ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:118/2021 ಕಲಂ: 279,337,338,304(A) IPC.

                     ಕುಃ ಚಂದ್ರಕಲಾ ಸುರೇಶ ಗಂಜುಗಟ್ಟಿ ಸಾ|| ಚಿಕ್ಕಮಲ್ಲೂರ ಇವಳು  ಹಾನಗಲ ತಾಲೂಕ ಪೈಕಿ ಹಸನಾಬಾದಿ ಗ್ರಾಮಕ್ಕೆ  ದಿನಾಂಕಃ-03/09/2021 ರಂದು ಮುಂಜಾನೆಃ 7-30 ಗಂಟೆಗೆ ತಮ್ಮ ಅಕ್ಕನ ಮನೆಗೆ  ಹೋಗುತ್ತೇನೆ.ಅಂತಾ ಹೋದವಳು  ಅಕ್ಕನ ಮನೆಗೆ ಹೋಗದೆ ವಾಪಸ ಮನೆಗೆ ಬಾರದೆ ಎಲ್ಲಿಯೋ ಕಾಣೆಯಾಗಿ ಹೋಗಿರುತ್ತಾಳೆ, ಕಾಣೆಯಾದವಳನ್ನು ಈವರೆಗೆ ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ಚಂದ್ರಕಲಾ ಇವಳನ್ನು ಹುಡುಕಿಕೊಡಬೇಕೆಂದು ಸುರೇಶ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ  ಸಂಖ್ಯೆ:150/2021 ಕಲಂ: 379 IPC.

               ದಿನಾಂಕಃ22-08-2021 ರಂದು ಮದ್ಯಾಹ್ನ 12-30 ಗಂಟೆಯಿಂದ 1-30 ಗಂಟೆ ಮದ್ಯದ ಅವಧಿಯಲ್ಲಿ ದೇವರಗುಡ್ಡ ಗ್ರಾಮದ ನಾಗವ್ವ ಕೆಂಗಲ್ ಇವರ ಮನೆಯ ಹತ್ತಿರ ರಸ್ತೆಯ ಮೇಲೆ ಇಟ್ಟಿದ್ದ ಸುಮಾರು 30,000/- ಬೆಲೆ ಬಾಳುವ ಹೀರೋ ಹೊಂಡಾ ಸ್ಲ್ಪೇಡರ್ ಮೋಟರ ಸೈಕಲ ನಂಬರ ಕೆಎ-27/ಕ್ಯೂ-9908 ಅದರ ಇಂಜನ್ ನಂಬರ  HA10EA8GF03155 ಚೆಸ್ಸಿ ನಂಬರ MBLHA10EJ8GF02896  ನೇದ್ದನ್ನು ಯಾರು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿವರಿಗೂ ಹಡುಕಾಡಿದ್ದು ಸಿಗದೇ ಇದ್ದುರಿಂದ ಸದರಿ ಮೋಟರ ಸೈಕಲನ್ನು ಪತ್ತೆ ಮಾಡಿಕೊಡುವಂತೆ ಹಾನುಮಂತಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

               ಪ್ರಕಾಶ ತಂದೆ ರುದ್ರಪ್ಪ ಬುರಡಿಕಟ್ಟಿ ವಯಾ 35 ವರ್ಷ ಸಾ|| ಕರ್ಲಗೇರಿ ತಾ|| ರಾಣೆಬೆನ್ನೂರ ಇವನು ಮನೆಯ ಹಾಗೂ ಹೊಲದ ವ್ಯವಹಾರ ಮಾಡುತ್ತಿದ್ದು, ಹೊಲದಲ್ಲಿ ಬೆಳೆ ಬೆಳೆಯಲು, ಹೊಲದಲ್ಲಿ ಬೊರವೆಲ್ ಹಾಕಲು ಹಾಗೂ ಮನೆತನ ನಡೆಸಲು ಮಾಕನೂರ ಗ್ರಾಮದ ಯೂನಿಯನ್ ಬ್ಯಾಂಕದಲ್ಲಿ 6,00,000/- ರೂಗಳನ್ನು ಸಾಲ ಮಾಡಿದ್ದು, ಹೊಲದಲ್ಲಿ ಬೆಳೆ ಸರಿಯಾಗಿ ಬಾರದೇ ಇದ್ದುದ್ದಕ್ಕೆ ಸಾಲವನ್ನು ತೀರಿಸಲು ಆಗದೇ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನು ತನ್ನ ಮನೆಯ ದೇವರ ಮನೆಯಲ್ಲಿ ದಿನಾಂಕ 04/09/2021 ರಂದು 21-30 ಗಂಟೆಯಿಂದ 22-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮೇಲಿನ ತೊಲೆಗೆ ಹಗ್ಗದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕೊರಳಿಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಅವರ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಪುನೀತ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:25/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ .

               ಪುಟ್ಟಪ್ಪ ಯಲ್ಲಪ್ಪ ಚಲವಾದಿ ವಯಾಃ 55 ವರ್ಷ, ಜಾತಿ; ಹಿಂದೂ ಚಲವಾದಿ ಉದ್ಯೋಗ: ವ್ಯವಸಾಯ ಸಾಃ ಡೊಮ್ಮನಾಳ ತಾಃ ಹಾನಗಲ್ಲ  ಈತನು ಡೊಮ್ಮನಾಳ ಗ್ರಾಮದ ತಮ್ಮ ಜಮೀನು ರಿ ಸ ನಂ; 32/1 32/3 -50 ನೇದ್ದರ ಪೈಕಿ ಮೂರು ಎಕರೆ ಜಮೀನದ ಕೃಷಿ ಕೆಲಸಕ್ಕಾಗಿ ಕಳೆದ ಮೂರು ವರ್ಷಗಳ ಹಿಂದೆ ಕೆ.ವ್ಹಿ ಜಿ ಬ್ಯಾಂಕ ಸೋಮಸಾಗರ ಶಾಖೆಯಲ್ಲಿ 2 ಲಕ್ಷ ರೂ ಸಾಲ ಹಾಗೂ ಕೈ ಗಡ ರೂಪದಲ್ಲಿ 1 ಲಕ್ಷ ರೂ ಸಾಲವನ್ನು ಹಾಗೂ ಧರ್ಮಸ್ಥಳ ಸಂಘದಲ್ಲಿ 1.5 ಲಕ್ಷ ರೂ ಸಾಲವನ್ನು ಮಾಡಿದ್ದು ಆದರೆ ಜಮೀನಲ್ಲಿ ಬೆಳೆಗಳು ಸರಿಯಾಗಿ ಬಾರದೇ ಇರುವುದರಿಂದಾ ಮಾಡಿದ ಸಾಲವನ್ನು ತೀರಿಸಲು ಆಗದೇ ಇರುವುದರಿಂದಾ ಇದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ಮಾಡಿದ ಸಾಲವನ್ನು ತೀರಿಸುವುದು ಹೇಗೆ ಅಂತಾ ಚಿಂತೆ ಮಾಡುತ್ತಾ ಅದೇ ಚಿಂತೆಯಲ್ಲಿ ದಿನಾಂಕ; 05/09/2021 ರಂದು ಮುಂಜಾನೆ 04-00 ಘಂಟೆ ಸುಮಾರಿಗೆ ಡೊಮ್ಮನಾಳ ಗ್ರಾಮದ ತಮ್ಮ ಮನೆಯ ಕೊಣೆಯಲ್ಲಿ ಇರುವ ಜಂತಿಗೆ ಹಗ್ಗದಿಂದಾ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರ ಯಾರ ಮೇಲೂ ಇರುವುದಿಲ್ಲ ಅಂತಾ ಚಂದ್ರಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:26/2021 ಮಹಿಳೆ ಸಾವು.

               ಭರಮಪ್ಪ ತಂದೆ ದುರುಗಪ್ಪ ಹರಿಜನ ವಯಾಃ 30 ವರ್ಷ, ಜಾತಿ; ಹಿಂದೂ ಮಾದರ ಉದ್ಯೋಗ: ವ್ಯವಸಾಯ  ಸಾಃ ಡೊಮ್ಮನಾಳ ತಾಃ ಹಾನಗಲ್ಲ ಇತನು ದಿನಾಂಕ; 04/09/2021 ರಂದು 16-00 ಘಂಟೆ ಸುಮಾರಿಗೆ ಡೊಮ್ಮನಾಳ ಗ್ರಾಮದ ಹಿರೆಕೇರಿ ಕೆರಿಯಲ್ಲಿ ಎತ್ತಿನ ಮೈ ತೊಳೆಯಲು ಹೋದಾಗ ಆಕಸ್ಮೀಕವಾಗಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ದಿನಾಂಕ; 04/09/2021 ರಂದು 16-00 ಘಂಟೆಯಿಂದಾ ದಿನಾಂಕ; 05/09/2021 ರಂದು 08-30 ಘಂಟೆಯ ನಡುವಿನ ಅವಧಿಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಯಾರ ಮೇಲೂ ಇರುವುದಿಲ್ಲ ಅಂತಾ ಗೌರವ್ವ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:38/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ .

               ಮಹಾಂತೇಶ ತಂದೆ ಶಿವಪ್ಪ ಗೌಡ್ರ ವಯಾ- 34 ವರ್ಷ ಜಾತಿ- ಹಿಂದೂ ಕುರುಬರ ಉದ್ಯೋಗ-ವ್ಯವಸಾಯ ಸಾ: ರಾಮಗೊಂಡನಹಳ್ಳಿ ತಾ: ಬ್ಯಾಡಗಿ ಇವನು ತನ್ನ ತಂದೆ ಹೆಸರಿನಲ್ಲಿರುವ ರಿ,ಸ ನಂಬರ; 75/5 ನೇದ್ದರಲ್ಲಿ 33 ಗುಂಟೆ ಜಮೀನನ್ನು ಉಳುಮೆ ಮಾಡುತ್ತಾ ಬಂದಿದ್ದು ಸದರಿ ಜಮೀನಿಗೆ ಬಿತ್ತನೆ ಸಂಬಂದ ಹಾಗೂ ಜೀವನೋಪಾಯ ಸಂಬಂದ ತನ್ನ ಊರಲ್ಲಿ ಕೈಗಡವಾಗಿ 1 ಲಕ್ಷ ರೂಪಾಯಿ ಮತ್ತು ಸರಸ್ವತಿ ಸ್ವಸಹಾಯ ಸಂಘದಲ್ಲಿ 50 ಸಾವಿರ ರೂಪಾಯಿಗಳನ್ನು ಸಾಲ ಮಾಡಿದ್ದು, ಕಳೆದ 3 ವರ್ಷಗಳಿಂದ ಅತೀಯಾದ ಮಳೆಯಿಂದ ಜಮೀನದಲ್ಲಿ ಸರಿಯಾದ ಬೆಳೆ ಬಾರದೆ ಇದ್ದಿದ್ದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಚಿಂತೆ ಮಾಡುತ್ತಾ ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ; 04-09-2021 ರಂದು ರಾತ್ರಿ 08-00 ಘಂಟೆ ಸುಮಾರಿಗೆ ತನ್ನ ವಾಸದ ಮನೆಯ ಹಿತ್ತಲಿನಲ್ಲಿ ಯಾವುದೋ ಕ್ರೀಮಿನಾಷಕ ಔಷದ ಸೇವನೆ ಮಾಡಿದ್ದು ಚಿಕಿತ್ಸೆಗೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿ ಆಗದೆ ರಾತ್ರಿ 10-45 ಘಂಟೆ ಸುಮಾರಿಗೆ ಮೃತಪಟ್ಟಿದ್ದು ಮೃತ ನನ್ನ ಗಂಡನ ಸಾವಿನಲ್ಲಿ ಬೇರೆ ಏನೂ ಸಂಶಯ ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮೃತನ ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 13-09-2021 11:27 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080