Feedback / Suggestions

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:07/2021 ಕಲಂ: 379 IPC.

                 ದಿನಾಂಕ:01-02-2021 ರಂದು ರಾತ್ರಿ 23-00 ಗಂಟೆಯಿಂದ  ದಿನಾಂಕ:02-02-2021 ರಂದು ಬೆಳಗಿನ ಜಾವ 00-30 ಗಂಟೆಯ ನಡುವಿನ ಅವಧಿಯಲ್ಲಿ ಚಂದ್ರಶೇಖರ ಪಾಟೀಲ ಸಾ|| ರಾಣೆಬೇನ್ನೂರ ಇವರ ಮಗ ಚಂದನ ಈತನು ತನ್ನ ಗೆಳೆಯರೊಂದಿಗೆ ಸಿನ್ನಾಮನ್ ಹೊಟೆಲಿಗೆ ಊಟಕ್ಕೆ ಅಂತಾ ಹೋದಾಗ ಹೋಟೆಲ ಮುಂದೆ ಪಾರ್ಕಿಂಗ್ ಸ್ಥಳದ ಹತ್ತಿರ ನಿಲ್ಲಿಸಿದ ಒಂದು  ಬಜಾಜ್ ಪ್ಲಾಟಿನಾ ಮೋಟಾರ ಸೈಕಲ್ ನಂ: ಕೆ.-27/ಇಇ-8047 ಇದರ ಇಂಜಿನ ನಂಬರ:PFZWFF01897 ಚಾಸ್ಸೀಸ್ ನಂಬರ:MD2A76AZ7FWF03222 ನೇದ್ದು ಅ:ಕಿ:20,000/-ರೂಗಳು, ಮೋಟಾರ ಸೈಕಲ್ ಕಿಟ್ಟಿದಲ್ಲಿ ಇಟ್ಟಿದ್ದ MI- A3  ಕಂಪನಿ ಮೊಬೈಲ್ ಇದರ IMEI No:863540049859813  ಅ:ಕಿ:8000 ರೂ ಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:14/2020 ಕಲಂ: 279, 337, 304(A)IPC.

                 ದಿನಾಂಕ:06-02-2021 ರಂದು 18-00 ಗಂಟೆ ಸುಮಾರಿಗೆ ಮಹಮದ್ ರಫಿಕ್ ಲಕ್ಷ್ಮೇಶ್ವರ ಸಾ|| ಶುಕ್ರವಾರ ಪೇಟೆ ಸವಣೂರ ಇವರು ತಾವು ನಡೆಸುತ್ತಿದ್ದ ಅಶೋಕ ಲೈಲ್ಯಾಂಡ ದೋಸ್ತ ವಾಹನ ನಂ: ಕೆಎ-27/ಸಿ-1311 ನೇದ್ದರಲ್ಲಿ  ಅಬ್ದುಲ್ರಹಿಮ ತಂದೆ ಇಕ್ಬಾಲಅಹ್ಮದ ಜವಳಿ  ಹಾಗೂ ಗಾಯಾಳು  1)ಗೌಸಮೋದಿನ ತಂದೆ ಅಬ್ದುಲ್ರಹಿಮಾನ ಕಾಗದಗಾರ ಸಾ:ಸವಣೂರ 2) ಅಸ್ಗರ ತಂದೆ ಆಲಮ್ಸಾಬ ಸವಣೂರ ಸಾ:ಕಾರಡಗಿ ಹಾಗೂ ಮಹ್ಮದಹನೀಪ ತಂದೆ ಮುಕಬುಲ್ ಅಹ್ಮದ ಗನ್ಯಾವಾಲೆ ಸಾ:ಸವಣೂರ ಇವರನ್ನು ಹತ್ತಿಸಿಕೊಂಡು ಚನ್ನಪಟ್ಟಣದಿಂದ ಸವಣೂರ ಕಡೆಗೆ ಬರಲು ದಾವಣಗೇರಿ ಮಾರ್ಗವಾಗಿ ಎನ್ ಎಚ್ -04 ರಸ್ತೆಯ ಮೇಲೆ ಬರುತ್ತಿರುವಾಗ ಮಾಗೋಡ ಬ್ರಿಡ್ಜ್ ಹತ್ತಿರ ರಸ್ತೆಯ ಪಕ್ಕದಲ್ಲಿ ಕಚ್ಚಾ ರಸ್ತೆಗೆ ಹೊಂದಿ ಪಾರ್ಕಿಂಗ ಲೈಟ್ ಹಾಕಿ ತನ್ನ  ವಾಹನವನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ ಮರಳಿ ಹೋಗುವಷ್ಟರಲ್ಲಿಯೇ ತನ್ನ ವಾಹನದ ಹಿಂದೆ ದಾವಣಗೇರಿ ಕಡೆಯಿಂದ ರಾಣೇಬೆನ್ನೂರ ಕಡೆಗೆ ಲಾರಿ ನಂ: ಕೆಎ-25/ 7614 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಲಾರಿಯನ್ನು ಅತೀ ಜೋರಿನಿಂದ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆ ತುಂಬಾ ಹೊರಳಾಡಿಸುತ್ತಾ ಬಂದು  ನಿಲ್ಲಿಸಿದ ವಾಹನ ನಂ: ಕೆಎ-27/ಸಿ-1311 ನೇದ್ದರ ಹಿಂದೆ ಡಿಕ್ಕಿ ಪಡಿಸಿ ರಸ್ತೆಯ ಪಕ್ಕದಲ್ಲಿ ಪಲ್ಟಿಯಾಗುವಂತೆ ಮಾಡಿ ಸದರ ವಾಹನದಲ್ಲಿದ್ದ ಇದರಲ್ಲಿ ಅಬ್ದುಲ್ರಹಿಮ ತಂದೆ ಇಕ್ಬಾಲಅಹ್ಮದ ಜವಳಿ ಸ್ಥಳದಲ್ಲಿಯೇ ಮರಣ ಹೊಂದುವಂತೆ  ಮತ್ತು 1)ಗೌಸಮೋದಿನ ತಂದೆ ಅಬ್ದುಲ್ರಹಿಮಾನ ಕಾಗದಗಾರ ಸಾ:ಸವಣೂರ 2) ಅಸ್ಗರ ತಂದೆ ಆಲಮ್ಸಾಬ ಸವಣೂರ ಸಾ:ಕಾರಡಗಿ ಇವರಿಗೆ ಮೈ ಕೈ ಗೆ ಗಾಯ ಪೆಟ್ಟು ಪಡಿಸಿ ತನಗೂ ಸಹ ಮೈ ಕೈ ಗೆ ಗಾಯ ಪೆಟ್ಟುಪಡಿಸಿಕೊಂಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:17/2021 ಕಲಂ; 380,454 IPC.

                 ದಿನಾಂಕ: 16-12-2020 ರಂದು ಮದ್ಯಾಹ್ನ 01.00 ಗಂಟೆಯಿಂದ 03.00 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಶ್ರೀಮತಿ ಶೋಭಾ ಪಾಟೀಲ ಸಾ ಬಂಕಾಪೂರ ಇವರ ಮನೆಯ ಕೀಲಿಯನ್ನು ಮುರಿದು ಒಳಗೆ ಪ್ರವೇಶ ಮಾಡಿ ಟ್ರಜರಿಯಲ್ಲಿದ್ದ 1] ಬಂಗಾರದ ಕೊರಳ ಚೈನು 10 ಗ್ರಾಂ ಅ. ಕಿ 30000/- 2] ಒಂದು ಬಂಗಾರದ ಬೆರಳ ಉಂಗುರು 05 ಗ್ರಾಂ ಅ. ಕಿ 15000/-  3] ಎರಡು ಬಂಗಾರದ ಕಿವಿಯ ಹ್ಯಾಂಗಿಂಗ್ಸ್  06 ಗ್ರಾಂ ಅ.ಕಿ 18000/- 4] ಎರಡು ಬಂಗಾರದ ನಾಣ್ಯಗಳು ಒಟ್ಟು 10 ಗ್ರಾಂ ಅ ಕಿ 30000/- 5] ಎರಡು ಬೆಳ್ಳಿ ಉಂಗುರುಗಳು 10 ಗ್ರಾಂ ಅ ಕಿ 2000/- ಹೀಗೆ ಒಟ್ಟು 95000/- ರೂಗಳ ಬೆಲೆಯ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:25/2020 ಮಹಿಳೆ ಕಾಣೆ.

                 ಮಾಲತೇಶ ಶಿಗ್ಗಾವಿ ಸಾ||ಗುಂಡೆನಹಳ್ಳಿ ಹಾಗೂ ಪ್ರವೀಣ ನಾಗಪ್ಪ ಬೇವಿನಕಟ್ಟಿ ಸಾ|| ಮದ್ದುರ ಇವರಿಬ್ಬರು ದೂರದ ಸಂಬಂದಿಕರು ಇದ್ದು ಮಾಲತೇಶ ಇವರ ಮಗಳಾದ ಅಕ್ಕಮ್ಮಾ ತಂದೆ ಮಹಾಂತೇಶ ಶಿಗ್ಗಾಂವಿ ವಯಾ- 18 ವರ್ಷ, ಜಾತಿ-ಹಿಂದೂ-ಲಿಂಗವಂತ, ಉದ್ಯೋಗ-ಟೈಲರಿಂಗ್, ಸಾ-ಗುಂಡೇನಹಳ್ಳಿ ಗ್ರಾಮ, ತಾ-ಬ್ಯಾಡಗಿ ಇವಳನ್ನು ಪ್ರವೀಣ ಆಗಾಗ ಸಂಬಂಧಿಕರ ಕಾರ್ಯಕ್ರಮದಲ್ಲಿ ಮಾತನಾಡಿಸುವದು, ಸಲುಗೆಯಿಂದ ಇರುವದು ಮಾಡುತ್ತಿದ್ದು ಮಾಲತೇಶ ನನ್ನ ಮಗಳ ಜೊತೆ ಈ ರೀತಿ ನಡೆದುಕೊಳ್ಳುವದು ಸರಿಯಲ್ಲ ಅಂತಾ ಬುದ್ಧಿವಾದ ಹೇಳಿದ್ದರು. ಪ್ರವೀಣನ ಮನೆಯವರು ಅಕ್ಕಮ್ಮ ಇವರನ್ನು ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದು ಮಾಲತೇಶ ನನ್ನ ಮಗಳನ್ನು ನಿಮ್ಮ ಮಗನಿಗೆ ಮದುವೆ ಮಾಡಿಕೊಡುವದಿಲ್ಲ ಅಂತಾ ಹೇಳಿದ್ದರಿಂದ ಮಾಲತೇಶ ಇವರ ಮೇಲೆ ಪ್ರವೀಣ ಇವರ ಮನೆಯವರು ಸಿಟ್ಟಾಗಿದ್ದರುದಿನಾಂಕ:21-01-20201 ರಂದು ಮುಂಜಾನೆ 09-00 ಘಂಟೆ ಸುಮಾರಿಗೆ ಮಾಲತೇಶ ಇವರ ವಾಸದ ಮನೆಯ ಮುಂದೆ ಮಂಜುನಾಥ ತಂದೆ ನಾಗಪ್ಪ ಬೇವಿನಕಟ್ಟಿ ಸಾ-ಮದ್ದೂರ, ತಾ-ಶಿರಹಟ್ಟಿ, ಜಿಲ್ಲೆ-ಗದಗ ಇವನು ಒಂದು ವಾಹನದಲ್ಲಿ ಅಕ್ಕಮ್ಮಾ ಇವಳನ್ನು ಅಪಹರಣ ಮಾಡೊಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2020 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

                 ಬಸವರಾಜ ತಂದೆ ಹನುಮಂತಪ್ಪ ವೆಂಕಟಾಪೂರ, ವಯಸ್ಸು: 32 ವರ್ಷಈತನು ತನ್ನಷ್ಟಕ್ಕೆ ತಾನೆ ಮಾನಸಿಕ ಮಾಡಿಕೊಂಡು ಅದೇ ಕೊರಗಿನಲ್ಲಿ ಸರಾಯಿ ಕುಡಿತದ ಚಟಕ್ಕೆ ಅಂಟಿಕೊಂಡು, ದಿನಾಂಕ, 05-02-2021 ರಂದು ರಾತ್ರಿ 9-30 ಗಂಟೆಗೆ ಮದ್ಯ ಸೇವನೆ ಮಾಡಿ ಹೊಸಳ್ಳಿ ಗ್ರಾಮದ ತನ್ನ ಮನೆಗೆ ಬಂದು, ಮದ್ಯ ಸೇವನೆ ಮಾಡಿದ ಅಮಲಿನಲ್ಲಿ ತನ್ನ ಮನೆಯ ಹಾಲ್ ದ ಮೇಲ್ಚಾವಣಿಯ ಕಬ್ಬಿಣದ ವಂಕಿಗೆ ಸೀರೆಯಿಂದ ಉರುಲು ಹಾಕಿಕೊಂಡು ಒದ್ದಾಡುತ್ತಿದ್ದುದನ್ನು ನೋಡಿದ ಬಸವರಾಜನಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ರಾತ್ರಿ 10-00 ಗಂಟೆಗೆ ವೈದ್ಯರಿಗೆ ತೋರಿಸಿದಾಗ ಮೃತಪಟ್ಟಿರುವದಾಗಿ ತಿಳಿಸಿರುವದಾಗಿ, ಮತ್ತು  ಇತನ ಸಾವಿನಲ್ಲಿ  ಯಾರ ಮೇಲೂ ಸಂಶಯ ಇರುವುದಿಲ್ಲಾ ಅಂತಾ ಮೃತನ ಸಹೋದರ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:04/2020 ಹೃದಯಾಘಾತದಿಂದ ವ್ಯಕ್ತಿ ಸಾವು.

                 ಮಂಜುನಾಥ ತಂದೆ ಫಕ್ಕಿರಪ್ಪ ಬಿಲ್ಲಳ್ಳೇರ, ವಯಾಃ 52 ವರ್ಷ, ಜಾತಿಃ ಹಿಂದೂ ಮಾದರ, ಉದ್ಯೋಗಃ ಸಿ.ಆರ್.ಪಿ.ಎಫ್ ಯೋಧ, ಸಾಃ ಹೊಲಬಿಕೊಂಡ ತಾಃ ಹಿರೇಕೆರೂರ, ಹಾಲಿಕರ್ತವ್ಯ: ಬಿಹಾರ ರಾಜ್ಯದ ಪಾಟ್ನಾದಲ್ಲಿ ಇವರು ಸಿ.ಆರ್.ಪಿ.ಎಫ್ ಅಂತಾ ಕೆಲಸ ನಿರ್ವಹಿಸುತ್ತಾ ಬಂದಿದ್ದು ದಿನಾಂಕ 01/02/2021 ರಂದು ತಮ್ಮ ಊರಾದ ಹೊಲಬಿಕೊಂಡ ಗ್ರಾಮಕ್ಕೆ ರಜೆಯ ಮೇಲೆ ಬಂದು ತಮ್ಮ ಮನೆಯಲ್ಲಿ ಇದ್ದವರು, ದಿನಾಂಕಃ 06/02/2021 ರಂದು ಮಧ್ಯಾನ್ಹ 01-00 ಗಂಟೆ ಸುಮಾರಿಗೆ ಮನೆಯಲ್ಲಿ ವಾಂತಿ ಮಾಡಿಕೊಂಡು ಎದೆ ನೋವು ಹೆಚ್ಚಾಗಿದ್ದರಿಂದ ಒಂದು ಖಾಸಗಿ ವಾಹನದಲ್ಲಿ ಉಪಚಾರಕ್ಕೆ ಅಂತಾ ಹಿರೇಕೆರೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮಧ್ಯಾಹ್ನ 02-05 ಗಂಟೆಗೆ ಮಂಜುನಾಥ ಫಕ್ಕಿರಪ್ಪ ಬಿಲ್ಲಳ್ಳೇರ ಇವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ತಿಳಿಸಿದ್ದು ಈ ಬಗ್ಗೆ ನಮ್ಮ ಸಂಬಂದಿಕರಿಗೆ ವಿಚಾರಿಸಿ ತಡವಾಗಿ ಬಂದು ನನ್ನ ಗಂಡನ ಸಾವಿನಲ್ಲಿ ಯಾವುದೇ ಸಂಶಯ ಇರುವದಿಲ್ಲಾ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:06/2020 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

                 ಕೃಷ್ಣಪ್ಪ ತಂದೆ ದಾನಪ್ಪ ಗೋಯಿಕಾಯಿ ವಯಾಃ30 ವರ್ಷ ಜಾತಿಃಹಿಂದೂ ಗಂಗಾಮತ ಉದ್ಯೋಗಃಕೂಲಿಕೆಲಸ ಸಾಃಯಳ್ಳೂರ ತಾಃಹಾನಗಲ್ಲ ಈತನು ಮದುವೆಯಾದಾಗಿನಿಂದ ವಿಪರೀತ ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದು ಸಬಂಧಿಕರು ಸಾಕಷ್ಟು ಬಾರಿ ಬುದ್ದಿವಾದ ಹೇಳಿದರೂ ಸರಾಯಿ ಕುಡಿಯುವ ಚಟವನ್ನು ಬಿಟ್ಟಿರಲಿಲ್ಲ, ದಿನಾಂಕಃ05/02/2021 ರಂದು ಮುಂಜಾನೆಃ11-00 ಗಂಟೆಯ ಸುಮಾರಿಗೆ ಹಾನಗಲ್ ಪಿ.ಎಸ್.ಹದ್ದಿ ಪೈಕಿ ಮಹಾರಾಜಪೇಟೆ ಗ್ರಾಮ ವ್ಯಾಫ್ತಿ ನವೋದಯ ಶಾಲೆಯ ಹತ್ತಿರ ಬೆಳಗಾಲಪೇಟೆ ಕಡೆಗೆ ಹೋಗುವ ರಸ್ತೆಯ ಮೇಲೆ ಕೃಷ್ಣಪ್ಪ ಗೋಯಿಕಾಯಿ ಈತನು ಸರಾಯಿ ಕುಡಿದ ನಶೆಯಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಕುಡಿದಿದ್ದು ಉಪಚಾರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡುವಷ್ಟರಲ್ಲಿ ಸಾಯಂಕಾಲಃ05-20 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ನನ್ನ ಗಂಡನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವುದಿಲ್ಲ ಅಂತಾ ನೀಡಿದ ವರದಿ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು  ಕ್ರಮ ಕೈಗೊಳ್ಳಲಾಗಿದೆ.

Last Updated: 09-02-2021 06:59 PM Updated By: System Admin Haveri


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Haveri District Police
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080