ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:90/2021 ಕಲಂ: 323, 354, 504, 506, 34 IPC.

                ಶ್ರೀಮತಿ, ಶಾರಧಾ ಕೋಂ ನಿಂಗಪ್ಪ ದೇವಗಿರಿ ಸಾಃ ಹೇರೂರ ಇವರಿಗೆ ಸುಮಾರು 22 ವರ್ಷಗಳ ಹಿಂದೆ ಹೇರೂರ ಗ್ರಾಮದ ನಿಂಗಪ್ಪ ನಾಗಪ್ಪ ದೇವಗಿರಿ ಇವರೊಂದಿಗೆ ಮದುವೆ ಆಗಿದ್ದು ಇವರಿಗೆ ಎರಡು ಜನ ಹೆಣ್ಣು ಮಕ್ಕಳಿದ್ದು ಒಬ್ಬಳಿಗೆ ಮದುವೆ ಮಾಡಿಕೊಟ್ಟಿದ್ದು ಇದ್ದು ಶಾರದಾ ಇವರ ಗಂಡ ಕಳೆದ 5 ವರ್ಷಗಳ ಹಿಂದೆ ಮರಣ ಹೊಂದಿದ್ದು ನಂತರ ಇವರು ಬೇರೆ ಮನೆಯಲ್ಲಿಯೇ ತನ್ನ ಮಗಳೊಂದಿಗೆ ಇದ್ದು ಗಂಡನಿಗೆ ಬರಬೇಕಾದ 2 ಎಕರೆ ಜಮೀನನ್ನು ಶಾರದಾ ಇವರ ಗಂಡನ ಮನೆಯವರು ಕೊಡದೆ ಆಗಾಗ ಮನೆ ಮುಂದೆ ಬಂದು ಜಗಳ ಮಾಡುತ್ತಾ ತೊಂದರೆ ಕೊಡುತ್ತಾ ಬಂದಿದ್ದು ಇದ್ದು. ಶಾರದಾ ತನ್ನ ಗಂಡನಿಗೆ ಸಂಬಂದಪಟ್ಟ 30 ಗುಂಟೆ ಜಮೀನನ್ನು ಹೋದ ವರ್ಷದಿಂದ ಉಳುಮೆ ಮಾಡುತ್ತಾ ಬಂದಿದ್ದು, ಆದರೆ ಶಾರದಾ ಇವರ ಗಂಡನ ಮನೆಯವರೆಲ್ಲರು ಸೇರಿಕೊಂಡು 05-06-2021 ರಂದು ರಾತ್ರಿ 11-00 ಘಂಟೆ ಸುಮಾರಿಗೆ ಸದರ ಜಮೀನಿಗೆ ಹೋಗಿ ಮೆಕ್ಕೆ ಜೋಳ ಬಿತ್ತನೆ ಮಾಡಿಕೊಂಡು ಬಂದಿದ್ದು, ಶಾರದಾ ದಿನಾಂಕ:06-06-2021 ಬೆಳಿಗ್ಗೆ ಜಮೀನಿಗೆ ಹೋದಾಗ ಜಮೀನದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ ವಿಷಯಗೊತ್ತಾಗಿ ಜಮೀನಿಂದ ಮನೆ ಬಂದಾಗ ಮುಂಜಾನೆ 10-00 ಘಂಟೆ ಸುಮಾರಿಗೆ ಮಂಜಪ್ಪ ದೇವಗೇರಿ ಹಾಗೂ ಅವರ ಸಹಚರರು ಸೇರಿ ಮನೆ ಎದರುರಿಗೆ ಬಂದು ಬೋಸಡಿ ನಿನಗೆ ಸೊಕ್ಕೂ ಬಹಳ ಆಗೈತೆ ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಹಿಡಿದು ದೂಡಾಡಿದ್ದು, ಹಾದರಗಿತ್ತಿಯನ್ನು ಊರು ಬಿಡಿಸಬೇಕು ಎಂದು ಅವಾಚ್ಯವಾಗಿ ಬೈದಾಡುತ್ತಾ ಕೈಗಳಿಂದ ಮೈ ಕೈಗೆ ಹೊಡೆದು ಇನ್ನೊಮ್ಮೇ 30 ಗುಂಟೆ ಜಮೀನಿಗೆ ಸಾಗುವಳಿ ಮಾಡಲು ಬಂದರೆ ನಿನ್ನ ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಭೇದರಿಕೆ ಹಾಕಿದ್ದು ಇದರಿಂದ ಮಾನಸಿಕ ಮಾಡಿಕೊಂಡು ಶಾರದಾ ವಿಷ ಸೇವನೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:91/2021 ಕಲಂ:CODE OF CRIMINAL PROCEDURE, 1973 (U/s-102,41(1)(d)); 379  IPC.

                ಮಧು ಇರಪ್ಪ ಕರೆಕ್ಯಾತನಹಳ್ಳಿ ಸಾ|| ಗೊರಪದೆಗಾವ್ ದೊಂಗರವಾಡಿ ಪುಣೆ ಇವನು ದಿನಾಂಕ:-06/06/2021 ರಂದು 14-00 ಘಂಟೆಯ ಸುಮಾರಿಗೆ ಮಾಸನಕಟ್ಟಿ ಗ್ರಾಮದ ಬಸ್ಸನಿಲ್ದಾಣದ ಹತ್ತೀರ ಸಾರ್ವಜನಿಕ ರಸ್ತೆಯ ಮೇಲೆ ವಿವಿದ ಕಂಪನಿಗಳ ಸುಮಾರುಃ80,000/- ರೂಪಾಯಿಗಳ ಕಿಮ್ಮತ್ತಿನ ಒಟ್ಟು 16 ಮೊಬೈಲ್ ಸೆಟ್ಗಳ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿ ಆರೋಪಿತನು ಯಾವುದೇ ಸಮರ್ಪಕವಾದ ಮಾಹಿತಿಯನ್ನು ನೀಡದೆ ಇವುಗಳನ್ನು ಎಲ್ಲಿಂದಲೋ ಕಳ್ಳತನದಿಂದ ಅಥವಾ ಇನ್ನಾವುದೋ ರೀತಿಯಿಂದ ಸಂಪಾದಿಸಿಕೊಂಡು ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ರೇಡ್ ಕಾಲಕ್ಕೆ ತನ್ನ ಬಾಬತ್ ಮೋಟಾರ್ ಸೈಕಲ್ ನಂಬರ್ ಕೆ.-27 ಎಸ್-767 ನೇದರ ಸಮೇತ ಸಿಕ್ಕಿದ್ದು ಠಾಣೆಯಲ್ಲಿಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 09-06-2021 12:47 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ