ಅಭಿಪ್ರಾಯ / ಸಲಹೆಗಳು

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:68/2021 ಕಲಂ: 279,304(A) IPC.

              ಪಕ್ಕೆರೇಶ ಹನುಮಂತಪ್ಪ ಕಪಾಲಿ ಸಾ|| ಕುರಸಾಪೂರ ಇತನು ತಾನು ಚಲಾಯಿಸುತ್ತಿದ್ದ ಟ್ಯಾಕ್ಟರ್ ನಂ: ಕೆಎ27 ಟಿ ಸಿ 5657 ನೇದ್ದು ಮತ್ತು  ಟೇಲರ್ ನೋಂದಣಿ ಇಲ್ಲದನ್ನು ದಿನಾಂಕ:09-07-2021 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಕಲಕಟ್ಟಿ ಗ್ರಾಮದ ಹದ್ದಿ ಧರೇಣ್ಣವರ ಜಮೀನದಲ್ಲಿ ಕೆ ಇ ಬಿ ಇಲಾಖೆಯ ಟಿ ಸಿಗಳನ್ನು ತನ್ನ ಟೇಲರದಲ್ಲಿ ಹೇರಿಕೊಂಡು  ಕೆಲವು ಟಿ ಸಿ ಗಳನ್ನು ಇಳಿಸಿ ನಂತರ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಮತ್ತು ದುಡಕಿನಿಂದ ಒಮ್ಮೇಗೆ ಜೋರಾಗಿ ಬಿಟ್ಟಿದ್ದು  ಇದರಿಂದ ಟೇಲರ ಎಡಮಗ್ಗಲಾಗಿ ಪಲ್ಟಿಯಾಗಿದ್ದು ಇದ್ದರಿಂದ ಟಿ ಸಿ ಗಳು ಸರಿದಿದ್ದು ಆಗ ಟೇಲರದಲ್ಲಿ ಇದ್ದ ಭೀಮಣ್ಣ ತಂದೆ ಹನುಮಂತಪ್ಪ ಗೊಟಗೋಡಿ ವಯಾ: 30 ವರ್ಷ ಜ್ಯಾತಿ: ಹಿಂದೂ ಮರಾಠ ಉದ್ಯೋಗ: ಕೂಲಿ ಕೆಲಸ ಸಾ: ಖುರ್ಸಾಪುರ, ಇತನು ಕೇಳಗೆ ಬಿದ್ದಿದ್ದು  ಆತನ ಮೇಲೆ ಟಿಸಿಗಳು ಬಿದ್ದು ಎದೆಗೆ, ಬಾಲಗಾಲಿಗೆ ಮತ್ತು ಇತರೆ ಕಡೆಗಳಲ್ಲಿ ಬಾರಿ ಪೆಟ್ಟು ವ ರಕ್ತಗಾಯಗಳಾಗಿದ್ದು, ಉಪಚಾರಕ್ಕೆ ಚಂದಾಪೂರ, ಶಿಗ್ಗಾಂವ ಮತ್ತು ಹುಬ್ಬಳ್ಳಿ ಕಿಮ್ಸ್ ಗೆ ಕರೆದುಕೊಂಡು ಹೋದಾಗ ಮದ್ಯಾಹ್ನ 01.35 ಗಂಟೆಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.    

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:71/2021 ಕಲಂ: 379 IPC.

                  ದಿನಾಂಕ: 09/07/2021 ರಂದು ಮುಂಜಾನೆ 6-30 ಗಂಟೆಗೆ ಪಿರ್ಯಾದುದಾರರು ಠಾಣೆಯಲ್ಲಿದ್ದಾಗ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರನ್ನು ದಿನಾಂಕ 09/07/2021 ರಂದು ಮುಂಜಾನೆ 7-00 ಗಂಟೆಗೆ ಗುತ್ತಲ ಮೈಲಾರ ರಸ್ತೆ ಕಂಚಾರಗಟ್ಟಿ ಕ್ರಾಸ್ ಹತ್ತಿರ ಹೊರಟಾಗ ಒಂದು ಟಿಪ್ಪರ್ ಲಾರಿ ಬಂದಿದ್ದು ಸದರಿ ಲಾರಿ ನಿಲ್ಲಿಸಿ ವಿಚಾರಣೆ ಮಾಡಿದಾಗ ಅದರ ಚಾಲಕನು ತನ್ನ ಹೆಸರು ಮಾಲತೇಶ ಬಸಪ್ಪ ಬಾರ್ಕಿ ಅಂತಾ ಹೇಳಿದ್ದು. ಟಿಪ್ಪರ್ ಲಾರಿಯನ್ನು ಪರೀಶಿಲಿಸಲಾಗಿ ಅದರ ನಂಬರ ಕೆ,ಎ 32 ಸಿ. 8391 ಅಂತಾ ಇದ್ದು ಅದರಲ್ಲಿ ಸುಮಾರು 06 ಕ್ಯೂಬಿಕ್ ಮೀಟರ್ ಮರಳು ಇದ್ದು ಅ:ಕಿ 5400/- ರೂಗಳು ಆಗಬಹುದು. ಸದರಿ ಟಿಪ್ಪರ್ ಲಾರಿ ಚಾಲಕನಿಗೆ ಮರಳನ್ನು ತುಂಬಿಕೊಂಡು ಹೋಗಲು ಪಾಸ್ ಇದೇಯೇ ಅಂತಾ ಕೇಳಿದ್ದು ಯಾವುದೇ ಪಾಸ್ ಪಮೀಟ್ ಇರುವುದಿಲ್ಲ ಅಂತಾ ಹೇಳಿ ಓಡಿ ಹೊಗಿದ್ದು. ಸಿಕ್ಕ ಟಿಪ್ಪರ ಲಾರಿಯನ್ನು ಠಾಣೆಗೆ ತೆಗೆದುಕೊಂಡು ಬಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:119/2021 ಕಲಂ: 380,457 IPC.

              ದಿನಾಂಕಃ09-07-2021 ರಂದು ಮುಂಜಾನೆ 2-15 ಗಂಟೆಯಿಂದ ಮುಂಜಾನೆ 7-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಮೂರು ಜನರು ಕಳ್ಳರು ಮುಖಕ್ಕೆ ಮಾಸ್ಕ ಹಾಕಿಕೊಂಡು ಬಂದು ಅಡವಿ ಆಂಜನೇಯ ಬಡಾವಣೆಯ ರಿ ನಂ 637/13 ರಲ್ಲಿರುವ ದಾದಾಪೀರ ಹುಸೇನ್ಮಿಯಾ ದೊಡ್ಡಮನಿ ಇವರ ಟಗರಿನ ಪಾರ್ಮಗೆ ಹಾಕಿದ ಚೀಲಕವನ್ನು ಯಾವುದೋ ಸಾಧನದಿಂದ ಮುರಿದು ಒಳಗೆ ಹೋಗಿ ಸುಮಾರು 2,45,000/- ರೂ ಬೆಲ ಬಾಳುವ 23 ಟಗರುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ವ್ಯಕ್ತಿ ಸಾವು.

            ಅಬ್ದುಲವಹಾಬ ತಂದೆ ಅಕ್ಬರಸಾಬ ನೆಗಳೂರ ವಯಾ- 41 ವರ್ಷ ಜಾತಿ- ಮುಸ್ಲಿಂ ಉದ್ಯೋಗ- ವ್ಯವಸಾಯ ಸಾ; ನರೇಗಲ್ಲ ತಾ: ಹಾನಗಲ್ ಇವನು ದಿನಾಂಕ:07-07-2021 ರಂದು ಮದ್ಯಾಹ್ನ 12-30 ಘಂಟೆಯಿಂದ ದಿನಾಂಕ: 09-07-2021 ರಂದು ಮದ್ಯಾಹ್ನ 14-00 ಘಂಟೆಯ ನಡುವಿನ ಅವದಿಯಲ್ಲಿ ನರೇಗಲ್ ಗ್ರಾಮದ ಬೆನಕನಕಟ್ಟಿ ಕೆರೆಯಲ್ಲಿ ಎಮ್ಮೆಗಳಿಗೆ ಮೈತೊಳೆಯುತ್ತಿರುವಾಗ ಆಕಸ್ಮೀಕವಾಗಿ ನೀರಿನಲ್ಲಿ ಮುಳುಗಿ ಮರಣ ಹೊಂದಿದ್ದು ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮಹಬೂಬಲಿ ವರದಿ ನೀಡಿದ್ದು ಠಾಣಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಬಸವರಾಜ ಹನುಮಂತಪ್ಪ ಹುಗ್ಗಿ ವಯಾ: 45 ಸಾ|| ರಾಣೆಬೇನ್ನೂರ  ಈತನು ವ್ಯವಸಾಯ, ಹೈನುಗಾರಿಕೆ ಮತ್ತು ಹಿಟ್ಟಿನ ಗಿರಣಿ ಬೀಸುವ ಕೆಲಸ ಮಾಡಿಕೊಂಡಿದ್ದು, ಬಸವರಾಜ ಹಾಗೂ ಅವನ ತಮ್ಮ ರಮೇಶ ಇಬ್ಬರೂ ಕೂಡಿಕೊಂಡು ವ್ಯವಸಾಯ ಮತ್ತು ಹೈನುಗಾರಿಕೆ ಸಲುವಾಗಿ ವಿವಿಧ ಬ್ಯಾಂಕಗಳಲ್ಲಿ ಸಾಲ ಮಾಡಿಕೊಂಡಿದ್ದು ಸದರ ಸಾಲವನ್ನು ತೀರಿಸಲಾಗದೇ ಬಸವರಾಜ ಈತನು ಮಾನಸಿಕ ಮಾಡಿಕೊಂಡು ದಿನಾಂಕ: 08-07-2021 ರ ರಾತ್ರಿ 11:00ಗಂಟೆಯಿಂದ ದಿನಾಂಕ:09-07-2021 ರ ಬೆಳಿಗ್ಗೆ 05:00 ಗಂಟೆಯ ನಡುವಿನ ಅವದಿಯಲ್ಲಿ ತನ್ನಷ್ಟಕ್ಕೆ ತಾನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸುನಿತಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:22/2021 ಕರೆಂಟ ಶಾಕ್ ಹೊಡೆದು ವ್ಯಕ್ತಿ ಸಾವು.

            ಚನ್ನಪ್ಪ ಸೀರನಹಳ್ಳಿ ವಯಾ:43 ವರ್ಷ ಜಾತಿ:ಲಿಂಗವಂತ ಸಾ:ಯಲಗಚ್ಚ ತಾ:ಹಾವೇರಿ ಇವರು ತಮ್ಮ ಹಿತ್ತಲದಲ್ಲಿರುವ ಒಂದು ಹೌಂಜಿನಲ್ಲಿಯ ನೀರನ್ನು ಹೊರಗೆ ತೆಗೆಯುಲು ಹೋಗಿ ಅಲ್ಲಿರುವ ಕರೆಂಟಗೆ ಮೋಟಾರ ವಾಯರ್  ಸ್ವೀಚ್ ಹಾಕಲು ಹೋದಾಗ ಅವನಿಗೆ ಅಕಸ್ಮಾತ ಕರೆಂಟ ಹೊಡೆದು ಅವರು ನೆಲಕ್ಕೆ ಬಿದ್ದಿದ್ದು ಉಪಚಾರಕ್ಕೆ ಹಾವೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ ಮಾಡಿದ್ದು . ಉಪಚಾರ ಫಲಿಸದೇ ಸಂಜೆ 7-45 ಗಂಟೆಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 16-07-2021 06:51 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080