ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:107/2021 ಕಲಂ:INDIAN MOTOR  VEHICLES  ACT, 1988 (U/s-134(A&B),187). 279,338,304(A) IPC

              ಬ್ಯಾಡಗಿ ಪೊಲೀಸ ಠಾಣಾ ಹದ್ದಿ ಬ್ಯಾಡಗಿ-ಮಲ್ಲೂರ ರೋಡ ಮಂಜುನಾಥ ಮಾಯಾಚಾರಿ ಇವರ ಹೊಲದ ಹತ್ತೀರ ರಸ್ತೇಯ ಮೇಲೆ ದಿನಾಂಕ: 09-08-2021 ರಂದು ಸಂಜೆ 4-50 ಗಂಟೆ ಸುಮಾರಿಗೆ ಕಪ್ಪು ಬಣ್ಣದ ಎಚ್.ಎಫ್.ಡಿಲೇಕ್ಸ ಗಾಡಿ ನಂ. ತಿಳಿದು ಬಂದಿರುವದಿಲ್ಲಾ ನೇದ್ದರ  ಸವಾರನು ತನ್ನ  ಸೈಕಲ ಮೋಟರದ ಹಿಂದೆ ಶ್ರೀಮತಿ ಲೀಲಾವತಿ ಕೊಂ ಶಿವರಾಯಪ್ಪ ಸಾತಣ್ಣನವರ ವಯಾ: 38 ವರ್ಷ ಸಾ: ಕಳಗೊಂಡ  ಇವರಿಗೆ ಹಿಂದೆ ಕೂಡ್ರಿಸಿಕೊಂಡು ಬ್ಯಾಡಗಿ ಕಡೆಯಿಂದ ಮಲ್ಲೂರ ಕಡೆಗೆ ತಾನು ನಡೆಸುತ್ತಿದ್ದ ಸೈಕಲ್ ಮೊಟರನ್ನು ಅತೀಜೋರಾಗಿ ಮತ್ತು ನಿರ್ಲಕ್ಷ್ಯೆ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರಿತಿಯಲ್ಲಿ ನಡೆಸಿಕೊಂಡು ತನ್ನ ಹಿಂದೆ ಕುಳಿತ ಲಿಲಾವತಿ ಸಾತಣ್ಣನವರ ಇವರಿಗೆ ಸೈಕಲ ಮೋಟರ ದಿಂದ ಕೇಳಗೆ ಕೆಡವಿ ತಲೆಗೆ ಮುಖಕ್ಕೆ ಭಾರಿಗಾಯಗಳಾವಂತೆ ಮಾಡಿದ್ದು ಗಾಯಾಳುವಿಗೆ ಉಪಚಾರಕ್ಕೆ ಕರೆದುಕೊಂಡು ಹೋದಾಗ ಸಾಂಯಕಾಲ 5-20 ಗಂಟೆ ಮರಣಹೊಂದುವಂತೆ ಮಾಡಿದ್ದು ಅಲ್ಲದೆ ಗಾಯಾಳುವಿಗೆ ಉಪಚಾರಕ್ಕೆ ಕರೆದುಕೊಂಡು ಹೋಗದೆ ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೆ ವಾಹನ ಸಮೇತ ಪರಾರಿ ಆಗಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:160/2021 ಕಲಂ: The SC & ST (Prevention of Atrocities) Amendment Act 2015 (U/s-3(1)(r),3(2)(va)); 323,324,504,506 IPC.

              ಈರಪ್ಪ ಶೇಖಪ್ಪ ಅರಳೇ‍ಶ್ವರ ಸಾ|| ನೀಶಿಮಆಲದಕಟ್ಟಿ  ಇವನು ದಿನಾಂಕ : 08/08/2021 ರಂದು ಸಂಜೆ 06 ಘಂಟೆ ಸುಮಾರಿಗೆ ನಿಸ್ಸೀಂ ಆಲದಕಟ್ಟಿ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಗೆಳೆಯರ ಸಂಗಡ ಕ್ರೀಕೆಟ್ ಆಟವಾಡುತ್ತಿದ್ದಾಗ ರಾಘವೇಂದ್ರ ಜಗಧೀಶ ಕಟಗಿ ಸಾ|| ನೀಶಿಮಆಲದಕಟ್ಟಿ ಇವನು ಹೊಡೆದ ಬಾಲನ್ನು ಈರಪ್ಪ ಇವನು ಕ್ಯಾಚ ಹಿಡಿದದ್ದಕ್ಕೆ ಕೋಪಗೊಂಡ ರಾಘವೇಂದರ ಲೇ ಹಲ್ಕಾ ಸೂಳೆಮಗನೆ ನಾನು ಹೊಡೆದ ಚಂಡನ್ನು ಯಾಕೆ ಕ್ಯಾಚ ಹಿಡಿದಿಯ ತಳವಾರ ಮಿಂಡ್ರೀಮಗನೆ ಅಂತಾ ಅವಾಚ್ಯವಾಗಿ ಬೈದಿದ್ದು ಅಲ್ಲದೆ ಕೈಯಿಂದ ಹೊಡಿ ಬಡಿ ಮಾಡಿ ತನ್ನ ಕೈಯಲ್ಲಿದ್ದ ಬ್ಯಾಟನಿಂದ ಘಾಯಾಳುವಿನ ಎಡ ಪಕ್ಕೆಗೆ ತೊಡೆಗೆ ಬೆನ್ನಿಗೆ ಹೊಡೆದು ಒಳ ಪೆಟ್ಟು ಆಗುವಂತೆ ಮಾಡಿದ್ದು ಅಲ್ಲದೆ ಜೀವದ ದಮಕಿ ಹಾಕಿ ಜಾತಿ ನಿಂದನೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:19/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ರವಿ ಲೋಕೆಶ ಚವ್ವನವರ ವಯಾ: 22 ಸಾ||ಕಳಗೇರಿ ಈತನು ಚಿಕ್ಕದಿನಿಂದಲು ಬುದ್ದಿಮಾಂದೇನಾಗಿದ್ದು ಅವನನ್ನು ರಾಣೇಬೆನ್ನೂರಿನ ರುಕ್ಮೀಣಿ ಇವರ ಮನೆಯಲ್ಲಿ ಕೆಲಸಮಾಡಿಕೊಂಡು ಇರುವುವಂತೆ ಬಿಟ್ಟಿದ್ದು.ರವಿ ಈತನು ತನಗೆ ಇರುವ ಬುದ್ದಿಮಾಂಧ್ಯೆದ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 09-08-2021 ರಂದು ತನ್ನಷ್ಟಕ್ಕೇ ತಾನೇ ನೇಣು ಹಾಕಿಕೊಂಡು  ಮೃತಪಟ್ಟಿರುತ್ತಾನೆ ಅಂತಾ ಮೃತನ ತಂದೆ ಲೋಕೆಶ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 16-08-2021 11:21 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ