ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:77/2021 ಕಲಂ: 454,457,380 IPC.

            ದಿನಾಂಕ 31-07-2021 ರಂದು ಮದ್ಯಾಹ್ನ 13-30 ಗಂಟೆಯಿಂದ ದಿನಾಂಕ: 05-08-2021 ರಂದು ಸಂಜೆ 16-00 ಗಂಟೆಯ ನಡುವಿನ ಅವಧಿಯಲ್ಲಿ ಹಾವೇರಿ ಶಹರದ ಬಸವೇಶ್ವರ ನಗರದ ಬಿ ಬ್ಲಾಕ್ 12 ನೇ ಕ್ರಾಸದಲ್ಲಿ ಇರುವ ಅರವಿಂದ ಮಾದಲಗಿ ಸಾ|| ಹಾವೇರಿ ಇವರ ಬಾಡಿಗೆ ಮನೆಯಲ್ಲಿ ಹಿಂದಿನ ಬಾಗಿಲಿನ ಚೀಲಕದ ಕೊಂಡಿ ಮುರಿದು ಒಳಗೆ ಹೊಕ್ಕು ಬಿರೂದಲ್ಲಿದ್ದ ಸುಟಗೆಸದಲ್ಲಿಯ ಸುಮಾರು 2,73,000/-ರೂ ಕಿಮ್ಮತ್ತಿನ ಸುಮಾರು 78 ಗ್ರಾಂ ತೂಕದ ಬಂಗಾರದ ಆಭರಣಗಳು, ಹಾಗೂ 50 ತೂಲೆ ತೂಕದ ಬೆಳ್ಳಿ  ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:106/2021 ಮಹಿಳೆ ಕಾಣೆ.

            ಕುಮಾರಿ ಜ್ಯೋತಿ ತಂದೆ ಹೆಗ್ಗೆಪ್ಪ ಕೋಟಿಯವರ ವಯಾ-19 ವರ್ಷ. ಜಾತಿ-ಹಿಂದೂ-ವಾಲ್ಮೀಕಿ, ಉದ್ಯೋಗ-ವಿದ್ಯಾಬ್ಯಾಸ,  ಸಾ||ಅಳಲಗೇರಿ, ತಾ||ಬ್ಯಾಡಗಿ ಇವಳು ದಿನಾಂಕ;21-07-2021 ರಂದು ಮುಂಜಾನೆ  10-30 ಗಂಟೆ ಸುಮಾರಿಗೆ  ಬ್ಯಾಡಗಿಯಲ್ಲಿರುವ ಗೆಳತಿಯನ ಮನೆಗೆ  ಹೋಗುತ್ತೇನೆ ಅಂತಾ ಹೇಳಿ ಹೋದವಳು   ಈ ವರೆಗೂ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿ  ಹೋಗಿದ್ದು  ಕಾಣೆಯಾಗಿದ್ದ, ಕಾಣೆಯಾದವಳನ್ನು ಇವರಗೆ ತಮಗೆ ತಿಳಿದ ಕಡೆಯಲ್ಲಾ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನ ಹುಡುಕಿಕೊಡಬೇಕೆಂದು ಜ್ಯೋತಿ ಇವರ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:18/2021 ಮಹಿಳೆ ಸಾವು.

            ಪುಟ್ಟವ್ವ ಕೋಂ ಪಕ್ಕೀರಪ್ಪ ಮರೆಕ್ಕನವರ ವಯಾ-80 ವರ್ಷ,ಜಾತಿ- ಹಿಂದೂ ವಾಲ್ಮೀಕಿ ,ಉದ್ಯೋಗ-ಮನೆ ಕೆಲಸ,ಸಾ/ ಕಾಲ್ವೇಯಲ್ಲಾಪೂರ ತಾ/ಹಾನಗಲ್ಲ ಇವರು ಕಳೆದ ಒಂದು ವಾರದಿಂದ ಜ್ವರ ಕೆಮ್ಮು ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಪಚಾರ ಕೊಡಿಸಿ, ಔಷದಿಯನ್ನು ತಂದು ಮನೆಯಲ್ಲಿ ಇಟ್ಟಿದ್ದನ್ನು. ಎಂದಿನಂತೆ ಪುಟ್ಟವ್ವ ಇವಳು ಊಟ ಮಾಡಿದ ನಂತರ ಔಷದಿಯನ್ನು ತೆಗೆದುಕೊಳ್ಳುವಾಗ ನಜರ ಚೂಕಿನಿಂದ ಸೊಂಟಿಗೆ ಹೊಡೆಯಲು ಅಂತಾ ತಂದಂತಹ ಯಾವುದೋ ಕ್ರ್ರೀಮಿನಾಶಕ ಔಷದಿಯನ್ನು ಸೇವನೆ ಮಾಡಿದ್ದು ಆಗ ಕೂಡಲೇ  ಉಪಚಾರಕ್ಕಾಗಿ ಅಕ್ಕಿಆಲೂರ ಆಸ್ಪತ್ರೆಗೆ ಚಿಕೀತ್ಸೆಗಾಗಿ ಕರೆದುಕೊಂಡು ಹೊಗಿದ್ದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಉಪಚಾರ ಕೊಡಿಸುತ್ತಿರುವಾಗ ಉಪಚಾರ ಫಲಿಸದೆ ದಿನಾಂಕ: 05-08-2021 ರಂದು ಮುಂಜಾನೆ 09:30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಮೃತಳ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ  ಚಂದ್ರಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 16-08-2021 11:11 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ