ಅಭಿಪ್ರಾಯ / ಸಲಹೆಗಳು

 

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:35/2021 ಮಹಿಳೆ ಕಾಣೆ.

                ಕುಮಾರಿ: ಶೃತಿ ತಂದೆ ಕರಿಯಪ್ಪ ಚೌವಡಿ ವಯಾ:19 ವರ್ಷ, ಜಾತಿ: ಹಿಂದೂ ಕುರುಬ, ಉದ್ಯೋಗ:ಬಟ್ಟೆ ಅಂಗಡಿಯಲ್ಲಿ ಕೆಲಸ, ವಾಸ:ಕವಲೆತ್ತು, ತಾ: ರಾಣೆಬೆನ್ನೂರು ಇವಳು ದಿನಾಂಕ:09-06-2021 ರಂದು ರಾತ್ರಿ 08-00 ಗಂಟೆಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ಕವಲೇತ್ತು ಗ್ರಾಮದ ವಾಸದ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಹಾಗೂ ಕವಲೇತ್ತು ಗ್ರಾಮದ ನಾಗರಾಜ ತಂದೆ ಹನುಮಂತಪ್ಪ ಮಣಿಗೇರ ಇವನೊಂದಿಗೆ ಹೋಗಿರುವ ಸಂಶಯವಿದ್ದು ಕಾಣೆಯಾದ  ನನ್ನ ಮಗಳು ಶೃತಿ  ಇವಳಿಗೆ ಹುಡುಕಿಸಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:93/2021 ಮಹಿಳೆ ಕಾಣೆ.

                ಕು||ಸವಿತಾ ತಂದೆ ಹುಲಿಯಪ್ಪ ಏಡಿಯವರ ವಯಾ.15 ವರ್ಷ 5 ತಿಂಗಳು ಉದ್ಯೋಗ:ವಿಧ್ಯಾರ್ಥಿ ಸಾ||ತಿಳುವಳ್ಳಿ ತಾ||ಹಾನಗಲ್ಲ ಇವಳು ತಿಳುವಳ್ಳಿ ಗ್ರಾಮದ ಸಿದ್ದರಾಮೇಶ್ವರ ಹೈಸ್ಕೂಲನಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಇವಳು ದಿನಾಂಕ : 08/05/2021 ರಂದು ಮುಂಜಾನೆ 06 ಘಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಅಥವಾ ಯಾರೋ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಮಂಜಮ್ಮಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021 ವ್ಯಕ್ತಿ ಸಾವು.

                 ಮಂಜು ತಂದೆ ಮಲ್ಲೇಶ ನಿಂಗನಗೌಡ್ರ ವಯಾ-26 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ವಿದ್ಯಾರ್ಥಿ ಸಾ|| ರಾಘವೇಂದ್ರ ಕಾಲೋನಿ ಹಿರೇಕೆರೂರು ಈತನು ದಿನಾಂಕ : 03-06-2021 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ತಮ್ಮ ವಾಸದ ಮನೆಯಲ್ಲಿಯ ಅಡಿಗೆ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಲೀಕ್ ಆಗಿದ್ದು ಅದನ್ನು ಬಂದ್ ಮಾಡಲು ಅಂತಾ ಹೋದಾಗ ಅದು ಆಕಸ್ಮಾತ್ ದೇವರ ರೂಮಿನಲ್ಲಿದ್ದ ದೀಪದಿಂದ ಬೆಂಕಿ ಹತ್ತಿ ಮೃತನಿಗೆ ಬೆಂಕಿ ಹತ್ತಿ ಸುಟ್ಟ ಗಾಯಗಳಾಗಿದ್ದು ಗಾಯಾಳುವಿಗೆ ಉಪಚಾರಕ್ಕೆ ಹಿರೇಕೆರೂರು ಹಾಗೂ ಹಾವೇರಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ಹೆಚ್ಚಿನ ಉಪಚಾರಕ್ಕೆ ಅಂದೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಚೇತರಿಸಿಕೊಳ್ಳದೇ ದಿನಾಂಕ ; 10-06-2021 ರಂದು ಮುಂಜಾನೆ 10-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

                 ನಾಗಮ್ಮ ಕೋಂ  ನಾಗಮ್ಮ ಕೌದಿ ವಯಾ:78 ಸಾ|| ಹಿರೇಮಣಕಟ್ಟಿ ಇವಳಿಗೆ ಸುಮಾರು ವರ್ಷಗಳಿಂದ ಮೈಯಲ್ಲಿ  ಹುಷಾರ ಇರಲಿಲ್ಲ, ಮತ್ತು ವಯಸ್ಸಾಗಿದ್ದು ಮನೆಯಲ್ಲಿ  ಒಬ್ಬಳೆ ವಾಸವಾಗಿದ್ದು, ಅವಳಿಗೆ ಆಗಾಗ ಹೊಟ್ಟೆ ನೋವು ಬರುತ್ತಿದ್ದು ಈ ಬಗ್ಗೆ ದವಾಖಾನೆಗೆ ತೋರಿಸಿದ್ದು  ಸರಿಯಾಗಿ ಗುಣಮುಖವಾಗಿರಲಿಲ್ಲಾ ಹಾಗೂ ಆಸ್ಪತ್ರೆಗೆ ತೋರಿಸುವವರು ಯಾರು ಇಲ್ಲಾ ಅಂತಾ  ಮತ್ತು ತನ್ನ ಮಗಳಿಗೆ ಕೋರಾನಾ ರೋಗ ಬಂದಿದ್ದು ಇವೆಲ್ಲ ಸಂಗತಿಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನಷ್ಟಕ್ಕೆ ತಾನೆ ತಮ್ಮ ವಾಸದ ಮನೆಯಲ್ಲಿ  ದಿನಾಂಕಃ-10/06/2020 ರಂದು ಮುಂಜಾನೆ 08-00 ಗಂಟೆಗೆ ಕಬ್ಬಿಣದ ಪೈಪಿಗೆ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮರಣಹೊಂದಿದ್ದು, ಅವಳ ಮರಣದಲ್ಲಿ ಬೇರೆ ಯಾರ ಮೇಲೆ ಸಂಶಯಯ ಇರುವುದಿಲ್ಲಾ ಅಂತಾ ಲಕ್ಷ್ಮೀ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:26/2021 ಮಹಿಳೆ ಆತ್ಮಹತ್ಯೆ.

                 ಕಾವ್ಯಾ ತಂದೆ ಮಂಜಪ್ಪ ಬಣಕಾರ ವಯಾ-19 ವರ್ಷ. ಜಾತಿ-ಹಿಂದೂ-ಲಿಂಗವಂತಉದ್ಯೋಗ-ಮನೆ ಕೆಲಸ  ಸಾ-ಗುಮ್ಮನಹಳ್ಳಿ ತಾ-ಬ್ಯಾಡಗಿ ಇವಳಿಗೆ ಈಗ 3-4 ವರ್ಷಗಳಿಂದ ತಿಂಗಳು ಮುಟ್ಟಿನ ಕಾಲಕ್ಕೆ ವಿಪರೀತ ಹೊಟ್ಟೆನೊವು ಬರುತ್ತಿದ್ದರಿಂದ ಅನೇಕ ಕಡೆಗಳಲ್ಲಿ ಗಾವಟಿ ಔಷದಿ [ಗಿಡಮೂಲಕೆ] ಯನ್ನು ಕೊಡಿಸಿದರೂ ಸಹಾ ಗುಣವಾಗದೇ ಇದ್ದುದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದು ದಿನಾಂಕ:08-06-2021 ರಂದು ಸಂಜೆ 5-00 ಗಂಟೆ ಸುಮಾರಿಗೆ ಮನೆಯ ಹಿತ್ತಲದಲ್ಲಿ ತನ್ನಷ್ಟಕ್ಕೆ ತಾನೇ ಸಿಮೇ ಎಣ್ಣಿಯನ್ನು ಮೈಮೇಲೆ ಸುರವಿಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟಗಾಯಗಳಾಗಿ ಉಪಚಾರಕ್ಕೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಚ್ಚಿನ ಉಪಚಾರಕ್ಕೆ ದಾವಣಗೇರಿ ಆರೈಕೆ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲ ಮಾಡಿದಾಗ ದಿನಾಂಕ: 10-06-2021 ರಂದು ಮುಂಜಾನೆ 08-00 ಗಂಟೆಗೆ ಮರಣ ಹೊಂದಿರುತ್ತಳೆ ವಿನಹ ನನ್ನ ಮಗಳ ಸಾವಿನಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲಾ ಅಂತಾ ಮೃತಳ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 16-06-2021 04:12 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080