ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:102/2021 ವ್ಯಕ್ತಿ ಕಾಣೆ.

            ಶಿವಶಂಕರ ತಂದೆ ದೇವೇಂದ್ರಪ್ಪ ಕುಬಸದ ವಯಾ: 55 ವರ್ಷ ಜಾತಿ: ಹಿಂದೂ ಲಿಂಗಾಯತ, ಉದ್ಯೂಗ: ಅಟೋ ಚಾಲಕ, ಸಾ:ಹಲಗೇರಿ ತಾ:ರಾಣೇಬೆನ್ನೂರ ಇವರು ದಿನಾಂಕಃ20-03-2018 ರಂದು 8-30 ಗಂಟೆ ಸುಮಾರಿಗೆ ಹಲಗೇರಿ ಗ್ರಾಮದ ತನ್ನ ಮನೆಯಿಂದ ಅಟೋ ಸಾಮಗ್ರಗಳನ್ನು ತರಲು ಹುಬ್ಬಳ್ಳಿಗೆ ಹೋಗಿ ಬರುತ್ತೇನೆಂದು ಹೇಳಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿ ಕಾಣೆಯಾದವರ ಚಹರೆಃ ಎತ್ತರ ಎತ್ತರ 5 ಅಡಿ 7 ಇಂಚು, ಕೂಲು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ನೀಟಾದ ಮೂಗು, ತಲೆಯಲ್ಲಿ ಕಪ್ಪು ಮಿಶ್ರಿತ ಬಿಳಿ ಕೂದಲು ಇರುತ್ತವೆ. ಬಲಗಾಲ ಮಂಡಿಯ ಕೆಳಗೆ ಹಳೆಯ ಮಾದ ಗಾಯದ ಕಲೆ ಇದೆ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟೀಶರ್ಟ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಹಿಂದಿ, ಇಂಗ್ಲೀಸ್ ಬಾಷೆಗಳನ್ನು ಮಾತನಾಡುತ್ತಾರೆ. ಈ ರೀತಿ ಚಹರೆಪಟ್ಟಿಯುಳ್ಳ ಶಿವಶಂಕರ ತಂದೆ ದೇವೇಂದ್ರಪ್ಪ ಕುಬಸದ ಇವರನ್ನು ಹುಡುಕಿಕೊಡಲು ವಿನಂತಿ ಅಂತಾ ಅಶೋಕ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:160/2021 ಮಹಿಳೆ ಕಾಣೆ.

              ನೇತ್ರಾ ತಂದೆ ಪರಸಪ್ಪ ಹಿತ್ತಲಮನಿ ವಯಸ್ಸು: 19 ವರ್ಷ, ಜಾತಿ: ಹಿಂದೂ ವಾಲ್ಮಿಕಿ ಉದ್ಯೋಗ: ಕೂಲಿ, ಸಾ: ಮಂತ್ರೊಡಿ ತಾ: ಸವಣೂರ. ಇವಳು ಮನೆಯಲ್ಲಿ ಇದ್ದವಳು ದಿನಾಂಕ: 01-08-2021 ರಂದು ಮದ್ಯಾಹ್ನ 1-30 ಗಂಟೆಯಿಂದ 3 ಗಂಟೆಯ ನಡುವಿನ ಅವಧಿಯಲ್ಲಿ  ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವಳು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ವಾಪಸ್ಸ ಮನೆಗೆ ಬಂದಿರುವುದಿಲ್ಲ, ಇವಳು 5 ಪೂಟು 4 ಇಂಚು ಎತ್ತರವಾಗಿದ್ದು, ಗೋದಿಗೆಂಪು ವರ್ಣ, ಸಾದಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಬಣ್ಣದ ಕೂದಲಗಳು, ಉದ್ದ ಮೂಗು, ಇವಳು ಹೋಗುವಾಗ ಬಿಳಿ ಬಣ್ಣದ ಚೂಡಿ ನೀಲಿ ಬಣ್ಣದ ಪ್ಯಾಂಟ ಧರಿಸಿದ್ದು ಅದೆ. ಇವಳು ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ.ಇವಳಿಗೆ ಹುಡುಕಿ ಕೊಡುವಂತೆ ಪರಸಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:161/2021 ಕಲಂ: 302 IPC.

              ದಿನಾಂಕ:08-08-2021 ರಂದು 18-00 ಗಂಟೆ ಸುಮಾರಿಗೆ ಇಮ್ರಾನ್ @ ಬಬ್ಲು ತಂದೆ ಅಲ್ಲಾಭಕ್ಷ ಚೌದರಿ ಸಾ: ಸವಣೂರ ಈತನು ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ಕೊಡಲಿಯಿಂದ ಹಜರತಲಿ @ ಅನ್ವರ ತಂದೆ ಮಹ್ಮದಗೌಸ ಮೋಮಿನ್ @ ಶೇಕ್, ವಯಸ್ಸು: 32 ವರ್ಷ, ಜಾತಿ: ಮಸ್ಲಿಂ, ಉದ್ಯೋಗ: ಗ್ಯಾರೇಜ ಮೇಸ್ತ್ರಿ ಸಾ: ಕಾರಡಗಿ ತಾ: ಸವಣೂರ ಹಾಲಿ ಗೋವಾ ರಾಜ್ಯ ಇವನಿಗೆ ಕೊಲೆ ಮಾಡುವ ಉದ್ದೇಶದಿಂದ ತಲೆಗೆ, ಕುತ್ತಿಗೆಗೆ, ಎರಡೂ ಕೈಗಳಿಗೆ ಹೊಡೆದು ಮಾರಣಾಂತಿಕ ರಕ್ತ ಗಾಯ ಪಡಿಸಿ ಕೊಲೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:36/2021 ಅನಾಮಧೇಯ ವ್ಯಕ್ತಿ ಸಾವು.

            ಸುಮಾರು 28 ರಿಂದಾ 30 ವರ್ಷದ ಅನಾಮಧೇಯ ಗಂಡಸಿನ ಶವವು ಹೆಸರು ವಿಳಾಸ ತಿಳಿದು ಬಂದಿಲ್ಲಾ ಅವನಿಗೆ ಮೂಗಿನಲ್ಲಿ ರಕ್ತ ಬಂದು ಸೊರಿದ್ದು ಬಾಯಿ ಹತ್ತೀರ ತುಟಿಗೆ ಗಾಯವಾಗಿದ್ದು , ಎಡಗಣ್ಣ ಬಾವು ಬಂದಿದ್ದು, ಬಲಗಡೆ ಮೇಲಕಿನ ಹತ್ತೀರ ಮತ್ತು ಎರಡು ಕೈಗಳಿಗೆ ತೆರೆಚಿದ ಗಾಯಗಳಾಗಿದ್ದು ಅವನ ಕೈಗಳಲ್ಲಿ ರೋಡಗೋಲ್ಡ ಉಂಗುರಗಳನ್ನು ಹಾಕಿದ್ದು ಅಲ್ಲದೆ ಕೊರಳಲ್ಲಿ ರೊಡಗೋಲ್ಡ್ ಚೈನ ಹಾಕಿದ್ದು ಅವನ ಶಟರ್ಿನ ಕಿಸೆಯಲ್ಲಿ 1] ಬಸ್ಸಿನ ಟಿಕೇಟ ನಂ. 222110 ದಿನಾಂಕ:07-08-2021 ವೇಳೆ 20:43:09 ಧಾರವಾಡ ಸಿಬಿಟಿ- ಧಾರವಾಡ ರೇಲ್ವೆ ಸ್ಟೇಶನ್  ಪ್ರಯಾಣದ ದೂರ 4 ಕೀಮಿ, 2ಥ12.00=24-00 ರೂಗಳು 2] ಬಸ್ಸಿನ ಟಿಕೇಟ ನಂ. 004368 ದಿನಾಂಕ:07-08-2021 ವೇಳೆ 21:04:40 ಧಾರವಾಡ ಹಳೇ ಬಸ್ಸ ಸ್ಟ್ಯಾಂಡ-ಕಾರ್ಪೊರೇಶನ್  2ಥ22.00=44-00 ರೂಗಳು ಈ ಪ್ರಕಾರ ಇದ್ದು ಪ್ಯಾಂಟಿನ ಲೇಬಲ್ ನೊಡಲು ಅದರಲ್ಲಿ ರಾಜ ಒನ್ ಟ್ರೇಲ್ ಧಾರವಾಡ ಅಂತಾ ಇದ್ದು ಅವನ ಪ್ಯಾಂಟಿನ ಕಿಸೆಯಲ್ಲಿ ಮೊಬೈಲ್ ಬ್ಯಾಟರಿ ಒಂದು ಮೊಬೈಲ್ ನಂಬರ ಬರೆದ ಚೀಟಿ ಇದ್ದು ಅದರಲ್ಲಿ 9590996342 ಅಂತಾ ಬರೆದಿದ್ದು ಇದ್ದು. ಸದರಿಯವನು ಬಿದ್ದ ಸ್ಥಿತಿಯನ್ನು ನೊಡಿದರೆ ಮತ್ತು ಅವನಿಗಾದ ಗಾಯಗಳನ್ನು ನೋಡಿದರೆ ದಿನಾಂಕ:07-08-2021 ರಂದು ರಾತ್ರಿ 11-30 ಗಂಟೆಯಿಂಂದ ದಿನಾಂಕ;08-08-2021 ರಂದು ಮುಂಜಾನೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಸದರಿಯವನಿಗೆ ಯಾವುದೋ ವಾಹನ ಬಡಿದು ಬಿದ್ದುಗಾಯಾಳಾಗಿ ಅಥವಾ ತಾನೇ ನಡೆದುಕೊಂಡು ಹೋಗುವಾಗ ಮುಖ ನೆಲಕ್ಕೆ ಹಚ್ಚಿ ಬಿದ್ದುಗಾಯಗಳಾಗಿ ಇಲ್ಲವೆ ಯಾವುದೋ ದುಷ್ಕ್ರುತ್ಯೆ ನಡೆದು ಸಾವು ಸಂಬವಿಸರಬಹುದು ಸಾವಿನ ಬಗ್ಗೆ ಸಂಶಯವಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ      ಮಹಮದ್‌ ಜರುದ್ದಿನ್‌ ತಾಳಿಕೋಟೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

 

 

ಇತ್ತೀಚಿನ ನವೀಕರಣ​ : 16-08-2021 11:19 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ