ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:34/2021ಮಹಿಳೆ ಕಾಣೆ.

                 ಶ್ರೀಮತಿ ಅಡಿವೆಕ್ಕ ಗಂಡ ಚನ್ನಪ್ಪಾ ಕಬ್ಬೂರ ವಯಾ-80 ವರ್ಷ ಇವರು ದಿನಾಂಕ : 08-05-2021 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಿಂದ ಕೋವಿಡ್ ಉಪಚಾರ ಹೊಂದಿ ದೇವಿಹೋಸೂರ ಗ್ರಾಮಕ್ಕೆ ಒಂದು ಆಟೋದಲ್ಲಿ ಹತ್ತಿಸಿ ದೇವಿಹೋಸುರ ಗ್ರಾಮಕ್ಕೆ ಕಳಿಸಿದ್ದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ತನ್ನ  ವಾಸದ ಮನೆಗೆ ಹೋಗಿದ್ದು ದಾನೇಶ್ವರಿ ಇವರ ಅಣ್ಣ ಹಾಗೂ ಅತ್ತಿಗೆ ಮನೆಯಲ್ಲಿ ಅಡಿವೆಕ್ಕ ಇವಳಿಗೆ ಕರೆದುಕೊಳ್ಳದ್ದರಿಂದ ಅದನ್ನೆ ಮನಸ್ಸಿಗೆ ಬೇಜಾರ ಮಾಡಿಕೊಂಡು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ಅಡಿವೇಕ್ಕ ಇವರನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:86/2021 ಕಲಂ: 279, 337, 304(A) IPC.

                ಪೃಥ್ವಿರಾಜ.ಎಸ್. ತಂದೆ ಸುಬ್ರಮಣ್ಯ.ಆರ್ ವಯಾ:26 ವರ್ಷ ಜಾತಿ:ಹಿಂದೂ ದಾರೋಡ್ ಉದ್ಯೋಗ:ಆಟೋ ಚಾಲಕ ಸಾ||ರಿಪ್ಪನಪೇಟೆ ತಾ||ಹೊಸನಗರ ಜಿಲ್ಲಾ||ಶಿವಮೊಗ್ಗ ಈತನು ತನ್ನ ಬಾಬತ್ತ ಮಹಿಂದ್ರಾ ಗೂಡ್ಸ್ ಆಟೋ ನಂಬರ ಕೆಎ-15/ಎ-5689 ನೇದ್ದರಲ್ಲಿ ಆತನ ಸ್ನೇಹಿತನಾದ ಹರೀಶ ತಂದೆ ತಿಮ್ಮಣ್ಣ ವಡ್ಡರ ವಯಾ:20 ವರ್ಷ ಜಾತಿ:ಹಿಂದೂ ಭೋವಿ ಉದ್ಯೋಗ:ಕೂಲಿಕೆಲಸ ಸಾ||ನಿಡನೇಗಿಲು ತಾ||ಹಿರೇಕೆರೂರ ಜಿಲ್ಲಾ||ಹಾವೇರಿ ಈತನಿಗೆ ಕರೆದುಕೊಂಡು ದಿನಾಂಕ:-10/05/2021 ರಂದು ಬೆಳಗಿನ ಜಾವ:03-30 ಗಂಟೆಯಿಂದ 04-00 ಗಂಟೆಯ ನಡುವಿನ ಅವಧಿಯಲ್ಲಿ ಸಮ್ಮಸಗಿ ತಿಳುವಳ್ಳಿ ರಸ್ತೆಯ ಮೇಲೆ ಕ್ಯಾಸನೂರ ಗ್ರಾಮದ ಕಡೆಯಿಂದ ಚಿಕ್ಕಾಂಶಿ ಹೊಸೂರ ಕಡೆಗೆ ಅತೀಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಆಟೋವನ್ನು ಚಲಾಯಿಸಿಕೊಂಡು ಹೋಗಿ ಕ್ಯಾಸನೂರ ಗ್ರಾಮದ ಹತ್ತಿರ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಲಬದಿಗೆ ಇದ್ದ ಒಂದು ಮರಕ್ಕೆ ಆಟೋವನ್ನು ಡಿಕ್ಕಿಮಾಡಿ ಅಪಘಾತಪಡಿಸಿ ಆಟೋದಲ್ಲಿದ್ದ ಹರೀಶ ವಡ್ಡರ ಈತನಿಗೆ ಬಲಹಣೆಗೆ, ಬಲಕಣ್ಣಿನ ಹತ್ತಿರ, ಬೆನ್ನಿಗೆ, ಬೆನ್ನಿಗೆ, ಕೈಕಾಲುಗಳಿಗೆ ರಕ್ತಗಾಯಗಳು ಆಗುವಂತೆ ಮಾಡಿದ್ದು ಅಲ್ಲದೇ ತಾನು ತನಗೆ ಹಿಂದೆಲೆಗೆ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ಯುವತಿ ಸಾವು.

                ಸೌಜನ್ಯ  ತಂದೆ ಶಿದ್ದನಗೌಡ ಪಾಟೀಲ ವಯಾ 15 ವರ್ಷ, ಸಾಃಬೇಲೂರು ಇವರು ದಿನಾಂಕಃ09-05-2021 ರಂದು 17-30 ಗಂಟೆ ಸುಮಾರಿಗೆ ಬೇಲೂರು ಗ್ರಾಮದ ಹತ್ತಿರ ಇರುವ ತುಂಗಭದ್ರಾ ನದಿಯ ಜಪದ ಕಲ್ಲಮ್ಮನ ಮಡದ ಹತ್ತಿರ ತನ್ನ ತಾಯಿಯೊಂದಿಗೆ ಭಟ್ಟೆ ತೋಳೆಯಲು ಹೋಗಿ ಭಟ್ಟೆ ತೋಳೆಯುವ ಕಾಲಕ್ಕೆ ಒಂದು ಭಟ್ಟೆ ನೀರಿನಲ್ಲಿ ಹೋಗಿದ್ದರಿಂದ ಅದನ್ನು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಮುಳುಗಿ ಮೃತ ಪಟ್ಟು ದಿನಾಂಕಃ10-05-2021 ರಂದು 12-15 ಗಂಟೆಗೆ ಮೃತ ದೇಹ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 11-05-2021 06:00 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ