ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:36/2021 ಮಹಿಳೆ ಕಾಣೆ.

                ಪೂಜಾ ತಂದೆ ಮಾರುತಿ ಮುದ್ದಿ, ವಯಾ: 21 ವರ್ಷ 6 ತಿಂಗಳು ಸಾ|| ಗುಡೂರ ಇವಳು ದಿನಾಂಕ : 24-05-2021 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ತನ್ನ ಸ್ನೇಹಿತೆ ದೇವಕ್ಕ ಸಿದ್ದಾಪುರ ಇವರ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು, ರಾತ್ರಿ 8-00 ಗಂಟೆ ಆದರೂ ತಮ್ಮ ಮಗಳು ಮನೆಗೆ ಮರಳಿ ಬಾರದೇ ಎಲ್ಲಿಯೊ ಕಾಣೆಯಾಗಿದ ಬಗ್ಗೆ ಖಾತ್ರಿಯಾಗಿದ್ದರಿಂದ, ಕಾಣೆಯಾದ ಪೂಜಾ ಇವಳನ್ನ ಹುಡುಕಿಕೊಡಬೇಕೆಂದು ಮಾರುತಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:37/2021 ಕಲಂ: 323, 354(B), 504, 506 IPC.

                ದಿನಾಂಕಃ05-06-2021 ರಂದು 00-30 ಗಂಟೆಯ ಸುಮಾರಿಗೆ ಶ್ರೀಮತಿ ಸುಮಂಗಲಾ ಲಮಾಣಿ ಸಾ|| ನೆಲ್ಲಿಕೊಪ್ಪ ಇವರು ತಮ್ಮ ವಾಸದ ಮನೆಯ ಹಿತ್ತಲದ ಹಿಂದೆ ಇರುವ ಮಾದರ ಹೊಲದಲ್ಲಿ ಹೋಗಿ ಬಹಿರ್ದೆಸೆ ಮಾಡುತ್ತಿದ್ದಾಗ ಮಂಗಲೆಪ್ಪ ಶಿವಪ್ಪ ಲಮಾಣಿ ಇತನು ಹತ್ತಿರ ಹೋಗಿ ನೀನು ಇಷ್ಠೋತ್ತಿನ್ಯಾಗ ಯಾರ ಜೊತೆ ಪೋನಿನಲ್ಲಿ ಮಾತನಾಡಕತ್ತಿ ಹಾದರಗಿತ್ತಿ, ನೀನು ಯಾರ್ಯಾರ ಜೊತೆಗೆ ಕಾಂಟ್ಯಾಕ್ಟ್ ಅದಿ ಯಾವ ಮಿಂಡನ ಜೊತೆ ಮಾತನಾಡಕತ್ತಿ, ಹಾದರಗಿತ್ತಿ, ಬೊಸಡಿ ಅಂತಾ ಬೈಯುತ್ತಾ ತಲೆ ಕೂದಲನ್ನು ಹಿಡಿದು, ಎಳೆದಾಡಿ, ಕೈಯಿಂದ ಬೆನ್ನಿಗೆ, ಹೊಡೆದು, ನೆಲಕ್ಕೆ ಎತ್ತಿ ಒಗೆದು. ಮೈಮೇಲಿನ ಸೀರೆ ಹಿಡಿದು ದರದರನೇ ನೆಲದ ಮೇಲೆ ಎಳೆದು ಕಾಲಿನಿಂದಾ ಒದೆಯುತ್ತಾ, ಇವತ್ತ ನಿನ್ನ ಜೀವಂತ ಬಿಡಂಗಿಲ್ಲಾ ಒಂದು ಗತಿ ಕಾಣಿಸಿಬಿಡ್ತೆನಿ ಅಂತಾ ಜೀವದ ಬೇದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 11-06-2021 10:34 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ