ಅಭಿಪ್ರಾಯ / ಸಲಹೆಗಳು

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:17/2021 ಮಹಿಳೆ ಕಾಣೆ.

                ಕುಮಾರಿಃ-ಅಕ್ಷತಾ ತಂದೆ ನಾಗಪ್ಪ ಕುಮ್ಮೂರ ವಯಾ 19 ವರ್ಷ ಸಾ||ದೂಳಿಕೊಪ್ಪ ಇವಳು ದಿನಾಂಕಃ-09-03-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕಃ-10-03-2021 ರಂದು ಮುಂಜಾನೆ 6-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಮಲಗಿಕೊಂಡಿದ್ದು, ನಂತರ ಯಾರಿಗೂ ಏನನ್ನು ಹೇಳದೆ ಕೇಳದೆ ಮನೆಯಿಂದ ಹೊರಗೆ ಹೊದವಳು ಈ ವರೆಗೂ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಅವಳಿಗೆ ಈ ವರೆಗೆ ಹುಡುಕಾಡಿದರು ಸಿಗದ್ದರಿಂದ ಕಾಣೆಯಾದ ಅಕ್ಷತಾ ಇವಳನ್ನು ಹುಡುಕಿಕೊಡುವಂತೆ ಬಸವರಾಜ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:30/2021 ಮಹಿಳೆ ಕಾಣೆ.

                 ಕುಃ ನಂದಾ ತಂದೆ ಭೀಮಪ್ಪ ಹುಲ್ಲತ್ತಿ ವಯಾ: 21 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ವಿದ್ಯಾಬ್ಯಾಸ, ಸಾ: ಶಿರಗಂಬಿ, ತಾ:ರಟ್ಟಿಹಳ್ಳೀ ಇವಳು ದಿನಾಂಕ: 08-03-2021 ರಂದು ಬೆಳಗಿನ ಜಾವ 05-00 ಗಂಟೆಗೆ ಶಿರಗಂಬಿ ಗ್ರಾಮದ ವಾಸದ ಮನೆಯಿಂದ ತಮ್ಮ ಹಿತ್ತಲ ಜಾಗೆಗೆ ಬರ್ಹಿದೆಸೆಗೆ ಅಂತಾ ಹೋದವಳು ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ನನ್ನ ಮಗಳು ನಂದಾ ಹುಲ್ಲತ್ತಿ ಇವಳು ದುಂಡುಮುಖ, ನೀಟಾದ ಮೂಗೂ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು ಮನೆಯಿಂದ ಹೋಗುವಾಗ ಬಿಳಿಬಣ್ಣದ ಚೂಡಿದಾರ ಧರಿಸಿದ್ದು ಕಾಣೆಯಾಗಿ ಹೋದ ನನ್ನ ಮಗಳನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕಾಣೆಯಾದ ನಂದಾಳ ತಂದೆ ಬೀಮಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2021 ವ್ಯಕ್ತಿ ಆತ್ಮಹತ್ಯೆ.

                 ಚಂದ್ರಶೇಖರಗೌಡ ಪಾಟೀಲ ವಯಾ: 55 ಸಾ|| ಅತ್ತಿಗೇರಿ ತಾ|| ಶಿಗ್ಗಾವಿ ಇವರು ತನ್ನ ಹೆಸರನಲ್ಲಿ ಕೃಷಿ ಸಂಬಂಧ ವಿಜಯ ಬ್ಯಾಂಕ (ಬ್ಯಾಂಕ ಆಪ್ ಬರೋಡಾ) ಹುಲಗೂರ ಶಾಖೆಯಲ್ಲಿ ದಿನಾಂಕಃ-20/06/2016  ರಂದು ಸುಮಾರು 300000/- ರೂಪಾಯಿಗಳು ಮತ್ತು ತನ್ನ ಹೆಂಡತಿಯ ಹೆಸರನಲ್ಲಿ 300000/- ರೂಪಾಯಿಗಳು ಮತ್ತು 350000/-ರೂ ಕೈಗಡ ಸಾಲ ಹೀಗೆ ಒಟ್ಟುಃ-950000/-ರೂ ಸಾಲ  ಮಾಡಿದ್ದು, ಕಳೇದ 3-4  ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಮತ್ತು ಹಿಂದಿನ ವರ್ಷ ಮಳೆ ಜಾಸ್ತಿಯಾಗಿ ಬೆಳೆ ಹಾಳಾಗಿದ್ದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ: 09-03-2021 ರ ರಾತ್ರಿ 07-30  ಗಂಟೆಯಿಂದ ದಿನಾಂಕಃ-10-03-2021 ಮುಂಜಾನೆ 07-00  ಗಂಟೆಯ ನಡುವಿನ ಅವಧಿಯಲ್ಲಿ ಅತ್ತಿಗೇರಿ ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿ ಬಿದ್ದು  ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ವ್ಯಕ್ತಿ ಸಾವು.

                 ಫಕ್ಕೀರಪ್ಪ ತಂದೆ ದ್ಯಾಮಣ್ಣ ವಡ್ಡರ ವಯಾ: 59 ವರ್ಷ ಜ್ಯಾತಿ: ಹಿಂದೂ ವಡ್ಡರ, ಉದ್ಯೋಗ: ಒಕ್ಕಲುತನ ಸಾ: ನಿಸ್ಸೀಮ ಆಲದಕಟ್ಟಿ ತಾ: ಹಾನಗಲ್ಲ ಜಿ: ಹಾವೇರಿ ಇವರು  ದಿನಾಂಕ: 09/03/2021 ರಂದು ರಾತ್ರಿ 10-00 ಗಂಟೆಯಿಂದಾ ದಿ: 10/3/2021ರಂದು ಮುಂಜಾನೆ 10-00 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಜಮೀನು ರಿ.. ನಂ: 144 ನೇದ್ದರ ಜಮೀನಿನ ಬಾಜು ಇರುವ   ಬೆಳವತ್ತಿಯ ಹದ್ದಿ ಪೈಕಿ ಬೆಳಗಾಲ ಕರೆಯಲ್ಲಿ ನೀರಿನಲ್ಲಿ ಬಿಟ್ಟ ಬಲೆಯಲ್ಲಿ ಮೀನುಗಳನ್ನು ಹಿಡಿಯಲು  ಹೋದಾಗ  ಆಕಸ್ಮಿಕವಾಗಿ  ಕಾಲು ಜ್ಯಾರಿ ನೀರಿನಲ್ಲಿ ಬಿದ್ದು ಈಜು ಬಾರದೇ  ಉಸಿರುಗಟ್ಟಿ ಮೃತಪಟ್ಟಿರುತ್ತಾರೆ  ವಿನಃ ನನ್ನ ತಂದೆಯ ಮರಣದಲ್ಲಿ ಬೇರೆ ಏನು ಸಂಶಯ ಇರುವದಿಲ್ಲಾ ಅಂತಾ ಮೃತನ ಮಗನು  ಕೊಟ್ಟಿದ್ದರ  ವರದಿಯ ಮೇರೆಗೆ   ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 11-03-2021 01:21 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080