ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ಮಹಿಳೆ ಕಾಣೆ.

              ಅಕ್ಷತಾ ತಂದೆ ಶಂಕರಸಾ ಹಬೀಬ, ವಯಾ: 23 ವರ್ಷ ಸಾ|| ಹಾವೇರಿ ಗುಗಿಕಟ್ಟಿ ಓಣಿ ಇವಳು ದಿನಾಂಕ: 03-07-2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ತನ್ನ ತಾಯಿಯ ಮುಂದೆ ಕಣ್ಣಿನ ಬಗ್ಗೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡುವಂತೆ ದರ್ಶನ್ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:42/2021 ಮಹಿಳೆ ಕಾಣೆ.

             ಕುಮಾರಿ: ಮನೋಜಾ ತಂದೆ ಬಸಪ್ಪ ಗಡದವರ ವಯಾ 18  ವರ್ಷ 6 ತಿಂಗಳು ಸಾಃ ಕಳಗೊಂಡ ತಾಃ ಬ್ಯಾಡಗಿ ಇವಳು ದಿನಾಂಕಃ 06-07-2021 ರಂದು ಬೆಳಗಿನ ಜಾವ 02-00 ಗಂಟೆಯಿಂದ 4-00 ಗಂಟೆಯ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆಕಳಗೊಂಡ ಗ್ರಾಮದ ಮನೆಯಿಂದ ಹೋದವಳು ವಾಪಸ ಮನೆಗೆ ಬಾರದೇ ಕಾಣೆಯಾಗಿದ್ದು, ಸದರಿಯವಳನ್ನು ಪತ್ತೆ ಮಾಡಿ ಕೊಡಲು ಲಕ್ಷವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:69/2021 ಕಲಂ: 379 IPC.

             40 ರಿಂದ 45 ವರ್ಷದ      ಅನಾಮಧೇಯ ವ್ಯಕ್ತಿ ದಿನಾಂಕ 02-07-2021 ರಂದು ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯ ನಡುವಿನ ಅವಧಿಯಲ್ಲಿ ಹಾವೇರಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕೊಠಡಿಯ ಮುಂದಿನ ಸಾರ್ವಜನಿಕರು ಕುಳಿತುಕೊಳ್ಳುವ ಬೆಂಚಿನ ಮೇಲೆ ಇಟ್ಟಿದ್ದ ಸುಮಾರು 40,000/- ರೂ ಬೆಲೆ ಬಾಳುವ ಎಚ್.ಪಿ ಕಂಪನಿಯ ಲ್ಯಾಪಟಾಪ್ Modal No- AMD Rayzen 5, Configuration- 8GB RAM/1TB HDD/LegalWindows10 Home addition with 15.6 Display, SL NO –CND0498N02, MAC Add- 30-24-A9-9C-CF-9E, IP Address 00-FF-27-42-D9-3C, Wifi Add – 22-4E-F6-B3-0B81ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:69/2021 ಕಲಂ: 309 IPC.

             ಮುತ್ತಪ್ಪ ಹಾಲಪ್ಪ ಹರಿಜನ ಸಾ|| ಅಕ್ಕೂರ ಇವರು ಅಕ್ಕೂರು ಗ್ರಾಮದ ಹತ್ತಿರ ಇರುವ ಸರಕಾರಿ ಜಾಗೆಯಲ್ಲಿ ಈಗ ಸುಮಾರು ವರ್ಷಗಳ ಹಿಂದಿನಿಂದ 02 ಎಕರೆ ಜಮೀನನ್ನು ಸಾಗುವಳಿ ಮಾಡುತ್ತಾ ಬಂದಿದ್ದನು. ಸಾಗುವಳಿ ಮಾಡಿದ ಜಮೀನಿದ ಹತ್ತಿರ ಸರಕಾರಿ ಶಾಲೆ ಕಟ್ಟಡ ಕಟ್ಟಿಸುವ ಸುಲುವಾಗಿ ಯೋಜನೆಯನ್ನು ಮಾಡಿ ಈಗ 2-3 ದಿವಸಗಳ ಹಿಂದೆ ಗುದ್ಲಿ ಪೂಜೆ ಮಾಡಿದ್ದು ಇದರ ಬಗ್ಗೆ ಮಾನಸಿಕ ಮಾಡಿಕೊಂಡು ದಿನಾಂಕ: 07/07/2021 ರಂದು ಮುಂಜಾನೆ 10-00 ಗಂಟೆಗೆ ಅಕ್ಕೂರ ಗ್ರಾಮದಲ್ಲಿ ತನ್ನ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಯಾವುದೇ ವಿಷಕಾರಕ ಔಷದ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅವನಿಗೆ ಉಪಚಾರಕ್ಕೆ ಹೊಸರಿತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಉಪಚಾರಕ್ಕೆ ದಾಖಲಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:88/2021 ಕಲಂ: 279,337,338,304(A) IPC.

             ಪರಮೇಶ ತಂದೆ ಡಾಕಪ್ಪ ಬೇವಿನಹಳ್ಳಿ, ಸಾ; ಚಿಕ್ಕಹುಲ್ಲಾಳ ತಾ: ಹಾನಗಲ್ಲ, ಈತನು  ದಿನಾಂಕ: 07-07-2021 ರಂದು ಮುಂಜಾನೆ 08-30 ಗಂಟೆಗೆ ತನ್ನ ಕಟಮಾ ಗಾಡಿ ನಂ: ಕೆಎ-27-ಸಿ-2336 ಗಾಡಿಯಲ್ಲಿ ಸುಮಾರು 10-11 ಜನರಿಗೆ ಹತ್ತಿಸಿಕೊಂಡು ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯ ಕಲ್ಲಾಪೂರ ಗ್ರಾಮದ ಕಡೆಯಿಂದ ಶಿವಪೂರ ರಸ್ತೆಯ ಕಡೆಗೆ  ಅತೀ ಜೋರಾಗಿ ನಿಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಾವೇರಿ ಕಾಗಿನೆಲೆ ರಸ್ತೆಯ ಮೇಲೆ ಸಂಚರಿಸುವ ವಾಹನಗಳನ್ನ ಗಮನಿಸದೇ ಕುರುಬಗೊಂಡ ಗ್ರಾಮದ ಕಡೆಯಿಂದ ಹಾವೇರಿ ಕಡೆಗೆ ಬರುತ್ತಿದ್ದ ಕಾರ ನಂ: ಕೆಎ-68-ಎಮ್-2279 ನೇದ್ದಕ್ಕೆ ಕಲ್ಲಾಪೂರ ಕ್ರಾಸ್ದದಲ್ಲಿ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಟಮಾ  ಗಾಡಿಯನ್ನು ಪಲ್ಟಿ ಮಾಡಿ, ಕಟಮಾ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೇ, ತೀರ್ವ ಗಾಯಹೊಂದಿದ್ದ  ಲಕ್ಷ್ಮವ್ವ ಗಂಡ ಪುಟ್ಟಪ್ಪ ಕಲ್ಲೇಡಿ, ಇವಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮರಣ ಪಡುವಂತೆ ಮಾಡಿದ್ದಲ್ಲದೇ  ತಾನು ಗಾಯಪಡಿಸಿಕೊಂಡು ವಾಹನಗಳನ್ನು ಜಕಂಗೊಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:138/2021 ಕಲಂ: 379 IPC.

             ದಿನಾಂಕ: 07-07-2021 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಸಂತೋಷ ಬಸಪ್ಪ ಪೂಜಾರ ಹಾಗೂ ಆತನ ಸಹಚರ ಸೇರಿ ಸರಕಾರದ ಯಾವುದೇ ಪಾಸು ವ ಪರ್ಮಿಟ್ ಇಲ್ಲದೇ ಅಕ್ರಮವಾಗಿ  ಲಕ್ಷ್ಮೇಶ್ವರ ತಾಲೂಕಿನ ಸಾಸಲವಾಡ ಗ್ರಾಮದ ಹತ್ತಿರದ ಯಾವುದೋ ಒಂದು ಹಳ್ಳದಿಂದ ಕಳ್ಳತನದಿಂದ ಮರಳನ್ನು ಸಂಪಾದಿಸಿಕೊಂಡು ಟಾಟಾ ಕಂಪೆನಿಯ ಲಾರಿ ನಂಬರ: ಕೆಎ-26 ಎ-6027, ಮತ್ತು ಟಾಟಾ ಕಂಪೆನಿಯ ಲಾರಿ ನಂಬರ: ಕೆಎ-25 ಬಿ-6167 ನೇದ್ದವುಗಳಲ್ಲಿ ಲಾರಿಗಳಲ್ಲಿ ಅಕ್ರಮವಾಗಿ ತೆಗೆದುಕೊಂಡು ಬರುವಾಗ ಸವಣೂರ ಶಹರದ ಲಕ್ಷ್ಮೇಶ್ವರ ನಾಕಾದ ಹತ್ತಿರ ರಸ್ತೆಯ ಮೇಲೆ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ವೀರಪ್ಪ ತಂದೆ ಬೂದೆಪ್ಪ ಆನ್ವೇರಿ, ವಯಾ- 52 ವರ್ಷ, ಜಾತಿ- ಹಿಂದೂ ಲಿಂಗಾಯತ, ಉದ್ಯೋಗ- ವ್ಯವಸಾಯ ಸಾ: ನಾಗವಂದ, ಈತನು ಒಟ್ಟು 2 ಎಕರೆ 20 ಗುಂಟೆ ಜಮೀನು ಹೊಂದಿದ್ದು, ಸದರ ಜಮೀನು ಬೇಸಾಯವನ್ನು ಈತನೇ ಮಾಡುತ್ತಾ ಬಂದಿದ್ದು, ತನ್ನ ಜಮೀನು ಬೇಸಾಯಕ್ಕೆ ಅಂತಾ ತಡಕನಹಳ್ಳಿ ಕೆ.ವಿ,ಜಿ ಬ್ಯಾಂಕಿನಲ್ಲಿ 1,10,000/ ರೂಪಾಯಿ ಹಾಗೂ ಕೈಗಡವಾಗಿ 2,00,000/ ರೂಪಾಯಿ ಹೀಗೆ ಒಟ್ಟು 3,10,000/ ರೂಪಾಯಿ ಸಾಲ ಮಾಡಿಕೊಂಡು ಜಮೀನು ಬೇಸಾಯ ಮಾಡುತ್ತಾ ಬಂದಿದ್ದು, ಹೋದ ವರ್ಷದಲ್ಲಿ ಬೆಳೆದ ಬೆಳೆ ಸರಿಯಾಗಿ ಬಾರದೇ ಇದ್ದರಿಂದ ಹಾಗೂ ಅಲ್ಪ ಸ್ವಲ್ಪ ಬೆಳೆದ ಪೀಕಿಗೆ ಸರಿಯಾಗಿ ಬೆಲೆ ಸಿಗದ್ದರಿಂದ ಸಾಲ ಹೆಚ್ಚಾಗಿದ್ದರಿಂದ ಸಾಲ ಹೇಗೆ ತೀರಿಸುವದು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ: 07/07/2021 ರಂದು ಮುಂಜಾನೆ 06-00 ಗಂಟೆಯಿಂದ ಮುಂಜಾನೆ 07-45 ಗಂಟೆ ಮಧ್ಯದ ಅವದಿಯಲ್ಲಿ ನಾಗವಂದ ಗ್ರಾಮದ ತಮ್ಮ ಕಣದಲ್ಲಿ, ತೇಗದ ಮರಕ್ಕೆ ನೇಣು ಹಾಕಿಕೊಂಡು ತೀರಿಕೊಂಡಿರುತ್ತಾನೆ, ಮೃತನ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಿರಿ ಅಂತಾ ಶಿವರಾಜ  ನೀಡಿದ ವರದಿಯನ್ವಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಹನುಂತಪ್ಪ ತಂದೆ ದುರಗಪ್ಪ ದೊಡ್ಡಮನಿ @ ಮಾದರ ವಯಾ:40 ವರ್ಷ ಜಾತಿ: ಹಿಂದೂ ಹರಿಜನ ಉದ್ಯೋಗ: ಒಕ್ಕಲುತನ ಸಾ: ಮೆಣಸಿನಹಾಳ ತಾ:ರಾಣೇಬೆನ್ನೂರ  ತನ್ನ ಜಮೀನ ರಿ ಸ ನಂ: 52/1 ನೇದ್ದರಲ್ಲಿ 2 ಎಕರೆ 35 ಗುಂಟೆ ಜಮೀನು ಸಾಗುವಳಿ ಸಂಬಂದ  ಕೈಗಡವಾಗಿ 3.00000/-ರೂಪಾಯಿ ಸಾಲ ಮಾಡಿ ಮತ್ತು ಧರ್ಮಸ್ತಳ ಸಂಘದಲ್ಲಿ 20.000/-ರೂ ಸಾಲ ಮಾಡಿದು ಇತ್ತಿಚೇಗೆ ಮಳೆ ಬೆಳೆ ಸರಿಯಾಗಿ ಬಾರದೆ ಇರುವದರಿಂದ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತ ಬಂದು ಸದ್ಯ ಮಳೆಯು ಆಗದೇ ತನ್ನ ಜಮೀನಿನಲ್ಲಿಯ ಬೆಳೆಯು ಒಣಗಿದರಿಂದ ಅದೈರ್ಯಗೊಂಡು ಜೀವನದಲ್ಲಿ ಜಿಗಿಪ್ಸೆಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ: 06-07-2021 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ:7-07-2021 ರಂದು ಮುಂಜಾನೆ 6-00 ಗಂಟೆ ನಡುವಿನ ಅವದಿಯಲ್ಲಿ ತನ್ನ ಮನೆಯ ಜಂತಿಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ ಅಂತಾ ಮೃತನ ಪತ್ನಿ ನೀಡಿದ ವರದಿ ಮೆರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ

 

ಇತ್ತೀಚಿನ ನವೀಕರಣ​ : 16-07-2021 06:13 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ