ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:65/2021 ಕಲಂ: KARNATAKA FOREST ACT 1963 (U/s-86,87); 379 IPC.

                ಹಾವೇರಿ ದೇವಧರ ಆಸ್ಪತ್ರೆಯ ಆವರಣದಲ್ಲಿ ದಿನಾಂಕ 15-04-2021 ರಂದು 1-15 ಗಂಟೆಯಿಂದ 1-50 ಗಂಟೆಯ ನಡುವಿನ ಅವಧಿಯಲ್ಲಿ ಚಿಕ್ಕಪ್ಪ ಶಿವಪ್ಪ ದೊಡಮನಿ ಸಾ|| ಹಾವೇರಿ ಇವರು ಕೆಲಸ ಮಾಡುವ ಆಸ್ಪತ್ರೆಯ ಆವರಣದಲ್ಲಿ ಬೆಳೆದ ಸುಮಾರು 15000/- ರೂ ಕಿಮ್ಮತ್ತಿ ಬೆಲೆ ಬಾಳುವ ಒಂದು ಶ್ರೀಗಂಧದ ಮರದ ತುಂಡನ್ನು ಯಾರೋ ಕಳ್ಳರು ತಮ್ಮ ಸ್ವಂತ ಲಾಭಕ್ಕಾಗಿ ಯಾವುದೋ ಆಯುಧದಿಂಧ ಕಟ್ಟ ಮಾಡಿ ಒಂದು ತುಂಡು ತೆಗೆದುಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:58/2021 ಕಲಂ: 323, 324, 447, 504, 506, 34 IPC.

                ಕರಬಸವನಗೌಡ ಶಂಕರಗೌಡ ಪಾಟೀಲ ಸಾ|| ಮುದ್ದಿನಕೊಪ್ಪ ಹಾಗೂ ಸಹಚರರು ಸೇರಿ ದಿನಾಂಕ: 08-06-2021 ರಂದು ಸಾಯಂಕಾಲ 06.00 ಗಂಟೆ ಸುಮಾರಿಗೆ ದಯಾನಂದ ಪಾಟೀಲ ಸಾ|| ಮುದ್ದಿನಕೊಪ್ಪ ಇವರ ಜಮೀನಿಗೆ ರಿ ಸನಂ: 289/1/2.ರಲ್ಲಿ ಅಕ್ರಮ ಪ್ರವೇಶ ಮಾಡಿ ಮಾವಿನ,ಸಾಗವಾನಿ, ಅಕೇಶ ಮರಗಳನ್ನು ಕಡಿಯುತ್ತಿದ್ದು ಅದಕ್ಕೆ ದಯಾನಂದ ಹೋಗಿ ಮರಗಳನ್ನು ಕಡಿಬೇಡಿರಿ ಅಂತಾ ಹೇಳಿದ್ದು ಅದಕ್ಕೆ ಕರಬಸಗೌಡ ಹಾಗೂ ಸಹಚರರು ಲೇ ಬೋಸಡಿ ಮಗನ ಇಲ್ಲೆ ನಿಂದು ಏನ್ನ ಐತಿ ಅಂತ ಬಂದಿಲೇ ನೀನ್ನ ಇವತ್ತು ಕೊಡ್ಲಿಯಿಂದ ಕಡೆದು ಬಿಡುತ್ತೇವಿ ಅಂತಾ ಏಕಾಏಕಿ ಎರಿಬಂದು ಕೊಡ್ಲಿ ಕಾವು ಹಾಗೂ ಬಡಿಗೆಯಿಂದ ಹೊಡೆದು, ಕಾಲಿನಿಂದ ಒದ್ದು ಎದೆಯ ಮೇಲೆ ಹತ್ತಿನಿಂತು ಹೊಡೆಯುತ್ತಾ ಲೇ ಮಗನ ಇವತ್ತ ನಿನ್ನ ಸಾಯಿಸುತ್ತೇವೆ ಅಂತಾ ಜೀವದ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:10/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                 ಜಯಶಂಕರ ತಂದೆ ರಾಮಪ್ಪ ಹೊಂಡದ ವಯಾ: 39 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ಡ್ರೈವರ್, ಸಾ:ಹಿರೇಕೆರೂರು ಬಿ.ಜಿ ಬಣಕಾರ ಬಡಾವಣೆ ತಾ: ಹಿರೇಕೆರೂರ ಈತನು ಸುಮಾರು ವರ್ಷಗಳಿಂದ ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಬಿದ್ದು ಯಾವುದೇ ಕೆಲಸಕ್ಕೆ ಹೋಗದೆ ಎಷ್ಟು ತಿಳಿಸಿ ಹೇಳಿದರೂ ಅದನ್ನು ಬಿಡಲಿಕ್ಕೆ ಆಗದೇ ಅದನ್ನೆ ಮಾನಸಿಕ ಮಾಡಿಕೊಂಡು ದಿನಾಂಕ: 07/06/2021 ರಂದು 17-00 ಗಂಟೆಯಿಂದ ದಿನಾಂಕ-08/06/2021 ರಂದು ರಾತ್ರಿ 19-30 ಗಂಟೆಯ ನಡುವಿನ ಅವಧಿಯಲ್ಲಿ ಹಿರೇಕೆರೂರು ಶಹರದ ಬಿ.ಜಿ ಬಣಕಾರ ಬಡಾವಣೆಯ ಸ್ವಂತ ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ತನ್ನಷ್ಟಕ್ಕೆ ತಾನೆ  ನೇಣು ಹಾಕಿಕೊಂಡು ಮೃತಪಟ್ಟಿದ್ದು, ಮೃತನ ಸಾವಿನಲ್ಲಿ ಯಾವದೇ ಸಂಶಯವಿರುವದಿಲ್ಲ ಅಂತಾ ನಂದಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 11-06-2021 10:55 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ