ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:89/2021 ಕಲಂ:380,454,457 IPC.

              ವಿಶ್ವನಾಥ ಲಮಾಣಿ ಸಾ|| ಬ್ಯಾಡಗಿ ಇವರ ಮನೆಯಲ್ಲಿ ದಿನಾಂಕ:06-07-2021 ರಂದು ಮದ್ಯಾನ್ಹ 15-00 ಗಂಟೆಯಿಂದ ದಿನಾಂಕ:08-07-2021 ರಂದು ಬೆಳಿಗ್ಗೆ 07-30  ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬ್ಯಾಡಗಿ ಶಹರದ ಶ್ರೀ ವಿವೆಕಾನಂದನಗರ (ಅನ್ಸಾರಿ ಪ್ಲಾಟ್) ದಲ್ಲಿರುವ ಮನೆಯಲ್ಲಿ, ಮನೆಯ ಇಂಟರ ಲಾಕ್ನ್ನು  ಯಾವುದೋ ಆಯುಧದಿಂದ ಮೀಟಿ ಮುರಿದ ಒಳಗೆ ಹೋಗಿ ಬೆಡ್ ರೂಮ್ ನಲ್ಲಿದ್ದ ಟ್ರಜೂರಿಯ ಕೀಲಿಯನ್ನು ತೆಗೆದು ಅದರಲ್ಲಿ ಬಟ್ಟೆಗಳನ್ನು ಚೆಲ್ಲಾ-ಪಿಲ್ಲಿ ಮಾಡಿ ಬಂಗಾರದ ಆಭರಣಗಳನ್ನು ಇಟ್ಟಿದ್ದ ಬಾಕ್ಸಗಳನ್ನು ಬಿಚ್ಚಿ ಅದರಲ್ಲಿದ್ದ 1] ಬಂಗಾರದ ತಾಳಿಯ ಸರ 04-ತೋಲೆ ಅ||ಕಿ||1,80,000 /-ರೂ.2)ಬಂಗಾರದ ಒಂದು ಜೋತೆ ಕಿವಿಯ ಓಲೆ 1 ತೋಲೆ ಅ||ಕಿ||30,000/-ರೂ.ಒಟ್ಟು 2,10,000/-ರೂ ಕಿಮ್ಮತಿನವುಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:90/2021 ಮಹಿಳೆ ಕಾಣೆ.

             ಕವಿತಾ ತಂದೆ ಸಿದ್ದಪ್ಪ ಕುಮ್ಮೂರ ವಯಾ:19 ವರ್ಷ. ಜಾತಿ:ಕುರಬ  ಉದ್ಯೊಗ: ವಿದ್ಯಾರ್ಥಿನಿ  ಸಾ-ಕದರಮಂಡಲಗಿ .ತಾ-ಬ್ಯಾಡಗಿ ಇವಳು ದಿನಾಂಕ;03-07-2021 ರಂದು ಮುಂಜಾನೆ 09-00 ಗಂಟೆಯಿಂದ ಸಂಜೆ 5-00 ಗಂಟೆಯ ನಡುವಿನ ಅವಧಿಯಲ್ಲಿ  ಬ್ಯಾಡಗಿ ತಾಲೂಕ ಕದರಂಡಲಗಿ ಗ್ರಾಮದ ಮನೆಯಿಂದ ಹೊದವಳು ಎಲ್ಲಿಯೋ ಹೋಗಿ ಈ ವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಕಾಣಿಯಾದ ನನ್ನ ಮಗಳಿಗೆ    ಹುಡುಕಿಕೊಡಬೇಕು ಅಂತಾ ಕಾಣೆಯಾದ ಕವಿತಾ ಇವಳ ತಾಯಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:42/2021 ಮಹಿಳೆ ಕಾಣೆ.

             ಕುಮಾರಿ||ರೇಣುಕಾ ತಂದೆ ಬಸಪ್ಪ ಕುಂಬಾರ, ವಯಾ: 21 ವರ್ಷ ಇವಳು ದಿನಾಂಕ: 07-07-2021 ರಂದು ಮುಂಜಾನೆ 7-00 ಗಂಟೆ ಸುಮಾರಿಗೆ ಮನೆಯಲ್ಲಿ ಕಾಲೇಜಿಗೆ ಹೋಗಿ ಪರೀಕ್ಷಾ ಶುಲ್ಕವನ್ನು ಕಟ್ಟಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಪರ್ತ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನೂ ಹುಡುಕಿಕೊಡಬೇಕೆಂದು ಕಾಣೆಯಾದ ರೇಣುಕಾ ಇವಳ ತಾಯಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಕಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ಬರಮಪ್ಪ ಬಸಪ್ಪ ಕುರುಬರ ಇವರು ಬಡಾಸಂಗಾಪುರ ಗ್ರಾಮದ ರಿ.ಸ ನಂ 54/1 ರಲ್ಲಿ ಒಟ್ಟು 6 ಎಕರೆ ಜಮೀನು ಇದ್ದು. ಸದರ ಜಮೀನು ಸಂಬಂದ ನೇಸ್ವಿ ಗ್ರಾಮದ ಕೆ.ವಿ.ಜಿ ಬ್ಯಾಂಕದಲ್ಲಿ ಸುಮಾರು 3.00.000/- ರೂ ಹಾಗೂ ಕುರಿ ಸಾಕಾಣಿಕೆ ಕುರಿತು ಹಾವೇರಿ ದೇವರಾಜ ಅರಸ ನಿಗಮದಲ್ಲಿ ಸುಮಾರು 1.00.000/-ರೂ ಹಾಗೂ ಮನೆತನದ ಸಲುವಾಗಿ ಊರಲ್ಲಿ ಕೈಗಡ ಅಂತಾ ಸುಮಾರು 3 ರಿಂದ 4 ಲಕ್ಷ ರೂಪಾಯಿ ಸಾಲ ಮಾಡಿದ್ದು ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಯಿಂದ ಹೊಲದಲ್ಲಿ ಬೆಳೆ ಸರಿಯಾಗಿ ಬಾರದ್ದರಿಂದ ಸಾಲ ಕಟ್ಟಲು ಆಗದೆ ಮಾನಸಿಕ ಮಾಡಿಕೊಂಡಿದ್ದರು. ಅಲ್ಲದೆ ಈ ವರ್ಷ ಸಹ ಹೊಲದಲ್ಲಿ ಹಾಕಿದ ಗೋವಿನಜೋಳ ಹಾಗೂ ಬೆಂಡೆ ಬೆಳೆಯು ಸಹ ಸರಿಯಾಗಿ ಬಾರದ್ದರಿಂದ ಮಾನಸಿಕ ಮಾಡಿಕೊಂಡು ಸಾಲದ ಬಾದೆಯಿಂದ ದಿನಾಂಕ: 07/07/2021 ರಂದು ರಾತ್ರಿ 10-00 ಗಂಟೆಯಿಂದ 8-07-2021 ರಂದು ಬೆಳಗ್ಗೆ 07-00 ಗಂಟೆಯ ನಡುವಿನ ಅವದಿಯಲ್ಲಿ ಮಾವಿನತೊಪ್ಪ ಗ್ರಾಮದ ತನ್ನ ಮನೆಯ ಕೊಣೆಯಲ್ಲಿ ವಿಷಸೇವನೆ ಮಾಡಿದ್ದು ಸದರಿಯವರಿಗೆ ಉಪಚಾರಕ್ಕೆ ಅಂಬುಲೆನ್ಸ ಮೂಲಕ ರಟ್ಟಿಹಳ್ಳಿ ಸರಕಾರಿ ಆಸ್ಪತ್ರೆಗೆ ತಂದಾಗ ಬೆಳಗ್ಗೆ 09-45 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ವಿನಃ, ಅವರ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 16-07-2021 06:48 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ