ಮೈ ಕಡಿತ ಬಂದು ಮೈ ಉಜ್ಜಿದಾಗ ಮೈ ತುಂಬ ಗಾಯಗಳಾಗಿ ಉರಿಯುತ್ತಿದ್ದು ಈ ಬಗ್ಗೆ ಹಾವೇರಿ, ರಾಣೆಬೆನ್ನೂರ, ಹಂಸಭಾವಿ ಕಡೆಗಳಲ್ಲಿ ಆಸ್ಪತ್ರೆಗೆ ತೋರಿಸಿದರೂ ಸಹ ಗುಣಮುಖವಾಗದೆ ಇದ್ದ ಕಾರಣಕ್ಕೆ ಮನಸ್ಸಿಗೆ ಬೇಜಾರ ಮಾಡಿಕೊಂಡು ಸರಾಯಿ ಕುಡಿಯುವ ಚಟಕ್ಕೆ ಬಿದ್ದು, ಚರ್ಮದ ಖಾಯಿಲೆ ಮತ್ತು ಮೈ ಕಡಿತವನ್ನು ತಾಳಲಾರದೆ ಸರಾಯಿ ಕುಡಿದ ನಶೆಯಲ್ಲಿ ದಿನಾಂಕ; 08-07-2021 ರಂದು ಮಧ್ಯಾಹ್ನ 2-00 ಗಂಟೆಗೆ ಬೆಟಕೇರೂರ ಗ್ರಾಮದ ತನ್ನ ಜಮೀನದಲ್ಲಿನ ಬೋರಿನ ಮನೆಯಲ್ಲಿ ಯಾವುದೋ ವಿಷದ ಎಣ್ಣಿಯನ್ನು ಕುಡಿದಿದ್ದು. ಆಗ ಉಪಚಾರಕ್ಕೆ ಹಿರೇಕೆರೂರ ಸರಕಾರಿ ಆಸ್ಪತ್ರೆ ಮತ್ತು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ ಮಾಡಿ ಉಪಚಾರ ಕೊಡಿಸುವಾಗ ದಿನಾಂಕ; 09-07-2021 ರಂದು ರಾತ್ರಿ 11-30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಹಾಗೂ ಮೃತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 16-07-2021 06:54 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ