ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:68/2021ಕಲಂ: 506, 498A, 504, 149, 323 IPC.

                 ಶಾಂತವ್ವ ಲಮಾಣಿ ವಯಾ: 26 ಸಾ|| ಗುಂಡೆನಹೋಳ್ಳಿ ಹಾಗೂ ಕುಮಾರ ಶಿವಪ್ಪ ಲಮಾಣಿ ಇವರಿಬ್ಬರು ಗಂಡ ಹೆಂಡತಿ ಇದ್ದು ಮದುವೆಯಾಗಿ 08 ವರ್ಷದ ನಂತರ ಕುಮಾರ  ಸಂಶಯಪಡುತ್ತಾ ಪ್ರತಿದಿನ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದು  ಅಲ್ಲದೇ ಪ್ರತಿ ದಿನ ಕುಡಿದು ಬಂದು ಹೊಡಿ,ಬಡಿ ಮಾಡಿ ನೀನು ಸತ್ತರೆ ಸಾಯಿ ನಾನು ಇನ್ನೊಂದು ಮದುವೆಯಾಗುತ್ತೇನೆ ಅಂತಾ ಕಿರುಕುಳ ನೀಡುತ್ತಾ ಬಂದಿದ್ದು ಅಲ್ಲದೇ ಕುಮಾರನೊಂದೆಗೆ ಕುಮಾರನ ಸಹಚರರು  ಜೊತೆ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೀನು ತವರು ಮನೆಗೆ ಹೋಗು ಇಲ್ಲಿ ಇರಬೇಡ ಅನ್ನುತ್ತಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಾ ಬಂದಿರುತ್ತಾರೆ. ದಿನಾಂಕ:07-05-2021 ರಂದು ಸಂಜೆ 04-30 ಘಂಟೆ ಸುಮಾರಿಗೆ ಕುಮಾರನು ಗಂಡನು ಕುಡಿದು ಬಂದು ಹೊಡಿ,ಬಡಿ ಮಾಡಿದ್ದು  ಪಿರ್ಯಾದಿಯು ಇನ್ನೂ ಎಷ್ಟು ದಿವಸ  ಚಿತ್ರಹಿಂಸೆ ಸಹಿಸಿಕೊಳ್ಳುವದು ಅಂತಾ  ಸತ್ರ ಹೋದರಾಯಿತು ಅಂತಾ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಪಕ್ಕದ ಮನೆಯವರು ನೋಡಿ ಬೆಂಕಿಯನ್ನು ಆರಿಸಿ ಮನೆಯಲ್ಲಿ ಉಪಚಾರ ಮಾಡಿ ನಂತರ ತವರು ಮನೆಯವರು ಉಪಚಾರಕ್ಕೆ ಸೂರ್ಯಾನ ನರ್ಸಿಂಗ್ ಆಸ್ಪತ್ರೆ ರಾಣೇಬೆನ್ನೂರಿಗೆ ಕರೆದುಕೊಂಡು ಬಂದು  ದಾಖಲಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:12/2021 ವ್ಯಕ್ತಿ ಸಾವು.

                 ಸುರೇಶ ತಂದೆ:ಶಿವಪ್ಪ ಆರಿಕಟ್ಟಿ ವಯಾ:60 ವರ್ಷ, ಜಾತಿ: ಹಿಂದೂ ಲಿಂಗಾಯತ, ಉದ್ಯೋಗ: ನಿರುದ್ಯೋಗಿ, ಸಾ: ಬನಶಂಕರಿ ನಗರ 6 ನೇ ಕ್ರಾಸ್ ಕಲ್ಯಾಣಮಂಟಪ ಹತ್ತಿರ ರಾಣೇಬೆನ್ನೂರು ಇವನು ದಿನಾಂಕ: 07-05-2021 ರಂದು ಮುಂಜಾನೆ 09-30 ಗಂಟೆಯಿಂದ ದಿನಾಂಕ: 08-05-2021 ರಂದು ಮುಂಜಾನೆ 09-30 ಗಂಟೆ ನಡುವಿನ ಅವಧಿಯಲ್ಲಿ ಮಾಗೋಡ ಗ್ರಾಮದ ಯುಟಿಪಿ ಆಪೀಸ್ ಹತ್ತಿರ ರಸ್ತೆಯ ಬದಿಯಲ್ಲಿ ಇರುವ ಕಾಲುವೆಯಲ್ಲಿ ವಿಪರೀತ ಸರಾಯಿ ಕುಡಿದ ಮತ್ತಿನಿಲ್ಲಿ ಜೋಲಿ ಹೋಗಿ ಆಯಾ ತಪ್ಪಿ ಬಿದ್ದು ಮರಣ ಹೊಂದಿದ್ದು ಇವರ ಸಾವಿನಲ್ಲಿ ಯಾವುದೆ ಸಂಶಯ ಇರುವದಿಲ್ಲ ಅಂತಾ ಮೃತನ ಪತ್ನಿಯು ವರದಿ ನೀಡಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:19/2021 ಕಲಂ: 354(D), 506, 504 IPC.

                 ಅಣ್ಣಪ್ಪಬಸವರಾಜ ಹುಣಸುಮರದ  18 ವರ್ಷ ಸಾ|| ಮೊರಳ ಇತನು ಪ್ರತಿದಿನ ದನಗಳಿಗೆ ಹುಲ್ಲನ್ನು ತರಲು ಹೋದಾಗ ಹೊಲದಲ್ಲಿ ಹುಲ್ಲು ಕೋಯುವಾಗ ಹಾವು ಕಚ್ಚಿರುತ್ತದೆ ಆದರೆ ಅಣ್ಣಪ್ಪನಿಗೆ ಇದು ಗೊತ್ತಾಗದೆ ಆಕಳು ಮೈಯಿಸಲು ಹೊದಾಗ ತಲೆಸುತ್ತು ಬಂದಿದ್ದು ನೋಡಿ ತಂದೆ ಬಸವರಾಜ  ತನ್ನ ಮಗ ಅಣ್ಣಪ್ಪನನ್ನು ಗುತ್ತಲ ಆಸ್ಪತ್ರೆಗೆ ಉಪಚಾರಕ್ಕೆ ಬಂದಾಗ ಸಮಯ 03-00 ಗಂಟೆ ಆಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ವರದಿಗಾರ ಹಾಗೂ ಅವರ ಹೆಂಡತಿ ಕೂಡಿ ಹಾವೇರಿ ಸರ್ಕಾರಿ ಆಸ್ಪತ್ರೆಗೆ ಹೋಗಿ ದಾಖಲು ಮಾಡಿದಾಗ ಸಂಜೆ 04-00 ಆಗಿತ್ತು ಅಲ್ಲಿ ಅಣ್ಣಪ್ಪ ಇವನು ಉಪಚಾರದಲ್ಲಿ ಇದ್ದಾಗ ಉಪಚಾರ ಫಲಿಸದೇ ಸಾವನ್ನ ಒಪ್ಪಿರುತ್ತಾನೆ ಆಗ ಸಮಯ ಸಂಜೆ 05-30 ಗಂಟೆ ಆಗಿತ್ತು ಈ ಘಟನೆ ದಿನಾಂಕ: 07/05/2021 ರಂದು ಈ ಘಟನೆ ಸಂಭಂವಿಸಿರುತ್ತದೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕು ಅಂತಾ ವರದಿಯಲ್ಲಿ ನಮೂದು ಇರುತ್ತದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ಮಾರುತಿ ತಂದೆ ಶಿವಪ್ಪ ಶಿಡೇನೂರ ವಯಾ-22 ವರ್ಷ. ಜಾತಿ-ಹಿಂದೂ-ವಾಲ್ಮೀಕಿ, ಉದ್ಯೋಗ-ಕೂಲಿಕೆಲಸ. ಸಾ-ಅಗಸನಹಳ್ಳಿ, ತಾ-ಬ್ಯಾಡಗಿ ಇವರು 06 ತಿಂಗಳಿನಿಂದ ಹೊಟೆನೋವಿನ ಖಾಯಿಲೆಯಿಂದ ಬಳಲುತ್ತಿದ್ದು ಅನೇಕ ಖಾಸಗಿ ಆಸ್ಪತ್ರೆಗೆ ತೋರಿಸಿದರೂ ಗುಣಮುಖವಾಗಿರುವದಿಲ್ಲ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದು ಮನೆಯವರು ಬುದ್ದಿವಾದ ಹೇಳಿದರೂ ತನಗಿರುವ ಹೊಟೆನೋವಿನ ಖಾಯಿಲೆ ಬಗ್ಗೆ ಚಿಂತೆ ಮಾಡುವದನ್ನೇ ಬಿಟ್ಟಿರಲಿಲ್ಲ. ಇದೇ ಚಿಂತೆಯಲ್ಲಿ ದಿನಾಂಕ:07-05-2021 ರಂದು ಮದ್ಯಾಹ್ನ 12-00 ಘಂಟೆ ಸುಮಾರಿಗೆ ತನ್ನಷ್ಟಕ್ಕೆ ತಾನೇ ತನ್ನ ವಾಸದ ಮನೆಯ ರೂಮಿನಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಕುಡಿದವನಿಗೆ ಉಪಚಾರಕ್ಕೆ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ  ಹಾಗೂ ಅಲ್ಲಿಂದ ಇನ್ನೂ ಹೆಚ್ಚಿನ ಉಪಚಾರಕ್ಕೆ  ದಾವಣಗೇರಿ ಎಸ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕೊಡಿಸುತ್ತಿದ್ದಾಗ ಉಪಚಾರ ಫಲಿಸದೇ  ದಿನಾಂಕ:08-05-2021 ರಂದು ಬೆಳಗಿನ ಜಾವ 05-45 ಘಂಟೆಗೆ ಮರಣ ಹೊಂದಿದ್ದು ನನ್ನ ಗಂಡನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 11-05-2021 05:57 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080