ಅಭಿಪ್ರಾಯ / ಸಲಹೆಗಳು

ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:47/2021 ಕಲಂ: 506, 504, 143, 147, 149, 448, 307, 323, 354 IPC.

                ದಿನಾಂಕ:-08/06/2021  ರಂದು ಬೆಳಿಗ್ಗೆ 10-00  ಘಂಟೆಯ ಸುಮಾರು ವೀರನಗೌಡ ಉಳುವನಗೌಡ ಪಾಟೀಲ ಸಾ|| ಹೊಸೂರ ಹಾಗೂ ಸಹಚರರು ಸೇರಿ ಮಂಜುನಾಥ ಸುಣಗಾರ ಇವರ ಮನೆಯ ಒಳಗಡೆ ಅತಿಕ್ರಮ ಪ್ರವೇಶ ಮಾಡಿ, ಶಾಂತಮ್ಮ ಭೀಮಪ್ಪ ಸುಣಗಾರ ಇವಳಿಗೆ ಎಳೆದಾಡಿ ಹೊಡಿ-ಬಡಿ ಮಾಡಿವೀರನಗೌಡ ಇವನು ಶಾಂತಮ್ಮ ಸುಣಗಾರ ಇವಳಿಗೆ ಹಾದರಗಿತ್ತಿ, ನಿನ್ನ ಗಂಡಂದು ಊರಾಗ ಬಾಳ ಆಗೈತಿ, ನಿನಗೆ ಓಣ್ಯಾಗ ನಿಲ್ಲಿಸಿ ಮರ್ಯಾದೆ ತೆಗೆದು ನಿನ್ನ ಜೀವ ತೆಗಿತ್ತಿವಿ, ಆಮ್ಯಾಲ ನಿನ್ನ ಗಂಡನ ಮುಗಿಸ್ತಿವಿ ಅಂತಾ ಬಾಯಿಗೆ ಬಂದಂತೆ ಹಲ್ಕಟ್ ಹಲ್ಟಟ್ ಬೈದಾಡುತ್ತಾ ವೀರನಗೌಡ ಇವನು ಶಾಂತಮ್ಮ ಇವರ ಸೀರೆ ಹಿಡಿದು ಎಳೆದು, ಆಕೆಯ ಕುಪ್ಪಸಕ್ಕೆ ಕೈ ಹಾಕಿದ್ದು, ಇದನ್ನು ನೋಡಿದ ಮಂಜುನಾಥ ಬಿಡಿಸಲು ಹೋದಾಗ ಶಂಕರಗೌಡ ಹಾಗೂ ಚಿನ್ನುಗೌಡ ಇವರು ಗಟ್ಟಿಯಾಗಿ ಹಿಡಿದುಕೊಂಡು ಅವನಿಗೆ ಸಿಕ್ಕ ಸಿಕ್ಕಲ್ಲಿ ಹೊಡೆದು ಬೋಸುಡಿ ಮಗನಾ ಅಂತಾ ಅವಾಚ್ಯವಾಗಿ ಬೈದಾಡಿದ್ದು ಶಾಂತಮ್ಮ ಇವರ ತಲೆಯ ಕೂದಲು ಹಿಡಿದು ಬಗ್ಗಿಸಿ ಬೆನ್ನಿಗೆ ಹೊಡೆದಿದ್ದು, ಎದೆಯ ಮೇಲೆ ಕುಳಿತು ಅವಳ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅಲ್ಲದೇ ಊರಾಗ ಇದ್ದು ಬಾಳ್ವೆ ಮಾಡ್ರಿ, ನಿಮಗೆ ಜೀವ ಸಹಿತಾ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:79/2021 ಕಲಂ: 406, 420 IPC.

                ಸುರೇಶ ಮೆಲಗಿರಿ ಇವರು ಬ್ಯಾಡಗಿ ಶಹರದ ಹಳೇ ಮಲ್ಲೂರ ರೋಡದಲ್ಲಿರುವ ಆರ್.ಎಸ್.ಮೇಲಗಿರಿ & ಕಂಪನಿ ಮಾಲಕರು ಇದ್ದು ಒಣಮೇಣಸಿನಕಾಯಿ ವ್ಯಾಪಾರ ಮಾಡಿಕೊಂಡಿದ್ದು ಅಲ್ಲದೆ ಭಾರತದ ಅನೇಕ ರಾಜ್ಯಗಳಿಗೆ ಒಣ ಮೇಣಸಿನಕಾಯಿ ಮತ್ತು ಖಾರದ ಪುಡಿಯನ್ನು ತಯಾರಿ ಮಾಡಿ ಟ್ರಾನ್ಸಪೋರ್ಟ ಕಂಪನಿಯ ಮೂಲಕ ಕಳಿಸುತ್ತಾ ಬಂದಿದ್ದು  ಅಲ್ಲದೆ ದಿನಾಂಕ;05-05-2021 ರಂದು ಜಿಯಾನ್ ಪುಡ್ ಇನ್ಗ್ರೇಡಿಯಂಟ್ಸ್ ಭಾವಾನಗರ ಗುಜರಾತ ಕಂಪನಿಯವರು ಇಮೇಲ್ ಮೂಲಕ 1700 ಕೆ.ಜಿ ಖಾರದಪುಡಿ ಕಳಿಸಿಕೊಡಲು ತಿಳಿಸಿದ್ದರಿಂದ ದಿನಾಂಕ:30-05-2021 ರಂದು ಸಂಜೆ 6-00 ಗಂಟೆಗೆ ಬ್ಯಾಡಗಿ ಶಹರದ ಹಳೇ ಮಲ್ಲೂರ ರೋಡದಲ್ಲಿರುವ ಆರ್.ಎಸ್.ಮೇಲಗಿರಿ & ಕಂಪನಿಯಿಂದ  ಬ್ಯಾಡಗಿಯ ಭಾರತ ಟ್ರಾನ್ಸಪೋರ್ಟ ಮತ್ತು ಸಾಯಿ ಬಾಬಾ ಗೂಡ್ಸ ಟ್ರಾನ್ಸಪೋರ್ಟ ದಾವಣಗೇರಿ ಮೂಲಕ ಲಾರಿ ನಂ. ಜಿಜೆ-04/ಎಕ್ಸ್-5338 ನೇದ್ದರಲ್ಲಿ  ಲಾರಿಯ ಮಾಲಕ ದಿನೇಶ ಭಾಯ್ ಮತ್ತು ಡ್ರೈವರ ಸೂರ್ಯಾ ಹಾಗೂ ಲಾರಿಯ ಕ್ಲೀನರ ಲಾರಿ ನಂ. ಜಿಜೆ-04/ಎಕ್ಸ್-5338 ನೇದ್ದರಲ್ಲಿ  ಒಟ್ಟು 685 ಚೀಲಗಳು 17125 ಕೆ.ಜಿ ಖಾರದ ಪುಡಿ ಒಟ್ಟು ಮೊತ್ತ ಲಾರಿ ಬಾಡಿಗೆ ಜೆ ಎಸ್.ಟಿ ಸೇರಿ 28,02,874-00 ರೂ,ಗಳ ಮಾಲನ್ನು ಲೋಡ ಮಾಡಿಕೊಂಡು ಹೊಗಿದ್ದು ಸದರಿ ಮಾಲನ್ನು ಮುಟ್ಟಿಸಬೇಕಾದ ಸ್ಥಳಕ್ಕೆ ಮುಟ್ಟಿಸದೆ ಲಾರಿ ಮತ್ತು ಮಾಲಿನ ಸಮೇತ ಎಲ್ಲಿಯೋ ಹೋಗಿ ಮಾಲನ್ನು ಮುಟ್ಟಿಸಬೇಕಾದ ಸ್ಥಳಕ್ಕೆ ಮುಟ್ಟಿಸದೆ ನಂಬಿಕೆ ದ್ರೋಹ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 11-06-2021 10:42 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080