ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:47/2021 ಮಹಿಳೆ ಕಾಣೆ.

            ಪಾರ್ವತಿ ತಂದೆ ವೀರಪಾಕ್ಷಪ್ಪ ಹಡಪದ, ವಯಾ: 18 ವರ್ಷ 2 ತಿಂಗಳು ಇವಳು ತನ್ನ ತಾಯಿಯ ತವರು ಮನೆಯಲ್ಲಿ ದಿನಾಂಕ: 04-08-2021 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಊಟ ಮಾಡಿ ಮನೆಯ ಮುಂದೆ ವಾಕಿಂಗ ಮಾಡುತ್ತಿದ್ದವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೊ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:72/2021 ವ್ಯಕ್ತಿ  ಕಾಣೆ.

            ಮಲ್ಲೇಶಪ್ಪಚನ್ನಬಸಪ್ಪ ಬೆಳವಗೆ  ವಯಾ 55 ವರ್ಷ ಸಾ|| ಬಂಕಾಪೂರ ಇತನು ದಿನಾಂಕ:05-12-2019 ರಂದು ಮದ್ಯಾಹ್ನ 01.00 ಗಂಟೆ ಸುಮಾರಿಗೆ ಪಂಡರಾಪೂರಕ್ಕೆ ದೇವರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನನೆಗೆ ವಾಪಸ ಬಾರದೆ ಕಾಣೆ ಆಗಿದ್ದು. ಕಾಣೆಯಾದವನನ್ನು ಈವರೆಗೆ ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದವನ್ನು ಹುಡುಕಿಕೊಡಬೇಕೆಂದು ಸಿದ್ದವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೆಕೇರೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ:126/2021 ಬೈಕ್‌ ಕಳ್ಳತನ.

            ಬಸವರಾಜ ಶೇಖಸನದಿ ಸಾ|| ಬಾಳಂಬೀಡ ತಾ|| ಹಿರೆಕೇರೂರು ಇತನು ತನ್ನ ಗೆಳೆಯನೊಂದಿಗೆ ಊಟ ಮಾಡಲು ಅಂತಾ ಹಿರೇಕೆರೂರು ಪಟ್ಟಣದಲ್ಲಿರುವ ಕದಂಬ ಹೊಟೆಲ್ಲಿಗೆ ಬಂದು ಹೊಟೆಲ್ಲ ಮುಂದೆ ತನ್ನ ಮೋಟಾರ ಸೈಕಲ್ಲನ್ನು ನಿಲ್ಲಿಸಿ ಊಟ ಮಾಡಿ ಹೊರಗೆ ಬಂದು ನೋಡಿದಾಗ ದಿನಾಂಕ: 05-08-2021 ರಂದು 21-00 ಗಂಟೆಯಿಂದ 22-00 ಗಂಟೆಯ ನಡುವಿನ ಅವಧಿಯಲ್ಲಿ. ಹಿರೇಕೆರೂರು ಪಟ್ಟಣದ ಕದಂಬ ಹೊಟೆಲ್ಲ ಮುಂದೆ, ನಿಲ್ಲಿಸಿದ್ದ ಒಂದು ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ ಸೈಕಲ್ ನಂಬರ ಕೆ,ಎ, 27/ಇಜಿ-1594 ಅಂತಾ ಇದ್ದು ಇದರ ಇಂಜಿನ ನಂಬರ: ಆಊಚಘಉಐ58007 ಚೆಸ್ಸಿ ನಂಬರ: 11ಅಚ7ಉಘಐ35646  ಅ;ಕಿ 50,000/-ರೂ. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:29/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

            ಪೂಜಾ ಸಾ|| ಚಿಕ್ಕಲಿಂಗದಳ್ಳಿ ಇವಳು ಸುಮಾರು 02 ತಿಂಗಳ ಹಿಂದಿನಿಂದ ಹಳೇರಿತ್ತಿ ಗ್ರಾಮದ ತನ್ನ ಅಜ್ಜಿ ಮನೆಗೆ ಬಂದು ವಾಸವಿದ್ದಳು. ಇವಳಿಗೆ ಸುಮಾರು 15 ದಿನಗಳ ಹಿಂದಿನಿಂದ ಹೊಟ್ಟೆ ನೋವು ಬರುತ್ತಿದ್ದು ಹೊಟ್ಟೆ ನೋವು ಬಂದು ಭಾದೆ ತಾಳಲಾರದೇ ದಿನಾಂಕ: 01/08/2021 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ಹಳೇರಿತ್ತಿ ಗ್ರಾಮದ ಶಂಭುಲಿಂಗಪ್ಪ ಗೋಪಾಳಿ ಇವರ ಮನೆಯಲ್ಲಿ ಯಾವುದೋ ವಿಷಕಾರಕ ಎಣ್ನೆ ಕುಡಿದಿದ್ದು ಅವಳಿಗೆ ಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆಂದು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಉಪಚಾರ ಫಲಿಸಿದೆ ದಿನಾಂಕ 06/08/2021 ರಂದು ಮುಂಜಾನೆ 08-45 ಗಂಟೆಗೆ ಮೃತಪಟ್ಟಿರುತ್ತಾಳೆ ವಿನಃ ಮೃತಳ ಸಾವಿನಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಅಂತಾ ಮಂಜಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 16-08-2021 11:16 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080