ಅಭಿಪ್ರಾಯ / ಸಲಹೆಗಳು

     ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:23/2021 ಕಲಂ: INDIAN MOTOR VEHICLES ACT,  

       988 (U/s-134(A&B),187); 279, 304A IPC.

         ದಿನಾಂಕ; 10-04-2021 ರಂದು ಸಂಜೆ 06-45 ಗಂಟೆ ಸುಮಾರಿಗೆ ಶರಣಪ್ಪ ಹತ್ತಿಕೊಟಿ ಸಾ|| ಹತ್ತಿಮತ್ತೂರ  ಹಾಗೂ ಅವರ ಹೆಂಡತಿಯ ಅಕ್ಕ ವಿಜಯಲಕ್ಷ್ಮಿ ಇವರು ಕೂಡಿ ಯುಗಾದಿ ಹಬ್ಬದ ಸಲುವಾಗಿ ಹಂದಿಗನೂರಿಗೆ ಹೋಗುವ ಸಲುವಾಗಿ ಮೋಟಾರ ಸೈಕಲ್ಲ ನಂಬರ ಕೆ.-27/ಇ.ಹೆಚ್-3738 ನೇದ್ದರಲ್ಲಿ ವಿಜಯಲಕ್ಷ್ಮಿ ಇವರನ್ನು ಹಿಂದೆ ಹತ್ತಿಸಿಕೊಂಡು ಮೋಟಾರ ಸೈಕಲ್ಲನ್ನು ನಡೆಸಿಕೊಂಡು ಹೊಸರಿತ್ತಿಯಿಂದ ಹಂದಿಗನೂರ ಕ್ರಾಸ ದಾಟಿ ಮುಂದೆ ಹಂದಿಗನೂರ ಸಮೀಪ ರಸ್ತೆ ಎಡಬದಿಯಲ್ಲಿ ನಿಧಾನವಾಗಿ ಹೋಗುತ್ತಿರುವಾಗ, ಎದುರಿನಿಂದ ಗಾಡಿ ಬಂದಿದ್ದನ್ನು ನೋಡಿ ಆ ಗಾಡಿಯ ಚಾಲಕನಿಗೆ ಕೈ ಮಾಡಿ ಸಾವಕಾಶ ಬರಲು ಸೂಚಿಸಿ, ಮೋಟರ ಸೈಕಲ್ಲನ್ನು ಸೈಡಿನಲ್ಲಿ ನಿಲ್ಲಿಸಿ ಟಿಪ್ಪರ ಲಾರಿ ದಾಟಿದ ನಂತರ ಹೋದರಾಯಿತು ಅಂತಾ ನಿಲ್ಲಿಸಿದ್ದು ಆಗ ಟಿಪ್ಪರ ಲಾರಿ ನಂಬರ ಕೆ.-17/ಬಿ-9748 ನೇದ್ದರ ಚಾಲಕನು ಜೋರಾಗಿ ವ ನಿರ್ಲಕ್ಷತನದಿಂದ ಜನರಿಗೆ ಅಪಾಯವಾಗುವಂತೆ ನಡೆಸಿಕೊಂಡು ಬಂದು ಮೋಟಾರ ಸೈಕಲ್ಲ ಹಿಂದೆ ಇರುವ ಕಬ್ಬಿಣದ ಸೈಡಿನ ಬಾಕ್ಸಗೆ ತಾಗಿಸಿ ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ಲ ಹಿಂದೆ ಕುಳಿತ ವಿಜಯಲಕ್ಷ್ಮಿ ಇವರು ಬಲಗಡೆ ಸೈಡಿನಲ್ಲಿ ಬಿದ್ದಿದ್ದರಿಂದ ಟಿಪ್ಪರ ಲಾರಿಯ ಹಿಂದಿನ ಗಾಲಿ ಅವಳ ಕುತ್ತಿಗೆಯ ಮೇಲೆ ಹಾಯ್ದು ಹೋಗಿ ಅವಳ ತಲೆಗೆ, ಕುತ್ತಿಗೆಯಲ್ಲಿ ಹಾಗೂ ಇತರೆ ಕಡೆಗೆ ಗಾಯಗಳಾಗಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದಲ್ಲದೆ, ವಿಷಯವನ್ನು ಠಾಣೆಗೆ ತಿಳಿಸದೆ, ಗಾಯಾಳುವಿನ ಉಪಚಾರಕ್ಕೆ ಸಹಕರಿಸದೆ ಹಾಗೆ ಓಡಿ ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:55/2021 ಮಹಿಳೆ ಕಾಣೆ.

ದಿನಾಂಕ;06-03-2021 ರಂದು ಮುಂಜಾನೆ 05-30 ಗಂಟೆ ಸುಮಾರಿಗೆ ದುರಗವ್ವ ಇವಳು ತನ್ನ ಮಗಳು ಸುನಿತಾ ವಯಾ: 07 ವರ್ಷ, ಮಗಾ ಗುಡ್ಡಪ್ಪ ವಯಾ: 05 ವರ್ಷ ಇವರಿಗೆ ಕರೆದುಕೊಂಡು ಬ್ಯಾಡಗಿಗೆ ಮೇಣಸಿನಕಾಯಿ ತುಂಬು ತೆಗೆಯುವ ಕೂಲಿ ಕೆಲಸಕ್ಕೆ ಹೋಗುತ್ತೆನೆ ಅಂತಾ   ಹೇಳಿ ಹೋದವಳು  ಈವರೆಗೂ ಮರಳಿ ಮನೆಗೆ ಬಾರದೇ ಇರುವದರಿಂದ  ಇವರಿಗೆ  ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಕಾರಣ ಕಾಣೆಯಾದ ನನ್ನ ಹೆಂಡತಿ ದುರಗವ್ವ ಮಕ್ಕಳಾದ ಸುನಿತಾ ಮತ್ತು ಗುಡ್ಡಪ್ಪ  ಇವರನ್ನು ಹುಡುಕಿಕೊಡಬೇಕು ಅಂತಾ ಪುಟ್ಟಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನ ತನಿಖೆ ಕೈಗೊಳ್ಳಲಾಗಿದೆ.

ಕಾಗಿನೇಲೆ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಮಂಜಪ್ಪ ತಂದೆ ನಾಗಪ್ಪ ಕರಡೇರ ವಯಾ 45 ವರ್ಷ ಜಾತಿ-ಹಿಂದು ಕುರುಬ ಉದ್ಯೋಗ-ವ್ಯವಸಾಯ ಸಾಃ ಕಳಗೊಂಡ ಇತನು ಕೃಷಿ ಚಟುವಟಿಕೆ ಸಲುವಾಗಿ ಬ್ಯಾಡಗಿ ಎಸ್.ಬಿ.ಐ ನಲ್ಲಿ ಸುಮಾರು 3 ವರ್ಷಗಳ ಹಿಂದೆ 3,50,000/- ರೂ ಸಾಲ ತೆಗೆದುಕೊಂಡಿದ್ದು, ಇದಲ್ಲದೇ ಅದೇ ಬ್ಯಾಂಕಿನಲ್ಲಿ  2,50,000/- ರೂ ಗಳನ್ನು ಸಾಲ ಪಡೆದುಕೊಂಡಿದ್ದ, ಅಲ್ಲಲ್ಲಿ ಕೈಗಡ ಸಾಲ ಮಾಡಿಕೊಂಡಿದ್ದ ಈ ಪ್ರಕಾರ ಸಾಲ ಮಾಡಿದ್ದು ಸದರಿ ಸಾಲವನ್ನು ತೀರಿಸಲಾಗದೆ ಇತ್ತಿಚೆಗೆ ಸಾಲದ ಬಗ್ಗೆ ಚಿಂತೆ ಹಚ್ಚಿಕೊಂಡು ಸರಿಯಾಗಿ ಊಟ. ನಿದ್ರ ಮಾಡುತ್ತಿರಲಿಲ್ಲಾ ಸದರಿ ಸಾಲದ ಬಾದೆಯಿಂದ ಬೇಸತ್ತು ದಿನಾಂಕಃ-10-04-2021 ರಂದು ಮುಂಜಾನೆ 05-30 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯ ಬಚ್ಚಲ ಮನೆಯಲ್ಲಿ ತೊಲೆಗೆ ಹಗ್ಗದಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ನವೀನ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 14-04-2021 10:12 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080