ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:24/2021 ಮಹಿಳೆ ಕಾಣೆ.

                 ಸ್ವಪ್ನಾ ತಂದೆ ಶಶಿಧರ ಬಂಡವಲಕರ, ವಯಾ: 18 ವರ್ಷ 2 ತಿಂಗಳು ಇವಳು ದಿನಾಂಕ: 07-04-2021 ರಂದು ಮುಂಜಾನೆ 4-00 ಗಂಟೆ ಸುಮಾರಿಗೆ ಸ್ವಪ್ನಾಳ ತಂದೆ ಶಶಿಧರ ಬಾತ್ ರೂಮ್ಗೆ ಹೋಗಿ ಬರುತ್ತಿರುವಾಗ ರೂಮ್ನಲ್ಲಿ ಹೆಂಡತಿ ಜೊತೆಗೆ ಮಲಗಿದ್ದ ತಮ್ಮ ಮಗಳು ಮನೆಯಲ್ಲಿ ಯಾರಿಗೂ ಹೇಳದೆ  ಎಲ್ಲಿಯೊ ಕಾಣೆಯಾಗಿ ಹೋದ ಬಗ್ಗೆ ಖಾತ್ರಿಯಾಗಿದ್ದರಿಂದ, ಕಾಣೆಯಾದ ತಮ್ಮ ಮಗಳನ್ನು ಹುಡಿಕಿಕೊಡಬೇಕು ಅಂತಾ ಶಶಿಧರ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:69/2021 ಕಲಂ: 279, 304(A) IPC.

                 ದಿನಾಂಕ: 01-11-2020 ರಂದು  18-30 ಗಂಟೆ ಸುಮಾರಿಗೆ ಚನ್ನಬಸಪ್ಪ ಶಂಬಣ್ಣ ವಿಜಾಪುರ ಸಾ: ಬಸವನಾಳ ತಾ: ಶಿಗ್ಗಾಂವ ಈತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂಬರ: ಕೆಎ25 ಇಡಿ6615 ನೇದ್ದರಲ್ಲಿ ಶಿವಾನಂದ ತಂದೆ ಯಲ್ಲಪ್ಪ ಹಡಪದ, ವಯಸ್ಸು: 30 ವರ್ಷ, ಜಾತಿ: ಹಿಂದೂ ಹಡಪದ, ಉದ್ಯೋಗ: ವ್ಯವಸಾಯ ಸಾ: ಬಸವನಾಳ ತಾ: ಶಿಗ್ಗಾಂವ ಇವರಿಗೆ ಹಿಂದುಗಡೆ ಕೂಡ್ರಿಸಿಕೊಂಡು ಸವಣೂರಿನಿಂದ ಮಾದಾಪುರ ಮಾರ್ಗವಾಗಿ ಬಸವನಾಳಕ್ಕೆ ಮೋಟಾರ ಸೈಕಲ್ಲನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷದಿಂದ ನಡೆಯಿಸಿಕೊಂಡು ಹೋಗುವಾಗ ಮಾದಾಪುರ ಗ್ರಾಮದ ಹತ್ತಿರ ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಮೋಟಾರ ಸೈಕಲ್ ಸಮೇತ ಬೀಳುವಂತೆ ಮಾಡಿ ಅಪಘಾತ ಪಡಿಸಿ, ಮೋಟಾರ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಶಿವಾನಂದ ಯಲ್ಲಪ್ಪ ಹಡಪದ ಇವರಿಗೆ ರಸ್ತೆಯ ಮೇಲೆ ಬೀಳುವಂತೆ ಮಾಡಿ ಅವರ ತಲೆಗೆ ಮಾರಣಾಂತಿಕ ಗಾಯ ಪೆಟ್ಟುಗಳು ಆಗುವಂತೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 13-11-2020 ರಂದು ಮುಂಜಾನೆ 6-42 ಗಂಟೆಗೆ ಮರಣ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ತಿರಕಪ್ಪಹನುಮಂತಪ್ಪ ಕೆಂಗನಿಂಗಪ್ಪನವರ ವಯಾ: 65 ಸಾ|| ಹಾವನೂರ ಇವರು ಸುಮಾರು 02 ತಿಂಗಳಹಿಂದೆ ಗಂಟಲು ನೋವಾಗಿ ಸರಿಯಾಗಿ ಊಟ ಮಾಡಲು ಬರುತ್ತಿರುವುದಿಲ್ಲ. ಈ ಬಗ್ಗೆ ಅವನ ಮನೆಯ ಜನರು ದಾವಣಗೇರಿ ಸಿಟಿ ಸೆಂಟ್ರಲ್ ಆಸ್ಪತ್ರೆ ತೋರಿಸಿದ್ದು ಗುಣಮುಖವಾಗಿರುವುದಿಲ್ಲ ಆದ್ದರಿಂದ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಅದರ ಭಾದೇ ತಾಳಾಲಾರದೇ ದಿನಾಂಕ: 06/04/2021 ರಂದು ಸಂಜೆ 7-00 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಯಾವುದೋ ವಿಷಕಾರಕ ಎಣ್ಣಿಯನ್ನು ಕುಡಿದಿದ್ದು ಉಪಚಾರಕ್ಕೆ ಗುತ್ತಲ ಸರ್ಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಕರೆದುಕೊಂಡು ಬಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿದ್ದು   ಉಪಚಾರ ಫಲಿಸದೇ ದಿನಾಂಕ: 06/04/2021 ರಂದು ರಾತ್ರಿ 10-30  ಗಂಟೆಗೆ ಮರಣ ಹೊಂದಿದ್ದು ಇರುತ್ತದೆ ಮೃತನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲಾ ಅಂತಾ ನೀಲಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:11/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ನೀಲಮ್ಮ ಕೋಂ ಕೋಟೆಪ್ಪ ಹರಿಜನ ವಯಸ್ಸು-31 ವರ್ಷ, ಸಾ|| ಶಾಖಾರ ತಾ|| ಹಾವೇರಿ, ಇವಳು ದಿನಾಂಕ 06-04-2021 ರಂದು ಮದ್ಯಾಹ್ನ 01-00 ಗಂಟೆಗೆ ಶಾಖಾರ ಗ್ರಾಮ ಹದ್ದಿ ಬೂದನೂರ ರಸ್ತೆಯಲ್ಲಿನ ತಮ್ಮ ಹೊಲಕ್ಕೆ ಆಕಳನ್ನು ಮೇಯಿಸಲು ಹೋದಾಗ ಹೋಲದಲ್ಲಿ ಆಕಳು ಅವಳ ಹೊಟ್ಟೆಗೆ ಹಾಯ್ದು ಗಾಯಗಳಾಗಿದ್ದು, ಅವಳಿಗೆ ಉಪಚಾರಕ್ಕೆ ಹೊಳಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲಿಸಿದ್ದು ಉಪಚಾರ ಫಲಿಸದೆ ಮದ್ಯಾಹ್ನ 02-30  ಗಂಟೆಗೆ ಮರಣ ಹೊಂದಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲಾ ಅಂತಾ ನಿಂಗಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 09-04-2021 06:08 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ