ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:86/2021 ಕಲಂ: 379 IPC.

                     ಹಾವೇರಿ ಶಹರ ಪೊಲೀಸ್ ಠಾಣಾ ಹದ್ದಿನ ಪೈಕಿ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದ ಎಡಭಾಗದದಲ್ಲಿ ದಿನಾಂಕ 04/09/2021 ರಂದು ರಾತ್ರಿ ಸುಮಾರು 09.00 ಗಂಟೆಯಿಂದ ದಿನಾಂಕ 05/09/2021 ರಂದು ಬೆಳಿಗ್ಗೆ ಸುಮಾರು 06.00 ಗಂಟೆಯ ನಡುವಿನ ಅವಧಿಯಲ್ಲಿ ಇಟ್ಟಿದ್ದ ಸುಭಾಸ ರವರ ಹೆಸರಲ್ಲಿದ್ದ ಹಿರೋ ಕಂಪನಿಯ ಮೋಟಾರ್ ಸೈಕಲ್ ನಂ;ಕೆಎ 27 ಡಬ್ಲೂ 7798, ಅ:ಕಿ 20,000/- ರೂ.ಗಳು ಇರುವ ಮಾಡಲ್ 10/2011 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:134/2021 ಕಲಂ: 457,380  IPC.

                     ದಿನಾಂಕಃ 08-09-2021 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕಃ 09-09-2021 ರಂದು ಬೆಳಿಗ್ಗೆ 07-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಮಕರಿ ಗ್ರಾಮದ ಹತ್ತಿರದ ರಟ್ಟೀಹಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲಿಯ ವಿಜಯ ಗಂಗೊಳ ಸಾ|| ಮಕರಿ ಇವರ ಜಮೀನಿನಲ್ಲಿ ಕುರಿ ಸಾಕಾಣಿಕೆ ಶೆಡ್ ಶೆಟ್ರಸ್ ಲಾಕ್ ಕೊರೆದು ಶೆಡ್ ದಲ್ಲಿದ್ದ ಒಟ್ಟು 23 ಮೇಕೆಗಳು  ತಲಾ 6000/- ರೂ ದಂತೆ ಅ.ಕಿ. 138000 ರೂಪಾಯಿ ಹಾಗೂ ಒಂದು ಟಗರು ಅ,ಕಿ, 7000 ರೂಪಾಯಿ ಹೀಗೆ ಒಟ್ಟು 145000 ರೂಪಾಯಿ ಕಿಮ್ಮತ್ತಿನ ಮಾಲುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ:148/2021 ಕಲಂ: 279,304(A) IPC.

                     ಬಾಬಾಜನಸಾಬ ರುಸ್ತುಮಸಾಬ ಹಕ್ಕಿ ಇತನು ತನ್ನ ಬಾಬತ್ ಮೋಟಾರ ಸೈಕಲ್ಲ ನಂಬರ ಕೆ,ಎ,59/ಇ-7689 ನೇದ್ದನ್ನು ದಿನಾಂಕ ; 08-09-2021 ರಂದು 13-45 ಗಂಟೆಗೆ ಹಿರೇಕೆರೂರು ಕಡೆಯಿಂದ ಚನ್ನಳ್ಳಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ರಸ್ತೆಯ ಬದಿಗೆ ಇರುವ ಶ್ರೀ ಬುಳ್ಳಾಪೂರ ದುರ್ಗಮ್ಮನ ದೇವಸ್ಥಾನದ ಹತ್ತಿರ ಗುಡ್ಡದತುಮ್ಮಿನಕಟ್ಟಿ ಗ್ರಾಮಕ್ಕೆ ಹೋಗಲು ವಾಹನಗಳನ್ನ ಕಾಯುತ್ತಾ ನಿಂತುಕೊಂಡಿದ್ದ ಮಮತಾಜಬೀ ಗಂಡ ಶೇಖಸಾಬ ಹುಲ್ಮನಿ ವಯಾ: 40 ವರ್ಷ, ಜಾತಿ ಮುಸ್ಲಿಂ ಉದ್ಯೋಗ ನಮೂದಿಲ್ಲ ಸಾ: ಉಕ್ಕುಂದ ತಾ: ರಾಣೆಬೆನ್ನೂರು. ಇವರ ಪೈಕಿ ಸವಾರನು ಮೋಟಾರ ಸೈಕಲ್ಲದಿಂದ ಡಿಕ್ಕಿ ಪಡಿಸಿ ರಸ್ತೆಗೆ ಬೀಳಿಸಿ ತಲೆಗೆ ಬಲವಾದ ಗಾಯ ಪಡಿಸಿ ಮರಣವನ್ನುಂಟು ಪಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೇಕೆರೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ:149/2021 ಕಲಂ: 279,304(A) IPC.

                     ಟಾಟಾ ಜಿಪ್ಸಿ ಗೂಡ್ಸ ಗಾಡಿ ನಂ ; ಕೆ,ಎ,27/ಬಿ-9226 ನೇದ್ದರ ಚಾಲಕ ಉಳ್ಳಾಗಡ್ಡಿ ತುಂಬಿಕೊಂಡು ಹಾಗೂ ರಹಮತ್ವುಲ್ಲಾ ತಂದೆ  ಅಬ್ದುಲಸತ್ತಾರಸಾಬ ಕಾಟೇನಹಳ್ಳಿ  ವಯಾ: 40 ವರ್ಷ, ಜಾತಿ: ಮುಸ್ಲಿಂ ಉದ್ಯೋಗ: ವ್ಯಾಪಾರ ಸಾ: ಹಲಗೇರಿ ಕಾಟೇನಹಳ್ಳಿ ಓಣಿ ತಾ: ರಾಣೆಬೆನ್ನೂರು  ಈತನಿಗೆ ಹಿಂದೆ ಕೂಡ್ರಿಸಿಕೊಂಡು ದಿನಾಂಕ ; 08-09-2021 ರಂದು 10-30 ಗಂಟೆಗೆ ಹಾರ್ನಳ್ಳಿ ಕಡೆಯಿಂದ ಬನ್ನಿಹಟ್ಟಿ ಕಡೆಗೆ ರಸ್ತೆಯ ತಿರುವಿನಲ್ಲಿ ಗಾಡಿಯನ್ನು ಅತೀ ಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ಗಾಡಿಯನ್ನು ಬಲಮಗ್ಗಲು ಕೆಳಗಾಗಿ ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿ ಗಾಡಿಯಲ್ಲಿ ಹಿಂದೆ ಕುಳಿತ ರೆಹಮತ್ತುಲ್ಲಾ ಇವನ ಮುಖಕ್ಕೆ ತಲೆಗೆ ಹೊಟ್ಟೆಗೆ ಕೈ ಕಾಲುಗಳಿಗೆ ಭಾರಿ ಗಾಯ ಪಡಿಸಿ ದುಖಾಃಪತ್ ಪಡಿಸಿದ್ದು  ಗಾಯಾಳುವಿಗೆ ಮಾಸೂರು ಸರಕಾರಿ ಆಸ್ಪತ್ರೆಯಲ್ಲಿ ಉಪಚರಿಸಿ ಹೆಚ್ಚಿನ ಉಪಚಾರಕ್ಕೆ ದಾವಣಗೇರಿ ಎಸ್,ಎಸ್,ಐ,ಎಂ,ಎಸ್, ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ಚೇತರಿಸಿಕೊಳ್ಳದೇ ದಿನಾಂಕ ; 09-09-2021 ರಂದು 15-00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-09-2021 06:27 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ