ಅಭಿಪ್ರಾಯ / ಸಲಹೆಗಳು

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:121/2021 ಮಹಿಳೆ ಕಾಣೆ.

                     ಕುಮಾರಿ;-ದೀಪಾ ತಂದೆ ಹನುಮಂತಪ್ಪ ತಂಬಳೇರ ವಯಾ- 17 ವರ್ಷ 02 ತಿಂಗಳು. ಜಾತಿ-ವಾಲ್ಮಿಕಿ, ಉದ್ಯೋಗ-ವಿದ್ಯಾರ್ಥಿ. ಸಾ;ಅರಳಿಕಟ್ಟಿ, ತಾ;ಹಿರೇಕೆರೂರ. ಇವಳು ದಿನಾಂಕ; 07-09-2021 ರಂದು ಮುಂಜಾನೆ 9-30 ಗಂಟೆಗೆ ಕಾಲೇಜಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಸಂಜೆ 6-00 ಗಂಟೆಯಾದರೂ ಮನೆಗೆ ಬಾರದೆ ಎಲ್ಲಿ ಹೋಗಿದ್ದಾಳೆ ಅನ್ನುವದು ಗೊತ್ತಾಗುತ್ತಿಲ್ಲ ಅಥವಾ ನನ್ನ ಮಗಳು ಅಲ್ಪ ವಯಸ್ಕಳು ಅಂತಾ ಗೊತ್ತಿದ್ದರೂ ಸಹ ಯಾರೋ ಇವಳಿಗೆ ಯಾವುದೋ ಆಸೆ ತೋರಿಸಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದಾರೋ ಅನ್ನವುದನ್ನು  ಪತ್ತೆ ಮಾಡಿ ನನ್ನ ಮಗಳನ್ನು ಹುಡುಕಿ ಕೊಡಬೇಕು ಅಂತಾ ದುರುಗವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:134/2021 ಕಲಂ: 379 IPC.

                     ದಿನಾಂಕ:29-08-2021 ರಂದು ರಾತ್ರಿ 20-30 ಗಂಟೆಯಿಂದ 21-00 ಗಂಟೆಯ ನಡುವಿನ ಅವಧಿಯಲ್ಲಿ ಕಿರಣ ಉಪನಾಳ ಸಾ||ರಾಣೆಬೇನ್ನೂರ ಈತನು ಕೆ.ಕೆ. ಟಾವರ್ಸ್ ಬಿಲ್ಡಿಂಗ್ ಪಕ್ಕದಲ್ಲಿ ಇರುವ ಮಾರ್ಕೆಂಡೇಶ್ವರ ಮೋಟಾರ ಗ್ಯಾರೇಜ್ ಮುಂದೆ ನಿಲ್ಲಿಸಿದ ಒಂದು ಹಿರೋ ಸ್ಲಂಡರ್ ಪ್ಲೇಸ್ ಮೋಟಾರ ಸೈಕಲ್ ನಂ:ಕೆಎ-68/ಜೆ-1110 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:148/2021 ಮಹಿಳೆ ಕಾಣೆ.

                     ಕು.ಪೂರ್ಣಿಮಾ ರಾಮಪ್ಪ ಕರಿಭೀಮಣ್ಣನವರ ವಯಾ.18 ವರ್ಷ 01 ತಿಂಗಳು ವರ್ಷ ಜಾತಿ. ಹಿಂದೂ ವಾಲ್ಮೀಕಿ ವಿದ್ಯಾರ್ಥಿ ಸಾ. ಕಾಲ್ವೆಯಲ್ಲಾಪುರ ತಾ. ಹಾನಗಲ್ಲ. ಇವಳು ದಿನಾಂಕ : 08/09/2021 ರಂದು ಮುಂಜಾನೆ 08-00 ಘಂಟೆ ಸುಮಾರಿಗೆ ಮನೆಯಲ್ಲಿ  ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು , ಕಾಣೆಯಾದವಳನ್ನು ಈವರೆಗೆ ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ಪೂರ್ಣಿಮಾ ಇವಳನ್ನು ಹುಡುಕಿಕೊಡಬೇಕೆಂದು ರಾಮಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಬಾವಿಕ ಮರಣ ಸಂಖ್ಯೆ:10/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                ಯಲ್ಲಪ್ಪ ತಂದೆ ದುರಗಪ್ಪ ಸಾರಥಿ ವಯಾ:63 ವರ್ಷ ಸಾ|| ಕರೂರ ಈತನು ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ತನಗೆ ಸಾರಾಯಿ ಕುಡಿಯಲು ಹಣ ಇಲ್ಲದೇ ಇದ್ದುದ್ದಕ್ಕೆ ಮಾನಸಿಕ ಮಾಡಿಕೊಂಡು ಜೀವನ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನು ದಿನಾಂಕ 03/09/2021 ರಂದು 14-15 ಗಂಟೆಯಿಂದ 14-45 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಹೊಲದ ಗುಡಿಸಲಿನಲ್ಲಿ ಇಟ್ಟಿದ್ದ ಹೊಲಕ್ಕೆ ಹೊಡೆಯುವ ಪೋರೇಡ್ ವಿಷವನ್ನು ತೆಗೆದುಕೊಂಡು ಒದ್ದಾಡುತ್ತಿದ್ದವನಿಗೆ ಕರೆದುಕೊಂಡು ಹೋಗಿ ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಡಾವಣಗೇರಿ ಚಿಗಟೇರಿ ಆಸ್ಪತ್ರೆಗೆ ಹೋಗಿ ಉಪಚಾರಕ್ಕೆ ದಾಖಲ ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆಯಿಂದ ಚೇತರಿಸಿಕೊಳ್ಳದೇ ಮೃತಪಟ್ಟಿದ್ದು ಇರುತ್ತದೆ ಹೊರತು ಅವನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಮೃತನ ಮಗ ರಮೇಶ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-09-2021 06:23 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ