ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:33/2021ಕಲಂ: 376(2)(n), 420 IPC.

                 ಮಧು ರುದ್ರಯ್ಯಾ ಹಿರೇಮಠ ವಯಾ : 29 ಸಾ|| ಹಾವೇರಿ ವಿದ್ಯಾನಗರ ಇವರು ಬಾಡಿಗೆಯಂತೆ ವಾಸವಾಗಿರುವ ಮನೆಗೆ ಅಣ್ಣಪ್ಪಾ ಗುತ್ತೆಪ್ಪ ಬಾರ್ಕಿ ಸಾ|| ಅರಶಿಣಗುಪ್ಪಿ ಇವರು  ದಿ: 27-01-2018 ರಂದು ರಾತ್ರಿ 12-00 ಗಂಟೆಗೆ ಮಧು ಇವರ ಮನೆಗೆ ಬಂದು ಬಾಗಿಲು ಬಡಿದು ರಾತ್ರಿ ಊರಿಗೆ ಹೋಗಲು ವಾಹನ ಇಲ್ಲ ಮತ್ತು ರೂಮಿನ ಚಾವಿಯನ್ನು ತೆಗೆದುಕೊಂಡು ಹೋಗಿದ್ದಾರೆ ನಿಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತೇನೆ ಅಂದಾಗ ಮಧು ನಮ್ಮ ಮನೆಯಲ್ಲಿ ಯಾರೂ ಇಲ್ಲ ಬರಬೇಡವೆಂದರೂ ಒತ್ತಾಯವಾಗಿ ಮನೆ ಒಳಗೆ ಬಂದು ಮಧು ಇವರ ಮೇಲೆ ಬಲತ್ಕಾರ ಮಾಡಿ, ನಾನು ಸುದ್ದಿವಾಹಿನಿಯ ವರದಿಗಾರ, ನಾನು ನಿನ್ನನ್ನು ಮದುವೆಯಾಗುತ್ತೇನೆ, ನಿನ್ನ ಗಂಡ ಅಶಕ್ತನಾಗಿರವನು ಅವನಿಗೆ ಡೈವರ್ಸ ಕೊಡು ಎಂದು ಹೇಳಿ ನಂಬಿಸಿ ದೈಹಿಕ ಸಂಪರ್ಕ ಮಾಡುತ್ತಾ ಬಂದಿದ್ದು, ಅಲ್ಲದೆ ದಿ: 19-01-2019 ರಂದು ತುಂಬಾ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಣ್ಣಪ್ಪ ತನ್ನ ಕಾರಿನಲ್ಲಿ ಎಸ.ಡಿ.ಎಮ್ ದಾರವಾಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ದಿ: 21-01-2019 ರಂದು ರಾತ್ರಿ 1-24 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಣ್ಣಪ್ಪ ತನ್ನ ಯಾವುದೇ ಮಾಹಿತಿಯನ್ನು ನೀಡದೆ ಮಧು ಮಗನಿಗೆ ವಿಜಯರಜತ ಅಂತಾ ಮೊದಲನೆ ಗಂಡನ ಮಾಹಿತಿಯನ್ನು ಬರೆಸಿದ್ದು ಅಲ್ಲದೆ, ಮದುವೆಯಾಗಿದೆ ನಿನಗೆ ಮದುವೆ ಆಗಲಾರೆ, ಶಾಶ್ವತವಾಗಿ ಇಟ್ಟುಕೊಳ್ಳುತ್ತೇನೆ ನಿನಗೆ ಹೆಂಡತಿ ಸ್ಥಾನ ಮತ್ತು ಮಗನಿಗೆ ತಂದೆ ಸ್ಥಾನ ನೀಡಲಾರೆ ಅಂತಾ ಹೇಳುತ್ತಾ ಸುಳ್ಳು ಹೇಳಿ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ, ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:47/2021ಕಲಂ: 379 IPC.

                 ರಾಮಕೃಷ್ಣ ಪಾಂಡುರಂಗರಾವ್ ಗುಜ್ಜರ ಹಾಗೂ ರಮೇಶ ದೇವೆಂದ್ರಪ್ಪ ಹಲಗಿ ಸಾ|| ಹಾವರನೂರ ವರಿಬ್ಬರು ಕೂಡಿಕೊಂಡು ಟಿಪ್ಪರ ಲಾರಿ ನಂಬರ: KA27C1533 ನೇದ್ದರಲ್ಲಿ ತಮ್ಮ ಫಾಯಿದೆಗೋಸ್ಕರ ರಾತ್ರಿಯ ಅವಧಿಯಲ್ಲಿ ಹಾವನೂರ ಹತ್ತಿರ ತುಂಗಭದ್ರಾ ನದಿಯ ಒಡಲಿನಿಂದ ಸುಮಾರು 10 ಟನ್ ಮರಳನ್ನು ಕಳ್ಳತನದಿಂದ ಅಕ್ರಮವಾಗಿ  ಲೋಡ್ ಮಾಡಿಕೊಂಡು ಹಾವನೂರ ಕಡೆಯಿಂದ ಗುತ್ತಲ ಮಾರ್ಗವಾಗಿ ಹಾವೇರಿ ಕಡೆಗೆ ಸಾಗಾಟ ಮಾಡುತ್ತಿದ್ದಾಗ ದಿ: 07-05-2021 ರಂದು 00-15 ಘಂಟೆಗೆ ದಾಳಿ ಕಾಲಕ್ಕೆ ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 11-05-2021 05:54 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080