ಅಭಿಪ್ರಾಯ / ಸಲಹೆಗಳು

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:121/2021 ಕಲಂ: 379 IPC.

              ದಿನಾಂಕ; 24-07-2021 ರಂದು ಸಾಯಂಕಾಲ 04:00 ಘಂಟೆಯಿಂದ ಸಾಯಂಕಾಲ 04-30 ಘಂಟೆಯ ನಡುವಿನ ಅವಧಿಯಲ್ಲಿ ಹಾನಗಲ್ಲ ಶಹರದ ತೊಟಗಾರಿಕೆ ಇಲಾಖೆ ಎದುಗಡೆ ಇರುವ ಗೇಟ ಹತ್ತಿರ ನಿಲ್ಲಿಸಿದ್ದ ಗಂಗಯ್ಯಾ ಹಿರೇಮಠ ಸಾ|| ಬೈಚವಳ್ಳಿ ಇವರ ಬಾಬತ್ತ ಕಪ್ಪು ಬಣ್ಣದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ಲ ನಂಬರ ಕೆಎ-27/ಯು-4161 ಚೆಸ್ಸಿ ನಂಬರ; MBLHA10EYAHJ10960, ಇಂಜಿನ್ ನಂಬರಃHA10EFAHJ66117, ಅ;ಕಿ 22,000/- ರೂಗಳುನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021 ಕಲಂ: 379 IPC.

              ದಿನಾಂಕ:-04/07/2021 ರಂದು ರಾತ್ರಿ 08-30 ಘಂಟೆಯಿಂದ ದಿನಾಂಕ:-05/07/2021 ರಂದು ಮುಂಜಾನೆ 07-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅಶೋಕ ಹೊಸಮನಿ ಸಾ: ಹುಬ್ಬಳ್ಳಿ ಇವರ ತೋಟದ ಜಮೀನದಲ್ಲಿದ್ದ ಆಕಳಿನ ಶೆಡ್ಡಿನ ಬಾಗಿಲದ ಕದವನ್ನು ತೆಗೆದು ಶೆಡ್ಡಿನಲ್ಲಿದ್ದ ಒಂದು ಕಂದು ಬಣ್ಣದ ಸುಮಾರು 06 ವರ್ಷದ ಆಕಳು ಅ.ಕಿ 60,000/- ರೂ ಕಿಮ್ಮತ್ತಿನದು ಮತ್ತು ಒಂದು ಕಂದು ಬಣ್ಣದ ಸುಮಾರು 06 ತಿಂಗಳಿನ ಆಕಳ ಕರು ಅ.ಕಿ 4,000/- ರೂ. ಕಿಮ್ಮತ್ತಿನದು ಇವುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:107/2021 ವ್ಯಕ್ತಿ ಕಾಣೆ.

                   ಬಸವರಾಜ ತಂದೆ ರಾಮಪ್ಪ ಹಂಪಣ್ಣನವರ ವಯಾ- 50 ವರ್ಷ ಜಾತಿ- ಹಿಂದೂ ಲಿಂಗವಂತ ಉದ್ಯೋಗ- ವ್ಯವಸಾಯ ಸಾ: ಕೂಸನೂರ ತಾ: ಹಾನಗಲ್ಲ ಇವರು ದಿನಾಂಕ: 01-07-2021 ರಂದು ಮುಂಜಾನ 07-00 ಘಂಟೆ ಸುಮಾರಿಗೆ ಮನೆಯಲ್ಲಿ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ಕಾಣೆಯಾದವರನ್ನು ತಮ್ಮ ಊರಲ್ಲಿ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲಿ ಹುಡುಕಾಡಿದರು ಸಹಾ ಪತ್ತೆ ಆಗದೆ ಇರುವುದರಿಂದ ಕಾಣೆಯಾದ ಬಸವರಾಜ ಇವರನ್ನು ಪತ್ತೆ ಮಾಡಿಕೊಡುವಂತೆ ರಮೇಶ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:123/2021 ಕಲಂ: 380,454,457IPC.

                   ದಿನಾಂಕ; 25-04-2021 ರಂದು ಮದ್ಯಾಹ್ನ 12-30 ಘಂಟೆಯಿಂದ ದಿನಾಂಕ; 31-05-2021 ರಂದು ಬೆಳಿಗ್ಗೆ 09-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹಾನಗಲ್ಲ ಶಹರದ ಪಾಳಾ ರೋಡಿನಲ್ಲಿರುವ ಎಂ ಎ ತಿಳವಳ್ಳಿ 03 ನೇ ಗೂಡೌನದ ಹಿಂದಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಬಾಗಿಲಿಗೆ ಹಾಕಿದ್ದ ಕಬ್ಬಿಣದ ಪಟ್ಟಿಯನ್ನು ಪಕ್ಕಕ್ಕೆ ಸರಿಸಿ ಬಾಗಿಲನ್ನು ತೆರೆದು ಗೂಡೌನ ಒಳಗಡೆ ಹೋಗಿ ಅಲ್ಲಿದ್ದ 60 ಕೆ.ಜಿ ತೂಕದ 406 ಗೋವಿನ ಜೋಳದ ಚೀಲಗಳು ಅ;ಕಿ; 3,89,760/- ರೂಗಳು (60 ಕೆ.ಜಿ ತೂಕದ ಒಂದು ಗೋವಿನ ಜೋಳದ ಚೀಲದ ಅ;ಕಿ;960/- ರೂಗಳು) ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

            ಶ್ರೀಮತಿ ಶೃತಿ ಕೊಂ ನಾಗರಾಜ ಬಾರ್ಕಿ ವಯಾ-22 ವರ್ಷ, ಜಾತಿ-ಹಿಂದೂ ಗಂಗಾಮತ, ಉದ್ಯೋಗ-ಮನೆ ಕೆಲಸ, ಸಾ; ಸಾತೇನಹಳ್ಳಿ, ತಾ; ಹಿರೇಕೆರೂರ ಜಿ; ಹಾವೇರಿ. ಇವಳು ಸಾತೇನಹಳ್ಳಿ ಗ್ರಾಮದ ನಾಗರಾಜ ಫಕ್ಕೀರಪ್ಪ ಬಾರ್ಕಿ ಇವನೊಂದಿಗೆ ಈಗ ಸುಮಾರು 2 ವರ್ಷಗಳ ಹಿಂದೆ ವಿವಾಹವಾಗಿದ್ದು ಈಗ 9 ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು ನಂತರ ದಿನಗಳಲ್ಲಿ ಹೊಟ್ಟೆ ನೋವಿನಿಂದ ನರಳುತ್ತಾ ಬಂದಿದ್ದು ಇದೆ ಕಾರಣಕ್ಕೆ ದಿನಾಂಕ 03-07-2021 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಸಾತೇನಹಳ್ಳಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ತೀರ್ವ ಹೊಟ್ಟೆ ನೋವನ್ನು ತಾಳಲಾರದೇ ಯಾವುದೋ ವಿಷ ಸೇವನೆ ಮಾಡಿ ಉಪಚಾರಕ್ಕೆ ಅಂತಾ ಹಾವೇರಿ ಜಿಲ್ಲಾ ಆಸ್ಪತ್ತೆಗೆ ದಾಖಲಾಗಿ ನಂತರ ಹೆಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆಯುವ ಕಾಲಕ್ಕೆ ಉಪಚಾರ ಫಲಿಸಿದೇ ದಿನಾಂಕ: 4-07-2021 ರಂದು ರಾತ್ರಿ 10-00 ಗಂಟೆಗೆ ಮೃತ ಪಟ್ಟಿದ್ದು ಮೃತಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತಳ ತಾಯಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:25/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

             ರೇಣುಕಾ ಗಂಡ ಪ್ರವೀಣ ಲಮಾಣಿ, 19 ವರ್ಷ, ಸಾ: ನಜೀಕಲಕಮಾಪೂರ ತಾಂಡಾ, ತಾ: ಹಾವೇರಿ, ಇವಳು ಈಗ ಒಂದು ವರ್ಷದ ಹಿಂದೆ ಮದುವೆ ಆಗಿದ್ದು ಮದುವೆ ನಂತರ ತನ್ನ ಗಂಡನ ಮನೆಯಲ್ಲಿ ತನ್ನ ಗಂಡನೊಂದಿಗೆ ಚನ್ನಾಗಿದ್ದಳು, ದಿನಾಂಕ: 20-06-2021 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ತನ್ನ ಗಂಡನ ಮನೆಯಲ್ಲಿ ಜಳಕಾ ಮಾಡಲು ಅಂತಾ ನೀರು ಕಾಯಿಲು ಹೋಗಿ ಒಲೆಯ ಮೇಲೆ ಬಾಗಿದಾಗ ಒಲೆಯಲ್ಲಿನ ಬೆಂಕಿ ಆಕಸ್ಮಿಕವಾಗಿ ರೇಣುಕಾ ಇವಳು ಉಟ್ಟಿದ್ದ ಬಟ್ಟೆಗೆ ಬೆಂಕಿ ತಗುಲಿ ಮೈಯಲ್ಲಾ ಸುಟ್ಟ ಗಾಯಗಳಿಂದ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆಯಿಂದ ಗುಣಮುಖಳಾಗದೇ ದಿನಾಂಕ: 04-07-2021 ರಂದು ರಾತ್ರಿ 10-20 ಗಂಟೆಗೆ ಮೃತ ಪಟ್ಟಿದ್ದು ಇವಳ ಸಾವಿನಲ್ಲಿ ಯಾರ ಮೇಲೂ ಸಂಶಯ ಇರುವುದಿಲ್ಲಾ ಅಂತಾ ಮೃತಳ ಅಣ್ಣ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:32/2021 ವ್ಯಕ್ತಿ ಸಾವು.

             ಮಹಬೂಬಸಾಬ ತಂದೆ ಇಮಾಮಹುಸೇನಸಾಬ ನಾಗನೂರ ವಯಾ-58 ವರ್ಷ ಜಾತಿ:ಮುಸ್ಲಿಂ ಉದ್ಯೋಗ:ಗೌಂಡಿ ಕೆಲಸ ಸಾ||  ಬ್ಯಾಡಗಿ ಬೆಟ್ಟದಮಲ್ಲೇಶ್ವರ ನಗರ ಇವರು ದಿನಾಂಕ;05-07-2021 ರಂದು ಮುಂಜಾನೆ 11-45 ಗಂಟೆಗೆ ಬ್ಯಾಡಗಿ ಶಹರದ 2 ನೇ ನಂಬರ ಉರ್ದು ಶಾಲೆಯ ಆವರಣದಲ್ಲಿರುವ ಹೊಸ ಶಾಲಾ ಕಟ್ಟಡಕ್ಕೆ ಕಟ್ಟಿದ ಸಾರ್ವಿಯನ್ನು ಬಿಚ್ಚಲು ಹೊದಾಗ ಅಕಸ್ಮಾತ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ, ಪಕ್ಕಡಿಗೆ ಪೆಟ್ಟಾಗಿ ಕಿವಿಯಲ್ಲಿ ರಕ್ತ ಬಂದಿದ್ದು ಉಪಚಾರಕ್ಕೆ ಬ್ಯಾಡಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊದಾಗ ವೈದ್ಯರು ಉಪಚರಿಸಿ ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 09-07-2021 07:16 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ